ದಿಶಾ ರವಿ ಪರ ಧ್ವನಿಯೆತ್ತುವ ಅಗತ್ಯವಿದೆ - ನಟಿ ರಮ್ಯಾ

ಅನ್ಯಾಯಗಳ ಬಗ್ಗೆ ನಾವುಗಳು ಕೊನೆಯ ಬಾರಿ ಮಾತನಾಡಿದ್ದು ಯಾವಾಗ…? ನಾವು ಜನರ ಶಕ್ತಿಯನ್ನು ಮರೆತಿದ್ದೇವೆಯೇ…? ಎಂದು ರಮ್ಯಾ ಪ್ರಶ್ನಿಸಿದ್ದಾರೆ.
ದಿಶಾ ರವಿ  ಪರ ಧ್ವನಿಯೆತ್ತುವ ಅಗತ್ಯವಿದೆ - ನಟಿ ರಮ್ಯಾ

ಟೂಲ್‌ಕಿಟ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ದಿಶಾ ರವಿ ಬಂಧನವನ್ನು ಸಾಮಾಜಿಕ ಜಾಲತಾಣದ ಮೂಲಕ ನಟಿ ರಮ್ಯಾ ವಿರೋಧಿಸಿದ್ದಾರೆ. 21 ವರ್ಷದ ಪರಿಸರ ಕಾರ್ಯಕರ್ತೆ ದಿಶಾ ರವಿ ಜೈಲಿನಲ್ಲಿದ್ದಾರೆ. ಇದಕ್ಕೆ ನಾವೆಲ್ಲರು ಸಾಮೂಹಿಕವಾಗಿ ಜವಾಬ್ದಾರರಾಗುತ್ತೇವೆ. ಬಹಳ ದಿನಗಳಿಂದ ಇಂತಹ ಅನ್ಯಾಯವನ್ನು ಮೂಕ ಪ್ರೇಕ್ಷಕರಾಗಿ ನೋಡುತ್ತಿದ್ದೇವೆಂದು ಆತಂಕ ವ್ಯಕ್ತಪಡಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಜವಾಬ್ದಾರಿಯುತ ನಾಗರಿಕರಾಗಿ ಇಂತಹ ಅನ್ಯಾಯಗಳ ಬಗ್ಗೆ ನಾವುಗಳು ಕೊನೆಯ ಬಾರಿ ಮಾತನಾಡಿದ್ದು ಯಾವಾಗ…? ನಾವು ಜನರ ಶಕ್ತಿಯನ್ನು ಮರೆತಿದ್ದೇವೆಯೇ…?ಈ ದೇಶ ನಮ್ಮದು ಎಂದು ನಾವು ಮರೆತಿದ್ದೇವೆಯೇ..? ಎಂದು ಫೇಸ್‌ಬುಕ್ ಪೋಸ್ಟ್‌‌ ಮೂಲಕ ಪ್ರಶ್ನೆಮಾಡಿದ್ದಾರೆ.

ಮಹಿಳೆಯರ ಧ್ವನಿಯನ್ನು ಅಡಗಿಸಲಾಗುತ್ತಿದೆ. ಅಭಿಪ್ರಾಯ ವ್ಯಕ್ತಪಡಿಸಿ ಅನ್ಯಾಯದ ವಿರುದ್ಧ ಧ್ವನಿಯೆತ್ತಿದ್ದವರನ್ನು ಜೈಲಿಗೆ ಹಾಕಲಾಗುತ್ತಿದೆ. ನಮಗಾಗಿ ಹೋರಾಡುವ ಸಲುವಾಗಿ, ಕುಟುಂಬ, ಉದ್ಯೋಗ ವೈಯಕ್ತಿಕ ಜೀವನವನ್ನು ಪಣಕ್ಕಿಟ್ಟಿದ್ದಾರೆ. ನಾವೆಲ್ಲರೂ ಒಂದುಗೂಡಿ ಅವರ ಪರನಿಂತು ಕಾಳಜಿವಹಿಸಿ, ನಾವು ನಿಮ್ಮ ಪರ ಇದ್ದೇವೆಂದು ತೋರಿಸುವ ಅಗತ್ಯವಿದೆ ಎಂದಿದ್ದಾರೆ. ಈಗ ನೀವು ಎಲ್ಲಿದ್ದೀರಿ? ಅನ್ಯಾಯದ ವಿರುದ್ಧ ಸದ್ದು ಮಾಡೋಣ.. ನಿಮ್ಮ ಧ್ವನಿಯನ್ನು ಗಟ್ಟಿಗೊಳಿಸಿ ಎಂದು ಮಹಿಳೆಯರಿಗೆ ಕರೆ ನೀಡಿದ್ದಾರೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com