ಚುನಾವಣಾ ನಿಯಮಗಳನ್ನು ರಾಜ್ಯಗಳೂ ರೂಪಿಸಬಹುದೇ?

'ಸಂಸತ್ತಿನ ಜನ ಪ್ರಾತಿನಿಧ್ಯ ಕಾಯ್ದೆ 1951' ರ ಪ್ರಕಾರ ರಾಜ್ಯ ಚುನಾವಣೆಗಳನ್ನು ಹೇಗೆ ನಡೆಸಬಹುದು ಎಂಬುದರ ಕುರಿತು ನಿಯಮಗಳನ್ನು ರೂಪಿಸಲು ರಾಜ್ಯಗಳಿಗೆ ಅವಕಾಶಗಳಿವೆ ಎಂದು ಕಾನೂನು ತಜ್ಞರು ಸ್ಪಷ್ಟಪಡಿಸುತ್ತಾರೆ.
ಚುನಾವಣಾ ನಿಯಮಗಳನ್ನು ರಾಜ್ಯಗಳೂ ರೂಪಿಸಬಹುದೇ?

ಭಾರತದ ಚುನಾವಣಾ ನಿಯಮಗಳನ್ನು ತಿಳಿಸುವ ಭಾರತದ ಸಂವಿಧಾನ ಅಥವಾ ಜನರ ಪ್ರಾತಿನಿಧ್ಯ ಕಾಯ್ದೆಯು ಮತದಾರನು ಇವಿಎಂ ಮತ್ತು ವಿವಿಪಿಎಟಿ ಮೂಲಕವೇ ತನ್ನ ಮತವನ್ನು ಚಲಾಯಿಸಬೇಕು ಅಥವಾ ಇಸಿ ಎಲೆಕ್ಟ್ರಾನಿಕ್ ಮತದಾನದ ಮೂಲಕ ಚುನಾವಣೆ ನಡೆಸಬೇಕು ಎಂದು ಹೇಳುವುದಿಲ್ಲ. ಹಾಗಿದ್ದೂ ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ (ಇವಿಎಂ) ಮೂಲಕ ಮಾತ್ರ ಮತ ಚಲಾಯಿಸಲು ಭಾರತದ ಚುನಾವಣಾ ಆಯೋಗ (ಇಸಿ) ಮತದಾರರನ್ನು ಒತ್ತಾಯಿಸುತ್ತಿದೆಯೇ? ಎಲೆಕ್ಟ್ರಾನಿಕ್ ಮತದಾನ ಯಂತ್ರ (ಇವಿಎಂ) ಮತ್ತು ಬ್ಯಾಲೆಟ್ ಪೇಪರ್ ನಡುವೆ ಆಯ್ಕೆ ಮಾಡಲು ಮತದಾರರಿಗೆ ಚುನಾವಣಾ ಆಯೋಗ ಯಾಕೆ ಅವಕಾಶ ನೀಡಬಾರದು? ಎಂದು ಲೇಖಕಿ ಪೂನಂ ಅಗರ್ವಾಲ್ ಪ್ರಶ್ನಿಸುತ್ತಾರೆ.


'ಇವಿಎಂ ಮತ್ತು ಬ್ಯಾಲೆಟ್ ಪೇಪರ್ ಮತದಾನದ ನಡುವೆ ಆಯ್ಕೆ ಮಾಡುವಂತೆ ಜನರನ್ನು ಕೇಳುವ ಟ್ವಿಟರ್ ಸಮೀಕ್ಷೆ ನಾನು ನಡೆಸಿದೆ . 24 ಗಂಟೆಗಳ ಅವಧಿಯಲ್ಲಿ ಸುಮಾರು 60,000 ಜನರು ಪ್ರತಿಕ್ರಿಯಿಸಿದ್ದಾರೆ. 59.5% ರಷ್ಟು ಜನರು ಬ್ಯಾಲೆಟ್ ಪೇಪರ್‌ಗಳಿಗೆ ಆದ್ಯತೆ ನೀಡಿದರೆ, 40.5% ಜನರು ಇವಿಎಂಗಳನ್ನು ಆಯ್ಕೆ ಮಾಡಿದ್ದಾರೆ. ಸಮೀಕ್ಷೆಯು ಎಲೆಕ್ಟ್ರಾನಿಕ್ ಮತದಾನದ ಬಗ್ಗೆ ಹೆಚ್ಚುತ್ತಿರುವ ಅಪನಂಬಿಕೆಯನ್ನು ಬಹಿರಂಗಪಡಿಸಿತು' ಎನ್ನುತ್ತಾರೆ ಪೂನಂ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಇತ್ತೀಚಿನ ವರ್ಷಗಳಲ್ಲಿ ತಜ್ಞರು ಇವಿಎಂ ಮತ್ತು ವಿವಿಪಿಎಟಿ (ವೋಟರ್ ವೆರಿಫೈಡ್ ಪೇಪರ್ ಆಡಿಟ್ ಟ್ರಯಲ್) ಯಂತ್ರಗಳನ್ನು ಬಳಸಿಕೊಂಡು ನಡೆಸುವ ಎಲೆಕ್ಟ್ರಾನಿಕ್ ಮತದಾನದ ಬಗ್ಗೆ ಪದೇ ಪದೇ ಕಳವಳ ವ್ಯಕ್ತಪಡಿಸಿದ್ದಾರೆ. ಆದರೆ ಭಾರತದ ಚುನಾವಣಾ ಆಯೋಗವು ಈ ಕಳವಳಗಳನ್ನು ಪರಿಹರಿಸುವ ಬದಲು ಹೆಚ್ಚಾಗಿ ಅವುಗಳನ್ನು ಕಡೆಗಣಿಸಿದೆ ಅಥವಾ ಅಪೂರ್ಣ ಮತ್ತು ಅತೃಪ್ತಿಕರ ಪ್ರತಿಕ್ರಿಯೆಗಳನ್ನು ನೀಡಿದೆ.

ಸಾಮಾಜಿಕ ಹೋರಾಟಗಾರ ಪ್ರದೀಪ್ ಮಹಾದೇವ ರಾವ್ ಯುಕೆ ಅವರು ಇತ್ತೀಚೆಗೆ ಮಹಾರಾಷ್ಟ್ರದ ಮಾಜಿ ವಿಧಾನಸಭಾ ಸ್ಪೀಕರ್ ನಾನಾ ಪಟೋಲೆ ಅವರಿಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಮತದಾರರಿಗೆ ಆಯ್ಕೆ ನೀಡುವ ಕುರಿತು ಚರ್ಚೆಯನ್ನು ನಡೆಸಿದ್ದಾರೆ. ಈ ಅರ್ಜಿಯ ಆಧಾರದ ಮೇಲೆ, ಮಹಾರಾಷ್ಟ್ರದ ಚುನಾವಣೆಗಳಲ್ಲಿ ಕಾಗದದ ಮೂಲಕ ಮತದಾನವನ್ನು ಪುನಃ ಪರಿಚಯಿಸುವ ಮಸೂದೆಯನ್ನು ರೂಪಿಸುವ ಆಲೋಚನೆಯನ್ನು ಪಟೋಲೆ ಮುಂದುರಿಸಿದ್ದಾರೆ. ಅಂತಹ ಮಸೂದೆಯನ್ನು ಮಹಾರಾಷ್ಟ್ರ ಸರ್ಕಾರ ರೂಪಿಸಿದರೆ, ಅದು ರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿ ಮತ್ತು ರಾಜ್ಯದೊಳಗಿನ ಇತರ ಸ್ಥಳೀಯ ಮಟ್ಟದ ಚುನಾವಣೆಗಳಲ್ಲಿ ಅನ್ವಯವಾಗಲಿವೆ.

ಆದರೆ ನಮ್ಮ ಸಂವಿಧಾನವು ಚುನಾವಣಾ ವಿಧಾನದಲ್ಲಿ ತಿದ್ದುಪಡಿ ಮಾಡಲು ರಾಜ್ಯಗಳಿಗೆ ಅಧಿಕಾರ ನೀಡುತ್ತದೆಯೇ? ಎಂಬ‌ ಪ್ರಶ್ನೆಯೂ ಇಲ್ಲಿ ಏಳುತ್ತದೆ. ಸಂವಿಧಾನ ತಜ್ಞರ ಪ್ರಕಾರ ಭಾರತದ ಸಂವಿಧಾನದ 328 ನೇ ವಿಧಿ ಈ ಅಧಿಕಾರವನ್ನು ರಾಜ್ಯಗಳಿಗೆ ನೀಡುತ್ತದೆ. ಆದರೆ ಇದೇ ವಿಧಿಯ ಪ್ರಕಾರ ರಾಜ್ಯಗಳ ಚುನಾವಣೆಗಳನ್ನು ಎದುರಿಸಲು ಸಂಸತ್ತು ಕಾನೂನು ರೂಪಿಸಿದ್ದರೆ, ರಾಜ್ಯದ ಶಾಸಕಾಂಗವು ಸಂಸತ್ತು ಅಂಗೀಕರಿಸಿದ ಕಾನೂನಿಗೆ ವಿರುದ್ಧವಾದ ಅಥವಾ ಬದಲಿಸಿ ತನ್ನದೇ ಆದ ನಿಯಮಗಳನ್ನು ರೂಪಿಸಲು ಸಾಧ್ಯವಿಲ್ಲ.

'ಸಂಸತ್ತಿನ ಜನ ಪ್ರಾತಿನಿಧ್ಯ ಕಾಯ್ದೆ 1951' ರ ಪ್ರಕಾರ ರಾಜ್ಯ ಚುನಾವಣೆಗಳನ್ನು ಹೇಗೆ ನಡೆಸಬಹುದು ಎಂಬುದರ ಕುರಿತು ನಿಯಮಗಳನ್ನು ರೂಪಿಸಲು ರಾಜ್ಯಗಳಿಗೆ ಅವಕಾಶಗಳಿವೆ ಎಂದು ಕಾನೂನು ತಜ್ಞರು ಸ್ಪಷ್ಟಪಡಿಸುತ್ತಾರೆ. ಹಾಗಾಗಿ ತಾಂತ್ರಿಕವಾಗಿ ರಾಜ್ಯಗಳು ತಮ್ಮ ಪ್ರತ್ಯೇಕ ಚುನಾವಣಾ ನಿಯಮಗಳನ್ನು ಹೊಂದಬಹುದು ಎಂದೇ ಹೇಳಬಹುದು.

"ಇವಿಎಂಗಳ ಬಗ್ಗೆ ಹೆಚ್ಚುತ್ತಿರುವ ಅಪನಂಬಿಕೆ ಭಾರತೀಯ ಪ್ರಜಾಪ್ರಭುತ್ವಕ್ಕೆ ಉತ್ತಮ ಸಂಕೇತವಲ್ಲ" ಎನ್ನುತ್ತಾರೆ ನಾನಾ ಪಾಟೋಲ್. ಗಮನಿಸಬೇಕಾದ ಸಂಗತಿಯೆಂದರೆ, ಇವಿಎಂಗಳ ಮೂಲಕ ಎಲೆಕ್ಟ್ರಾನಿಕ್ ಮತದಾನಕ್ಕೆ ಪ್ರಯತ್ನಿಸಿದ ಹಲವಾರು ಅಭಿವೃದ್ಧಿ ಹೊಂದಿದ ದೇಶಗಳು ಬ್ಯಾಲೆಟ್ ಪೇಪರ್‌ಗಳಿಗೆ ಮರಳಿದೆ. ಈ ಪಟ್ಟಿಯಲ್ಲಿ ಫ್ರಾನ್ಸ್, ಯುಕೆ, ಐರ್ಲೆಂಡ್, ನೆದರ್‌ಲ್ಯಾಂಡ್ಸ್ ಮತ್ತು ಜರ್ಮನಿ ಸೇರಿವೆ.

ಬ್ಯಾಲೆಟ್ ಪೇಪರ್‌ಗೆ ಮರಳುವುದೆಂದರೆ ಚುನಾವಣಾ ಆಯೋಗದ ಕೆಲಸ ಹೆಚ್ಚುತ್ತದೆ ಮತ್ತು ಚುನಾವಣಾ ವೆಚ್ಚವೂ ಅಧಿಕವಾಗುತ್ತದೆ. ಅಲ್ಲದೆ ಫಲಿತಾಂಶ ಘೋಷಣೆಯಾಗುವುದೂ ತಡವಾಗಬಹುದು. ಆದರೆ ಇದರಿಂದ ಮತದಾರರಿಗೆ ಚುನಾವಣಾ ಪ್ರಕ್ರಿಯೆಯ ಮೇಲೆ ಮತ್ತೆ ನಂಬಿಕೆ ಹುಟ್ಟುತ್ತದೆ ಎಂದಾದರೆ ಪ್ರಜಾಪ್ರಭುತ್ವದ ಉಳಿವಿನ ದೃಷ್ಟಿಯಿಂದ ಬ್ಯಾಲೆಟ್ ಪೇಪರ್‌ಗೆ ಮರಳುವುದೇ ಉತ್ತಮ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com