ದೆಹಲಿ ಹಿಂಸಾಚಾರ – ಆರೋಪಿ ಇಕ್ಬಾಲ್‌ ಸಿಂಗ್‌ ಬಂಧನ

ದೀಪ್‌ ಸಿಧು ಬಂಧನದ ಬೆನ್ನಲಿಯೇ ಆರೋಪಿ ಇಕ್ಬಾಲ್‌ ಸಿಂಗ್‌ನನ್ನು ಪಂಜಾಬಿನ ಹೋಶಿಯಾರ್ಪುರದಲ್ಲಿ ಕಳೆದ ರಾತ್ರಿ ಬಂಧಿಸಿಸಲಾಗಿದೆ ಎಂದು ದೆಹಲಿ ಪೊಲೀಸರ ವಿಶೇಷ ತಂಡ ತಿಳಿಸಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.
ದೆಹಲಿ ಹಿಂಸಾಚಾರ – ಆರೋಪಿ ಇಕ್ಬಾಲ್‌ ಸಿಂಗ್‌ ಬಂಧನ

ಜನವರಿ 26 ರಂದು ನಡೆದ ರೈತರ ಟ್ರ್ಯಾಕ್ಟರ್‌ ಮೆರವಣಿಗೆ ವೇಳೆ ದೆಹಲಿಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಆರೋಪಿ ಇಕ್ಬಾಲ್‌ ಸಿಂಗ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರೈತರ ಟ್ರ್ಯಾಕ್ಟರ್‌ ಮೆರವಣಿಗೆಯ ವೇಳೆ ಹಿಂಸಾಚಾರ ನಡೆದಿದ್ದು, ಕೆಂಪುಕೋಟೆ ಮೇಲೆ ಸಿಖ್‌ ಧ್ವಜ ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬಿ ನಟ ಬಿಜೆಪಿ ಬೆಂಬಲಿಗ ದೀಪ್‌ ಸಿಧುನನ್ನು ಫೆಬ್ರವರಿ 9 ರಂದು ಪೊಲೀಸರು ಬಂಧಿಸಿದ್ದಾರೆ.

ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಇದರ ಬೆನ್ನಲಿಯೇ ಆರೋಪಿ ಇಕ್ಬಾಲ್‌ ಸಿಂಗ್‌ನನ್ನು ಪಂಜಾಬಿನ ಹೋಶಿಯಾರ್ಪುರದಲ್ಲಿ ಕಳೆದ ರಾತ್ರಿ ಬಂಧಿಸಿಸಲಾಗಿದೆ ಎಂದು ದೆಹಲಿ ಪೊಲೀಸರ ವಿಶೇಷ ತಂಡ ತಿಳಿಸಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ದೆಹಲಿ ಪೊಲೀಸರು ಆರೋಪಿಗಳ ಬಂಧನಕ್ಕೆ ಸಂಬಂಧಿಸಿದಂತಹ ಮಾಹಿತಿಯನ್ನು ನೀಡಿದವರಿಗೆ ನಗದು ಬಹುಮಾನವನ್ನು ಘೋಷಿಸಿದ್ದರು. ಕೆಂಪುಕೋಟೆ ಸಿಖ್ಖ್‌ ಧ್ವಜ ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳಾದ ನಟ ದೀಪ್ ಸಿಧು ಮತ್ತು ಮೂವರು ಆರೋಪಿಗಳ ಬಂಧನಕ್ಕೆ ಸಹಕಾರಿಯಾಗುವ ಮಾಹಿತಿ ನೀಡಿದವರಿಗೆ 1 ಲಕ್ಷ, ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಗಲಭೆಯಲ್ಲಿ ನಾಲ್ಕು ಜನ ಆರೋಪಿಗಳಾದ ಜಗ್ಬೀರ್ ಸಿಂಗ್, ಬುಟಾ ಸಿಂಗ್, ಸುಖದೇವ್ ಸಿಂಗ್, ಮತ್ತು ಇಕ್ಬಾಲ್ ಸಿಂಗ್ ಬಗ್ಗೆ ಮಾಹಿತಿ ನೀಡಿದವರಿಗೆ 50 ಸಾವಿರ ಬಹುಮಾನವನ್ನು ಘೋಷಿಸಲಾಗಿತ್ತು.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com