2017-19 ರಲ್ಲಿ ಡ್ರಗ್ಸ್ ಸೇವನೆಯಿಂದ 2,300 ಕ್ಕೂ ಹೆಚ್ಚು ಸಾವು: 2 ನೇ ಸ್ಥಾನದಲ್ಲಿ ಕರ್ನಾಟಕ

ಮಾದಕ ದ್ರವ್ಯಗಳ ಮಿತಿ ಮೀರಿದ ಸೇವನೆಯಿಂದ 2017 ರಲ್ಲಿ 745 ಮಂದಿ ಅಸುನೀಗಿದರೆ, 2018 ರಲ್ಲಿ 875 ಮಂದಿ ಮೃತಪಟ್ಟಿದ್ದಾರೆ. 2019 ರಲ್ಲಿ ಈ ಸಂಖ್ಯೆ 704 ತಲುಪಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ
2017-19 ರಲ್ಲಿ ಡ್ರಗ್ಸ್ ಸೇವನೆಯಿಂದ 2,300 ಕ್ಕೂ ಹೆಚ್ಚು ಸಾವು: 2 ನೇ ಸ್ಥಾನದಲ್ಲಿ ಕರ್ನಾಟಕ

2017 ರಿಂದ 2019 ರ ವರೆಗೆ ಮಾದಕ ದ್ರವ್ಯಗಳ ಮಿತಿ ಮೀರಿದ ಸೇವನೆಯಿಂದ ಭಾರತದ 2,300 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆಂಬ ಆಘಾತಕಾರಿ ಅಂಶವನ್ನು ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋದ ಅಂಕಿಅಂಶಗಳು ಹೇಳಿವೆ. ಇವರಲ್ಲಿ 30 ರಿಂದ 45 ವಯಸ್ಸಿನೊಳಗಿವರ ಸಂಖ್ಯೆಯೇ ಅಧಿಕ ಎಂದೂ ವರದಿ ಹೇಳಿದೆ.

ಮಾದಕ ದ್ರವ್ಯಗಳ ಮಿತಿ ಮೀರಿದ ಸೇವನೆಯಿಂದ 2017 ರಲ್ಲಿ 745 ಮಂದಿ ಅಸುನೀಗಿದರೆ, 2018 ರಲ್ಲಿ 875 ಮಂದಿ ಮೃತಪಟ್ಟಿದ್ದಾರೆ. 2019 ರಲ್ಲಿ ಈ ಸಂಖ್ಯೆ 704 ತಲುಪಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ರಾಜಸ್ಥಾನದಲ್ಲಿ (338 ಸಾವುಗಳು)ಅತಿ ಹೆಚ್ಚು ಮರಣ ಮೃತಪಟ್ಟರೆ, ಕರ್ನಾಟಕ (239 ಸಾವುಗಳು) ಅನಂತರದ ಸ್ಥಾನ ಪಡೆದುಕೊಂಡಿದೆ. ಉತ್ತರ ಪ್ರದೇಶ (236ಸಾವುಗಳು) ಮೂರನೆಯ ಸ್ಥಾನ ಪಡೆದುಕೊಂಡಿದೆ.

2017 ರಿಂದ 2019 ರವರೆಗೆ 14 ವಯಸ್ಸಿಗಿಂತ ಕಿರಿಯ 55 ಮಕ್ಕಳು, 14 ರಿಂದ 18 ವರ್ಷದೊಳಗಿನ 70 ಮಕ್ಕಳು ಮಾದಕ ದ್ರವ್ಯಗಳ ಮಿತಿಮೀರಿದ ಸೇವನೆಯಿಂದ ಮೃತಪಟ್ಟಿದ್ದಾರೆ. 18 ರಿಂದ 30 ವರ್ಷದೊಳಗಿನ 624 ಮಂದಿ ಮೃತಪಟ್ಟಿದ್ದು, 30-45 ವಯಸ್ಸಿನೊಳಗಿನ 784 ಮಂದಿ ಮೃತಪಟ್ಟಿದ್ದಾರೆ. 45 ರಿಂದ 60 ವರ್ಷ ಪ್ರಾಯದ 550 ಮಂದಿ ಮೃತಪಟ್ಟಿದ್ದಾರೆ. 60 ವರ್ಷ ಮೇಲ್ಪಟ್ಟ 241 ಮಂದಿ ಮೃತಪಟ್ಟಿರುವುದಾಗಿ ವರದಿ ಹೇಳಿದೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com