ವೇದಿಕೆಯಲ್ಲಿ ಐವರು, ಒಬ್ಬನೇ ಒಬ್ಬ ಪ್ರೇಕ್ಷಕ: ಬಿಜೆಪಿ ಸಮಾವೇಶವನ್ನು ವ್ಯಂಗ್ಯ ಮಾಡಿದ ತರೂರ್

ಐದು ಜನ ವೇದಿಕೆಯಲ್ಲಿದ್ದಾರೆ. ಏಳು ಜನ ನಾಯಕರ ಚಿತ್ರಗಳು ಪೋಸ್ಟರ್‌ನಲ್ಲಿವೆ. ಒಬ್ಬನೇ ಪ್ರೇಕ್ಷಕ. ಅಲ್ಲದೆ ಇದು ಕೇರಳವೂ ಅಲ್ಲ. ಬಿಜೆಪಿ ಕತೆ ಮುಗಿಯಿತು ಎಂದು ಶಶಿ ತರೂರ್ ಟ್ವೀಟ್ ಮಾಡಿದ್ದಾರೆ.
ವೇದಿಕೆಯಲ್ಲಿ ಐವರು, ಒಬ್ಬನೇ ಒಬ್ಬ ಪ್ರೇಕ್ಷಕ: ಬಿಜೆಪಿ ಸಮಾವೇಶವನ್ನು ವ್ಯಂಗ್ಯ ಮಾಡಿದ ತರೂರ್

ಖಾಲಿ ಮೈದಾನದಲ್ಲಿ ಸಮಾವೇಶ ನಡೆಸುವ ಮೂಲಕ ಬಿಜೆಪಿ ವ್ಯಾಪಕ ವ್ಯಂಗ್ಯಕ್ಕೆ ಗುರಿಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಕಾರ್ಯಕ್ರಮದ ಚಿತ್ರವೊಂದು ಹರಿದಾಡುತ್ತಿದ್ದು, ಚಿತ್ರದಲ್ಲಿ ವೇದಿಕೆಯ ಮೇಲೆ ಇರುವ ಅತಿಥಿಯರನ್ನು ಬಿಟ್ಟರೆ, ಓರ್ವನೇ ಪ್ರೇಕ್ಷಕ ಇರುವುದು ಕಂಡು ಬರುತ್ತಿದೆ. ವೇದಿಕೆಯ ಮೇಲೆ ಹಾಕಿರುವ ಬ್ಯಾನರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಹಾಗೂ ಇನ್ನಿತರ ನಾಯಕರ ಭಾವಚಿತ್ರ ಕಂಡು ಬರುತ್ತಿದೆ.

ಈ ಚಿತ್ರವನ್ನು ಕಾಂಗ್ರೆಸ್‌ ಮುಖಂಡ ಶಶಿ ತರೂರ್‌ ಟ್ವಿಟರಿನಲ್ಲಿ ಹಂಚಿಕೊಂಡಿದ್ದು, “ಐದು ಜನ ವೇದಿಕೆಯಲ್ಲಿದ್ದಾರೆ. ಏಳು ಜನ ನಾಯಕರ ಚಿತ್ರಗಳು ಪೋಸ್ಟರ್‌ನಲ್ಲಿವೆ. ಒಬ್ಬನೇ ಪ್ರೇಕ್ಷಕ. ಅಲ್ಲದೆ ಇದು ಕೇರಳವೂ ಅಲ್ಲ.. ಬಿಜೆಪಿ ಪಕ್ಷದ ಕತೆ ಮುಗಿಯಿತು” ಎಂದು ಶಶಿ ತರೂರ್ ಟ್ವೀಟ್ ಮಾಡಿದ್ದಾರೆ.

ಬಂಗ್ಲರ್ ಗೊರ್ಬೊ ಮಮತ ಎಂಬ ಅಧಿಕೃತ ಟ್ವಿಟರ್‌ ಖಾತೆಯೂ ಈ ಚಿತ್ರವನ್ನು ಹಂಚಿಕೊಂಡಿದ್ದು, ಇದು ಬಿಜೆಪಿಯ ಸ್ಥಿತಿ, ಬಂಗಾಳವು ಬಿಜೆಪಿಯನ್ನು ತಿರಸ್ಕರಿಸುತ್ತದೆ ಎಂದು ಟ್ವೀಟ್‌ ಮಾಡಿದೆ.

ಶಶಿ ತರೂರ್‌ ಮಾಡಿರುವ ಟ್ವೀಟ್‌ಗೆ ಶನಿವಾರ ಸಂಜೆ 6 ರ ಹೊತ್ತಿಗೆ ಸುಮಾರು 13 ಸಾವಿರದಷ್ಟು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದು, 2.5 ಸಾವಿರ ಮಂದಿ ರಿಟ್ವೀಟ್‌ ಮಾಡಿದ್ದಾರೆ. 1.2 ಸಾವಿರದಷ್ಟು ಮಂದಿ ಪ್ರತಿಕ್ರಿಯಿಸಿದ್ದಾರೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com