ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಅವರ ಹಠಾತ್ ಬದಲಾವಣೆಗೆ ಕಾರಣವೇನು?

ಕಾಂಗ್ರೆಸ್ ಕಿರಣ್ ಬೇಡಿ ಅವರ ವಿಷಯವನ್ನೇ ರಾಜಕೀಯ ಬಂಡವಾಳ ಮಾಡಿಕೊಳ್ಳಲು ಯೋಜಿಸುತ್ತಿತ್ತು. ಪುದುಚೇರಿಗೆ ಬುಧವಾರ ಆಗಮಿಸಿದ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಬೇಡಿ ಅವರ ಮೇಲೆ ದೊಡ್ಡ ಪ್ರಮಾಣದ ಟೀಕೆಗಳನ್ನು ಮಾಡುವ ಯೋಜನೆ ಹಾಕಿಕೊಂಡಿದ್ದರು.
ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಅವರ ಹಠಾತ್ ಬದಲಾವಣೆಗೆ ಕಾರಣವೇನು?

ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿ ಸೇವೆ ಸಲ್ಲಿಸುತಿದ್ದ ಮಾಜಿ ಉನ್ನತ ಪೋಲೀಸ್ ಅಧಿಕಾರಿ ಕಿರಣ್ ಬೇಡಿ ಅವರನ್ನು ಹಠಾತ್ತನೆ ಪದಚ್ಯತಗೊಳಿಸಿರುವುದು ಸ್ವತಃ ಅವರಿಗೆ ಆಶ್ಚರ್ಯವನ್ನುಂಟು ಮಾಡಿದೆ ಎಂದು ಅವರ ಅಧಿಕೃತ ನಿವಾಸ ರಾಜ ಭವನದ ಮೂಲಗಳು ತಿಳಿಸಿವೆ. ಆ ಸಮಯದಲ್ಲಿ ಅವರು ಪುದುಚೇರಿಯಲ್ಲಿ ಕೋವಿಡ್ -19 ವ್ಯಾಕ್ಸಿನೇಷನ್ ಕಾರ್ಯಕ್ರಮವನ್ನು ಪರಿಶೀಲಿಸುತ್ತಿದ್ದರು. ಭಾರತದ ಮೊದಲ ಮಹಿಳಾ ಐಪಿಎಸ್ ಅಧಿಕಾರಿ ಎಂಬ ಖ್ಯಾತಿಗೆ ಪಾತ್ರರಾಗಿರುವ ಬೇಡಿ ಬುಧವಾರ ತಮ್ಮ ಟ್ವಿಟ್ಟರ್ ಹ್ಯಾಂಡಲ್ನಲ್ಲಿ ವಿದಾಯ ಸಂದೇಶವನ್ನು ಪೋಸ್ಟ್ ಮಾಡಿ ರಾಜ ಭವನದ ಸಿಬ್ಬಂದಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಪುದುಚೇರಿಯ ಜನತೆಗೆ ಉತ್ತಮ ಭವಿಷ್ಯವನ್ನು ಹಾರೈಸಿದರು ಮತ್ತು ತಾವು ಸಾಂವಿಧಾನಿಕ ಮತ್ತು ನೈತಿಕತೆಯ ಚೌಕಟ್ಟಿನಲ್ಲಿ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿದ್ದೇನೆ ಎಂದು ಅವರು ಹೇಳಿದ್ದಾರೆ. ಪದುಚೇರಿಯ ವಿ. ನಾರಾಯಣ ಸ್ವಾಮಿ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರದೊಂದಿಗೆ ಬೇಡಿ ಭಿನ್ನಾಭಿಪ್ರಾಯ ಹೊಂದಿದ್ದಾರೆ ಎಂಬ ಅಂಶವನ್ನು ಅವರದೇ ವಿದಾಯದ ಟ್ವೀಟ್ ಸಂದೇಶವು ಪ್ರತಿಬಿಂಬಿಸುತ್ತದೆ. ಆದರೆ ಅವರು ಆಡಳಿತದಲ್ಲಿ ಹಸ್ತಕ್ಷೇಪ ಮಾಡುವ ಬಗ್ಗೆ ಪದೇ ಪದೇ ಕಾಂಗ್ರೆಸ್ ದೂರು ನೀಡಿದ್ದರಿಂದ ಅಲ್ಲ ಎಂದು ಮೂಲಗಳು ತಿಳಿಸಿವೆ. ಬೇಡಿ ಅವರು ತಮ್ಮ ಅಧಿಕಾರಾವಧಿಯಲ್ಲಿ ತೆಗೆದುಕೊಂಡಿದ್ದ ಜನಪ್ರಿಯವಲ್ಲದ ನಿರ್ಧಾರಗಳ ಕಾರಣದಿಂದ ಮುಂದಿನ ವಿಧಾನ ಸಭೆಯ ಚುನಾವಣೆಯಲ್ಲಿ ಇವರು ಮತದಾನದ ವಿಷಯ ಆಗಲಿದ್ದಾರೆ ಎಂಬ ಸಂಗತಿಯೇ ಬಿಜೆಪಿ ಅದರ ಮಿತ್ರ ಎಐಎಡಿಎಂಕೆ ಯನ್ನು ಚಿಂತಿತರನ್ನಾಗಿ ಮಾಡಿತ್ತು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಇತ್ತ ಕಾಂಗ್ರೆಸ್ ಕಿರಣ್ ಬೇಡಿ ಅವರ ವಿಷಯವನ್ನೇ ರಾಜಕೀಯ ಬಂಡವಾಳ ಮಾಡಿಕೊಳ್ಳಲು ಯೋಜಿಸುತ್ತಿತ್ತು. ಪುದುಚೇರಿಗೆ ಬುಧವಾರ ಆಗಮಿಸಿದ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಬೇಡಿ ಅವರ ಮೇಲೆ ದೊಡ್ಡ ಪ್ರಮಾಣದ ಟೀಕೆಗಳನ್ನು ಮಾಡುವ ಯೋಜನೆ ಹಾಕಿಕೊಂಡಿದ್ದರು. ಪುದುಚೇರಿಯಲ್ಲಿ ವಿಧಾನಸಭೆ ಯಲ್ಲಿ 33 ಸ್ಥಾನಗಳಿದ್ದು ಅದರಲ್ಲಿ 30 ಮಂದಿ ಆಯ್ಕೆಯಾಗಿದ್ದಾರೆ ಮತ್ತು ಮೂವರು ನಾಮನಿರ್ದೇಶನಗೊಂಡಿದ್ದಾರೆ. ಆದರೆ ನಾಲ್ಕು ರಾಜೀನಾಮೆಗಳು ಮತ್ತು ಅನರ್ಹತೆಯೊಂದಿಗೆ ಸದ್ಯದ ಸದನದ ಬಲವು 28 ಕ್ಕೆ ಇಳಿದಿದೆ. ಅಲ್ಲದೆ ನಾರಾಯಣಸ್ವಾಮಿ ತಮ್ಮ ಬಹುಮತವನ್ನು ಕಳೆದುಕೊಂಡಿದ್ದಾರೆ. ಈಗ ನಾರಾಯಣ ಸ್ವಾಮಿ ಸರ್ಕಾರವನ್ನು 14 ಶಾಸಕರು ಮಾತ್ರ ಬೆಂಬಲಿಸುತಿದ್ದಾರೆ. ಈಗ ಕಾಂಗ್ರೆಸ್ ನ 10 ಶಾಸಕರು , ಡಿಎಂಕೆ ಯಿಂದ ಮೂವರು ಮತ್ತು ಒಬ್ಬ ಸ್ವತಂತ್ರ ಶಾಸಕರು ಬೆಂಬಲಿಸುತಿದ್ದರೆ ಪ್ರತಿಪಕ್ಷದ ನಾಯಕ ಮಾಜಿ ಮುಖ್ಯ ಮಂತ್ರಿ ಎನ್. ರಂಗಸ್ವಾಮಿಯ ಎನ್ಆರ್ ಕಾಂಗ್ರೆಸ್ ಏಳು ಶಾಸಕರನ್ನು ಹೊಂದಿದ್ದರೆ, ಎಐಎಡಿಎಂಕೆ ನಾಲ್ಕು ಮತ್ತು ಬಿಜೆಪಿಯ ಮೂವರು ಶಾಸಕರು ಇದ್ದಾರೆ.

ಮುಂಬರುವ ಚುನಾವಣೆಗಳಲ್ಲಿ ಬಿಜೆಪಿ ಮತ್ತು ಎಐಎಡಿಎಂಕೆ ಯ ರಾಜಕೀಯ ಭವಿಷ್ಯವು ಕಿರಣ್ ಬೇಡಿ ಅವರ ಕಠಿಣ ನಿಲುವಿನಿಂದ ಆತಂಕ್ಕೀಡಾಗಿತ್ತು. ಸುಪ್ರೀಂ ಕೋರ್ಟಿನ ಆದೇಶದನ್ವಯ ಬೈಕ್ ಸವಾರರು ಮತ್ತು ಹಿಂಬದಿ ಸವಾರರು ಹೆಲ್ಮೆಟ್ ಧರಸಲೇಬೇಕಿತ್ತು. ಕಿರಣ್ ಬೇಡಿ ಕಠಿಣ ನಿಲುವು ತೆಗೆದುಕೊಂಡು ಇದನ್ನು ಕಡ್ಡಾಯಗೊಳಿಸಿದರು. ಅವರ ನಿಲುವು ದೆಹಲಿಯಲ್ಲಿ ಟ್ರಾಫಿಕ್ ಅಧಿಕಾರಿಯಾಗಿದ್ದಾಗ ಪಾಲಿಸಿದ್ದ ಕಟ್ಟು ನಿಟ್ಟನ್ನೆ ಇಲ್ಲಿಯೂ ಪಾಲಿಸಿದ್ದರು. ಅದರೆ ನಾರಾಯಣ ಸ್ವಾಮಿ ಸರ್ಕಾರವು ಇದನ್ನು ಜಾರಿಗೆ ತರಲು ಅಡ್ಡಿ ಪಡಿಸುತ್ತಿದೆ ಎಂದು ಬೇಡಿ ಆರೋಪಿಸಿದ್ದರು. ಆದರೆ ಸ್ವಾಮಿ ಅವರು ಕಾನೂನನ್ನು ಹಂತ ಹಂತವಾಗಿ ಜಾರಿಗೊಳಿಸಬೇಕೆಂದು ಹೇಳಿದ್ದರು. ಆದರೆ ಬೇಡಿ ಅವರು ಸಾರಿಗೆ ಆಯುಕ್ತರಿಗೆ ಆದೇಶವನ್ನು ನೀಡಿ ಕೇವಲ ದಂಡ ವಿಧಿಸುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಹೇಳಿ ಚಾಲನಾ ಪರವಾನಗಿ ಮತ್ತು ವಾಹನಗಳನ್ನು ವಶಪಡಿಸಿಕೊಳ್ಳಬೇಕು ಎಂದು ತಿಳಿಸಿದರು. ಇದು ಜನರಲ್ಲಿ ಆತಂಕ ಮತ್ತು ಆಕ್ರೋಶವನ್ನು ಉಂಟು ಮಾಡಿತು. ಚುನಾವಣೆಗಳಿಗೆ ಎರಡು ತಿಂಗಳಷ್ಟೆ ಬಾಕಿ ಇದೆ. ದೆಹಲಿ ಮಾಜಿ ಪೊಲೀಸ್ ಕಮಿಷನರ್ ಮಾದರಿಯ ವರ್ತನೆಯಿಂದ ಜನರು ಕೋಪಗೊಂಡಿದ್ದಾರೆ ಎಂದು ಪುದುಚೇರಿಯ ಹಿರಿಯ ಬಿಜೆಪಿ ಮುಖಂಡರು ಹೇಳುತ್ತಾರೆ. ಚುನಾವಣೆಯ ಸಮಯದಲ್ಲಿ, ಅಂತಹ ಕಠಿಣ ಕ್ರಮಗಳನ್ನು ತೆಗೆದುಕೊಂಡರೆ ಪಕ್ಷಕ್ಕೆ ಹಿನ್ನಡೆ ಆಗುವುದು ಖಚಿತ ಎಂದು ಬಿಜೆಪಿ ಆತಂಕ ವ್ಯಕ್ತಪಡಿಸಿದ್ದು ಇದರಿಂದಾಗಿ ನಾರಾಯಣ ಸ್ವಾಮಿ ಅವರಿಗೆ ಅನುಕೂಲ ಆಗುತಿತ್ತು. ಚುನಾಯಿತ ಸರ್ಕಾರ ಇರುವಾಗಲೂ ಬೇಡಿ ತಾವೇ ಅಧಿಕಾರವನ್ನು ಚಲಾಯಿಸಲು ಹೊರಟಿದ್ದು ಇದನ್ನೇ ಚುನಾವಣಾ ವಿಷಯ ಮಾಡಿಕೊಳ್ಳಲು ಕಾಂಗ್ರೆಸ್ ತನ್ನ ಅಭಿಯಾನವನ್ನು ಯೋಜಿಸುತ್ತಿದೆ ಎಂದು ಮತ್ತೊಬ್ಬ ಬಿಜೆಪಿ ನಾಯಕ ಹೇಳಿದರು. ಅವರು ಲೆಫ್ಟಿನೆಂಟ್ ಗವರ್ನರ್ ಜನಪರವಾಗಿಲ್ಲ ಮತ್ತು ರಾಜಕೀಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಮುಖ್ಯ ಮಂತ್ರಿಗಳನ್ನೇ ನಿರ್ಬಂಧಿಸಿ ರಾಜ್ ಭವನವನ್ನು ಬಳಸಿಕೊಂಡು ಬಿಜೆಪಿಯನ್ನು ಮುನ್ನಡೆಸುತ್ತಿದ್ದಾರೆ ಮತ್ತು ಸ್ಥಳೀಯ ನಾಯಕರಿಗೆ ಬೆಲೆಕೊಡುತ್ತಿರಲಿಲ್ಲ ಎಂದು ಮತ್ತೊಬ್ಬ ಬಿಜೆಪಿ ನಾಯಕರು ಹೇಳಿದರು.

ಕಳೆದ ವಾರವಷ್ಟೇ, ನಾರಾಯಣಸಾಮಿ ಅವರು ಬೇಡಿ ಅವರು ಸಾಂವಿಧಾನಿಕ ನಿಯಮಗಳನ್ನು ಉಲ್ಲಂಘಿಸಿದ್ದಾರೆಂದು , ಮುಖ್ಯಮಂತ್ರಿ ಮತ್ತು ಚುನಾಯಿತ ಸರ್ಕಾರದ ಅಧಿಕಾರವನ್ನೆ ಮೊಟಕುಗೊಳಿಸುತಿದ್ದಾರೆಂದು ರಾಷ್ಟ್ರಪತಿಗಳಿಗೇ ದೂರು ನೀಡಿದ್ದರು. ಕಾಂಗ್ರೆಸ್-ಡಿಎಂಕೆ ಮೈತ್ರಿ ಕೂಟ ಕಳೆದ ಮೇ 2016 ರ ಚುನಾವಣೆಯಲ್ಲಿ ಜಯಗಳಿಸಿದ ಕೂಡಲೇ ಬೇಡಿ ಅವರೊಂದಿಗೆ ಘರ್ಷಣೆ ಆರಂಭವಾಯಿತು. ಬೇಡಿ ಮತ್ತು ಸ್ವಾಮಿ ನಡುವಿನ ಮೊದಲ ಪ್ರಮುಖ ಘರ್ಷಣೆಯು 2017 ರಲ್ಲಿ ಗವರ್ನರ್ ಅವರು ಇಬ್ಬರು ಬಿಜೆಪಿ ಸದಸ್ಯರನ್ನು ವಿಧಾನಸಭೆಗೆ ನೇಮಿಸಿದಾಗ ನಡೆಯಿತು. ನಂತರ, ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಪುದುಚೇರಿ ಸರ್ಕಾರವು ನಿವೃತ್ತ ಅಧಿಕಾರಿಗಳನ್ನು ಚುನಾವಣಾ ಆಯುಕ್ತರನ್ನಾಗಿ ನೇಮಿಸುವುದನ್ನು ಬೇಡಿ ಅವರು ರದ್ದುಗೊಳಿಸಿದಾಗ ಮತ್ತೊಮ್ಮೆ ತಿಕ್ಕಾಟ ಸಂಬವಿಸಿತು. 2011 ರಿಂದ ಪುದುಚೇರಿಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯೇ ನಡೆದಿಲ್ಲ. ನಂತರ ಪೊಂಗಲ್ ಹಬ್ಬದ ಸಂದರ್ಭದಲ್ಲಿ ಸರ್ಕಾರವು ಜನರಿಗೆ ಉಚಿತ ಅಕ್ಕಿ ಮತ್ತು ಸೀರೆಗಳನ್ನು ವಿತರಿಸುವ ಯೋಜನೆ ಹಾಕಿಕೊಂಡರು. ಅದಕ್ಕೆ ಬೇಡಿ ಆಕ್ಷೇಪಿಸಿದ್ದು ಜನರ ಖಾತೆಗಳಿಗೆ ನೇರವಾಗಿ ಹಣವನ್ನು ವರ್ಗಾಯಿಸಲು ಸೂಚಿಸಿದರು. ಕಾಂಗ್ರೆಸ್ ಪಕ್ಷವು 2019 ರಲ್ಲಿ ಮದ್ರಾಸ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು, ಚುನಾಯಿತ ಸರ್ಕಾರದ ದಿನನಿತ್ಯದ ಕಾರ್ಯಚಟುವಟಿಕೆಗಳಲ್ಲಿ ಹಸ್ತಕ್ಷೇಪ ಮಾಡುವುದನ್ನು ತಡೆಯಲು ಲೆಫ್ಟಿನೆಂಟ್ ಗವರ್ನರ್ ಅವರಿಗೆ ಸೂಚಿಸಬೇಕೆಂದು ಕೋರಿದೆ.

ಹೆಸರು ಹೇಳಲು ಇಚ್ಚಿಸದ ದಕ್ಷಿಣ ಭಾರತದ ಬಿಜೆಪಿ ನಾಯಕರೊಬ್ಬರು ಮಾತನಾಡಿ ಮುಖ್ಯ ಮಂತ್ರಿ ನಾರಾಯಣಸಾಮಿ ಶಾಸಕರನ್ನು ಕಳೆದುಕೊಳ್ಳುತ್ತಿರುವ ಸಮಯದಲ್ಲಿ, ಬೇಡಿ ಅವರನ್ನು ಮುಂದುವರಿಸುವುದು ಉತ್ತಮವಲ್ಲ ಎಂದು ಹೇಳಿದರು. ಈ ಸಮಯದಲ್ಲಿ ತಮಿಳು ಜನರೊಂದಿಗೆ ಉತ್ತಮವಾಗಿ ಒಡನಾಡಬಲ್ಲ ಪ್ರಬುದ್ದ ರಾಜಕಾರಣಿ ಗವರ್ನರ್ ಹುದ್ದೆಗೆ ಸೂಕ್ತ ಎಂದು ಅವರು ಹೇಳಿದರು. ಇದೇ ಹಿನ್ನೆಲೆಯಲ್ಲಿ ಈಗ ಸರ್ಕಾರವು ತೆಲಂಗಾಣ ಗವರ್ನರ್ ತಮಿಳಿಸೈ ಸೌಂದರಾಜನ್ ಅವರಿಗೆ ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಹೆಚ್ಚುವರಿ ಚಾರ್ಜ್ ನೀಡಲಾಗಿದೆ. ಇವರು ತಮಿಳುನಾಡು ಬಿಜೆಪಿಯ ಮಾಜಿ ಅಧ್ಯಕ್ಷರಾಗಿದ್ದು ಪುದುಚೇರಿಗೂ ಚಿರಪರಿಚಿತರಾಗಿದ್ದಾರೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com