ವಿವಾದಾತ್ಮಕ ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯಲು ಕಾಲ ಪಕ್ವವಾಗಿದೆ

ಕೃಷಿ ಕಾನೂನುಗಳನ್ನು ಅನಿರ್ದಿಷ್ಟವಾಗಿ ತಡೆಹಿಡಿಯಬಹುದಾದರೆ, ಅವುಗಳನ್ನು ಷರತ್ತು ಮೂಲಕ ಮರುಪರಿಶೀಲಿಸಬಹುದಾದರೆ, ಅವುಗಳನ್ನು 1.5 ವರ್ಷಗಳ ಬಳಿಕ ರದ್ದುಪಡಿಸಬಹುದಾದರೆ ಈಗ ಕೂಡಾ ರದ್ದುಪಡಿಸಬಹುದು
ವಿವಾದಾತ್ಮಕ ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯಲು ಕಾಲ ಪಕ್ವವಾಗಿದೆ

ಕಳೆದ ಎರಡು ತಿಂಗಳಿನಿಂದ ದೇಶಾದ್ಯಂತ ರೈತರು ಹಮ್ಮಿಕೊಂಡಿರುವ ಪ್ರತಿಭಟನೆ ದಿನೇ ದಿನೇ ಗಂಭೀರ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ಕೇಂದ್ರ ಸರ್ಕಾರವು ನೂತನ ಕೃಷಿ ಕಾಯ್ದೆಗಳ ಬಗ್ಗೆ ಎಷ್ಟೇ ಸಮಜಾಯಿಷಿಕೆಯನ್ನು ನೀಡಿದರೂ ರೈತರು ನಂಬುತ್ತಿಲ್ಲ. ಈಗಾಗಲೇ 11 ಸುತ್ತಿನ ಮಾತುಕತೆಗಳು ನಡೆದಿದ್ದು ಎಲ್ಲವೂ ಮುರಿದು ಬಿದ್ದಿವೆ. ಈ ಉದ್ದೇಶಿತ ಕಾಯ್ದೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟಿನಲ್ಲೂ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಸುಪ್ರೀಂ ಕೋರ್ಟು ಈ ಕೃಷಿ ಕಾಯ್ದೆಗಳನ್ನು ಅಧ್ಯಯನ ಮಾಡಿ ವರದಿ ಸಲ್ಲಿಸಲು ಐವರು ಸದಸ್ಯರ ಸಮಿತಿಯೊಂದನ್ನು ರಚಿಸಿತು. ಆದರೆ ಸಮಿತಿಗೆ ಆಯ್ಕೆಯಾದ ಎಲ್ಲ ಸದಸ್ಯರು ಕೂಡ ಈ ಹಿಂದೆಯೇ ಕೃಷಿ ಕಾಯ್ದೆಗಳ ಪರ ವಹಿಸಿ ಮಾತನಾಡಿ ಹೆಸರುವಾಸಿಯಾಗಿದ್ದರು ಮತ್ತು ಆದ್ದರಿಂದ ಸಮಿತಿಯು ಪ್ರತಿಭಟನಾಕಾರರಲ್ಲಿ ವಿಶ್ವಾಸವನ್ನು ಮೂಡಿಸಲಿಲ್ಲ. ಹಾಗಿದ್ದರೂ, ರೈತರು ಪ್ರತಿಭಟನೆಯನ್ನು ಹಿಂಪಡೆಯಲು ಕೃಷಿ ಕಾನೂನುಗಳನ್ನು 18 ತಿಂಗಳ ಕಾಲ ಮುಂದೂಡುವ ಕೇಂದ್ರ ಸರ್ಕಾರದ ಭರವಸೆಯೇ ಸಾಕಾಗಬೇಕಿತ್ತು. ಒಂದು ವೇಳೆ ಸರ್ಕಾರ ಕಾನೂನುಗಳನ್ನು ಮತ್ತೆ ಜಾರಿಗೆ ತಂದಲ್ಲಿ ಅವರು ಮತ್ತೆ ಬೀದಿಗಿಳಿಯಬಹುದಿತ್ತು. ಅದರೆ ಮತ್ತೊಮ್ಮೆ ಈಗ ಆರಂಭಿಸಿರುವ ರೀತಿಯ ಪ್ರತಿಭಟನೆಯನ್ನು ಅಯೋಜಿಸುವುದು ಸುಲಭ ಸಾದ್ಯವಲ್ಲ. ಪ್ರತಿಭಟನೆಯನ್ನು ಹಿಂಪಡೆದ ನಂತರ ಕಾನೂನುಗಳು ಜಾರಿಗೆ ಬರುವುದಿಲ್ಲ ಎಂದು ಪ್ರತಿಭಟನಾಕಾರರು ಹೇಗೆ ನಂಬಲು ಸಾಧ್ಯ? ಅದಕ್ಕಾಗಿಯೇ ಅವರು ಕೃಷಿ ಕಾನೂನುಗಳನ್ನು ಸಂಪೂರ್ಣವಾಗಿ ರದ್ದುಗೊಳಿಸುವಂತೆ ಒತ್ತಾಯಿಸುವ ಬೇಡಿಕೆಗೆ ಹಠ ಹಿಡಿದಿದ್ದಾರೆ.

ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ರೈತರ ಈ ಕಾಳಜಿಯನ್ನು ಅರ್ಥಮಾಡಿಕೊಂಡಿದೆ ಮತ್ತು ಕಾಯ್ದೆಗಳ ಅನುಷ್ಠಾನವನ್ನು 1.5 ವರ್ಷಗಳವರೆಗೆ ಸ್ಥಗಿತಗೊಳಿಸುವ ಬಗ್ಗೆ ಸಮಂಜಸವಾದ ಭರವಸೆ ನೀಡಿದೆ. ಕಾಯ್ದೆ ಕುರಿತ ಒಮ್ಮತವನ್ನು ಪಡೆಯಲು ಅದು ಸಾಕಷ್ಟು ಸಮಯವಾಗಿರುತ್ತದೆ, ಬಹುಶಃ ಸರ್ಕಾರವು ಸದ್ದಿಲ್ಲದೆ ಕಾನೂನುಗಳನ್ನು ರದ್ದುಗೊಳಿಸಬಹುದು ಅಥವಾ ಅವುಗಳ ಬಗ್ಗೆ ಎಲ್ಲವನ್ನೂ ಮರೆತುಬಿಡಬಹುದು. ಆದರೆ ಪ್ರತಿಭಟನಾಕಾರರಿಗೆ ಇದು ಮನವರಿಕೆಯಾಗಿಲ್ಲ. ಇದು ಸರ್ಕಾರ ಮತ್ತು ಪ್ರತಿಭಟನಾಕಾರರ ನಡುವಿನ ಸಂಪೂರ್ಣ ನಂಬಿಕೆಯ ಕೊರತೆಯನ್ನು ಸೂಚಿಸುತ್ತದೆ. ರಾಜಕೀಯ ಧ್ರುವೀಕರಣದಿಂದಾಗಿ ಮತದಾರರು ಮೋದಿಯ ಮೇಲೆ ಕುರುಡು ನಂಬಿಕೆಯನ್ನು ಹೊಂದಿದ್ದಾರೆ. ಆದರೆ ಅವರ ಪರವಾಗಿ ಮತ ಚಲಾಯಿಸದವರಿಗೆ ಮೋದಿ ಅವರ ಮೇಲೆ ಸಂಪೂರ್ಣವಾಗಿ ನಂಬಿಕೆಯಿಲ್ಲ. ಇದು 2019 ರ ಮರುಚುನಾವಣೆಯ ನಂತರ ಮೋದಿಯವರು ತಮ್ಮ ಘೋಷಣೆಯಾದ ‘ಸಬ್ಕಾ ಸಾಥ್, ಸಬ್ಕಾ ವಿಕಾಸ್’(ಎಲ್ಲರೂ ಒಟ್ಟಾಗಿ, ಎಲ್ಲರ ಅಭಿವೃದ್ಧಿ) ಎಂಬ ಘೋಷಣೆ ‘ಸಬ್ಕಾ ವಿಶ್ವಾಸ್’(ಎಲ್ಲರ ನಂಬಿಕೆ) ಗೆ ವಿರುದ್ಧವಾಗಿದೆ. ರೈತರನ್ನು ಅಪಖ್ಯಾತಿಗೊಳಿಸುವ ಪ್ರತಿಯೊಂದು ಪ್ರಯತ್ನ, ಅವರ ವಿರುದ್ಧ ಬಳಸುವ ಪ್ರತಿಯೊಂದು ಪದವೂ ರೈತರನ್ನು ಮತ್ತಷ್ಟು ಕ್ರೋಧಗೊಳಿಸಿದೆ. ಕೆಂಪು ಕೋಟೆಯಲ್ಲಿ ಪ್ರತಿಭಟನಾಕಾರರ ಒಂದು ಗುಂಪು ಜನವರಿ 26 ರಂದು ನಡೆಸಿದ ವಿಧ್ವಂಸಕ ಕೃತ್ಯವೂ ಸಹ ಪರಿಣಾಮ ಬೀರಲಿಲ್ಲ. ಆದರೆ ರೈತ ಮುಖಂಡ ರಾಕೇಶ್ ಟಿಕಾಯಟ್ ಅವರ ಕಣ್ಣೀರು ಪ್ರತಿಭಟನೆಯನ್ನು ಪುನಃ ಚೈತನ್ಯಗೊಳಿಸಿತು. ಬಹಳ ಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ ಎಂಬುದು ಸ್ಪಷ್ಟವಾಯಿತು ಮತ್ತು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರವು ರೈತರನ್ನು ಪ್ರತಿಭಟನಾ ಸ್ಥಳದಿಂದ ತೆರವುಗೊಳಿಸುವ ಪ್ರಯತ್ನವು ವಿಫಲಗೊಂಡಿತು.

ಈ ಅಮೂಲ್ಯ ಸಮಯದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ನೂತನ ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದರ ಮೂಲಕ ಪ್ರಬುಧ್ದತೆ ಮೆರೆಯಬೇಕಿದೆ. ಆದರೆ ಅವರು ಹಾಗೆ ಮಾಡದೆ ತಮ್ಮ ರಾಜಕೀಯ ಬಲವನ್ನು ಕಳೆದುಕೊಳ್ಳುತ್ತಿದ್ದಾರೆ. ಈ ಪ್ರತಿಭಟನೆಗಳನ್ನು ತುಂಬಾ ದಿನಗಳ ವರೆಗೆ ತಡೆಯುವುದು, ಅವರನ್ನು ಶತ್ರುಗಳಂತೆ ನೋಡುವುದು , ಅಂತರ್ಜಾಲವನ್ನು ಸ್ಥಗಿತಗೊಳಿಸುವುದು ಮತ್ತು ಸ್ವತಂತ್ರ ಮಾಧ್ಯಮಗಳಿಗೆ ತೊಂದರೆ ನೀಡುವುದು ಇವೆಲ್ಲವೂ ಮೋದಿಯವರ ವ್ಯಕ್ತಿತ್ವಕ್ಕೆ ಕಪ್ಪು ಚುಕ್ಕಿ ಆಗಿದೆ. ಜನರು ನೂತನ ಕೃಷಿ ಕಾನೂನುಗಳನ್ನು ಬೆಂಬಲಿಸುತ್ತಿರಲಿ ಅಥವಾ ವಿರೋಧಿಸುತ್ತಿರಲಿ, ಅವು ಈಗಾಗಲೇ ಪರಿಣಾಮಕಾರಿಯಾಗಿಲ್ಲ. ಮೋದಿಯವರು 1.5 ವರ್ಷಗಳ ಕಾಲ ಮುಂದೂಡುವ ಪ್ರಸ್ತಾಪವನ್ನು ರೈತರು ಒಪ್ಪಿಕೊಂಡರೆ, ಸರ್ಕಾರವು ಅದನ್ನು 2022 ರ ಮಧ್ಯಭಾಗದವರೆಗೆ ತಡೆಹಿಡಿಯುತ್ತದೆ. ಆ ಸಮಯದಲ್ಲಿ ಲೋಕಸಭಾ ಚುನಾವಣೆಯು ಸಮೀಪಿಸುತ್ತಿರುತ್ತದೆ.ಆ ಸಮಯದಲ್ಲಿ ಇಂತಹ ಬೃಹತ್ ಪ್ರತಿಭಟನೆಗಳಿಂದ ಬಿಜೆಪಿಗೆ ಮತ್ತೆ ಮತಗಳಿಕೆ ಕುಗ್ಗುತ್ತದೆ. ಕೃಷಿ ಕಾನೂನುಗಳನ್ನು ಅಮೂಲಾಗ್ರವಾಗಿ ಪಾಯಿಂಟ್ ಬೈ ಪಾಯಿಂಟ್ ಚರ್ಚಿಸಲು ಸರ್ಕಾರವು ಸಿದ್ಧವಾಗಿದೆ ಎಂದು ಹೇಳಿಕೊಂಡಿದೆ. ಆದರೆ ಈ ರೈತ ಪ್ರತಿಭಟನಾಕಾರರ ಬಗ್ಗೆ ಭಾರತೀಯ ಜನತಾ ಪಕ್ಷದ ವರ್ತನೆ ಅವರನ್ನು ಇತರರಲ್ಲಿ ಒಬ್ಬರು ಎಂದು ತೋರಿಸುತ್ತದೆ. ಆರ್ಗನೈಸರ್ ಪತ್ರಿಕೆಯ ಇತ್ತೀಚಿನ ಸಂಚಿಕೆಯಲ್ಲಿನ ಲೇಖನವು ಟ್ರಾಕ್ಟರ್ ಅನ್ನು ಭಯೋತ್ಪಾದನೆಯ ಹೊಸ ಸಂಕೇತವೆಂದು ಹೇಳುತ್ತದೆ! ಈ ವರದಿಯು ಸರ್ಕಾರ ಮತ್ತು ರೈತರನ್ನು ವಿಭಜಿಸುವುದೇ ಅಲ್ಲದೆ ಕಂದಕ ಸೃಷ್ಟಿಸುತ್ತದೆ ಮತ್ತು ಅಪನಂಬಿಕೆಯನ್ನು ಹೆಚ್ಚಿಸುತ್ತದೆ.

ಕೃಷಿ ಕಾನೂನುಗಳನ್ನು ಅನಿರ್ದಿಷ್ಟವಾಗಿ ತಡೆಹಿಡಿಯಬಹುದಾದರೆ, ಅವುಗಳನ್ನು ಷರತ್ತು ಮೂಲಕ ಮರುಪರಿಶೀಲಿಸಬಹುದಾದರೆ, ಅವುಗಳನ್ನು 1.5 ವರ್ಷಗಳ ಬಳಿಕ ರದ್ದುಪಡಿಸಬಹುದಾದರೆ ಈಗ ಕೂಡಾ ರದ್ದುಪಡಿಸಬಹುದು. ನರೇಂದ್ರ ಮೋದಿಯವರು ಸ್ವಲ್ಪ ಸಮಯದ ನಂತರ, ಪ್ರತಿಭಟನಾ ನಿರತ ರೈತರ ನ್ನು ಮಾತುಕಥೆಯ ಮೂಲಕ ಒಮ್ಮತವನ್ನು ರೂಪಿಸಿದ ನಂತರ, ಅವರ ‘ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ ’ ಎಂಬ ಧ್ಯೇಯವಾಕ್ಯಕ್ಕೆ ಅನುಗುಣವಾಗಿ ಕೃಷಿ ಕಾಯ್ದೆಗಳನ್ನು ರದ್ದು ಮಾಡಿದ್ದೇನೆ ಎಂದು ಹೇಳಬಹುದು. ಇದನ್ನು ಮಾಡುವುದರಿಂದ ಮೋದಿಯವರ ಮುಖ ಉಳಿಸುವ ನಿರ್ಗಮನಕ್ಕಿಂತ ಹೆಚ್ಚಿನದಾಗಿದೆ. ಹಸಿರು ಕ್ರಾಂತಿಯು ದೀರ್ಘಕಾಲದಿಂದ ನಡೆಯುತ್ತಿದೆ. ನಮಗೆ ಭಾರತೀಯ ಕೃಷಿಯಲ್ಲಿ ಆಮೂಲಾಗ್ರ ಸುಧಾರಣೆಗಳು ಬೇಕಾಗುತ್ತವೆ. ಈ ಪ್ರತಿಭಟನೆಯಿಂದ ಹೊರಬಂದ ಒಳ್ಳೆಯ ವಿಷಯವೆಂದರೆ ವ್ಯಾಪಕವಾದ ಸಾರ್ವಜನಿಕ ಚರ್ಚೆ ಮತ್ತು ಭಾರತೀಯ ಕೃಷಿಯನ್ನು ಸುಧಾರಿಸುವ ಕುರಿತು ಚರ್ಚಿಸಬೇಕಾದ ಅವಶ್ಯಕತೆ. ಅಹಂಕಾರವಿಲ್ಲದೆ ಕಾನೂನುಗಳನ್ನು ರದ್ದುಗೊಳಿಸುವ ಮೂಲಕ ರೈತರ ಕಳವಳಗಳನ್ನು ನಿವಾರಿಸಬೇಕಿದೆ. ಕೃಷಿಯ ಸುಧಾರಣೆಯ ಬಗ್ಗೆ ಒಮ್ಮತವನ್ನು ಮೂಡಿಸಿ ಸಮಸ್ಯೆ ಏನು ಎಂಬುದನ್ನು ಸ್ಪಷ್ಟವಾಗಿ ಅರಿತು ಪರಿಹರಿಸಬಹುದಾಗಿದೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com