ಗುಜರಾತ್‌ನಿಂದ ಪಶ್ಚಿಮ ಬಂಗಾಳವನ್ನು ಆಳಲು ಸಾಧ್ಯವೇ ಇಲ್ಲ – ಮಮತಾ ಕಿಡಿ

ಪಶ್ಚಿಮ ಬಂಗಾಳದ ಕುರಿತು ಅರಿವೇ ಇಲ್ಲದಿರುವ ಬಿಜೆಪಿ ನಾಯಕರು ಈಗ ರಾಜ್ಯಕ್ಕೆ ಕಾಲಿಡುತ್ತಿದ್ದಾರೆ. ಇಂತಹ ಕ್ರೂರ ಕೇಂದ್ರ ಸರ್ಕಾರ ಈ ದೇಶಕ್ಕೆ ಎಂದೂ ಲಭಿಸಿರಲಿಲ್ಲ, ಎಂದು ಮಮತಾ ಬ್ಯಾನರ್ಜಿ ಕೇಮದ್ರ ಸರ್ಕಾರವನ್ನು ಟೀಕಿಸಿದ್ದಾರೆ.
ಗುಜರಾತ್‌ನಿಂದ ಪಶ್ಚಿಮ ಬಂಗಾಳವನ್ನು ಆಳಲು ಸಾಧ್ಯವೇ ಇಲ್ಲ – ಮಮತಾ ಕಿಡಿ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ನಡುವಿನ ವಾಕ್ಸಮರ ಮುಂದುವರೆದಿದೆ. ಬಿಜೆಪಿ ರಥ ಯಾತ್ರೆಯ ಮುಖಾಂತರ ಮಮತಾ ಬ್ಯಾನರ್ಜಿ ಸರ್ಕಾರದ ಮೇಲೆ ಪ್ರಹಾರ ನಡೆಸುತ್ತಿದ್ದರೆ, ದೀದಿ ಇತ್ತ ಕಡೆ ಹೂಂಕರಿಸುತ್ತಿದ್ದಾರೆ. ಬಿಜೆಪಿ ವಿರುದ್ದ ತೀವ್ರವಾದ ವಾಗ್ದಾಳಿ ನಡೆಸಿರುವ ಮಮತಾ ಬ್ಯಾನರ್ಜಿ ಅವರು, ಗುಜರಾತಿನಿಂದ ಪಶ್ಚಿಮ ಬಂಗಾಳದಲ್ಲಿ ಆಡಳಿತ ನಡೆಸಲು ಸಾಧ್ಯವಿಲ್ಲ ಎಂದಿದ್ದಾರೆ.

ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಮಾತನಾಡಿದ ಮಮತಾ ಬ್ಯಾಣರ್ಜಿ ಅವರು ವಿರೋಧ ಪಕ್ಷಗಳ ವಿರುದ್ದ ಕಿಡಿಕಾರಿದ್ದರೆ. ಮಮತಾ ಬ್ಯಾನರ್ಜಿ ಸರ್ಕಾರವು ರೂ. 2.99 ಲಕ್ಷ ಕೋಟಿ ಮೊತ್ತದ ಯೋಜನೆಗಳನ್ನು ಘೊಷಿಸಿದ್ದರ ವಿರುದ್ದ ವಿಪಕ್ಷಗಳು ತಕರಾರು ಎತ್ತಿವೆ. ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ ಎಂದಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಇದಕ್ಕೆ ಉತ್ತರಿಸಿರುವ ಮಮತಾ ಬ್ಯಾನರ್ಜಿ ಅವರು, ವಿರೋಧ ಪಕ್ಷದವರು ಹೇಳುತ್ತಿರುವುದೇ ಸರಿ ಎಂದಾದರೆ, ಇದರಿಂದ ಒಳಿತಾಗುವುದು ಸಾಮಾನ್ಯ ಜನರಿಗಲ್ಲವೇ? ನಾವಿನ್ನು ಕೆಲವೇ ದಿನಗಳು ಅಧಿಕಾರದಲ್ಲಿ ಇರುತ್ತೇವೆ ಎಂದು ಕೆಲವರು ಪ್ರಚಾರ ಮಾಡುತ್ತಿದ್ದಾರೆ. ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಅತೀ ಹೆಚ್ಚಿನ ಬಹುಮತದಿಂದ ಅಧಿಕಾರಕ್ಕೆ ಬರುತ್ತೇವೆ, ಎಂದಿದ್ದಾರೆ.

“ಪಶ್ಚಿಮ ಬಂಗಾಳದ ಕುರಿತು ಅರಿವೇ ಇಲ್ಲದಿರುವ ಬಿಜೆಪಿ ನಾಯಕರು ಈಗ ರಾಜ್ಯಕ್ಕೆ ಕಾಲಿಡುತ್ತಿದ್ದಾರೆ. ಇಂತಹ ಕ್ರೂರ ಕೇಂದ್ರ ಸರ್ಕಾರ ಈ ದೇಶಕ್ಕೆ ಎಂದೂ ಲಭಿಸಿರಲಿಲ್ಲ. ಗುಜರಾತ್‌ನಿಂದ ಪಶ್ಚಿಮ ಬಂಗಾಳವನ್ನು ಆಳಲು ಸಾಧ್ಯವೇ ಇಲ್ಲ,” ಎಂದಿದ್ದಾರೆ.

ರಾಜ್ಯದಲ್ಲಿ ಅಂಫಾನ್‌ ಚಂಡಮಾರುತ ಬಂದಾಗ ಕೇವಲ ರೂ. 1000 ಕೋಟಿ ಅನುದಾನ ನೀಡಿದ್ದರು. ರಾಜ್ಯ ಸರ್ಕಾರದಿಂದ ಹೆಚ್ಚಿನ ರೂ. 2542 ಕೋಟಿ ಖರ್ಚು ಮಾಡಬೇಕಾಯಿತು. ಮುಂಗಡ ಹಣ ನೀಡಿದ ನಂತರ ಈ ಕಡೆ ತಿರುಗಿಯೂ ನೋಡಲಿಲ್ಲ, ಎಂದು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com