ಮೋದಿ ಅಧಿಕಾರವಧಿಯಲ್ಲಿ ವಿಪರೀತ ಏರುತ್ತಿರುವ ದೇಶದ್ರೋಹ ಪ್ರಕರಣಗಳ ಸಂಖ್ಯೆ!

2010 ರಿಂದೀಚೆಗೆ 11,000 ವ್ಯಕ್ತಿಗಳ ಮೇಲೆ 816 ದೇಶದ್ರೋಹ ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ 65% ಪ್ರಕರಣಗಳು ಮೋದಿ ಅಧಿಕಾರ ವಹಿಸಿಕೊಂಡ ನಂತರ ದಾಖಲಾಗಿವೆ.
ಮೋದಿ ಅಧಿಕಾರವಧಿಯಲ್ಲಿ ವಿಪರೀತ ಏರುತ್ತಿರುವ ದೇಶದ್ರೋಹ ಪ್ರಕರಣಗಳ ಸಂಖ್ಯೆ!

ರೈತರ ಪ್ರತಿಭಟನೆಯನ್ನು‌ ವರದಿ ಮಾಡಿದ ಆರು ವರದಿಗಾರರ ಮೇಲೆ ಮತ್ತು ಮಾಜಿ ಉಪ ವಿದೇಶಾಂಗ ಸಚಿವ ಶಶಿ ತರೂರ್ ಅವರ ವಿರುದ್ಧ ದೆಹಲಿ ಪೊಲೀಸರಿಂದ ಸಲ್ಲಿಕೆಯಾಗಿರುವ ಎಫ್‌ಐಆರ್ ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳ ಸ್ಪಷ್ಟ ಉಲ್ಲಂಘನೆಯಾಗಿದೆ. 2014ರಲ್ಲಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ದೇಶದ್ರೋಹದ ಪ್ರಕರಣಗಳು ದಾಖಲಾಗುತ್ತಿದೆ ಎಂದು ಮಾಹಿತಿಗಳು ತಿಳಿಸುತ್ತವೆ.

2010 ರಿಂದೀಚೆಗೆ 816 ದೇಶದ್ರೋಹ ಪ್ರಕರಣಗಳು ದಾಖಲಾಗಿದ್ದು ಸುಮಾರು 11,000 ವ್ಯಕ್ತಿಗಳ ಮೇಲೆ ಕೇಸು ದಾಖಲಾಗಿವೆ. ಅದರಲ್ಲಿ 65% ಪ್ರಕರಣಗಳು ಮೋದಿಯವರು 2014ರಲ್ಲಿ ಅಧಿಕಾರ ವಹಿಸಿಕೊಂಡ ನಂತರ ದಾಖಲಾಗಿವೆ. ದೇಶದ್ರೋಹದ ಆರೋಪ ಹೊತ್ತವರಲ್ಲಿ ವಿರೋಧ ಪಕ್ಷದ ರಾಜಕಾರಣಿಗಳು, ವಿದ್ಯಾರ್ಥಿಗಳು, ಪತ್ರಕರ್ತರು, ಲೇಖಕರು ಮತ್ತು ಶಿಕ್ಷಣ ತಜ್ಞರೇ ಅಧಿಕ. ರಾಜಕಾರಣಿಗಳು ಮತ್ತು ಸರ್ಕಾರಗಳನ್ನು ಟೀಕಿಸಿದ್ದಕ್ಕಾಗಿ 405 ಭಾರತೀಯರ ವಿರುದ್ಧ 96% ದೇಶದ್ರೋಹ ಪ್ರಕರಣಗಳು 2014 ರ ನಂತರ ದಾಖಲಾಗಿದ್ದು, 149 ಮಂದಿ ಮೋದಿ ವಿರುದ್ಧ 'ವಿಮರ್ಶಾತ್ಮಕ' ಅಥವಾ 'ಅವಹೇಳನಕಾರಿ' ಹೇಳಿಕೆಗಳನ್ನು ನೀಡಿದ್ದಾರೆ ಎಂದೂ 144 ಮಂದಿ ವಿರುದ್ಧ ಉತ್ತರ ಪ್ರದೇಶ (ಯುಪಿ) ಮುಖ್ಯಮಂತ್ರಿ ವಿರುದ್ಧ ಯೋಗಿ ಆದಿತ್ಯನಾಥ್ ಬಗ್ಗೆ ಮಾತಾಡಿದ್ದಾರೆ ಎಂದೂ ಕೇಸು ದಾಖಲಾಗಿವೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಯುಪಿಎ ಆಡಳಿತದ ಎರಡನೇ ಅವಧಿಯ (2010 ಮತ್ತು 2014 ರ ನಡುವಿನ) ವಾರ್ಷಿಕ ಸರಾಸರಿಗೆ ಹೋಲಿಸಿದರೆ, 2014 ಮತ್ತು 2020 ರ ನಡುವೆ ಪ್ರತಿ ವರ್ಷ ದಾಖಲಾದ ದೇಶದ್ರೋಹ ಪ್ರಕರಣಗಳ ಸಂಖ್ಯೆಯಲ್ಲಿ 28% ಹೆಚ್ಚಳವಾಗಿದೆ.

ಇವುಗಳಲ್ಲಿ ಬಹುತೇಕ ಪ್ರಕರಣಗಳು ಸರ್ಕಾರದ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ದಾಖಲಾಗಿವೆ. ಸಿಎಎ ವಿರೋಧಿ ಪ್ರತಿಭಟನೆ ವೇಳೆ, ಬಿಜೆಪಿ ಆಡಳಿತದ ರಾಜ್ಯಗಳಲ್ಲಿ 3,700 ಜನರನ್ನು ಒಳಗೊಂಡ 25 ದೇಶದ್ರೋಹ ಪ್ರಕರಣಗಳು ದಾಖಲಾಗಿವೆ. ಪುಲ್ವಾಮಾ ದಾಳಿಯ ನಂತರ, 42 ಜನರನ್ನು ಒಳಗೊಂಡ 27 ದೇಶದ್ರೋಹ ಪ್ರಕರಣಗಳಲ್ಲಿ 26 ಪ್ರಕರಣಗಳನ್ನು ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ದಾಖಲಿಸಲಾಗಿದೆ.

ಅತಿ ಹೆಚ್ಚು ದೇಶದ್ರೋಹ ಪ್ರಕರಣಗಳು ದಾಖಲಾಗಿರುವ ನಾಲ್ಕು ರಾಜ್ಯಗಳಾದ ಯುಪಿ, ಕರ್ನಾಟಕ, ಬಿಹಾರ ಮತ್ತು ಜಾರ್ಖಂಡ್‌ಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ.

ಮೋದಿ ಅಧಿಕಾರವಧಿಯಲ್ಲಿ ವಿಪರೀತ ಏರುತ್ತಿರುವ ದೇಶದ್ರೋಹ ಪ್ರಕರಣಗಳ ಸಂಖ್ಯೆ!
ದೇಶದ್ರೋಹ ಎಂದರೇನು? ಬದಲಾಯಿತೇ ದೇಶದ್ರೋಹದ ವ್ಯಾಖ್ಯಾನ?

'Article 14' ಎನ್ನುವ ವೆಬ್ಸೈಟ್ ಕಳೆದ ಆರು ತಿಂಗಳುಗಳಿಂದ ವಿವಿಧ ಮೂಲಗಳಿಂದ ಈ ದೇಶ ದ್ರೋಹ ಪ್ರಕರಣಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದು ಈ ಪ್ರಕ್ರಿಯೆ ಇನ್ನೂ ಮುಂದುವರಿಯಲಿದೆ ಎನ್ನುತ್ತದೆ. ಜನವರಿ 1, 2010 ಮತ್ತು ಡಿಸೆಂಬರ್ 31, 2020 ರ ನಡುವೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 124ರ ಅಡಿಯಲ್ಲಿ ದಾಖಲಾದ ಎಲ್ಲಾ‌ ಪ್ರಕರಣಗಳನ್ನು ಕ್ರೋಡೀಕರಿಸಿ ಈ ಅಂಕಿ ಅಂಶಗಳನ್ನು ನೀಡಲಾಗಿದೆ. ಐಪಿಸಿ ಸೆಕ್ಷನ್124ಕ್ಕೆ 150 ವರ್ಷಗಳ ಇತಿಹಾಸವಿದ್ದು ಬ್ರಿಟಿಷ್ ಸರ್ಕಾರವು ಭಾರತೀಯರ ವಿರುದ್ಧ ಈ ಕಾನೂನನ್ನು ಬಳಸುತ್ತಿತ್ತು.

"ದತ್ತಾಂಶಗಳನ್ನು ಅವಲೋಕಿಸಿದರೆ ಕಾನೂನಿನ ದುರುಪಯೋಗವಾಗುತ್ತಿಲ್ಲ, ಬದಲಾಗಿ ಕಾನೂನೇ ದುರುಪಯೋಗವಾಗುತ್ತಿದೆ ಎಂಬುವುದು ಸ್ಪಷ್ಟವಾಗುತ್ತದೆ" ಎನ್ನುತ್ತಾರೆ ಸುಪ್ರೀಂ ಕೋರ್ಟ್ ಮಾಜಿ ನ್ಯಾಯಾಧೀಶರಾದ ಮದನ್ ಲೋಕೂರ್ ಅವರು. "ಪ್ರಕರಣಗಳ ಸಂಕ್ಷಿಪ್ತ ವಿವರಣೆಯಿಂದ, ಕೇದಾರನಾಥ್ ಸಿಂಗ್ ಮತ್ತು ಬಲ್ವಂತ್ ಸಿಂಗ್ ಅವರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಉಲ್ಲಂಘಿಸಲಾಗುತ್ತಿದೆ ಎಂದು ತೋರುತ್ತದೆ" ಎಂದು ಅವರು ಹೇಳಿದ್ದಾರೆ.

ಲೋಕೂರ್ ಅವರ ಪ್ರಕಾರ ದೇಶ ದ್ರೋಹದ ಪ್ರಕರಣವನ್ನು ಹಿಂಸೆಗೆ ಪ್ರಚೋದನೆ ನೀಡಿದಾಗ ಮತ್ತು ಕಾನೂನು ವ್ಯವಸ್ಥೆಯನ್ನು ದುರ್ಬಲಗೊಳಿಸುವ ಉದ್ದೇಶ ಇದ್ದಾಗ ಮಾತ್ರ ಬಳಸಬಹುದು.

ಮೋದಿ ಅಧಿಕಾರವಧಿಯಲ್ಲಿ ವಿಪರೀತ ಏರುತ್ತಿರುವ ದೇಶದ್ರೋಹ ಪ್ರಕರಣಗಳ ಸಂಖ್ಯೆ!
ಗ್ರೆಟ್ಟಾ ಹಂಚಿದ 'ಟೂಲ್‌ಕಿಟ್' ಸೃಷ್ಟಿಕರ್ತರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು

ಈ ದತ್ತಾಂಶ ಸಂಗ್ರಹದ ಮುಖ್ಯಸ್ಥರಾಗಿರುವ ವಕೀಲ ಲುಭ್ಯಾತಿ ರಂಗರಾಜನ್ ಅವರು " ನಮ್ಮ ಪ್ರಯತ್ನವು ಶಿಕ್ಷೆಯ ಬಗ್ಗೆ ಬೆಳಕು ಚೆಲ್ಲುವುದು ಮಾತ್ರವಲ್ಲದೆ ಜನ ಜೀವನದ ಮೇಲೆ ಉಂಟು ಮಾಡುವ ಆಘಾತಕಾರಿ ಪರಿಣಾಮದ ಬಗ್ಗೆಯೂ ಅಭ್ಯಸಿಸುವುದು" ಎನ್ನುತ್ತಾರೆ.

ಹಿಂದಿನ ಯುಪಿಎ -2 ಸರ್ಕಾರದ ಅಧಿಕಾರಾವಧಿಯಲ್ಲಿ ದಾಖಲಾದ 279 ಪ್ರಕರಣಗಳಿಗೆ ಹೋಲಿಸಿದರೆ, ಪ್ರಸ್ತುತ ಬಿಜೆಪಿ ಸರ್ಕಾರದ ಅಡಿಯಲ್ಲಿ ಆರು ವರ್ಷಗಳಲ್ಲಿ 519 ದೇಶದ್ರೋಹ ಪ್ರಕರಣಗಳು ದಾಖಲಾಗಿವೆ. 279 ರಲ್ಲಿ, 39% ರಷ್ಟು ತಮಿಳುನಾಡಿನಲ್ಲಿ ನಡೆದ ಕುಡುಂಕುಲಂ ಪ್ರತಿಭಟನೆಯ ಸಮಯದಲ್ಲಿ, ಪರಮಾಣು ಸ್ಥಾವರ ವಿರುದ್ಧ ‌ಮತ್ತು ಎಡಪಂಥೀಯ ಉಗ್ರವಾದಕ್ಕೆ ಸಂಬಂಧಿಸಿದಂತೆ ದಾಖಲಾಗಿದ್ದವು.

ಕೇವಲ ಪೋಸ್ಟರ್‌ಗಳನ್ನು ಹಿಡಿದಿಟ್ಟುಕೊಳ್ಳುವುದರಿಂದ ಹಿಡಿದು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳವರೆಗೆ, ಘೋಷಣೆಗಳನ್ನು ಕೂಗಿರುವುದಕ್ಕೆ ಮತ್ತು ಖಾಸಗಿ ಸಂವಹನಕ್ಕೂ ದೇಶದ್ರೋಹ‌ ಪ್ರಕರಣ ದಾಖಲಿಸಲಾಗಿದೆ ಎಂದು ಡೇಟಾಬೇಸ್ ಕಂಡುಹಿಡಿದಿದೆ.

ಮೋದಿ ಅಧಿಕಾರವಧಿಯಲ್ಲಿ ವಿಪರೀತ ಏರುತ್ತಿರುವ ದೇಶದ್ರೋಹ ಪ್ರಕರಣಗಳ ಸಂಖ್ಯೆ!
ದೆಹಲಿ ಟ್ರ್ಯಾಕ್ಟರ್‌ ಮೆರವಣಿಗೆ: ತರೂರ್‌ ಸೇರಿ 6 ಪತ್ರಕರ್ತರ ಮೇಲೆ ದೇಶದ್ರೋಹ ಪ್ರಕರಣ

ಸುಮಾರು 30% ಪ್ರಕರಣಗಳಲ್ಲಿ, ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆ (UAPA) 1967, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ತಡೆಗಟ್ಟುವಿಕೆ ಕಾಯ್ದೆ 1984, ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ, 2000, ರಾಷ್ಟ್ರೀಯ ಗೌರವದ ಅವಮಾನಗಳ ತಡೆಗಟ್ಟುವಿಕೆ ಕಾಯ್ದೆ 1971 , ಸಾಂಕ್ರಾಮಿಕ ರೋಗಗಳ ಕಾಯ್ದೆ 1897, ವಿಪತ್ತು ನಿರ್ವಹಣಾ ಕಾಯ್ದೆ 2005 ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಐದು ರಾಜ್ಯಗಳಾದ ಬಿಹಾರ, ಕರ್ನಾಟಕ, ಜಾರ್ಖಂಡ್, ಉತ್ತರ ಪ್ರದೇಶ ಮತ್ತು ತಮಿಳುನಾಡುಗಳಲ್ಲಿ ಒಟ್ಟು 534 ಪ್ರಕರಣಗಳು ದಾಖಲಾಗಿವೆ ಎಂದು ಡೇಟಾಬೇಸ್ ಸೂಚಿಸುತ್ತದೆ. ಅಂದರೆ ಇದು ಕಳೆದ ದಶಕದಲ್ಲಿ ನಡೆದ ಎಲ್ಲಾ ದೇಶದ್ರೋಹ ಪ್ರಕರಣಗಳಲ್ಲಿ ಸುಮಾರು 65% ಪ್ರಕರಣಗಳು ಈ ಐದು ರಾಜ್ಯಗಳಲ್ಲೇ ದಾಖಲಾಗಿವೆ.

ಉತ್ತರ ಪ್ರದೇಶ ಮತ್ತು ಕರ್ನಾಟಕದ ಪ್ರಕರಣಗಳು 'ರಾಷ್ಟ್ರೀಯತೆ' ಸಂಬಂಧಿತ ಅಪರಾಧಗಳ ಮೇಲೆ ಕೇಂದ್ರೀಕೃತವಾಗಿದ್ದರೆ, ಮಧ್ಯ ಮತ್ತು ಪೂರ್ವ ಭಾರತದ ರಾಜ್ಯಗಳಲ್ಲಿ ಹೆಚ್ಚಾಗಿ ಎಡಪಂಥೀಯ ಉಗ್ರವಾದ ಮತ್ತು ಭೂಮಿ ಕಳೆದುಕೊಂಡವರ ಪ್ರತಿಭಟನೆಯಲ್ಲಿ ಭಾಗಿಯಾಗಿರುವವರ ವಿರುದ್ಧ ದೇಶದ್ರೋಹ ಕಾನೂನನ್ನು ಹೇರಲಾಗಿದೆ.

ಮೋದಿ ಅಧಿಕಾರವಧಿಯಲ್ಲಿ ವಿಪರೀತ ಏರುತ್ತಿರುವ ದೇಶದ್ರೋಹ ಪ್ರಕರಣಗಳ ಸಂಖ್ಯೆ!
ಮಣಿಪುರ: ದೇಶದ್ರೋಹ ಪ್ರಕರಣದಡಿಯಲ್ಲಿ ಪತ್ರಕರ್ತರ ಬಂಧನ

ಕಳೆದ ಒಂದು ದಶಕದಲ್ಲಿ ದೇಶದ್ರೋಹದ ಆರೋಪ ಹೊತ್ತಿರುವ 10,938 ಭಾರತೀಯರಲ್ಲಿ, 65% ಜನರು ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕೇಸು ದಾಖಲಿಸಿಕೊಂಡಿದ್ದಾರೆ. ಸರ್ಕಾರದ ನಿರ್ಧಾರವನ್ನು ಪ್ರತಿಭಟಿಸಿದವರ ಮೇಲೆ ದೇಶದ್ರೋಹದ ಕೇಸ್ ದಾಖಲಿಸುವ ಹೊಸ ಸಂಪ್ರದಾಯ ಹುಟ್ಟು ಹಾಕಿದ್ದೇ ಬಿಜೆಪಿ ಸರ್ಕಾರ ಅದರಲ್ಲೂ ಯುಪಿಯ ಯೋಗಿ ಸರ್ಕಾರ.

ಕೇಂದ್ರ ಮತ್ತು ರಾಜ್ಯಗಳಲ್ಲಿ ಬಿಜೆಪಿ ಸರ್ಕಾರವನ್ನು ಟೀಕಿಸುವ ಪ್ರಮುಖ ಪ್ರತಿಭಟನೆಗಳು ಅಥವಾ ರಾಜಕೀಯ ಘಟನೆಗಳ ಸಂದರ್ಭದಲ್ಲಿ ದೇಶದ್ರೋಹ ಪ್ರಕರಣಗಳು ಹೆಚ್ಚಾದದ್ದನ್ನು ಡೇಟಾಬೇಸ್ ಗುರುತಿಸಿದೆ.

ಪಾಟೀದಾರ್ ಮತ್ತು ಜಾಟ್ ಆಂದೋಲನಗಳ ನಾಯಕರ ಮೇಲೆ 2015 ಮತ್ತು 2016 ರಲ್ಲಿ ಕೇಸ್ ದಾಖಲಾದರೆ, ಸಿಎಎ ವಿರುದ್ಧ ಪ್ರತಿಭಟನೆಯಲ್ಲಿ ದೇಶಾದ್ಯಂತ, ಪೊಲೀಸ್ ಅಧಿಕಾರಿಗಳು 3,754 ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಮತ್ತು 25 ದೇಶದ್ರೋಹ ಪ್ರಕರಣಗಳನ್ನು ದಾಖಲಿಸಿದ್ದಾರೆ, ಅದರಲ್ಲಿ 96 ಜನರನ್ನು ಗುರುತಿಸಲಾಗಿದೆ ಮತ್ತು ಉಳಿದವರನ್ನು 'ಗುರುತಿಸಲಾಗಿಲ್ಲ'. 2019ರ ಪುಲ್ವಾಮಾ ದಾಳಿಯ ಬಳಿಕ 27 ಪ್ರಕರಣಗಳನ್ನು ದಾಖಲಿಸಲಾಗಿದೆ.

ಮೋದಿ ಅಧಿಕಾರವಧಿಯಲ್ಲಿ ವಿಪರೀತ ಏರುತ್ತಿರುವ ದೇಶದ್ರೋಹ ಪ್ರಕರಣಗಳ ಸಂಖ್ಯೆ!
ಹಥ್ರಾಸ್: ಪತ್ರಕರ್ತ ಸೇರಿ ನಾಲ್ವರ ಮೇಲೆ UAPA, ದೇಶದ್ರೋಹ ಪ್ರಕರಣ ದಾಖಲು

ಇತ್ತೀಚೆಗೆ, ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಹತ್ರಾಸ್ ಜಿಲ್ಲೆಯಲ್ಲಿ ನಡೆದ ಕ್ರೂರ ಸಾಮೂಹಿಕ ಅತ್ಯಾಚಾರಕ್ಕೆ ಬಲಿಯಾದ 19 ವರ್ಷದ ದಲಿತ‌ ಯುವತಿಯ ಸಾವಿನ ನಂತರ ಪ್ರತಿಭಟನೆಗಳು ನಡೆದಾಗ, ಯುಪಿ ಸರ್ಕಾರವು ಕನಿಷ್ಠ 18 ಅಪರಿಚಿತ ವ್ಯಕ್ತಿಗಳ ಮತ್ತು ಓರ್ವ ಪತ್ರಕರ್ತ ಮತ್ತು ರಾಜಕಾರಣಿ ಸೇರಿದಂತೆ ಐವರು ಪರಿಚಿತ ವ್ಯಕ್ತಿಗಳ ವಿರುದ್ಧ 22 ದೇಶದ್ರೋಹದ ಪ್ರಕರಣಗಳನ್ನು ದಾಖಲಿಸಿದೆ.

ಕಳೆದ ಆರು ವರ್ಷಗಳಲ್ಲಿ, ಮೋದಿ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರು ದೇಶದ್ರೋಹ ಕಾನೂನನ್ನು ಬೆಂಬಲಿಸುತ್ತಾ ಬಂದಿದ್ದಾರೆ. 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ದೇಶದ್ರೋಹದ ಕಾನೂನನ್ನು ರದ್ದುಗೊಳಿಸುವ ಭರವಸೆ ನೀಡಿದಾಗ, ಈ ಕ್ರಮವನ್ನು ಅಪಹಾಸ್ಯ ಮಾಡಿದ‌‌ ಮೋದಿ "ಮತ್ತೆ ಅಧಿಕಾರಕ್ಕೆ ಬರಲು ಕಾಂಗ್ರೆಸ್ ಎಷ್ಟು ಕೆಳಮಟ್ಟಕ್ಕೆ ಬೇಕಾದರೂ ಇಳಿಯಬಲ್ಲುದು " ಎಂದು ಆರೋಪಿಸಿದ್ದರು.

ಮೋದಿ ಅಧಿಕಾರವಧಿಯಲ್ಲಿ ವಿಪರೀತ ಏರುತ್ತಿರುವ ದೇಶದ್ರೋಹ ಪ್ರಕರಣಗಳ ಸಂಖ್ಯೆ!
ಕನ್ಹಯ್ಯ ಕುಮಾರ್ to ಅಮೂಲ್ಯ; ದೇಶದ್ರೋಹ ಪ್ರಕರಣ ಮತ್ತು ಭಾರತೀಯ ದಂಡ ಸಂಹಿತೆ!

ಯೋಗಿ ಮತ್ತು ಮೋದಿ ಸೇರಿದಂತೆ ಸರ್ಕಾರ ಮತ್ತು ಪಕ್ಷದ ಮುಖಂಡರನ್ನು ಟೀಕಿಸುವವರ ಮೇಲೆ ಯುಪಿ ಸರ್ಕಾರ ಕಠಿಣವಾಗಿ ನಡೆದುಕೊಳ್ಳುತ್ತಾ ಬಂದಿದೆ. ಅಂತಹ 149 ವಿಮರ್ಶಕರ ವಿರುದ್ಧ ಕನಿಷ್ಠ 18 ದೇಶದ್ರೋಹ ಪ್ರಕರಣಗಳು ದಾಖಲಾಗಿವೆ. ಯುಪಿ ದೇಶದ್ರೋಹದ ಆರೋಪಿಗಳ ಪಟ್ಟಿಯಲ್ಲಿ ಕಾಂಗ್ರೆಸ್ ’ಡಿಜಿಟಲ್ ತಂಡದ ಮಾಜಿ ಮುಖ್ಯಸ್ಥೆ ಕರ್ನಾಟಕದ ರಮ್ಯಾ ಮತ್ತು ಆಮ್ ಆದ್ಮಿ ಪಕ್ಷದ ಸಂಸತ್ ಸದಸ್ಯ ಸಂಜಯ್ ಸಿಂಗ್ ಕೂಡಾ ಸೇರಿದ್ದಾರೆ.

ಹೆಚ್ಚು ದೇಶದ್ರೋಹ ಪ್ರಕರಣಗಳನ್ನು ಹೊಂದಿರುವ ಮೊದಲ ಐದು ರಾಜ್ಯಗಳಲ್ಲಿ ಬಿಜೆಪಿ ಅಲ್ಲದ ಏಕೈಕ ರಾಜ್ಯವಾಗಿದೆ ತಮಿಳುನಾಡು. ಈ ರಾಜ್ಯ ಕಳೆದ ದಶಕದಲ್ಲಿ 139 ಪ್ರಕರಣಗಳನ್ನು ದಾಖಲಿಸಿದೆ ಇವುಗಳಲ್ಲಿ ಸುಮಾರು 80% ಜೆ. ಜಯಲಲಿತಾ ನೇತೃತ್ವದ ಸರ್ಕಾರವು ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯಲ್ಲಿ ಕುಡಂಕುಲಂ ಪರಮಾಣು ಸ್ಥಾವರ ನಿರ್ಮಾಣದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವವರ ವಿರುದ್ಧ ದಾಖಲಿಸಿದೆ.

ಮೋದಿ ಅಧಿಕಾರವಧಿಯಲ್ಲಿ ವಿಪರೀತ ಏರುತ್ತಿರುವ ದೇಶದ್ರೋಹ ಪ್ರಕರಣಗಳ ಸಂಖ್ಯೆ!
ಯಾವುದು ಪ್ರಚೋದನೆ? ಯಾವುದು ದೇಶದ್ರೋಹ? ದೇಶದಲ್ಲಿ ಶುರುವಾಯ್ತಾ ಭಯದ ವಾತಾವರಣ?

2016ರಲ್ಲಿ ತಮಿಳುನಾಡಿನ ಎಸ್.ಪಿ ಉದಯ ಕುಮಾರನ್ ಎನ್ನುವವರು ತನ್ನ ವಿರುದ್ಧದ ದೇಶದ್ರೋಹದ ಆರೋಪದ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾಗ ಪ್ರಕರಣದ ವಿಚಾರಣೆ ನಡೆಸಿದ್ದ ಕೋರ್ಟ್ "ಸರ್ಕಾರದ ವಿರುದ್ದ ಬಲವಾದ ಭಾಷೆ ಬಳಸುವುದನ್ನು ಮತ್ತು ಭಾಷಣ ಮಾಡುವುದನ್ನು ದೇಶ ದ್ರೋಹ ಎಂದು ಪರಿಗಣಿಸಲಾಗುವುದಿಲ್ಲ " ಎಂದು ತೀರ್ಪು ನೀಡಿತ್ತು.

ಹಾಗೆಯೇ, 1995 ರಲ್ಲಿ ಬಲ್ವಂತ್ ಸಿಂಗ್ ಮತ್ತು ಭೂಪಿಂದರ್ ಸಿಂಗ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ " ಘೋಷಣೆಗಳು 'ಯಾವುದೇ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳನ್ನು ಸೃಷ್ಟಿಸಿಲ್ಲದಿದ್ದರೆ' ಅಥವಾ 'ಜನರನ್ನು ಪ್ರಚೋದಿಸುವ' ಉದ್ದೇಶವಿಲ್ಲದಾಗ 'ಘೋಷಣೆಗಳನ್ನು ಸಾಂದರ್ಭಿಕವಾಗಿ ಹೆಚ್ಚಿಸುವುದ'ನ್ನು ದೇಶದ್ರೋಹವೆಂದು ಪರಿಗಣಿಸಲಾಗುವುದಿಲ್ಲ" ಎಂದಿತ್ತು.

ಮೋದಿ ಅಧಿಕಾರವಧಿಯಲ್ಲಿ ವಿಪರೀತ ಏರುತ್ತಿರುವ ದೇಶದ್ರೋಹ ಪ್ರಕರಣಗಳ ಸಂಖ್ಯೆ!
ಹೆಚ್ಚುತ್ತಿದೆ `ದೇಶದ್ರೋಹ’ ಪ್ರಕರಣಗಳು - ರಾಷ್ಟ್ರೀಯ ಅಪರಾಧ ವರದಿ

ಹೀಗಿದ್ದೂ, ಕಳೆದ ಒಂದು ದಶಕದಲ್ಲಿ ರಾಷ್ಟ್ರೀಯ ನಾಯಕರು ಮತ್ತು ಸರ್ಕಾರಗಳನ್ನು ಟೀಕಿಸಿದ್ದಕ್ಕಾಗಿ ಕನಿಷ್ಠ 405 ವ್ಯಕ್ತಿಗಳ ಮೇಲೆ ದೇಶದ್ರೋಹದ ಆರೋಪ ಹೊರಿಸಲಾಗಿದೆ. ಈ ಪೈಕಿ 96% ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರದ ಪ್ರಕರಣಗಳು.

ಈ ದತ್ತಾಂಶಗಳನ್ನು ಅಮೂಲಾಗ್ರವಾಗಿ ಪರಿಶೀಲಿಸಿರುವ ನಿವೃತ್ತ ನ್ಯಾಯಮೂರ್ತಿ ಲೋಕೂರ್ ಅವರ ಪ್ರಕಾರ ಸರ್ಕಾರದ ಇಂತಹ ಪ್ರವೃತ್ತಿಗಳು ದೇಶಕ್ಕೆ 'ಮಾರಕ' ಮತ್ತು 'ಅಶುಭ ಸಂಕೇತಗಳು'. "ಭಿನ್ನಾಭಿಪ್ರಾಯಗಳನ್ನು ಅಪರಾಧೀಕರಿಸುವ ಸ್ಪಷ್ಟ ಸೂಚನೆಯಿದು. ಅಸಮ್ಮತಿಯು ಅಪರಾಧವೆಂದಾದರೆ, ಅದು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನ ಅಂತ್ಯವೂ ಆಗಿದೆ" ಎನ್ನುತ್ತಾರೆ ಅವರು.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com