ಫೆಬ್ರವರಿ 26 ರಂದು ಸಾರಿಗೆ ಸಂಘಟನೆ ಬಂದ್‌ಗೆ ಕರೆ

ಪ್ರತಿಭಟನೆಯ ಅಂಗವಾಗಿ ಫೆಬ್ರವರಿ 26 ರ ಬೆಳಗ್ಗೆ 6 ರಿಂದ ರಾತ್ರಿ ೮ ರವರೆಗೆ ಒಂದು ದಿನದ ಮಟ್ಟಿಗೆ ಲಾರಿಗಳು ರಸ್ತೆಗಿಳಿಸದಿರಲು ತೀರ್ಮಾನಿಸಲಾಗಿದೆ. ಜೊತೆಗೆ ರಸ್ತೆ ಬಂದ್‌ ಚಳವಳಿಗೆ ನಡೆಸಲಾಗುತ್ತದೆ ಎನ್ನಲಾಗಿದೆ.
ಫೆಬ್ರವರಿ 26 ರಂದು ಸಾರಿಗೆ ಸಂಘಟನೆ ಬಂದ್‌ಗೆ ಕರೆ

ಭಾರತ ಸರ್ಕಾರ ಜಾರಿಗೆ ತಂದಿರುವ ಹೊಸ ಇ ವೇ ಬಿಲ್‌ ಕಾನೂನುಗಳ ವಿರುದ್ಧ ಮತ್ತು ಇಂಧನ ಬೆಲೆಗಳಲ್ಲಿ ಏರಿಕೆಯನ್ನು ವಿರೋಧಿಸಿ ಆಲ್ ಇಂಡಿಯಾ ಟ್ರಾನ್ಸ್ಪೋರ್ಟರ್ಸ್ ವೆಲ್ಫೇರ್ ಅಸೋಸಿಯೇಶನ್(ಎಐಟಿಡಬ್ಲ್ಯುಎ) ಫೆಬ್ರವರಿ 26 ರಂದು ದೇಶಾದ್ಯಂತ ಬಂದ್‌ಗೆ ಕರೆನೀಡಿದ್ದು, ಇದಕ್ಕೆ ರಾಜ್ಯಮಟ್ಟದ ಸಾರಿಗೆ ಸಂಘಗಳು ಕೂಡ ಬೆಂಬಲ ನೀಡಿವೆ. ಈ ಸಂಬಂಧ ಲಾರಿಗಳನ್ನು ರಸ್ತೆಗಿಳಿಸದಂತೆ ಕೋರಲಾಗಿದೆ.

ಎಐಟಿಡಬ್ಲ್ಯುಎ ರಾಷ್ಟ್ರೀಯ ಅಧ್ಯಕ್ಷ ಮಹೇಂದ್ರ ಆರ್ಯ ಪ್ರತಿಕ್ರಿಯಿಸಿದ್ದು, ಪ್ರತಿಭಟನೆ ಹಿನ್ನಲೆ ಫೆಬ್ರುವರಿ 26ರಂದು ಸರಕು ಸಾಗಾಣಿಕೆ ಬುಕ್ಕಿಂಗ್ ಮಾಡದಂತೆ ಗ್ರಾಹಕರಿಗೆ ಸಾರಿಗೆ ಕಂಪನಿಗಳು ಮನವಿ ಮಾಡಿಕೊಳ್ಳಲಿವೆ" ಎಂದಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಪ್ರತಿಭಟನೆಯ ಅಂಗವಾಗಿ ಫೆಬ್ರವರಿ 26 ರ ಬೆಳಗ್ಗೆ 6 ರಿಂದ ರಾತ್ರಿ 8 ರವರೆಗೆ ಒಂದು ದಿನದ ಮಟ್ಟಿಗೆ ಲಾರಿಗಳು ರಸ್ತೆಗಿಳಿಸದಿರಲು ತೀರ್ಮಾನಿಸಲಾಗಿದೆ. ಜೊತೆಗೆ ರಸ್ತೆ ಬಂದ್‌ ಚಳವಳಿಗೆ ನಡೆಸಲಾಗುತ್ತದೆ ಎನ್ನಲಾಗಿದೆ.

ಹಾಗೆಯೇ ಒಂದು ದಿನದ ಮಟ್ಟಿಗೆ ಇ-ವೇ ಬಿಲ್ ಕೇಂದ್ರಿತ ಸರಕು ಸಾಗಾಣಿಕೆ ತಿರಸ್ಕಾರ ಹಾಗು ದೇಶಾದ್ಯಂತ ಸಾರಿಗೆ ಗೋದಾಮುಗಳ ಎದುರು ಪ್ರತಿಭಟನೆ ಮಾಡುವಂತೆ ಕರೆನೀಡಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com