ರೈಲ್ವೇ ಖಾಸಗೀ ಗುತ್ತಿಗೆದಾರರಿಗೆ ಷರತ್ತಿನಲ್ಲಿ ಹೆಚ್ಚಿನ ರಿಯಾಯ್ತಿ ನೀಡಲು ಮುಂದಾದ ಮೋದಿ ಸರ್ಕಾರ

ಕೇಂದ್ರ ಸರ್ಕಾರ ಇದೀಗ ರೈಲುಗಳನ್ನು ಗುತ್ತಿಗೆ ಪಡೆಯುವ ಖಾಸಗೀ ಕಂಪೆನಿಗಳಿಗೆ ಹೆಚ್ಚಿನ ರಿಯಾಯ್ತಿಗಳನ್ನು ನೀಡಲು ಮುಂದಾಗಿದೆ.
ರೈಲ್ವೇ ಖಾಸಗೀ ಗುತ್ತಿಗೆದಾರರಿಗೆ ಷರತ್ತಿನಲ್ಲಿ ಹೆಚ್ಚಿನ ರಿಯಾಯ್ತಿ ನೀಡಲು ಮುಂದಾದ ಮೋದಿ ಸರ್ಕಾರ

ದೇಶದ ಅತ್ಯಂತ ದೊಡ್ಡ ಅಗ್ಗದ ಜನ ಸಾರಿಗೆ ಆಗಿರುವ ರೈಲ್ವೇಯ ಖಾಸಗೀಕರಣಕ್ಕೆ ಮುಂದಾಗಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇದೀಗ ರೈಲುಗಳನ್ನು ಗುತ್ತಿಗೆ ಪಡೆಯುವ ಖಾಸಗೀ ಕಂಪೆನಿಗಳಿಗೆ ಹೆಚ್ಚಿನ ರಿಯಾಯ್ತಿಗಳನ್ನು ನೀಡಲು ಮುಂದಾಗಿದೆ. ಹಣ ಪಾವತಿ, ಪರ್ಯಾಯ ಮಾರ್ಗಗಳನ್ನು ನೀಡುವುದು ಮತ್ತು ಪ್ರತ್ಯೇಕ ಮಾರ್ಗಗಳಲ್ಲಿ ರೈಲುಗಳನ್ನು ಚಲಾಯಿಸಲು ಕೆಲವು ಕಂಪೆನಿಗಳು ಈಗಿರುವ ಬಿಡ್ಡಿಂಗ್ ಶರತ್ತಿನ ಬಗ್ಗೆ ಆತಂಕ ವ್ಯಕ್ತಪಡಿಸಿದ್ದವು. ಅವರ ಆತಂಕ ನಿವಾರಿಸಲು ಬಿಡ್ಡಿಂಗ್ ಷರತ್ತುಗಳನ್ನೇ ಸಡಿಲಿಸಿ ಸರ್ಕಾರ ಪ್ರಮುಖ ರಿಯಾಯ್ತಿ ನೀಡಲು ಮುಂದಾಗಿದೆ. ಕಳೆದ ವಾರ ನಡೆದ ಸಭೆಯಲ್ಲಿ ರೈಲ್ವೆ ಸಚಿವಾಲಯ ಮತ್ತು ಕಾರ್ಯದರ್ಶಿಗಳ ತಂಡ ಈ ರಿಯಾಯಿತಿಗಳನ್ನು ನೀಡಿದೆ. ಸಭೆಯ ಅಧ್ಯಕ್ಷತೆಯನ್ನು ನೀತಿ ಆಯೋಗದ ಸಿಇಒ ಅಮಿತಾಭ್ ಕಾಂತ್, ರೈಲ್ವೆ ಮಂಡಳಿಯ ಅಧ್ಯಕ್ಷ ಸುನೀತ್ ಶರ್ಮಾ, ಹಣಕಾಸು ಇಲಾಖೆಯ ಕಾರ್ಯದರ್ಶಿ ತರುಣ್ ಬಜಾಜ್ ಇತರರು ಭಾಗವಹಿಸಿದ್ದರು.

ಜನವರಿಯಲ್ಲಿ ನಡೆದ ಎರಡನೇ ಪೂರ್ವ ಬಿಡ್ ಸಭೆಯಲ್ಲಿ, ಕರಡು ಒಪ್ಪಂದಕ್ಕೆ ಸಂಬಂಧಿಸಿದಂತೆ ಬಿಡ್ ದಾರರು ಕೆಲವು ವಿಷಯಗಳನ್ನು ಪ್ರಸ್ತಾಪಿಸಿದ್ದರು ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಹೇಳಿದರು. ಕಾರ್ಯದರ್ಶಿಗಳೊಂದಿಗಿನ ಸಭೆಯಲ್ಲಿ ಈ ವಿಷಯಗಳ ಬಗ್ಗೆ ಚರ್ಚಿಸಲಾಯಿತು, ಮತ್ತು ಅದಕ್ಕೆ ಅನುಗುಣವಾಗಿ ಕರಡು ಒಪ್ಪಂದವನ್ನು ತಿದ್ದುಪಡಿ ಮಾಡಲಾಗುವುದು ಎಂದು ಹೆಸರು ಬಹಿರಂಗಪಡಿಸದ ಅಧಿಕಾರಿಯೊಬ್ಬರು ಹೇಳಿದರು. ದೇಶದಲ್ಲಿ 2023 ರ ವೇಳೆಗೆ 109 ಮಾರ್ಗಗಳಲ್ಲಿ ಕಾರ್ಯಾಚರಣೆ ಆರಂಭಿಸಲಿರುವ 150 ಖಾಸಗಿ ರೈಲುಗಳಿಗೆ ಅಂತಿಮ ಬಿಡ್ಗಳು ಮಾರ್ಚ್ 31 ರೊಳಗೆ ಸಲ್ಲಿಕೆ ಆಗಬೇಕಿದೆ. ಸರ್ಕಾರವೇ ಬಿಡ್ ದಾರರಿಗೆ ಅನುಕೂಲ ಮಾಡಿಕೊಡುವ ಅಪರೂಪದ ವಿದ್ಯಾಮಾನ ಇದಾಗಿದೆ ಎಂದು ಮತ್ತೋರ್ವ ಅಧಿಕಾರಿ ಹೇಳಿದರು. ಆದರೆ ಸರ್ಕಾರವು ಬಿಡ್ ದಾರರ ಆತಂಕವನ್ನು ಅರ್ಥಪೂರ್ಣವಾಗಿ ನಿವಾರಿಸಲು ಬಯಸಿದೆ ಎಂದು ಅವರು ಹೇಳಿದರು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಈ ಕುರಿತು ಮಾತನಾಡಿದ ರೈಲ್ವೆ ಸಚಿವಾಲಯದ ವಕ್ತಾರ ಡಿ.ಜೆ. ನರೈನ್ ಅವರು ಕೆಲವು ನಿಯಮಗಳು ಇದ್ದಾಗ ರಿಯಾಯ್ತಿ ನೀಡುವುದು ಸಂಭವಿಸುತ್ತದೆ. ಆದರೆ ಖಾಸಗಿಯವರು ಈ ರೈಲುಗಳನ್ನು ಓಡಿಸುವ ಬಗ್ಗೆ ಇನ್ನೂ ಯಾವುದೇ ನಿಯಮಾವಳಿಗಳನ್ನು ನಿಗದಿಪಡಿಸಿಲ್ಲ ಹಾಗಾಗಿ ರಿಯಾಯ್ತಿ ನೀಡುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದರು. ಕಳೆದ ಜನವರಿ 20 ರಂದು ನಡೆದ ಪ್ರಯಾಣಿಕರ ರೈಲು ಯೋಜನೆಯಲ್ಲಿ ಪಿಪಿಪಿಗಾಗಿ ನಡೆಸಿದ ಸಭೆಯಲ್ಲಿ ಕೆಲವು ಅಂಶಗಳ ಬಗ್ಗೆ ಅತಂಕ ವ್ಯಕ್ತಪಡಿಸಿದ್ದರು. ಸಚಿವಾಲಯವು ಈ ವಿಷಯಗಳ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಮಾಲೋಚಿಸಿದೆ. ಈ ಸಮಸ್ಯೆಗಳನ್ನು ನಿವಾರಿಸಲಾಗಿದೆ ಎಂದರು. ಒಮ್ಮೆ ಓಡಾಟವನ್ನು ಪ್ರಾರಂಭಿಸಿದ ನಂತರ ರಾಜಕೀಯೇತರ ಶಕ್ತಿ ಅಥವಾ ಪ್ರಾಕೃತಿಕ ವಿಕೋಪದ ಸಂದರ್ಭಗಳಲ್ಲಿ ಒಪ್ಪಂದವನ್ನು ಮುಕ್ತಾಯಗೊಳಿಸಲು ಮುಕ್ತಾಯ ಪಾವತಿಯನ್ನು ಒದಗಿಸುವುದಿಲ್ಲ ಎಂದು ತಿಳಿಸಲಾಯಿತು. ಆದರೆ ನೈಸರ್ಗಿಕ ವಿಪತ್ತು ಅಥವಾ ಇನ್ನಾವುದೇ ರಾಜಕೀಯೇತರ ಅಹಿತಕರ ಘಟನೆಯ ಸಂದರ್ಭದಲ್ಲಿ ಓಡಾಟ ಪ್ರಾರಂಭವಾಗುವ ಮೊದಲೇ ಖಾಸಗಿಯವರು ಮುಕ್ತಾಯದ ಪಾವತಿಯ ಆಯ್ಕೆಯನ್ನು ಹೊಂದಿರುತ್ತಾರೆ ಎಂದು ಕಾರ್ಯದರ್ಶಿಗಳು ಅಭಿಪ್ರಾಯಪಟ್ಟಿದ್ದಾರೆ. ರೈಲ್ವೆ ನಿಲ್ದಾಣ ಅಭಿವೃದ್ಧಿ ಸೇರಿದಂತೆ ಎಲ್ಲಾ ಇತರ ಪಿಪಿಪಿ ಒಪ್ಪಂದಗಳಲ್ಲಿ ಈ ಷರತ್ತು ನೀಡಲಾಗಿದೆ, ಇದನ್ನು ರೈಲ್ವೆಗೂ ವಿಸ್ತರಿಸಬೇಕು ಎಂದು ಸರ್ಕಾರ ಸೂಚಿಸಿದೆ. ರೈಲುಗಳು ಮತ್ತು ಸ್ವತ್ತುಗಳ ಶೇಕಡಾ 70 ರಷ್ಟು ಡಿಪ್ರಿಸಿಯೇಷನ್ ಮುಕ್ತಾಯ ಪಾವತಿಯನ್ನು ಸರ್ಕಾರ ಸೂಚಿಸಿದೆ.

ರೈಲ್ವೆ ಸಾಮರ್ಥ್ಯದ ಬಳಕೆಯು 12 ತಿಂಗಳುಗಳಲ್ಲಿ ಶೇಕಡಾ 50 ಕ್ಕಿಂತ ಕಡಿಮೆಯಿದ್ದರೆ, ಈಗ ನೀಡಿರುವ ರಿಯಾಯಿತಿಯ ಪ್ರಕಾರ ಆ ಮಾರ್ಗದಲ್ಲಿ ಓಡಾಟವನ್ನು ನಿಲ್ಲಿಸುವ ಹಕ್ಕನ್ನು ಹೊಂದಿರುತ್ತದೆ ಎಂದು ಕರಡು ಒಪ್ಪಂದ ತಿಳಿಸಿದೆ. ಆದರೆ ಓಡಾಟ ರದ್ದಾದರೆ ಹೇಗೆ ರೇಕ್ಗಳನ್ನು ಬಳಸಿಕೊಳ್ಳಲಾಗುವುದು ಎಂದು ಖಾಸಗಿ ಬಿಡ್ದಾರರು ಪ್ರಶ್ನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇಂತಹ ಸಂದರ್ಭಗಳಲ್ಲಿ ಖಾಸಗಿಯವರಿಗೆ ಪರ್ಯಾಯ ಮಾರ್ಗಗಳನ್ನು ಒದಗಿಸಬೇಕು ಎಂದು ಕಾರ್ಯರ್ದರ್ಶಿಗಳ ಸಭೆ ಶಿಫಾರಸು ಮಾಡಿದೆ. ಖಾಸಗಿಯವರು ನಿರ್ದಿಷ್ಟ ಮಾರ್ಗದಲ್ಲಿ ರೈಲು ಓಡಿಸಲಾಗದಿದ್ದರೆ ಇತರ ಮಾರ್ಗಗಳಲ್ಲಿ ರೈಲುಗಳನ್ನು ಓಡಿಸಲು ಅವರಿಗೆ ಆಯ್ಕೆಗಳನ್ನು ನೀಡಲಾಗುವುದು . ಅಲ್ಲದೆ ಖಾಸಗಿ ರೈಲು ನಿರ್ಗಮಿಸಿದ 60 ನಿಮಿಷಗಳ ಮೊದಲು ಮತ್ತು ನಂತರ ಯಾವುದೇ ರೈಲು ಆ ಮಾರ್ಗದಲ್ಲಿ ಕಾರ್ಯನಿರ್ವಹಿಸುವುದಿಲ್ಲ ಎಂದು ಖಚಿತಪಡಿಸಲಾಗಿದೆ. ಕರಡು ಒಪ್ಪಂದದ ಪ್ರಕಾರ, ಒಂದು ನಿರ್ದಿಷ್ಟ ಮಾರ್ಗದಲ್ಲಿರುವ ಖಾಸಗಿ ರೈಲು 12 ತಿಂಗಳವರೆಗೆ ಶೇಕಡಾ 80 ಕ್ಕಿಂತ ಹೆಚ್ಚು ಸಾಮರ್ಥ್ಯವನ್ನು ಬಳಸಿದರೆ, ಯಾವುದೇ ನಿಲ್ದಾಣದಿಂದ 60 ನಿಮಿಷಗಳ ಮೊದಲು ಮತ್ತು ನಂತರ ರೈಲ್ವೆ ತನ್ನದೇ ಆದ ರೈಲುಗಳನ್ನು ಆ ಮಾರ್ಗದಲ್ಲಿ ಓಡಿಸಲು ಅನುಮತಿಸುತ್ತದೆ. ಆದರೆ ಖಾಸಗೀ ಕಂಪೆನಿಗಳು ಶೇಕಡಾ 80 ಕ್ಕಿಂತ ಹೆಚ್ಚು ಸಾಮರ್ಥ್ಯದ ಬಳಕೆಯನ್ನು ಸುಲಭವಾಗಿ ಸಾಧಿಸಬಹುದೆಂಬ ವಿಶ್ವಾಸದಿಂದಾಗಿ, ಈ ಮಿತಿಯನ್ನು ಶೇಕಡಾ 90 ಕ್ಕೆ ಹೆಚ್ಚಿಸುವಂತೆ ಅವರು ಸರ್ಕಾರವನ್ನು ಕೋರಿದ್ದಾರೆ.

ಮೂಲಗಳ ಪ್ರಕಾರ ಈಗ ನಿಗದಿಪಡಿಸಲಾಗಿರುವ 20 ಕಿಲೋಮೀಟರ್ ಬದಲು 50 ಕಿಲೋಮೀಟರ್ ಒಳಗೆ ಯಾವುದೇ ನಿಲ್ದಾಣದಿಂದ ಒಂದು ಗಂಟೆ ಮೊದಲು ಮತ್ತು ನಂತರ ಯಾವುದೇ ರೀತಿಯ ರೈಲು ಓಡದಂತೆ ನೋಡಿಕೊಳ್ಳಲು ಖಾಸಗಿ ಕಂಪೆನಿಗಳು ರೈಲ್ವೆಗೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ, ಈ ಬೇಡಿಕೆ ಕುರಿತು ಸರ್ಕಾರ ಇನ್ನೂ ನಿರ್ಧಾರ ಕೈಗೊಂಡಿಲ್ಲ. ಖಾಸಗಿ ರೈಲುಗಳಿಗೆ ಡಿಪೋ ಸ್ಥಳಗಳ ಬಗ್ಗೆ ಖಾಸಗಿ ಬಿಡ್ ದಾರರಿಗೆ ಹೆಚ್ಚಿನ ಸ್ಪಷ್ಟತೆ ನೀಡುವಂತೆ ಕಾರ್ಯದರ್ಶಿಗಳ ಸಭೆಯು ರೈಲ್ವೆಗೆ ನಿರ್ದೇಶನ ನೀಡಿದೆ. , ಖಾಸಗಿ ಬಿಡ್ ದಾರರು ಯೋಜನೆಗಳು, ಸಂಪರ್ಕ, ಮೂಲಸೌಕರ್ಯಗಳ ಲಭ್ಯತೆ ಮತ್ತು ಉಪಯುಕ್ತತೆಗಳಲ್ಲಿ ಕಡಿಮೆ ಸ್ಪಷ್ಟತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಈ ಬಗ್ಗೆ ಪಾರದರ್ಶಕತೆ ಮತ್ತು ಮಾಹಿತಿಯ ಕೊರತೆಯು ಬಿಡ್ ಮೇಲೆ ಪರಿಣಾಮ ಬೀರಬಹುದು ಮತ್ತು ಅಂತಿಮ ಬಿಡ್ ಮಾಡುವ ಮೊದಲು ಅಗತ್ಯವಾದ ಮಾಹಿತಿಯನ್ನು ಒದಗಿಸಬೇಕು ಎಂದು ಕಾರ್ಯದರ್ಶಿಗಳ ತಂಡ ರೈಲ್ವೆ ಸಚಿವಾಲಯಕ್ಕೆ ತಿಳಿಸಿದೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com