ಟೂಲ್‌ಕಿಟ್‌ನಲ್ಲಿ ಹಿಂಸೆಗೆ ಪ್ರಚೋದಿಸುವ ಯಾವುದೇ ಅಂಶಗಳಿಲ್ಲ – ಜಸ್ಟೀಸ್‌ ದೀಪಕ್‌ ಗುಪ್ತಾ

ಸುಪ್ರಿಂಕೋರ್ಟ್‌ ನಿವೃತ್ತ ನ್ಯಾಯಾಧೀಶರಾದ ದೀಪಕ್‌ ಗುಪ್ತಾ ಅವರು, ದಿಶಾ ರವಿ ಬಂಧನವನ್ನು ವಾಕ್‌ ಸ್ವಾತಂತ್ರ್ಯದ ಮೇಲಿನ ದಾಳಿ ಎಂದು ವ್ಯಾಖಯಾನಿಸಿದ್ದಾರೆ.
ಟೂಲ್‌ಕಿಟ್‌ನಲ್ಲಿ ಹಿಂಸೆಗೆ ಪ್ರಚೋದಿಸುವ ಯಾವುದೇ ಅಂಶಗಳಿಲ್ಲ – ಜಸ್ಟೀಸ್‌ ದೀಪಕ್‌ ಗುಪ್ತಾ

ದೇಶದಾದ್ಯಂತ ಸುದ್ದಿ ಮಾಡುತ್ತಿರುವ ಟೂಲ್‌ಕಿಟ್‌ ಪ್ರಕರಣದ ಕುರಿತು ಸುಪ್ರಿಂಕೋರ್ಟ್‌ನ ಮಾಜಿ ನ್ಯಾಯಾಧೀಶ ಜಸ್ಟೀಸ್‌ ದೀಪಕ್‌ ಗುಪ್ತಾ ಅವರು ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಗ್ರೆಟಾ ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿರುವ ಟೂಲ್‌ಕಿಟ್‌ನಲ್ಲಿ ದೇಶದ್ರೋಹ ಪ್ರಕರಣ ದಾಖಲಿಸುವಂತಹ ವಿಚಾರವೇನಿಲ್ಲ ಎಂದು ಹೇಳಿದ್ದಾರೆ.

ಟೂಲ್‌ಕಿಟ್‌ನಲ್ಲಿ ಹಿಂಸೆಗೆ ಪ್ರಚೋದಿಸುವ ಯಾವುದೇ ಅಂಶಗಳಿಲ್ಲ – ಜಸ್ಟೀಸ್‌ ದೀಪಕ್‌ ಗುಪ್ತಾ
ದಿಶಾ ಬಂಧನಕ್ಕಿರುವ ಎರಡು ನಿಜವಾದ ಕಾರಣಗಳಿವು !

“ದೇಶದ ಪ್ರತಿಯೊಬ್ಬ ನಾಗರಿಕನಿಗೂ ಸರ್ಕಾರದ ನಿರ್ಧಾರಗಳನ್ನು ಶಾಂತಿಯುತವಾಗಿ ಪ್ರತಿಭಟಿಸುವ ಹಕ್ಕಿದೆ. ದಿಶಾ ರವಿ ಅವರನ್ನು ಬಂಧಿಸಿರುವುದು ವಾಕ್‌ ಸ್ವಾತಂತ್ರ್ಯದ ಮೇಲಾಗಿರುವ ದಾಳಿ. ಅವರು ತಯಾರಿಸಿದ್ದಾರೆ ಎನ್ನಲಾದ ಟೂಲ್‌ಕಿಟ್‌ನಲ್ಲಿ ಜನರನ್ನು ಪ್ರಚೋದಿಸುವ ಕುರಿತು ಅಥವಾ ಹಿಂಸಾಚಾರ ನಡೆಸುವ ಕುರಿತು ಯಾವುದೇ ಉಲ್ಲೇಖವಿಲ್ಲ. ದೇಶದ್ರೋಹ ಎಂದು ಹೇಳಲಾಗುವ ಯಾವುದೇ ಅಂಶ ಇದರಲ್ಲಿ ಇಲ್ಲ,” ಎಂದು ದೀಪಕ್‌ ಗುಪ್ತಾ ಹೇಳಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಕೆಲವರು ಪ್ರತಿಭಟನೆಗೆ ಬೆಂಬಲ ಕೊಡಬಹುದು. ಕೆಲವರು ಬೆಂಬಲ ನೀಡದೇ ಇರಬಹುದು. ಅದು ಪ್ರತ್ಯೇಕ ವಿಚಾರ. ಆದರೆ, ಟೂಲ್‌ಕಿಟ್‌ ತಯಾರಿಸಿದ್ದು ದೇಶದ್ರೋಹ ಎನ್ನುವುದು ಕಾನೂನನ್ನು ಅರ್ಥ ಮಾಡಿಕೊಳ್ಳದವರು, ಎಂದಿದ್ದಾರೆ.

ಟೂಲ್‌ಕಿಟ್‌ನಲ್ಲಿ ಹಿಂಸೆಗೆ ಪ್ರಚೋದಿಸುವ ಯಾವುದೇ ಅಂಶಗಳಿಲ್ಲ – ಜಸ್ಟೀಸ್‌ ದೀಪಕ್‌ ಗುಪ್ತಾ
ದಿಶಾ ಬಂಧನ ಬೆನ್ನಲೆ ಇನ್ನಿಬ್ಬರಿಗೆ ಅರೆಸ್ಟ್‌ ವಾರೆಂಟ್‌

NDTVಯೊಂದಿಗೆ ನಡೆದ ಸಂವಾದದಲ್ಲಿ ಭಾಗವಹಿಸುವಾದ ಜಸ್ಟೀಸ್‌ ದೀಪಕ್‌ ಅವರು ಈ ಮಾತುಗಳನ್ನು ಹೇಳಿದ್ದಾರೆ.

“ದೇಶದ್ರೋಹದ ಕಾನೂನನ್ನು ರೂಪಿಸಿದ್ದು ಬ್ರಿಟಿಷರು. ಆ ಸಂದರ್ಭದಲ್ಲಿ ಬ್ರಿಟಿಷ್‌ ಆಡಳಿತದ ವಿರುದ್ದ ಹೋದವರಿಗೆ ಜೀವಾವಧಿಯಂತಹ ಘೋರ ಶಿಕ್ಷೆಯನ್ನು ನೀಡುತ್ತಿದ್ದರು. ಬಾಲ ಗಂಗಾಧರ್‌ ತಿಲಕ್‌, ಮಹಾತ್ಮ ಗಾಂಧಿಯಂತಹ ಹೋರಾಟಗಾರರನ್ನು ಜೈಲಿಗೆ ಹಾಕಿದಾಗಲೇ ಅವುಗಳನ್ನು ರದ್ದುಗೊಳಿಸಬೇಕಿತ್ತು. ಆದರೆ, ಈಗ ಆ ಕಾನೂನಿನ ದುರ್ಬಳಕೆ ಆಗುತ್ತಿದೆ,” ಎಂದು ಅಭಿಪ್ರಾಯಪಟ್ಟಿದ್ದಾರೆ.

ಟೂಲ್‌ಕಿಟ್‌ನಲ್ಲಿ ಹಿಂಸೆಗೆ ಪ್ರಚೋದಿಸುವ ಯಾವುದೇ ಅಂಶಗಳಿಲ್ಲ – ಜಸ್ಟೀಸ್‌ ದೀಪಕ್‌ ಗುಪ್ತಾ
ದಿಶಾ ರವಿ ಬಂಧನ: ದೆಹಲಿ ಪೊಲೀಸರ ನಡೆ ಖಂಡಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com