ಸಾರ್ವಜನಿಕ ಕಾರ್ಯಕ್ರಮದಲ್ಲಿ ಪ್ರಧಾನಿಯನ್ನು ಹಾಡಿ ಹೊಗಳಿದ ಸುಪ್ರಿಂಕೋರ್ಟ್‌ ನ್ಯಾಯಾಧೀಶ

ಕಳೆದ ವರ್ಷ, ಜಸ್ಟೀಸ್‌ ಅರುಣ್‌ ಮಿಶ್ರಾ ಅವರು ಪ್ರಧಾನಿ ಮೋದಿಯವರನ್ನು ಹೊಗಳಿದ್ದು ಎಲ್ಲರ ಹುಬ್ಬೇರಿಸಿತ್ತು.
ಸಾರ್ವಜನಿಕ ಕಾರ್ಯಕ್ರಮದಲ್ಲಿ ಪ್ರಧಾನಿಯನ್ನು ಹಾಡಿ ಹೊಗಳಿದ ಸುಪ್ರಿಂಕೋರ್ಟ್‌ ನ್ಯಾಯಾಧೀಶ

ಸುಪ್ರಿಂಕೋರ್ಟ್‌ನ ನ್ಯಾಯಾಧೀಶರೊಬ್ಬರು ಪ್ರಧಾನಿ ನರೇಂದ್ರ ಮೋದಿಯವರ ಗುಣಗಾನ ಮಾಡಿದ್ದಾರೆ. ಅತ್ಯಂತ ಜನಪ್ರಿಯ, ಅತ್ಯಂತ ಪ್ರೀತಿ ಪಾತ್ರ, ಸ್ಪಂದನಾಶೀಲ ಗುಣ ಹಾಗೂ ದೂರದೃಷ್ಟಿತ್ವವುಳ್ಳ ನಾಯಕ ಎಂದು ಬಣ್ಣಿಸಿದ್ದಾರೆ.

ಗುಜರಾತ್‌ ಹೈಕೋರ್ಟ್‌ನ 60ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಏರ್ಪಡಿಸಲಾಗಿದ್ದ ಬಹಿರಂಗ ಕಾರ್ಯಕ್ರಮದಲ್ಲಿ ಮಾತನಾಡಿದ ಸುಪ್ರಿಂಕೋರ್ಟ್‌ ನ್ಯಾಯಮೂರ್ತಿ ಜಸ್ಟೀಸ್‌ ಎಂ ಆರ್‌ ಶಾ ಅವರು, ನರೇಂದ್ರ ಮೋದಿಯವರ ಉಪಸ್ಥಿತಿ ಇರುವಂತಹ ಈ ಕಾರ್ಯಕ್ರಮದಲ್ಲಿ ಭಾಗಹಿಸಲು ನನಗೆ ಅವಕಾಶ ಸಿಕ್ಕಿದ್ದಕ್ಕಾಗಿ ನಾನು ಧನ್ಯನಾಗಿದ್ದೇನೆ ಎಂದಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಗುಜರಾತ್‌ ಹೈಕೋರ್ಟ್‌ ಎಂದೂ ಕಾನೂನಿನ ಪರಿಧಿಯನ್ನು ಮೀರಿ ಕೆಲಸ ಮಾಡಿಲ್ಲ. ಎಲ್ಲರಿಗೂ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಾ ಬಂದಿದೆ, ಎಂದು ಅವರು ಹೇಳಿದ್ದಾರೆ.

ಕಳೆದ ವರ್ಷ, ಜಸ್ಟೀಸ್‌ ಅರುಣ್‌ ಮಿಶ್ರಾ ಅವರು ಪ್ರಧಾನಿ ಮೋದಿಯವರನ್ನು ಹೊಗಳಿದ್ದು ಎಲ್ಲರ ಹುಬ್ಬೇರಿಸಿತ್ತು. ಈಗ ನಿವೃತ್ತಿ ಹೊಂದಿರುವ ಅರುಣ್‌ ಮಿಶ್ರಾ ಅವರು, ʼಅಂತರಾಷ್ಟ್ರೀಯ ಮನ್ನಣೆ ಪಡೆದ ದೂರದೃಷ್ಟಿತ್ವ ಉಳ್ಳ ವ್ಯಕ್ತಿʼ ಎಂದು ಮೋದಿಯವರನ್ನು ಹಾಡಿ ಹೊಗಳಿದ್ದರು.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com