ಭಾರತೀಯ ಸೇನೆಯಿಂದ ಕೋವಿಡ್-19 ಪತ್ತೆಗೆ ದೇಸಿ ತಳಿ ನಾಯಿಗಳ ಬಳಕೆ

ಕೋವಿಡ್ -19 ಪಾಸಿಟಿವ್ ರೋಗಿಗಳ ಮೂತ್ರ ಮತ್ತು ಬೆವರಿನ ಮಾದರಿಗಳಿಂದ ಹೊರಹೊಮ್ಮುವ ನಿರ್ದಿಷ್ಟ ಬಯೋಮಾರ್ಕರ್‌ಗಳ ಮೇಲೆ ನಾಯಿಗಳಿಗೆ ತರಬೇತಿ ನೀಡಲಾಗುತ್ತಿದೆ.
ಭಾರತೀಯ ಸೇನೆಯಿಂದ ಕೋವಿಡ್-19 ಪತ್ತೆಗೆ ದೇಸಿ ತಳಿ ನಾಯಿಗಳ ಬಳಕೆ

ಇಂದು ನಾಯಿಗಳು ನಮ್ಮ ಪೋಲೀಸ್, ಅರಣ್ಯ ಮತ್ತು ರಕ್ಷಣಾ ಪಡೆಗಳ ಅವಿಭಾಜ್ಯ ಅಂಗವೇ ಆಗಿವೆ. ಈ ನಾಯಿಗಳು ಇಲ್ಲದಿರುವ ಪಡೆಗಳನ್ನು ಊಹಿಸಿಕೊಳ್ಳುವುದೂ ಸಾದ್ಯವಿಲ್ಲ. ಅದರಲ್ಲೂ ನಾಯಿಗಳ ಘ್ರಹಣಾ ಶಕ್ತಿ ಅದ್ವಿತೀಯವಾದುದಾಗಿದೆ.ಹೀಗಾಗಿ ತನಿಖೆ, ತಪಾಸಣೆಗೆ ನಾಯಿಗಳು ಅನಿವಾರ್ಯ. ಆದರೆ ಮೊದಲೆಲ್ಲ ನಮ್ಮ ಪಡೆಗಳು ಉತ್ತಮ ತಳಿಯ ವಿದೇಶೀ ನಾಯಿಗಳನ್ನೇ ಬಳಸಿಕೊಳ್ಳುತಿದ್ದವು. ಇದೀಗ ನಮ್ಮದೇ ಕರ್ನಾಟಕದ ಮುಧೋಳ ನಾಯಿಗಳನ್ನೂ ಮತ್ತು ಇತರ ತಳಿಗಳ ದೇಸಿ ನಾಯಿಗಳನ್ನೂ ಬಳಸಿಕೊಳ್ಳುತ್ತಿರುವುದು ನಿಜಕ್ಕೂ ಸ್ವಾಗತಾರ್ಹ ಸಂಗತಿ ಆಗಿದೆ. ಇದು ನಮಗೆ ನಿಜಕ್ಕೂ ಹೆಮ್ಮೆಯ ವಿಷಯವೇ ಆಗಿದೆ. ಭದ್ರತಾ ಪಡೆಗಳ ನಂತರ ಇದೀಗ ಕೋವಿಡ್‌ 19 ಸಾಂಕ್ರಮಿಕ ಖಾಯಿಲೆಯನ್ನು ಪತ್ತೆ ಹಚ್ಚಲೂ ನಾಯಿಗಳ ನೆರವನ್ನು ಪಡೆಯಲಾಗುತ್ತಿದೆ. ದೇಶದ ಕೋವಿಡ್ -19 ಮುಂಚೂಣಿ ತಂಡಕ್ಕೆ ಸಹಾಯ ಮಾಡಿದ ಭಾರತದ ಮೊದಲ ಮಿಲಿಟರಿ ನಾಯಿಗಳಲ್ಲಿ ಜಯ, ಕ್ಯಾಸ್ಪರ್ ಮತ್ತು ಮಣಿ ಎಂಬ ನಾಯಿಗಳು ಇವೆ. ವ್ಯಕ್ತಿಗಳ ಮೂತ್ರ ಮತ್ತು ಬೆವರಿನ ಮಾದರಿಗಳ ಆಧಾರದ ಮೇಲೆ ಕರೋನವೈರಸ್ ಅನ್ನು ಕಂಡುಹಿಡಿಯಲು ನಾಯಿಗಳಿಗೆ ತರಬೇತಿ ನೀಡಲಾಗುತ್ತಿದೆ. ಕ್ಯಾಸ್ಪರ್ ಕಾಕರ್ ಸ್ಪೈನಿಯಲ್ ಆಗಿದ್ದರೆ, ಜಯ ಮತ್ತು ಮಣಿ ತಮಿಳುನಾಡಿನ ಸ್ಥಳೀಯ ಚಿಪ್ಪಿಪಾರೈ ತಳಿಗೆ ಸೇರಿದವರಾಗಿದ್ದು, ಅವು ತೆಳ್ಳನೆಯ ದೇಹ ಮತ್ತು ಉದ್ದ ಕಾಲುಗಳನ್ನು ಹೊಂದಿವೆ.


ಕೋವಿಡ್ -19 ಪಾಸಿಟಿವ್ ರೋಗಿಗಳ ಮೂತ್ರ ಮತ್ತು ಬೆವರಿನ ಮಾದರಿಗಳಿಂದ ಹೊರಹೊಮ್ಮುವ ನಿರ್ದಿಷ್ಟ ಬಯೋಮಾರ್ಕರ್‌ಗಳ ಮೇಲೆ ನಾಯಿಗಳಿಗೆ ತರಬೇತಿ ನೀಡಲಾಗುತ್ತಿದೆ. ಜಯ ಮತ್ತು ಕ್ಯಾಸ್ಪರ್ ನಾಯಿಗಳಿಗೆ ಸಂಪೂರ್ಣ ತರಬೇತಿ ನೀಡಲಾಗಿದ್ದರೆ ಮತ್ತು ಮಣಿ ಇನ್ನೂ ತರಬೇತಿ ಪಡೆಯುತ್ತಿದೆ ಎಂದು ಭಾರತೀಯ ಸೇನೆ ತಿಳಿಸಿದೆ. ತರಬೇತಿ ಪಡೆದ ಎರಡು ನಾಯಿಗಳಾದ ಜಯ ಮತ್ತು ಕ್ಯಾಸ್ಪರ್ ನ್ನು ದೆಹಲಿಯ ಸಾರಿಗೆ ಶಿಬಿರದಲ್ಲಿ ನಿಯೋಜಿಸಲಾಗಿತ್ತು, ಅಲ್ಲಿ ಅವುಗಳು 806 ರೋಗಿಗಳ ಮಾದರಿಗಳನ್ನು ಪರೀಕ್ಷಿಸಿದಾಗ ಅದರಲ್ಲಿ 18 ಕೋವಿಡ್ -19 ಪಾಸಿಟಿವ್ ಎಂದು ಪತ್ತೆಯಾಗಿದೆ. ಇದರ ಜತೆಗೇ ಇನ್ನೂ ಏಳು ನಾಯಿಗಳಿಗೆ ಸೇನೆಯಿಂದ ತರಬೇತಿ ನೀಡಲಾಗುತ್ತಿದೆ. ತರಬೇತಿ ಪೂರ್ಣಗೊಂಡ ನಂತರ, ಎಲ್ಲಾ ನಾಯಿಗಳನ್ನು ಟ್ರಾನ್ಸಿಟ್ ಶಿಬಿರಗಳಲ್ಲಿ ನಿಯೋಜಿಸಲಾಗುವುದು ಎಂದು ಸೇನಾ ಮೂಲಗಳು ತಿಳಿಸಿವೆ. ಮೊದಲೆಲ್ಲ ನಾಯಿಗಳನ್ನು ಭದ್ರತೆ ಮತ್ತು ಪತ್ತೆ ಕಾರ್ಯದಲ್ಲಿ ಬಳಸಲಾಗುತಿದ್ದರೆ ಈಗ ಜಾಗತಿಕವಾಗಿ ನಾಯಿಗಳನ್ನು ವೈದ್ಯಕೀಯ ರಂಗದಲ್ಲೂ ಕ್ಯಾನ್ಸರ್, ಮಲೇರಿಯಾ ಮತ್ತು ಪಾರ್ಕಿನ್ಸನ್ ನಂತಹ ಕಾಯಿಲೆಗಳನ್ನು ಪತ್ತೆ ಹಚ್ಚಲು ಬಳಸಲಾಗುತ್ತಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಅದರಂತೆ ವೈದ್ಯಕೀಯ ರಂಗದಲ್ಲೂ ನಾಯಿಗಳನ್ನು ಬಳಸಲು ತರಬೇತಿ ನೀಡಲಾಗಿದೆ ಎಂದು ಸೇನೆಯು ಹೇಳಿದೆ. ಕೋವಿಡ್ -19 ಬಯೋಮಾರ್ಕರ್‌ಗಳು ತರಬೇತಿ ಪಡೆದ ನಾಯಿಯ ಘ್ರಾಣ ಪತ್ತೆ ಸಾಮರ್ಥ್ಯದ ಮಿತಿ ವ್ಯಾಪ್ತಿಯಲ್ಲಿವೆ ಎಂದು ಪಶುತಜ್ಞರು ತಿಳಿಸಿದ್ದು ರೋಗವನ್ನು ತ್ವರಿತ ಸಮಯದಲ್ಲಿ ಪತ್ತೆಹಚ್ಚಲು ಸಹಾಯ ಮಾಡುತ್ತದೆ ಎನ್ನಲಾಗಿದೆ. ವಿಶ್ವವ್ಯಾಪಿ ವೈದ್ಯಕೀಯ ಕ್ಯಾನ್ಸರ್, ಮಲೇರಿಯಾ, ಮಧುಮೇಹ ಮುಂತಾದ ರೋಗಗಳ ಪತ್ತೆಗಾಗಿ ಅನೇಕ ದೇಶಗಳು ನಾಯಿಗಳನ್ನು ಬಳಸುತ್ತವೆ. ಸಂಶೋಧನೆ ನಡೆಯುತ್ತಿದೆ ಮತ್ತು ಯಾವುದೇ ರೋಗವನ್ನು ನೈಜ ಸಮಯದಲ್ಲಿ ಪತ್ತೆಹಚ್ಚಲು ಅವು ಸಹಾಯ ಮಾಡುತ್ತವೆ, ಎಲ್ಲೆಲ್ಲಿ volatile metabolic biomarker ಇದೆಯೋ ಅಲ್ಲಿ ನಾವು ನಾಯಿಗಳನ್ನು ಖಾಯಿಲೆ ಪತ್ತೆಗೆ ಬಳಸಿಕೊಳ್ಳಬಹುದು ಮತ್ತು ಇವು ಅತ್ಯುತ್ತಮ ಫಲಿತಾಂಶವನ್ನೂ ನೀಡಿವೆ ಎಂದು ಎಂದು ಮೀರತ್ನ ಆರ್ವಿಸಿ ಕೇಂದ್ರದ ಬೋಧಕ ಲೆಫ್ಟಿನೆಂಟ್ ಕರ್ನಲ್ ಸುರಿಂದರ್ ಸೈನಿ ತಿಳಿಸಿದರು. ಯಾವುದೇ ಅಂಗಾಂಶವು ರೋಗಕಾರಕದಿಂದ ಸೋಂಕಿಗೆ ಒಳಗಾದಾಗ ಅದು volatile metabolic biomarker ಅನ್ನು ಬಿಡುಗಡೆ ಮಾಡುತ್ತದೆ, ಅವು ರೋಗದ ಗುಣಲಕ್ಷಣಗಳು ಅಗಿದ್ದು ಇಲ್ಲಿ, olfactory equity ಕೂಡ ಜಾಸ್ತಿ ಇರುತ್ತದೆ ಎಂದು ಅವರು ತಿಳಿಸಿದರು.

ಈಗ ಫ್ರಾನ್ಸ್, ಜರ್ಮನಿ, ಯುಎಇ, ಯುಕೆ, ರಷ್ಯಾ, ಫಿನ್ಲ್ಯಾಂಡ್, ಲೆಬನಾನ್, ಆಸ್ಟ್ರೇಲಿಯಾ, ಅರ್ಜೆಂಟೀನಾ, ಬೆಲ್ಜಿಯಂ ಮತ್ತು ಚಿಲಿಯಂತಹ ಹಲವಾರು ದೇಶಗಳು ಕೋವಿಡ್ -19 ಪತ್ತೆಗಾಗಿ ನಾಯಿಗಳಿಗೆ ತರಬೇತಿ ನೀಡಲು ಪ್ರಾರಂಭಿಸಿವೆ, ವಿಶೇಷವಾಗಿ ವಿಮಾನ ನಿಲ್ದಾಣಗಳು ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರನ್ನು ಪರೀಕ್ಷಿಸಲು ಇವು ಬಳಕೆ ಆಗುತ್ತಿವೆ. ಸಾಮಾನ್ಯ ಪರಿಸ್ಥಿತಿಗಳಲ್ಲಿ ಮಿಲಿಟರಿ ನಾಯಿಗಳು ಕೋವಿಡ್ -19 ಪತ್ತೆಯನ್ನು ಯಶಸ್ವಿಯಾಗಿ ಮಾಡಿವೆ ಎಂದು ಭಾರತೀಯ ಸೇನೆಯ ಹೇಳಿಕೆಯು ತಿಳಿಸಿದೆ. ಮೀರತ್ ಕಂಟೋನ್ಮೆಂಟ್ನ ಮಿಲಿಟರಿ ಆಸ್ಪತ್ರೆ ಮತ್ತು ಮೀರತ್ನ ನೇತಾಜಿ ಸುಭಾಷ್ ಚಂದ್ರ ಬೋಸ್ ಸುಭಾರ್ತಿ ವೈದ್ಯಕೀಯ ಕಾಲೇಜಿನಿಂದ ಪಾಸಿಟಿವ್ ಮತ್ತು ಶಂಕಿತ ಮಾದರಿಗಳನ್ನು ಪಡೆಯಲಾಗಿದೆ. ಪ್ರಧಾನ ಮಂತ್ರಿಗಳ ಆತ್ಮನಿರ್ಭಾರ ಭಾರತ್ ಯೋಜನೆಯಡಿಯಲ್ಲಿ ಸ್ಥಳೀಯ ತಳಿಯಾದ ಚಿಪ್ಪಿಪಾರೈಗೆ ತರಬೇತಿ ನೀಡಲು ಪ್ರಯತ್ನವನ್ನು ಮಾಡಿದೆ ಎಂದು ಸೇನೆ ತಿಳಿಸಿದೆ. ಅದನ್ನು ಹೊರತುಪಡಿಸಿ, ಕಾಕರ್ ಸ್ಪೈನಿಯಲ್ಸ್ ಮತ್ತು ಲ್ಯಾಬ್ರಡಾರ್ಗಳಿಗೆ ಸಹ ತರಬೇತಿ ನೀಡಲಾಗುತ್ತಿದೆ. ನಾಯಿಗಳ ಘ್ರಾಣ ಇಂದ್ರಿಯಗಳು ಸಾಮಾನ್ಯವಾಗಿ ಅತ್ಯುತ್ತಮವಾಗಿರುತ್ತವೆ. ಕಾಕರ್ ಸ್ಪೈನಿಯಲ್ಗಳು ಮತ್ತು ಲ್ಯಾಬ್ರಡಾರ್ಗಳ ಸಾಮರ್ಥ್ಯವನ್ನು ಈಗಾಗಲೇ ಪರೀಕ್ಷಿಸಲಾಗಿದ್ದು ನಾವು ಸ್ಥಳೀಯ ಚಿಪ್ಪಿಪಾರೈಯನ್ನು ಪರೀಕ್ಷಿಸಿದ್ದು ಫಲಿತಾಂಶಗಳ ಬಗ್ಗೆ ತುಂಬಾ ಸಂತೋಷವಾಗಿದೆ ಎಂದು ಸೈನಿ ಹೇಳಿದರು.

ಆರಂಭಿಕ ಪ್ರಯೋಗದಲ್ಲಿ ಕಾಕರ್ ಸ್ಪೈನಿಯಲ್ಸ್ ಮತ್ತು ಚಿಪ್ಪಿ ಪಾರೈ ಗೆ ಮೂತ್ರ ಮತ್ತು ಬೆವರಿನ ಮಾದರಿಗಳ ಸೂಕ್ಷ್ಮತೆ ಮತ್ತು ನಿರ್ದಿಷ್ಟತೆಯು ತುಂಬಾ ಹೆಚ್ಚಾಗಿದೆ ಎಂದು ಕಂಡುಬಂದಿದೆ, ಇವುಗಳಿಗೆ 279 ಮೂತ್ರ ಮತ್ತು 267 ಬೆವರು ಮಾದರಿಗಳನ್ನು ಪರೀಕ್ಷಿಸಿದವು. ಚಿಪ್ಪಿಪಾರೈಗೆ ಮೂತ್ರದ ಮಾದರಿಗಳನ್ನು ಪರೀಕ್ಷಿಸಲು ತರಬೇತಿ ನೀಡಲಾಗಿದ್ದು ಕಾಕರ್ ಸ್ಪೇನಿಯಲ್ಗಳಿಗೆ ಬೆವರು ಮಾದರಿಗಳ ಬಗ್ಗೆ ತರಬೇತಿ ನೀಡಲಾಗುತ್ತಿದೆ, ಆದರೂ ಈ ವ್ಯತ್ಯಾಸಕ್ಕೆ ಯಾವುದೇ ನಿರ್ದಿಷ್ಟ ಕಾರಣಗಳಿಲ್ಲ. ಯಶಸ್ಸಿನ ಪ್ರಮಾಣವು ಎರಡೂ ನಾಯಿಗಳಲ್ಲಿ ಶೇಕಡಾ 95 ರಷ್ಟು ಉತ್ತಮವಾಗಿದೆ ಎಂದು ಸೈನಿ ಹೇಳುತ್ತಾರೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com