ರೈತರ ರಸ್ತೆ ತಡೆ ಚಳವಳಿ – ದೆಹಲಿಯಲ್ಲಿ ಹೈ ಅಲರ್ಟ್

ದೆಹಲಿಯ NCR ಪ್ರದೇಶದಲ್ಲಿ 50 ಸಾವಿರ ಪೊಲೀಸ್, ಅರೆ ಸೈನ್ಯ, ಮೀಸಲು ಪಡೆಯ ಸಿಬ್ಬಂದಿಗಳನ್ನು ನೇಮಿಸಲಾಗಿದೆ. ನಗರದ 12 ಮೆಟ್ರೋ ಸ್ಟೇಷನ್‌ಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. 8 ನಿಲ್ದಾಣಗಳಲ್ಲಿ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರೈತರ ರಸ್ತೆ ತಡೆ ಚಳವಳಿ – ದೆಹಲಿಯಲ್ಲಿ ಹೈ ಅಲರ್ಟ್

ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೇಶದ ರೈತರಿಂದ ರಸ್ತೆ ತಡೆ ಚಳುವಳಿಯನ್ನು ನಡೆಸಲಾಗುತ್ತಿದೆ. ಹೆಚ್ಚುವರಿ ಪೊಲೀಸ್ ಭದ್ರತೆಯ ಜೊತೆಗೆ ಅಧಿಕ ಸಂಖ್ಯೆಯಲ್ಲಿ ಬ್ಯಾರಿಕೇಡ್ ಹಾಕುವುದರ ಮೂಲಕ ರಾಷ್ಟ್ರರಾಜಧಾನಿ ದೆಹಲಿ ಕಟ್ಟುನಿಟ್ಟಿನ ಭದ್ರೆತೆಯನ್ನು ಆಯೋಜಿಸಲಾಗಿದೆ.

ಕೇಂದ್ರದ ಮೂರು ವಿವಾದಾತ್ಮಕ ಕೃಷಿಕಾಯ್ದೆಗಳನ್ನು ವಿರೋಧಿಸಿ ದೆಹಲಿ ಭಾಗದಲ್ಲಿ ರೈತರು 70 ಕ್ಕೂ ಹೆಚ್ಚು ದಿನಗಳಿಂದ ನಿರಂತರವಾಗಿ ಶಾಂತಿಯುತವಾದ ಹೋರಾಟ ನಡೆಸುತ್ತಿದ್ದಾರೆ. ಜನವರಿ 26 ರ ರೈತರ ಟ್ರ್ಯಾಕ್ಟರ್ ಮೆರವಣಿಗೆಯ ವೇಳೆ ದೆಹಲಿಯಲ್ಲಿ ಕೆಲವು ಕಿಡಿಗೇಡಿಗಳ ಕಾರಣದಿಂದ ಉಂಟಾದ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಪೊಲೀಸರು ಫೆಬ್ರವರಿ 6 ರಂದು ರೈತರು ನಡೆಸುತ್ತಿರುವ ಶಾಂತಿಯುತ ರಸ್ತೆ ತಡೆ ಚಳವಳಿಗೆ ದೆಹಲಿಯ ಕೆಂಪುಕೋಟೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶ ಬಿಗಿ ಭದ್ರತೆಯನ್ನು ಒದಗಿಸಿದ್ದಾರೆ.

ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ರೈತರು ಪ್ರತಿಭಟಿಸುತ್ತಿರುವ ದೆಹಲಿಯ ಗಡಿಭಾಗಗಳಾದ ಟಿಕ್ರಿ, ಸಿಂಘು, ಗಾಝೀಪುರ ಭಾಗಗಳಲ್ಲಿ ಪೊಲೀಸರು ಭದ್ರತೆಯ ಜೊತೆಗೆ ಹದ್ದಿನ ಕಣ್ಣಿರಿಸಿದ್ದಾರೆ. ದೆಹಲಿಯ NCR ಪ್ರದೇಶದಲ್ಲಿ 50 ಸಾವಿರ ಪೊಲೀಸ್, ಅರೆ ಸೈನ್ಯ, ಮೀಸಲು ಪಡೆಯ ಸಿಬ್ಬಂದಿಗಳನ್ನು ನೇಮಿಸಲಾಗಿದೆ. ನಗರದ 12 ಮೆಟ್ರೋ ಸ್ಟೇಷನ್‌ಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. 8 ನಿಲ್ದಾಣಗಳಲ್ಲಿ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜನವರಿ 26 ಗಣರಾಜೋತ್ಸವದಂದು ನಡೆದ ಹಿಂಚಾರದ ಹಿನ್ನಲೆ, ಭದ್ರತೆಯನ್ನು ಹೆಚ್ಚು ಬಲಪಡಿಸಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಪರಿಸ್ಥಿತಿಯ ವೈಮಾನಿಕ ವೀಕ್ಷಣೆಗೆ ಡ್ರೋನ್‌ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಎಎನ್ಐ ಗೆ ತಿಳಿಸಿದ್ದಾರೆ.

ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಸುಳ್ಳು ಮತ್ತು ಪ್ರಚೋದನಾಕಾರಿ ಮಾಹಿತಿ ಹಂಚಿಕೊಂಡವರ ಮೇಲೆ ಕ್ರಮ ಕೈಗೊಳ್ಳಲು ಸಾಮಾಜಿಕ ಮಾಧ್ಯಮಗಳ ಮೇಲೆ ಕಣ್ಣಿರಿಸಲಾಗಿದೆ. ಈ ನಿಟ್ಟಿನಲ್ಲಿ ಇತರೆ ರಾಜ್ಯಗಳ ಪೊಲೀಸ್ ಪಡೆಯೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ಪೊಲೀಸ್ ವಕ್ತಾರ ಚಿನ್ಮೊಯ್ ಬಿಸ್ವಾಲ್ ತಿಳಿಸಿದ್ದಾರೆ.

ದೇಶಾದ್ಯಂತ ರೈತರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಫೆಬ್ರವರಿ 6 ರಂದು ದೇಶದಲ್ಲಿ ಮೂರು ಗಂಟೆಗಳ ಕಾಲ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ರಸ್ತೆ ತಡೆ ಚಳವಳಿಯನ್ನು ನಡೆಸಲಾಗುತ್ತದೆ. ಈ ವೇಳೆ ದೆಹಲಿ, ಉತ್ತರ ಪ್ರದೇಶ, ಉತ್ತರಾಖಂಡದಲ್ಲಿ ರಸ್ತೆಗಳನ್ನು ಬಂದ್ ಮಾಡುವುದಿಲ್ಲ ಎಂದು ಕಿಸಾನ್ ಮೋರ್ಚಾದ ರೈತ ಮುಖಂಡರು ತಿಳಿಸಿದ್ದಾರೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com