ಕಚ್ಚಾ ತೈಲ ಬೆಲೆ ಇಳಿದರೂ ಮೋದಿ ಸರ್ಕಾರ ಬಡವರ ದರೋಡೆ ಮಾಡುತ್ತಿದೆ – ಶ್ರೀನಿವಾಸ್‌ ಬಿ ವಿ

ಕಾಂಗ್ರೆಸ್‌ ಸರ್ಕಾರವಿದ್ದಾಗ ಕಚ್ಚಾ ತೈಲ ಬೆಲೆ ಗಗನಕ್ಕೇರಿತ್ತು. ಆದರೆ, ಆಗಲೂ ಸಾಮಾನ್ಯರಿಗೆ ಕಡಿಮೆ ದರದಲ್ಲಿ ಪೆಟ್ರೋಲ್‌, ಡೀಸೆಲ್‌ ಲಭ್ಯವಾಗುತ್ತಿತ್ತು. ಈಗ ಕಚ್ಚಾ ತೈಲ ಬೆಲೆ ಪಾತಾಳಕ್ಕೆ ಇಳಿದಿದೆ. ಆದರೂ, ಮೋದಿ ಸರ್ಕಾರ ಜನ ಸಾಮಾನ್ಯರಿಗೆ ಇದರ ಲಾಭವನ್ನು ಪಡೆಯಲು ಬಿಡುತ್ತಿಲ್ಲ, ಎಂದು ಶ್ರೀನಿವಾಸ್‌ ಹೇಳಿದ್ದಾರೆ
ಕಚ್ಚಾ ತೈಲ ಬೆಲೆ ಇಳಿದರೂ ಮೋದಿ ಸರ್ಕಾರ ಬಡವರ ದರೋಡೆ ಮಾಡುತ್ತಿದೆ – ಶ್ರೀನಿವಾಸ್‌ ಬಿ ವಿ

ದೇಶದಲ್ಲಿ ದಿನೇ ದಿನೇ ಏರಿಕೆ ಕಾಣುತ್ತಿರುವ ಪೆಟ್ರೋಲ್‌, ಡೀಸೆಲ್‌ ಹಾಗೂ ಎಲ್‌ಪಿಜಿ ದರ ಏರಿಕೆಯನ್ನು ಭಾರತೀಯ ಯುವ ಕಾಂಗ್ರೆಸ್‌ ತೀವ್ರವಾಗಿ ಖಂಡಿಸಿದೆ. ತೈಲ ದರ ಏರಿಕೆಗೆ ಕೇಂದ್ರ ಸರ್ಕಾರವೇ ನೇರ ಕಾರಣ ಎಂದು ಯುವ ಕಾಂಗ್ರೆಸ್‌ ಆರೋಪಿಸಿದೆ.

ಈ ಕುರಿತಾಗಿ ಮಾತನಾಡಿರುವ ಯುವ ಕಾಂಗ್ರೆಸ್‌ ರಾಷ್ಟ್ರಾಧ್ಯಕ್ಷ ಶ್ರೀನಿವಾಸ್‌ ಬಿ ವಿ ಅವರು, ಕೇಂದ್ರ ಸರ್ಕಾರ ಬಜೆಟ್‌ ಮಂಡಿಸಿದ ನಂತರ ಗ್ಯಾಸ್‌ ಬೆಲೆಯಲ್ಲಿ ರೂ. 75 ಏರಿಕೆಯಾಗಿದೆ. ತಮ್ಮ ಕಾರ್ಪೊರೇಟ್‌ ಸ್ನೇಹಿತರಿಗೆ ಪ್ರಯೋಜನವಾಗುವಂತೆ ಮಾಡಲು, ಪ್ರಧಾನಿ ಮೋದಿ ಜನರ ಜೇಬಿನ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂದಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

“ಬೆಲೆ ಏರಿಕೆಯಿಂದಾಗಿ ದೇಶದ ಬಡ ಜನರು ಸಂಕಷ್ಟಕ್ಕೆ ಒಳಗಾಗುತ್ತಿದ್ದರೆ, ಸರ್ಕಾರವು ಕಣ್ಣುಮುಚ್ಚಿ ಕುಳಿತಿದೆ. ಬೆಲೆ ಏರಿಕೆ ಹೆಚ್ಚಾಯಿತು ಎಂದು ಹೇಳಿ ಅಧಿಕಾರಕ್ಕೆ ಬಂದಂತಹ ಕೇಂದ್ರ ಸರ್ಕಾರವು ಈಗ ಮಧ್ಯಮ ವರ್ಗ ಹಾಗೂ ಬಡವರ ದರೋಡೆ ಮಾಡುತ್ತಿದೆ. ದೇಶದ ಪ್ರತೀ ವರ್ಗದ ಜನರು ಕೂಡಾ ತೈಲ ಬೆಲೆ ಏರಿಕೆಯಿಂದಾಗಿ ಸಂಕಷ್ಟಕ್ಕೆ ಒಳಗಾಗಿದ್ದಾರೆ, “ಎಂದು ಹೇಳಿದ್ದಾರೆ.

ಕಾಂಗ್ರೆಸ್‌ ಸರ್ಕಾರವಿದ್ದಾಗ ಕಚ್ಚಾ ತೈಲ ಬೆಲೆ ಗಗನಕ್ಕೇರಿತ್ತು. ಆದರೆ, ಆಗಲೂ ಸಾಮಾನ್ಯರಿಗೆ ಕಡಿಮೆ ದರದಲ್ಲಿ ಪೆಟ್ರೋಲ್‌, ಡೀಸೆಲ್‌ ಲಭ್ಯವಾಗುತ್ತಿತ್ತು. ಈಗ ಕಚ್ಚಾ ತೈಲ ಬೆಲೆ ಪಾತಾಳಕ್ಕೆ ಇಳಿದಿದೆ. ಆದರೂ, ಮೋದಿ ಸರ್ಕಾರ ಜನ ಸಾಮಾನ್ಯರಿಗೆ ಇದರ ಲಾಭವನ್ನು ಪಡೆಯಲು ಬಿಡುತ್ತಿಲ್ಲ, ಎಂದಿದ್ದಾರೆ.

“ಈ ಹಿಂದೆ ಬೆಲೆ ಏರಿಕೆ ಬಗ್ಗೆ ಕಿರುಚಾಡಿದವರು, ಈಗ ಶಾಂತರಾಗಿದ್ದಾರೆ. ಕಾರಣ, ನರೇಂದ್ರ ಮೋದಿ ಮತ್ತು ಅಮಿತ್‌ ಶಾ. ಈ ಸರ್ಕಾರ ಜನ ವಿರೋಧಿ ಸರ್ಕಾರ. ಈ ಕೂಡಲೇ ಸರ್ಕಾರ ಅಗತ್ಯ ವಸ್ತುಗಲ ಬೆಲೆಯನ್ನು ಇಳಿಸಬೇಕು,” ಎಂದು ಆಗ್ರಹಿಸಿದ್ದಾರೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com