ಸೇನಾಪಡೆ ಹಿಂತೆಗೆತ: ಶನಿವಾರ ಭಾರತ-ಚೀನಾ ನಡುವಿನ 10ನೇ ಸುತ್ತಿನ ಮಾತುಕತೆ

ಭಾರತ-ಚೀನಾ ಮಧ್ಯೆ ಪೂರ್ವ ಲಡಾಕ್ ಗಡಿ ವಿವಾದಕ್ಕೆ ಸಂಬಂಧಪಟ್ಟಂತೆ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆಗೆ ಇಂದು ನಿಗದಿಪಡಿಸಲಾಗಿದೆ.
ಸೇನಾಪಡೆ ಹಿಂತೆಗೆತ: ಶನಿವಾರ ಭಾರತ-ಚೀನಾ ನಡುವಿನ 10ನೇ ಸುತ್ತಿನ ಮಾತುಕತೆ

ಭಾರತ-ಚೀನಾ ಮಧ್ಯೆ ಪೂರ್ವ ಲಡಾಕ್ ಗಡಿ ವಿವಾದಕ್ಕೆ ಸಂಬಂಧಪಟ್ಟಂತೆ 10ನೇ ಸುತ್ತಿನ ಮಾತುಕತೆ ಇಂದು (ಶನಿವಾರ) ನಡೆಯಲಿದೆ. ಭಾರತ ಮತ್ತು ಚೀನಾದ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ ನಡೆಯಲಿದ್ದು ಅದಕ್ಕೂ ಮುನ್ನ ಪಾಂಗೊಂಗ್‌ ತ್ಸೊ ಸರೋವರದ ಉತ್ತರ ಮತ್ತು ದಕ್ಷಿಣ ತೀರಗಳಿಂದ ಸೇನಾಪಡೆಗಳನ್ನು ಹಿಂಪಡೆಯುವ ಪ್ರಕ್ರಿಯೆ ಪೂರ್ಣಗೊಂಡಿದೆ.

ಈ ವಿದ್ಯಮಾನದ ಕುರಿತು ಮಾಹಿತಿ ನೀಡಿದ ಸೇನಾಪಡೆಯ ಹಿರಿಯ ಅಧಿಕಾರಿ ಶನಿವಾರ ಬೆಳಗ್ಗೆ 10 ಗಂಟೆಗೆ ಸಭೆ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಕಳೆದ ಜನವರಿ 24ರಂದು ಪೂರ್ವ ಲಡಾಕ್ ನ ಭಾರತೀಯ ಕುಶುಲ್ ವಲಯದ ಗಡಿ ವಾಸ್ತವ ರೇಖೆಯ ಚೀನಾದ ಭಾಗ ಮೊಲ್ಡೊದಲ್ಲಿಯೇ ಕಳೆದ ಬಾರಿ 9ನೇ ಸುತ್ತಿನ ಮಾತುಕತೆ ನಡೆದಿದ್ದು, ಅದು ನಿರೀಕ್ಷಿತ ಫಲಿತಾಂಶ ನೀಡಿರಲಿಲ್ಲ.

ಪಾಂಗೊಂಗ್‌ ತ್ಸೊ ಸರೋವರದ ತೀರಗಳಿಂದ ಸೇನಾಪಡೆಯನ್ನು ಹಿಂತೆಗೆದುಕೊಂಡ 48 ಗಂಟೆಗಳೊಳಗೆ ಭಾರತ-ಚೀನಾ ನಡುವಿನ 10 ನೇ ಸುತ್ತಿನ ಮಾತುಕತೆ ನಡೆಸಲಾಗುತ್ತದೆಯೆಂದು ವಿದೇಶಾಂಗ ಸಚಿವಾಲಯ ಈ ಹಿಂದೆ ಹೇಳಿತ್ತು.

ಇಂದಿನ ಸಭೆಯಲ್ಲಿ ಭಾರತದ ಕಡೆಯಿಂದ ಲೆಫ್ಟಿನೆಂಟ್ ಜನರಲ್ ಪಿಜಿಕೆ ಮೆನನ್, 14 ಕಾರ್ಪ್ಸ್ ಕಮಾಂಡರ್ ಮತ್ತು ಚೀನಾದ ಕಡೆಯಿಂದ ಮೇಜರ್ ಜನರಲ್ ಲಿನ್ ಲಿಯು, ದಕ್ಷಿಣ ಕ್ಸಿಂಜಿಯಾನ್ ಮಿಲಿಟರಿ ಜಿಲ್ಲೆಯ ಕಮಾಂಡರ್ ಭಾಗವಹಿಸಲಿದ್ದಾರೆ.

ಈಗಾಗಲೇ ಭಾರತ ಮತ್ತು ಚೀನಾ ನಡುವೆ ಮಾಡಿಕೊಂಡಿರುವ ಒಪ್ಪಂದದಂತೆ, ಚೀನಾದ ಸೈನಿಕರು ಫಿಂಗರ್ 8 ರ ಪೂರ್ವಕ್ಕೆ ಸ್ಥಳಾಂತರಗೊಳ್ಳಲಿದ್ದಾರೆ ಮತ್ತು ಭಾರತೀಯ ಸೇನೆಯು ಪಾಂಗೊಂಗ್‌ ತ್ಸೊ ಸರೋವರದ ಉತ್ತರ ದಂಡೆಯಲ್ಲಿರುವ ಫಿಂಗರ್ 4 ಗೆ ಹತ್ತಿರವಿರುವ ಧನ್ ಸಿಂಗ್ ಥಾಪಾ ಪೋಸ್ಟ್‌ನಲ್ಲಿ ನಿಯೋಜನೆಗೊಳ್ಳಲಿದೆ.

ಸೇನಾಪಡೆ ಹಿಂತೆಗೆತ: ಶನಿವಾರ ಭಾರತ-ಚೀನಾ ನಡುವಿನ 10ನೇ ಸುತ್ತಿನ ಮಾತುಕತೆ
ಗಾಲ್ವಾನ್ ಘರ್ಷಣೆಯಲ್ಲಿ ತನ್ನ ಸೈನಿಕರು ಮೃತಪಟ್ಟಿರುವುದನ್ನು ಒಪ್ಪಿಕೊಂಡ ಚೀನಾ

ಎರಡೂ ದೇಶಗಳ ಸೈನಿಕರು ತಮ್ಮ ಶಸ್ತ್ರಾಸ್ತ್ರ ವಾಹನಗಳನ್ನು, ಯುದ್ಧ ಟ್ಯಾಂಕ್‌ಗಳನ್ನು ಹಿಂತೆಗೆದುಕೊಂಡಿವೆ. ಇದಕ್ಕೂ ಮೊದಲು ಉಭಯ ಸೇನೆಯ ವಾಹನಗಳು ಪರಸ್ಪರ 50 ಮೀಟರ್ ಗಳ ಅಂತರದಲ್ಲಿದ್ದವು.

ಇದಕ್ಕೂ ಮೊದಲು, ಗಾಲ್ವಾನ್‌ ಗಡಿಯಲ್ಲಿ ನಡೆದ ಘರ್ಷಣೆಯಲ್ಲಿ ತಮ್ಮ ಕಡೆಯ ಐವರು ಸೈನಿಕರು ಮೃತಪಟ್ಟಿರುವುದನ್ನು ಚೀನಾ ಒಪ್ಪಿಕೊಂಡಿತ್ತು. ಹಾಗೂ ಘರ್ಷಣೆಗೆ ಭಾರತೀಯ ಸೇನೆಯೇ ಕಾರಣವೆಂದು ಆರೋಪಿಸಿ ವಿಡಿಯೋ ತುಣುಕೊಂದನ್ನೂ ಹಂಚಿಕೊಂಡಿತ್ತು.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com