ನಾಯಿಗಳ ಸರಣಿ ಸಾವು; ಭೀತಿ ಸೃಷ್ಟಿಸಿದ ವೈರಸ್‌ ಸೋಂಕು

ಕಳೆದ ಮೂರು ದಿನಗಳಲ್ಲಿ ವೈರಸ್‌ ಸೋಂಕಿನಿಂದ 200 ಕ್ಕೂ ಹೆಚ್ಚು ನಾಯಿಗಳು ಸಾವನ್ನಪ್ಪಿವೆ ಎಂದು ವರದಿಯಾಗಿದೆ. ಇದರಿಂದ ಸಾರ್ವಜನಿಕರು ಭಯಭೀತರಾಗಿದ್ದಾರೆ. ಮಂಗಳವಾರ(ಫೆ16) ರಂದು ಸುಮಾರು 60 ನಾಯಿಗಳು ಸಾವನ್ನಪ್ಪಿವೆ. ಬುಧವಾರ(ಫೆ17)ರಂದು 97 ನಾಯಿಗಳು ಸಾವನ್ನಪ್ಪಿದ್ದರೆ, (ಫೆ19) ಶುಕ್ರವಾರದ ಹೊತ್ತಿಗೆ 45 ನಾಯಿಗಳು ಸಾವನ್ನಪ್ಪಿವೆ ಎಂದು ವರದಿಯಾಗಿವೆ.
ನಾಯಿಗಳ ಸರಣಿ ಸಾವು; ಭೀತಿ ಸೃಷ್ಟಿಸಿದ ವೈರಸ್‌ ಸೋಂಕು

ಜಗತ್ತಿನ ಆಧುನಿಕ ಇತಿಹಾಸದಲ್ಲಿಯೇ ಹೆಚ್ಚು ಸದ್ದು ಮಾಡಿದ್ದು, ಕರೋನಾ ಸೋಂಕು. ಇದು ಮಾನವ ಪ್ರಪಂಚವನ್ನು ತಲ್ಲಣಗೊಳಿಸಿತ್ತು. ಇದರ ಮಧ್ಯೆಯೇ ಕೆಲವು ತಿಂಗಳ ಹಿಂದೆ ದೇಶದ ಕೆಲವು ರಾಜ್ಯಗಳಲ್ಲಿ ಹಕ್ಕಿಜ್ವರದ ಭೀತಿ ಎದುರಾಗಿತ್ತು. ಇದೀಗ ನಾಯಿಗಳಲ್ಲಿ ವೈರಸ್ ಸೋಂಕು ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.

ಪಶ್ಚಿಮ ಬಂಗಾಳದ ಬಂಕುರಾ ಜಿಲ್ಲೆಯ ಬಿಷ್ಣುಪುರ ನಗರದಲ್ಲಿ ಕಳೆದ ಮೂರು ದಿನಗಳಲ್ಲಿ ವೈರಸ್‌ ಸೋಂಕಿನಿಂದ 200 ಕ್ಕೂ ಹೆಚ್ಚು ನಾಯಿಗಳು ಸಾವನ್ನಪ್ಪಿವೆ ಎಂದು ವರದಿಯಾಗಿದೆ. ಇದರಿಂದ ಸಾರ್ವಜನಿಕರು ಭಯಭೀತರಾಗಿದ್ದಾರೆ. ಮಂಗಳವಾರ(ಫೆ16) ರಂದು ಸುಮಾರು 60 ನಾಯಿಗಳು ಸಾವನ್ನಪ್ಪಿವೆ. ಬುಧವಾರ(ಫೆ17)ರಂದು 97 ನಾಯಿಗಳು ಸಾವನ್ನಪ್ಪಿದ್ದರೆ, (ಫೆ19) ಶುಕ್ರವಾರದ ಹೊತ್ತಿಗೆ 45 ನಾಯಿಗಳು ಸಾವನ್ನಪ್ಪಿವೆ ಎಂದು ವರದಿಯಾಗಿವೆ.‌

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ನಾಯಿಗಳ ಸಾವಿನ ವಿಚಾರವನ್ನು ಜಿಲ್ಲಾಧಿಕಾರಿಗೆ ತಿಳಿಸಲಾಗಿದೆ ಎಂದು ಬಿಷ್ಣುಪುರದ ನಾಗರೀಕ ಸಂಸ್ಥೆಯ ಮುಖ್ಯಸ್ಥ ದಿವೆಂದು ಬಂದ್ಯೋಪಧ್ಯಾಯ ಹೇಳಿದ್ದಾರೆ. ಸತ್ತ ನಾಯಿಗಳ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕೋಲ್ಕತ್ತಾಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಶು ಸಂಗೋಪನಾ ಇಲಾಖೆ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ʼವೈರಸ್‌ ಸೋಂಕಿನಿಂದ ನಾಯಿಗಳು ಸಾವನ್ನಪ್ಪಿವೆ. ಈ ಸಮಯದಲ್ಲಿ ನಾಯಿಗಳಲ್ಲಿ ಈ ರೀತಿಯ ಸೋಂಕು ಕಾಣಿಸಿಕೊಳ್ಳುತ್ತದೆ. ಈ ಸೋಂಕು ಮಾನವ ಮತ್ತು ಇತರೆ ಪ್ರಾಣಿಗಳಲ್ಲಿ ಹರಡುವ ಸಾಧ್ಯತೆ ಇಲ್ಲದ ಕಾರಣ ಜನರು ಭಯಭೀತರಾಗಬೇಕಿಲ್ಲ. ವೈರಸ್‌ ಸೋಂಕಿನಿಂದ ಸಾವನ್ನಪ್ಪಿದ ನಾಯಿಗಳನ್ನು ಬಿಷ್ಣುಪುರ ಮುನ್ಸಿ ಪಾಲಿಟಿಯ ಡಂಪಿಂಗ್‌ ಮೈದಾನದಲ್ಲಿ ಹೂಳಲಾಗುತ್ತಿದೆʼ ಎಂದು ತಿಳಿಸಿದೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com