ಪಾಶ್ಚಾತ್ಯ ಸಂಸ್ಕೃತಿ ನಮ್ಮ ಮೇಲೆ ಪ್ರಭಾವ ಬೀರುವುದಿಲ್ಲವೇ? – ಕುನಾಲ್‌ ಕಮ್ರಾ ವ್ಯಂಗ್ಯ

ವಿದೇಶಿ ಪಾಪ್‌ ತಾರೆಯ ಆರು ಪದಗಳ ಟ್ವೀಟ್‌ ಹಾಗೂ ಒಂದು ಹ್ಯಾಶ್‌ಟ್ಯಾಗ್‌ ನಿಂದ ಸಂಪೂರ್ಣ ದೇಶವೇ ನಡುಗಿ ಹೋಯಿತು, ಎಂದು ಕುನಾಲ್‌ ಅಭಿಪ್ರಾಯ ಪಟ್ಟಿದ್ದಾರೆ.
ಪಾಶ್ಚಾತ್ಯ ಸಂಸ್ಕೃತಿ ನಮ್ಮ ಮೇಲೆ ಪ್ರಭಾವ ಬೀರುವುದಿಲ್ಲವೇ? – ಕುನಾಲ್‌ ಕಮ್ರಾ ವ್ಯಂಗ್ಯ

ಖ್ಯಾತ ತಾರೆ ರಿಹಾನ ಭಾರತದಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಯ ಕುರಿತು ಮಾಡಿರುವ ಟ್ವೀಟ್‌ ಎಲ್ಲರ ನಿದ್ದೆಗೆಡಿಸಿದೆ. ಚಲನಚಿತ್ರ ತಾರೆಯರು, ಕ್ರಿಕೆಟ್‌ ತಾರೆಯರು ಸೇರಿದಂತೆ ಹಲವಾರು ಜನರು ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಭಾರತದ ಸೆಲೆಬ್ರಿಟಿಗಳ ಪ್ರತಿಕ್ರಿಯೆಗೆ ವ್ಯಂಗ್ಯವಾಗಿ ಉತ್ತರ ನೀಡಿರುವ ಕುನಾಲ್‌ ಕಮ್ರಾ ರೈತರ ಪ್ರತಿಭಟನೆ ಜಗತ್ತಿಗೆ ತಿಳಿಯಲು ಪಾಶ್ಚಾತ್ಯರು ಬರಬೇಕಾಯಿತು ಎಂದು ಹೇಳಿದ್ದಾರೆ.

“ವಿದೇಶಿ ಪಾಪ್‌ ತಾರೆಯ ಆರು ಪದಗಳ ಟ್ವೀಟ್‌ ಹಾಗೂ ಒಂದು ಹ್ಯಾಶ್‌ಟ್ಯಾಗ್‌ ನಿಂದ ಸಂಪೂರ್ಣ ದೇಶವೇ ನಡುಗಿ ಹೋಯಿತು. ಆದರೆ, ಚಳಿಯಲ್ಲಿ ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡಿದರೂ ಇದು ಸಾಧ್ಯವಾಗಲಿಲ್ಲ. ಪಾಶ್ಚಾತ್ಯ ಸಂಸ್ಕೃತಿ ನಮ್ಮ ಮೇಲೆ ಪ್ರಭಾವ ಬೀರುವುದಿಲ್ಲ ಎಂದು ಇವರು ಹೇಳುತ್ತಾರೆ,” ಎಂದು ಕುನಾಲ್‌ ವ್ಯಂಗ್ಯವಾಡಿದ್ದಾರೆ.

ಕಳೆದ ಸುಮಾರು ಎರಡು ತಿಂಗಳಿನಿಂದ ರೈತರು ಮಳೆ-ಚಳಿಯೆನ್ನದೇ ದೆಹಲಿಯ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದರೆ, ಸರ್ಕಾರ ಅದನ್ನು ಮಟ್ಟ ಹಾಕುವ ಯತ್ನ ಮಾಡುತ್ತಿದೆ. ಪ್ರತಿಭಟನಾ ನಿರತ ಸ್ಥಳಗಳಲ್ಲಿ ಅಂತರ್ಜಾಲ ಸೇವೆಯನ್ನು ನಿರ್ಬಂಧಿಸಿದೆ. ಇದನ್ನು ಖಂಡಿಸಿ ಪಾಪ್‌ ತಾರೆ ರಿಹಾನಾ “ಇದರ ಕುರಿತು ಯಾರೂ ಮಾತನಾಡುತ್ತಿಲ್ಲ ಏಕೆ?” ಎಂದು ಪ್ರಶ್ನಿಸಿದ್ದರು. ಈ ಒಂದು ಟ್ವೀಟ್‌ ಪ್ರಪಂಚದಾದ್ಯಂತ ವೈರಲ್‌ ಆಗಿ, ಎಲ್ಲರೂ ಭಾರತದೆಡೆಗೆ ನೋಡುವ ಪರಿಸ್ಥಿತಿ ಎದುರಾಗಿದೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com