ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಮಾಲ್‌ವೇರ್‌ ಅಸ್ತ್ರದ ಪಿತೂರಿಯನ್ನು ಬಯಲಿಗೆಳೆದ ಅಂತರಾಷ್ಟ್ರೀಯ ಸಂಸ್ಥೆ

ಅಂತರಾಷ್ಟ್ರೀಯ ಸಂಸ್ಥೆ ನೀಡಿದ ವರದಿಯು ವಿಲ್ಸನ್‌ ಅವರನ್ನು ನಿರಪರಾಧಿ ಎಂದು ಸಾಬೀತು ಮಾಡಲು ಸಾಕಷ್ಟು ಪುರಾವೆ ಒದಗಿಸುತ್ತದೆ, ಎಂದು ವಿಲ್ಸನ್‌ ಪರವಕೀಲರಾದ ಸುದೀಪ್‌ ಪಾಸ್‌ಬೋಲಾ ಅವರು ಹೇಳಿದ್ದಾರೆ.
ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಮಾಲ್‌ವೇರ್‌ ಅಸ್ತ್ರದ ಪಿತೂರಿಯನ್ನು ಬಯಲಿಗೆಳೆದ ಅಂತರಾಷ್ಟ್ರೀಯ ಸಂಸ್ಥೆ

ಕೇಂದ್ರ ಸರ್ಕಾರವನ್ನು ಉರುಳಿಸಲು ಹಾಗೂ ಪ್ರಧಾನಿ ಮೋದಿಯವರ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂದು ಹಲವು ಸಾಮಾಜಿಕ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದರು. ಈ ವೇಳೆ ಬಂಧಿತರಾದವರಲ್ಲಿ ರೋನಾ ವಿಲ್ಸನ್‌ ಕೂಡಾ ಒಬ್ಬರು. ಇವರ ಬಂಧನದ ಕುರಿತಾಗಿ ಪ್ರತಿಧ್ವನಿಯು ಸವಿವರವಾದ ವರದಿಯನ್ನು ಪ್ರಕಟಿಸಿತ್ತು.

ಇವರ ಬಂಧನದ ಸಮಯದಲ್ಲಿ ಇವರ ಲ್ಯಾಪ್‌ಟಾಪ್‌ ಅನ್ನು ಕೂಡಾ ವಶಪಡಿಸಿಕೊಳ್ಳಲಾಗಿತ್ತು. ಅವರ ಲ್ಯಾಪ್‌ಟಾಪ್‌ ಈ ಹಿಂದೆಯೇ ಹ್ಯಾಕ್‌ ಮಾಡಲಾಗಿತ್ತು ಎಂಬ ಕುರಿತು ವರದಿಗಳು ಕೂಡಾ ಪ್ರಕಟವಾಗಿದ್ದವು. ಈಗ ವಿಧಿವಿಜ್ಞಾನ ವರದಿಯು ಈ ವಿಚಾರವನ್ನು ದೃಢಪಡಿಸಿದೆ ಎಂದು ʼThe Washington Post’ ವರದಿ ಮಾಡಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

“ವಿಲ್ಸನ್‌ ಬಂಧನಕ್ಕೂ ಮುಂಚೆ ಓರ್ವ ಹ್ಯಾಕರ್‌ ಅವರ ಲ್ಯಾಪ್‌ಟಾಪ್‌ ಅನ್ನು ಹ್ಯಾಕ್‌ ಮಾಡಿ, ಕನಿಷ್ಟ ಹತ್ತು ಪತ್ರಗಳನ್ನು ಅವರ ಲ್ಯಾಪ್‌ಟಾಪ್‌ನಲ್ಲಿ ಸೇರಿಸಿದ್ದ,” ಎಂಬ ಆಘಾತಕಾರಿ ಮಾಹಿತಿ ಈಗ ಬಹಿರಂಗವಾಗಿದೆ. ವಿಲ್ಸನ್‌ ಪರ ವಕೀಲರು ವಿದೇಶಿ ಮ್ಯಾಸಚೂಸೆಟ್ಸ್ ಮೂಲದ ಡಿಜಿಟಲ್ ಫೋರೆನ್ಸಿಕ್ಸ್ ಸಂಸ್ಥೆಗೆ ವಿಲ್ಸನ್‌ ಲ್ಯಾಪ್‌ಟಾಪ್‌ ಅನ್ನು ಪರಿಶೀಲಿಸಲು ಅನುಮತಿ ನೀಡಬೇಕೆಂದು ಕೋರಿದ್ದರು. ಈ ಸಂಸ್ಥೆಯ ವರದಿಯು ಪ್ರಕರಣಕ್ಕೆ ಹೊಸ ಆಯಾಮವನ್ನೇ ನೀಡಿದೆ.

ಹ್ಯಾಕರ್‌ ಸೇರಿಸಿದಂತಹ ಪತ್ರಗಳನ್ನೇ ಪ್ರಮುಖವಾಗಿಟ್ಟುಕೊಂಡು ಪೊಲೀಸರು ವಿಲ್ಸನ್‌ ಮೇಲೆ ಆರೋಪವನ್ನು ಹೊರಿಸಿದ್ದರು. ಈಗ ಆ ಆರೋಪಗಳಲ್ಲಿ ಹುರುಳಿಲ್ಲ ಎಂಬುದು ಸಾಬೀತಾದಂತಿದೆ.

ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಮಾಲ್‌ವೇರ್‌ ಅಸ್ತ್ರದ ಪಿತೂರಿಯನ್ನು ಬಯಲಿಗೆಳೆದ ಅಂತರಾಷ್ಟ್ರೀಯ ಸಂಸ್ಥೆ
ಭೀಮಾ ಕೋರೆಗಾಂವ್ ಪ್ರಕರಣದ ಹಿಂದಿದೆ ಮಾಲ್ ವೇರ್ ಅಸ್ತ್ರದ ಪಿತೂರಿ!

ವಿಲ್ಸನ್‌ ಲ್ಯಾಪ್‌ಟಾಪ್‌ ಅನ್ನು ಹ್ಯಾಕ್‌ ಮಾ‌ಡಿದ ವ್ಯಕ್ತಿಯ ಕುರಿತು ಅರ್ಸೆನಲ್‌ ಕನ್ಸಲ್ಟಿಂಗ್‌ ಸಂಸ್ಥೆ ಮಾಹಿತಿ ನೀಡಿಲ್ಲ. ಆದರೆ, ಈ ವರದಿಯು ವಿಲ್ಸನ್‌ ಅವರನ್ನು ನಿರಪರಾಧಿ ಎಂದು ಸಾಬೀತು ಮಾಡಲು ಸಾಕಷ್ಟು ಪುರಾವೆ ಒದಗಿಸುತ್ತದೆ, ಎಂದು ವಿಲ್ಸನ್‌ ಪರವಕೀಲರಾದ ಸುದೀಪ್‌ ಪಾಸ್‌ಬೋಲಾ ಅವರು ಹೇಳಿದ್ದಾರೆ.

ಕಳೆದ ಹಲವು ತಿಂಗಳುಗಳಿಂದ ವಿಲ್ಸನ್‌ ಅವರು ಜೈಲಿನಲ್ಲಿದ್ದು ವಿಚಾರಣೆಯನ್ನು ಎದುರಿಸುತ್ತಿದಾರೆ. ಅವರ ಮೇಲಿನ ಪ್ರಕರಣವನ್ನು ವಜಾಗೊಳಿಸುವಂತೆ ಬುಧವಾರ ಬಾಂಬೆ ಹೈಕೋರ್ಟ್‌‌ನಲ್ಲಿ ಸಲ್ಲಿಸಿದ ಅರ್ಜಿಯಲ್ಲಿ ಆರ್ಸೆನಲ್‌‌ ಕನ್ಸಲ್ಟಿಂಗ್‌ ವರದಿಯನ್ನು ಉಲ್ಲೇಖಿಸಲಾಗಿದೆ.

ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಮಾಲ್‌ವೇರ್‌ ಅಸ್ತ್ರದ ಪಿತೂರಿಯನ್ನು ಬಯಲಿಗೆಳೆದ ಅಂತರಾಷ್ಟ್ರೀಯ ಸಂಸ್ಥೆ
ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ದೆಹಲಿ ವಿವಿ ಪ್ರೊ. ಹನಿ ಬಾಬ್ ಬಂಧನ!

ಈ ಎಲ್ಲಾ ವಿಚಾರಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಖಡಾಖಂಡಿತವಾಗಿ ನಿರಾಕರಿಸಿದೆ. ಎನ್‌ಐಎ ವಕ್ತಾರ ವಾಶಿಂಗ್ಟನ್‌ ಪೋಸ್ಟ್‌ಗೆ ನೀಡಿರುವ ಹೇಳಿಕೆಯಲ್ಲಿ “ಫೊರೆನ್ಸಿಕ್‌ ವರದಿಯಲ್ಲಿ ಮಾಳ್‌ವೇರ್‌ ಕುರಿತ ಯಾವ ಪುರಾವೆಯೂ ಇಲ್ಲ. ಅವರ ಮೇಲೆ ಇನ್ನೂ ಹಲವು ದಾಖಲೆಗಳು ಹಾಗೂ ಸಾಕ್ಷ್ಯಗಳು ಲಭ್ಯವಿವೆ,” ಎಂದು ಹೇಳಿದ್ದಾರೆ.

ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಮಾಲ್‌ವೇರ್‌ ಅಸ್ತ್ರದ ಪಿತೂರಿಯನ್ನು ಬಯಲಿಗೆಳೆದ ಅಂತರಾಷ್ಟ್ರೀಯ ಸಂಸ್ಥೆ
ಭೀಮಾ ಕೋರೆಗಾಂವ್‌ ಪ್ರಕರಣ: ಚಾರ್ಜ್‌ಶೀಟ್‌ ದಾಖಲಿಸಿದ NIA

ಮಾಲ್‌ವೇರ್‌ ಮೂಲಕ ವಿಲ್ಸನ್‌ ಲ್ಯಾಪ್‌ಟಾಪ್‌ನಲ್ಲಿ ಸೇರಿಸಲಾದ ಪತ್ರದಲ್ಲಿ, ಬಂದೂಕು, ಮದ್ದುಗುಂಡುಗಳ ಕುರಿತು ಚರ್ಚೆ ನಡೆಸಲಾಗಿದೆ. ಇದರೊಂದಿಗೆ ಪ್ರಧಾನಿ ಮೋದಿಯವರನ್ನು ಹತ್ಯೆಗೈಯಲು ಮಾವೋವಾದಿ ಸಂಘಟನೆಗಳಿಗೆ ವಿಲ್ಸನ್‌ ಒತ್ತಾಯಿಸಿರುವುದರ ಕುರಿತು ಕೂಡಾ ಉಲ್ಲೇಖವಿದೆ.

ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಮಾಲ್‌ವೇರ್‌ ಅಸ್ತ್ರದ ಪಿತೂರಿಯನ್ನು ಬಯಲಿಗೆಳೆದ ಅಂತರಾಷ್ಟ್ರೀಯ ಸಂಸ್ಥೆ
ಭೀಮಾ ಕೊರೆಗಾಂವ್‌ ಹಿಂಸಾಚಾರ: ಇನ್ನೂ ವಿಚಾರಣೆಗೊಳಗಾಗದ ಹಿಂದುತ್ವ ನಾಯಕರು

ಈ ಪ್ರಕರಣದಲ್ಲಿ ಹಲವು ಪ್ರಭಾವಿ ಸಾಮಾಜಿಕ ಹೋರಾಟಗಾರರು ಈಗಾಗಲೇ ಬಂಧಿತರಾಗಿದ್ದಾರೆ. ಇವರನ್ನು ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿ ಈಗಾಗಲೇ ದೇಶದಾದ್ಯಂತ ಹಲವು ಪ್ರತಿಭಟನೆಗಳು ನಡೆದಿವೆ. ಈಗ ಅರ್ಸೆನಲ್‌ ಸಂಸ್ಥೆ ನೀಡಿದ ವರದಿ ಈ ಪ್ರಕರಣದ ತನಿಖೆಯಲ್ಲಿ ಎಷ್ಟರ ಮಟ್ಟಿನ ಪಾತ್ರ ವಹಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com