ಸರ್ಕಾರದ ಒತ್ತಡಕ್ಕೆ ಮಣಿದು 1,398 ಖಾತೆಗಳನ್ನು ನಿರ್ಬಂಧಿಸಿದ ಟ್ವಿಟರ್

ಬುಧವಾರ ರಾತ್ರಿ ಟ್ವಿಟರ್‌ ಅಧಿಕಾರಿಗಳು ಹಾಗೂ ಮಾಹಿತಿ ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ನಡುವೆ ಸಭೆ ನಡೆದಿದ್ದು, ಸಭೆಯ ವೇಳೆ, ಇಲಾಖೆ ಕಾರ್ಯದರ್ಶಿ, ಟ್ವಿಟರ್‌ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ
ಸರ್ಕಾರದ ಒತ್ತಡಕ್ಕೆ ಮಣಿದು 1,398 ಖಾತೆಗಳನ್ನು ನಿರ್ಬಂಧಿಸಿದ ಟ್ವಿಟರ್

ಕೇಂದ್ರ ಸರ್ಕಾರದ ಒತ್ತಡಕ್ಕೆ ಮಣಿದು 1398 ಟ್ವಿಟರ್‌ ಖಾತೆಗಳನ್ನು ಟ್ವಿಟರ್‌ ನಿರ್ಬಂಧಿಸಿದೆ.

ರೈತರ ಹೋರಾಟಗಳ ಕುರಿತಂತೆ ತಪ್ಪು ಸಂದೇಶ ಹರಡುತ್ತಿದೆ ಎಂಬ ಆರೋಪದ ಮೇಲೆ ಮಾಹಿತಿ ತಂತ್ರಜ್ಞಾನ ಇಲಾಖೆ (MeitY) 1435 ಖಾತೆಗಳನ್ನು ನಿರ್ಬಂಧಿಸುವಂತೆ ಟ್ವಿಟರ್‌ಗೆ ನಿರ್ದೇಶಿಸಿತ್ತು. ಅದರಲ್ಲಿ 1,398 ಖಾತೆಗಳನ್ನು ನಿರ್ಬಂಧಿಸಿದ್ದು, ಉಳಿದ 37 ಖಾತೆಗಳನ್ನು ನಿರ್ಬಂಧಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಟ್ವಿಟರ್‌ ಮಾಹಿತಿ ತಂತ್ರಜ್ಞಾನ ಇಲಾಖೆಗೆ ತಿಳಿಸಿದೆ ಎಂದು ಮೂಲಗಳು ಹೇಳಿವೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಬುಧವಾರ ರಾತ್ರಿ ಟ್ವಿಟರ್‌ ಟ್ವಿಟರ್‌ ಅಧಿಕಾರಿಗಳು ಹಾಗೂ ಮಾಹಿತಿ ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ನಡುವೆ ಸಭೆ ನಡೆದಿದ್ದು, ಸಭೆಯ ವೇಳೆ, ಇಲಾಖೆ ಕಾರ್ಯದರ್ಶಿ, ಟ್ವಿಟರ್‌ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಬಳಿಕ ಈ ಬೆಳವಣಿಗೆ ನಡೆದಿವೆ ಎಂದು ಡೆಕ್ಕನ್‌ ಹೆರಾಲ್ಡ್‌ ವರದಿ ಮಾಡಿದೆ.

ಸರ್ಕಾರದ ಒತ್ತಡಕ್ಕೆ ಮಣಿದು 1,398 ಖಾತೆಗಳನ್ನು ನಿರ್ಬಂಧಿಸಿದ ಟ್ವಿಟರ್
ಅಭಿವ್ಯಕ್ತಿ ಸ್ವಾತಂತ್ರ್ಯ ಎತ್ತಿ ಹಿಡಿದು ಕೇಂದ್ರ ಸರ್ಕಾರದ ವಿರುದ್ಧ ಹೋದ ಟ್ವಿಟರ್

ಖಾತೆಗಳನ್ನು ನಿರ್ಬಂಧಿಸುವ ಕುರಿತಂತೆ ಕಳೆದ ಎರಡು ವಾರಗಳಿಂದ ಟ್ವಿಟರ್‌ ಹಾಗೂ ಭಾರತ ಸರ್ಕಾರದೊಂದಿಗೆ ಜಟಾಪಟಿ ನಡೆಯುತ್ತಿದೆ. ಈ ಹಿಂದೆ ಭಾರತ ಸರ್ಕಾರ ಕೆಲವು ಟ್ವಿಟರ್‌ ಖಾತೆಗಳನ್ನು ನಿರ್ಬಂಧಿಸುವಂತೆ ನಿರ್ದೇಶಿಸಿದಾಗ, ಟ್ವಿಟರ್‌ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಸರ್ಕಾರದ ನಿರ್ದೇಶನವನ್ನು ತಳ್ಳಿ ಹಾಕಿತ್ತು.

Inputs: ಡೆಕ್ಕನ್‌ ಹೆರಾಲ್ಡ್

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com