ರೈತರ ಪ್ರತಿಭಟನೆಗೆ ಸಂಬಂಧಿಸಿದ ಎರಡು ಹಾಡುಗಳಿಗೆ ನಿಷೇಧ ಹೇರಿದ ಯೂಟ್ಯೂಬ್

ರೈತರ ಪ್ರತಿಭಟನೆಯನ್ನು ತಡೆಯುವ ಸಲುವಾಗಿ ಚಳವಳಿ ಪರ ಅಂಶಗಳನ್ನು ಮುಂದಿಟ್ಟುಕೊಂಡು ರಚಿಸಿರುವ ಹಾಡನ್ನು ತೆಗೆದಿರುವುದು ಕೇಂದ್ರ ಸರ್ಕಾರದ ದಬ್ಬಾಳಿಕೆಯ ಒಂದು ಭಾಗ, ಇದು ಜಾಗತೀಕ ಬೆಂಬಲಕ್ಕೆ ಹಿನ್ನಡೆಯಾಗಿದೆ ಎಂದು ಗೀತಾ ರಚನಾಕಾರರ ಮತ್ತು ನಿರ್ಮಾಪಕರುಗಳ ಪ್ರತಿಕ್ರಿಯೆ ಆಗಿದೆ
ರೈತರ ಪ್ರತಿಭಟನೆಗೆ ಸಂಬಂಧಿಸಿದ ಎರಡು ಹಾಡುಗಳಿಗೆ ನಿಷೇಧ ಹೇರಿದ ಯೂಟ್ಯೂಬ್

ಕೇಂದ್ರ ಸರ್ಕಾರ ಜಾರಿಗೆ ತಂದಿರುವಂತಹ ಹೊಸ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೇಶದ ರೈತರು ಪ್ರತಿಭಟಿಸುತ್ತಿದ್ದು, ದೆಹಲಿಯ ಗಡಿಭಾಗಗಳಲ್ಲಿ ಪಂಜಾಬ್, ಉತ್ತರ ಪ್ರದೇಶ, ಹರಿಯಾಣ ರೈತರು ಪ್ರತಿಭಟನೆಯನ್ನು ನವೆಂಬರ್ 2020 ರಿಂದ ಆರಂಭಿಸಿ ನಿರಂತರವಾಗಿ ಹೋರಾಟ ಮಾಡುತ್ತಿದ್ದಾರೆ. ರೈತ ಪ್ರತಿಭಟನೆಗೆ ಬೆಂಬಲವಾಗಿ ರೂಪಿತಗೊಂಡ ಎರಡು ಪಂಜಾಬಿ ಹಾಡುಗಳನ್ನು ಯೂಟ್ಯೂಬ್ ತೆಗೆದು ಹಾಕಿರುವುದು ರೈತ ಚಳವಳಿ ಬೆಂಬಲಿಗರ ಕೆಂಗಣ್ಣಿಗೆ ಗುರಿಯಾಗಿದೆ.

ʼಫಸ್ಲಾನ್ ದೆ ಫೈಸ್ಲೆ ಕಿಸಾನ್ ಕರುಗಾʼ ಮತ್ತು ʼಆಸಿ ವಡೇಂಗೆʼ ಎಂಬ ಎರಡು ಪಂಜಾಬಿ ಭಾಷೆ ಹಾಡುಗಳು ರೈತರ ಪ್ರತಿಭಟನೆ ಕುರಿತು ರೂಪಿತಗೊಂಡಿದ್ದವು ಇದೀಗ ಯೂಟ್ಯೂಬ್ ಇಂಡಿಯಾ ವೆಬ್ ಸೈಟ್ ನಿಂದ ತೆಗೆದು ಹಾಕಲಾಗಿದೆ.

ಈ ಕುರಿತಾಗಿ ಮಾತನಾಡಿರುವ ಹಾಡಿನ ನಿರ್ಮಾಪಕ ಹರ್ಜಿಂದರ್ ಲಡ್ಡಿ ಅವರು, ಈ ಹಾಡನ್ನು ಮೂರು ದಿನಗಳ ಹಿಂದೆ ಯೂಟ್ಯೂಬ್ನಿಂದ ತೆಗೆದು ಹಾಕಲಾಗಿದೆ. ಇದನ್ನು ಗಮನಿಸಿದ ನಾನು ಏಕೆ ಈ ರೀತಿ ಮಾಡಲಾಗಿದೆ ಎಂದು ಕ್ಯಾಲಿರ್ಪೋನಿಯಾದ ಯೂಟ್ಯೂಬ್ ಪ್ರಧಾನ ಕಚೇರಿಯ ಕೆಲವು ಅಧಿಕಾರಿಗಳಿಂದ ಈ ಬಗ್ಗೆ ಮಾಹಿತಿ ತಿಳಿಯುವ ಪ್ರಯತ್ನ ಮಾಡಿದೆ. ಭಾರತ ಸರ್ಕಾರದ ಕೆಲವು ನಿಯಮಗಳನ್ನು ಉಲ್ಲಂಘಿಸುತ್ತದೆ ಎಂದು ಕಾನೂನಾತ್ಮ ದೂರು ನೀಡಿ ಭಾರತ ಸರ್ಕಾರ ಬಾಹ್ಯ ಹಸ್ತಕ್ಷೇಪ ಮಾಡಿದೆ, ಎಂದಿದ್ದಾರೆ.

ಹಾಡುಗಳನ್ನು ಯೂಟೂಬ್ನಿಂದ ತೆಗೆಯುವುದಾಗಿ ನಮಗೆ ಸಂಸ್ಥೆಯಿಂದ ಯಾವುದೇ ರೀತಿಯ ಅಧಿಕೃತ ಸೂಚನೆ ಬಂದಿಲ್ಲ, ನಾವು ವೀಕ್ಷಕರಿಂದ ತಿಳಿದುಕೊಂಡು ಸಂಸ್ಥೆಯೊಂದಿಗೆ ಮಾತುಕತೆ ನಡೆಸಿದ ನಂತರ ಈಮೇಲ್ ಮೂಲಕ ಮಾಹಿತಿ ಕಳುಹಿಸುವುದಾಗಿ ಪ್ರಧಾನ ಕಚೇರಿಯ ಸಿಬ್ಬಂದಿಗಳು ತಿಳಿಸಿದ್ದರು, ಎಂದು ಹೇಳಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

2020 ರ ಸೆಪ್ಟೆಂಬರ್ ನಲ್ಲಿ ಪಂಜಾಬಿನಲ್ಲಿ ಕೃಷಿ ಕಾನೂನುಗಳ ವಿರುದ್ಧದ ಹೋರಾಟದ ಆರಂಭಿಕ ಘಟ್ಟದಲ್ಲಿ ಈ ಹಾಡನ್ನು ಬಿಡುಗಡೆ ಮಾಡಲಾಗಿತ್ತು. ಅಂದಿನಿಂದ ಇವರೆಗೂ ಗಾಯಕ ಕನ್ವರ್ ಗ್ರೆವಾಲ್ ಅವರು ಸಿಂಘು ಮತ್ತು ಟಿಕ್ರಿ ಗಡಿಭಾಗಗಳಲ್ಲಿ ರೈತರ ಆಂದೋಲನಗಳಲ್ಲಿ ಭಾಗಿಯಾಗಿ ಚಿತ್ರೀಕರಿಸಿ ಪ್ರದರ್ಶಿಸಲಾಗಿದೆ. “ಏಲಾನ್” ಹೆಸರಿನ ಹಾಡು ಯೂಟ್ಯೂಬ್ ತೆಗುವುದಕ್ಕೂ ಮುನ್ನ 6 ಲಕ್ಷ ವೀಕ್ಷಣೆ ಹೊಂದಿತ್ತು. ಹಾಗು ಚಳವಳಿ ಬೆಂಬಲಿಗರು ಸಾಕಷ್ಟು ಹಾಡುಗಳನ್ನು ಹಂಚಿಕೊಂಡಿದ್ದಾರೆ. ರೈತರ ಪ್ರತಿಭಟನೆಯನ್ನು ಬೆಂಬಲಿಸಿ ದೆಹಲಿಯನ್ನು ಶಕ್ತಿ ಕೇಂದ್ರದಂತೆ ನಿರೂಪಿಸಲಾಗಿದೆ. ಜೋಶ್ ಮತ್ತು ಹೋಶ್ (ವಿವೇಚನೆ ಮತ್ತು ಪ್ರಜ್ಞೆ) ಪ್ರತಿಬಿಂಬಿಸಿ ಆಂದೋಲನದಲ್ಲಿ ಭಾಗಿಯಾಗುವ ಉತ್ಸಾಹ ಮತ್ತು ಅನ್ಯಾಯದ ವಿರುದ್ಧ ಹೋರಾಡುವ ಹುಮ್ಮಸು ನೀಡುವ ರೀತಿಯಲ್ಲಿ ಈ ಹಾಡುಗಳನ್ನು ಸಂಯೋಜಿಸಲಾಗಿತ್ತು.

ಹಾಡನ್ನು ನಿಷೇಧಿಸಿರುವುದರ ಬಗ್ಗೆ ಮಾತಾಡುವುದಿಲ್ಲ, ಯಾಕೆಂದರೆ ಈಗಾಗಲೇ ಜನ ನಮ್ಮನ್ನು ಬೆಂಬಲಿಸಿದ್ದಾರೆ. ಇನ್ನು ಮುಂದೆಯೂ ಬೆಂಬಲಿಸುತ್ತಾರೆ. ಏಲಾನ್ -2 ಬಿಡುಗಡೆಗೆ ಸಿದ್ಧತೆಯಲ್ಲಿದ್ದೇವೆ. ಇದು ಒಂದೇ ಹಾಡಿನ ಎರಡು ಭಾಗವಾಗಿರುತ್ತದೆ ಎಂದು ಗಾಯಕ ಕನ್ವರ್‌ ಗ್ರೆವಾಲ್ ಹೇಳಿದ್ದಾರೆ.

ರೈತರ ಪ್ರತಿಭಟನೆಯನ್ನು ತಡೆಯುವ ಸಲುವಾಗಿ ಚಳವಳಿ ಪರ ಅಂಶಗಳನ್ನು ಮುಂದಿಟ್ಟುಕೊಂಡು ರಚಿಸಿರುವ ಹಾಡನ್ನು ತೆಗೆದಿರುವುದು ಕೇಂದ್ರ ಸರ್ಕಾರದ ದಬ್ಬಾಳಿಕೆಯ ಒಂದು ಭಾಗ, ಇದು ಜಾಗತೀಕ ಬೆಂಬಲಕ್ಕೆ ಹಿನ್ನಡೆಯಾಗಿದೆ ಎಂದು ಗೀತಾ ರಚನಾಕಾರರ ಮತ್ತು ನಿರ್ಮಾಪಕರುಗಳ ಪ್ರತಿಕ್ರಿಯೆ ಆಗಿದೆ.

ನಮ್ಮ ಹಾಡುಗಳಲ್ಲಿ ದೋಷಗಳಿದ್ದರೆ, ಆಕ್ರಮಣಶೀಲತೆ, ಉತ್ತೇಜನ, ದ್ವೇಷ ಪ್ರಚೋದಿಸಿದ್ದರೆ ಯೂಟ್ಯೂಬ್ ಸಂಸ್ಥೆ ನಮ್ಮ ಹಾಡನ್ನು ಮೊದಲಿಗೆ ಬಿಡುಗಡೆ ಮಾಡುತ್ತಿರಲ್ಲಿಲ್ಲ. ಸೆಪ್ಟೆಂಬರ್ ನಿಂದ ಚಾಲನೆಯಲ್ಲಿದ್ದ ಹಾಡುಗಳನ್ನು ಮೂರು ದಿನಗಳ ಹಿಂದೆ ತೆಗೆದು ಹಾಕಿರುವುದು ಖಂಡನೀಯ ಎಂದು ಲಡ್ಡಿ ಆರೋಪಿಸಿದ್ದಾರೆ.

ಹಾಡನ್ನು ಯೂಟ್ಯೂಬ್ ನಿಂದ ತೆಗೆದಿರುವುದರ ಬಗ್ಗೆ ದಿ ವೈರ್ ಯೂಟ್ಯೂಬ್ ಸಂಸ್ಥೆಯ ವಕ್ತಾರರೊಂದಿಗೆ ಸಂವಹನ ನಡೆಸಿದೆ. ನಾವು ಸಂಸ್ಥೆಯ ನಿಯಮಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತೇವೆ. ಅಧಿಕಾರಿಗಳಿಂದ ಬಂದ ದೂರುಗಳನ್ನು ಸ್ವೀಕರಿಸಿ, ನಿಯಮಗಳಿಗೆ ವಿರುದ್ಧವಾದ ಅಂಶಗಳನ್ನು ತೆಗೆದು ಹಾಕಲಾಗುತ್ತದೆ ಎಂದು ಯೂಟ್ಯೂಬ್‌ ಸಂಸ್ಥೆಯ ಪ್ರತಿನಿಧಿಗಳು ಹೇಳಿದ್ದಾರೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com