ದಿಶಾ ರವಿ ಬಂಧನ ಖಂಡಿಸಿದ ಕನ್ನಡಿಗರು, ಇದು ಪ್ರಜಾಪ್ರಭುತ್ವದ ಮೇಲಾದ ದಾಳಿ ಎಂದ ದೆಹಲಿ ಸಿಎಂ ಕೇಜ್ರಿವಾಲ್

21 ವರ್ಷದ ದಿಶಾ ರವಿ ಅವರ ಬಂಧನವು ಹಿಂದೆಂದೂ ಕಂಡಿಲ್ಲದ ಪ್ರಜಾಪ್ರಭುತ್ವದ ಮೇಲಾದ ಅಭೂತಪೂರ್ವ ದಾಳಿಯಾಗಿದೆ. ರೈತರನ್ನು ಬೆಂಬಲಿಸುವುದು ಅಪರಾಧವಲ್ಲ ಎಂದ ದೆಹಲಿ ಸಿಎಂ ಕೇಜ್ರಿವಾಲ್
ದಿಶಾ ರವಿ ಬಂಧನ ಖಂಡಿಸಿದ ಕನ್ನಡಿಗರು, ಇದು ಪ್ರಜಾಪ್ರಭುತ್ವದ ಮೇಲಾದ ದಾಳಿ ಎಂದ ದೆಹಲಿ ಸಿಎಂ ಕೇಜ್ರಿವಾಲ್

ಕೃಷಿ ಕಾಯ್ದೆಗಳ ವಿರುದ್ಧ ರೈತರ ಹೋರಾಟವನ್ನು ಬೆಂಬಲಿಸಿ ಬೆಂಗಳೂರು ಮೂಲದ ಪರಿಸರ ಕಾರ್ಯಕರ್ತೆ ದಿಶಾ ರವಿ ಟೂಲ್‌ಕಿಟ್‌ ಹಂಚಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೋಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದು, ಪೊಲೀಸರ ಮತ್ತು ಕೇಂದ್ರಸರ್ಕಾರದ ನಡೆಯನ್ನು ಕನ್ನಡಿಗರು ಜೊತೆಗೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ ಕೂಡ ಖಂಡಿಸಿದ್ದಾರೆ

ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಿ ಎನ್ನುವ ಪ್ರಧಾನಿ ನರೇಂದ್ರ ಮೋದಿ ಶಿಕ್ಷಿತ ಹೆಣ್ಣುಮಕ್ಕಳು ತಮ್ಮನ್ನು ಪ್ರಶ್ನಿಸಿದರೆ ಬಂಧಿಸಿ ಜೈಲಿಗೆ ಹಾಕುತ್ತಾರೆ. ದಿಶಾ ರವಿ ಬಂಧನ ಪ್ರಜೆಗಳ ಮೇಲಿನ ದೌರ್ಜನ್ಯ ಮಾತ್ರವಲ್ಲ, ಮಹಿಳೆಯರ ಮೇಲಿನ ದೌರ್ಜನ್ಯವೂ ಹೌದು. ನೆನಪಿರಲಿ ನಾರಿ‌ ಮುನಿದರೆ ಮಾರಿ ಎಂದು ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಮಾಜಿ ಸಿ.ಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

21 ವರ್ಷದ ದಿಶಾ ರವಿ ಅವರ ಬಂಧನವು ಹಿಂದೆಂದೂ ಕಂಡಿಲ್ಲದ ಪ್ರಜಾಪ್ರಭುತ್ವದ ಮೇಲಾದ ಅಭೂತಪೂರ್ವ ದಾಳಿಯಾಗಿದೆ. ರೈತರನ್ನು ಬೆಂಬಲಿಸುವುದು ಅಪರಾಧವಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿಹಂಚಿಕೊಂಡಿದ್ದಾರೆ.

Arrest of 21 yr old Disha Ravi is an unprecedented attack on Democracy. Supporting our farmers is not a crime.

Posted by Arvind Kejriwal on Sunday, February 14, 2021

ದಿಶಾ ರವಿ ಬಂಧನ ಪ್ರಜಾಪ್ರಭುತ್ವದ ಮೇಲಾದ ದಾಳಿ ಇದನ್ನು ಪ್ರಜ್ಞಾವಂತ ಕರ್ನಾಟಕ ಖಂಡಿಸುತ್ತದೆ. ಎಂದು ಕನ್ನಡಿಗರು ಫೆಬ್ರವರಿ 15 ರ ಸಂಜೆ 5 ಗಂಟೆಯಿಂದ ಟ್ವಿಟರ್‌ ಕ್ಯಾಂಪೇನ್‌ ನಡೆಸುತ್ತಿದ್ದಾರೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com