ಮಂಗಳಯಾನದ ಬಹುಮುಖ್ಯ ಪಾತ್ರ ವಹಿಸಿದ ಭಾರತೀಯ ಮೂಲದ ವಿಜ್ಞಾನಿ ಸ್ವಾತಿ: ಟ್ರೆಂಡ್‌‌ ಆದ ಬಿಂದಿ

ಸ್ವಾತಿ ಅವರಲ್ಲಿ ಮುಖ್ಯವಾಗಿ ಸೆಳೆದಿದ್ದೇ ಅವರು ಹಾಕಿರುವ ಬಿಂದಿ. ಕಂಟ್ರೋಲ್‌ ರೂಮಿನಲ್ಲಿ ಬಿಂದಿ ಹಾಕಿಯೇ ನಿಯಂತ್ರಣ ಮಾಡಿರುವ ಸ್ವಾತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ
ಮಂಗಳಯಾನದ ಬಹುಮುಖ್ಯ ಪಾತ್ರ ವಹಿಸಿದ ಭಾರತೀಯ ಮೂಲದ ವಿಜ್ಞಾನಿ ಸ್ವಾತಿ: ಟ್ರೆಂಡ್‌‌ ಆದ ಬಿಂದಿ

ಅಮೆರಿಕದ ಬಾಹ್ಯಾಕಾಶ ಸಂಸ್ಥೆ 'ನಾಸಾ'ದ ಪರ್ಸೀವರೆನ್ಸ್ ರೋವರ್‌ ನೌಕೆ ಮಂಗಳ ಗ್ರಹದ ಅಂಗಳದಲ್ಲಿ ಯಶಸ್ವಿಯಾಗಿ ಲ್ಯಾಂಡ್ ಆಗಿರುವ ಐತಿಹಾಸಿಕ ಕ್ಷಣಕ್ಕೆ ಇಡೀ ಜಗತ್ತೇ ಸಾಕ್ಷಿಯಾಗಿದೆ. ಮಾರ್ಸ್ 2020 ಕಾರ್ಯಾಚರಣೆಯ ಮಾರ್ಗದರ್ಶನ ಮತ್ತು ನಿಯಂತ್ರಣ ಕಾರ್ಯಾಚರಣೆಗೆ ನೇತೃತ್ವ ವಹಿರುವುದು ಭಾರತೀಯ ಮೂಲದ ಅಮೆರಿಕನ್ ವಿಜ್ಞಾನಿ ಸ್ವಾತಿ ಮೋಹನ್ ಎಂಬುದು ಭಾರತೀಯರಿಗೆ ಹೆಮ್ಮೆಯ ವಿಚಾರವೇ ಸರಿ.

ರೋವರ್ ಯಶಸ್ವಿಯಾಗಿ ಲ್ಯಾಂಡ್ ಆಗಿರುವುದನ್ನು ಸ್ವಾತಿ ಮೋಹನ್ ಅವರು ಖಚಿತಪಡಿಸುತ್ತಿದ್ದಂತೆಯೇ ನಾಸಾ ಕಛೇರಿಯಲ್ಲಿ ಹರ್ಷೋದ್ಘಾರ ಮುಗಿಲು ಮುಟ್ಟಿದೆ.

ಭಾರತದಲ್ಲಿ ಹುಟ್ಟಿ, ಒಂದು ವರ್ಷ ಆಗುವಾಗಲೇ ಅಮೆರಿಕಾಕ್ಕೆ ವಲಸೆ ಹೋದ ಸ್ವಾತಿ ಅವರು ಕಾರ್ನೆಲ್ ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್ ಮತ್ತು ಏರೋಸ್ಪೇಸ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ್ದಾರೆ. ಏರೋನಾಟಿಕ್ಸ್ / ಗಗನಯಾತ್ರಿಗಳಲ್ಲಿ ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ಯಿಂದ ಎಂ.ಎಸ್ ಮತ್ತು ಪಿಎಚ್ ಡಿ ಪಡೆದಿದ್ದಾರೆ.

ಸ್ವಾತಿ ಅವರು ನಾಸಾದೊಂದಿಗಿನ ತಮ್ಮ ವೃತ್ತಿಜೀವನದ ಅವಧಿಯಲ್ಲಿ, ಕ್ಯಾಸಿನಿ ಮಿಷನ್ ಟು ಸ್ಯಾಟರ್ನ್ ಮತ್ತು ಗ್ರೇಲ್ (ಒಂದು ಜೋಡಿ ರಚನೆಯು ಬಾಹ್ಯಾಕಾಶ ನೌಕೆಯನ್ನು ಚಂದ್ರನಿಗೆ ಹಾರಿಸಿದೆ) ನಂತಹ ಅನೇಕ ಕಾರ್ಯಗಳಲ್ಲಿ ಕೆಲಸ ಮಾಡಿದ್ದಾರೆ.

ಸದ್ಯ ಅನ್ವೇಷಣಾ ಕಾರ್ಯಕ್ರಮದ ಭಾಗವಾಗಿ ಮಂಗಳಗ್ರಹಕ್ಕೆ ಕಳುಹಿಸಿರುವ ಪರ್ಸೀವರೆನ್ಸ್ ರೋವರ್‌ ರೆಡ್ ಪ್ಲಾನೆಟ್‌ನಲ್ಲಿ ಇಳಿಯುವ ಮೂಲಕ ನಾಸಾದ ಯೋಜನೆ ಒಂದು ಹಂತದ ಯಶಸ್ಸು ಕಂಡಿದೆ. ಮುಂದಿನ ದಿನಗಳಲ್ಲಿ ರೋವರ್‌ ಮಂಗಳ ಗ್ರಹದ ಮೇಲ್ಮೈನಲ್ಲಿರುವ ಮಾಹಿತಿಗಳನ್ನು ಭೂಮಿಗೆ ಕಳುಹಿಸಲಿದೆ.

ಟ್ವಿಟರಿನಲ್ಲಿ ಭರಪೂರ ಪ್ರಶಂಸೆಗೆ ಪಾತ್ರರಾದ ಸ್ವಾತಿ

ಸ್ವಾತಿ ಅವರಲ್ಲಿ ಮುಖ್ಯವಾಗಿ ಸೆಳೆದಿದ್ದೇ ಅವರು ಹಾಕಿರುವ ಬಿಂದಿ. ಕಂಟ್ರೋಲ್‌ ರೂಮಿನಲ್ಲಿ ಬಿಂದಿ ಹಾಕಿಯೇ ನಿಯಂತ್ರಣ ಮಾಡಿರುವ ಸ್ವಾತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಬಿಂದಿ ಹಾಕಿಕೊಂಡೆ ನಾಸಾದ ನಿಯಂತ್ರಕ ಕೊಠಡಿಯಲ್ಲಿ ಕಾರ್ಯನಿರ್ವಹಿಸಿದ ಸ್ವಾತಿ ನಮಗೆಲ್ಲರಿಗೂ ಹೆಮ್ಮೆ ತಂದಿದ್ದಾರೆಂದು ಟ್ವಿಟರ್‌ ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com