ʼರಿಹಾನ ಮುಸ್ಲಿಮಳೇ?ʼ ರೈತ ಪರ ನಿಂತ ಗಾಯಕಿಯ ಧರ್ಮ ಜಾಲಾಡಿದ ನೆಟ್ಟಿಗರು!

ರೈತ ಹೋರಾಟ ಪರವಾಗಿ ರಿಹಾನ ಟ್ವೀಟ್ ಮಾಡಿದ ಬೆನ್ನಿಗೆ, ರಿಹಾನಳ ಹೆಸರು ನೋಡಿಯೋ ಏನೋ ಹಲವಾರು ಮಂದಿ ಆಕೆಯ ಧರ್ಮಕ್ಕಾಗಿ ಗೂಗಲಿನಲ್ಲಿ ಜಾಲಾಡಿದ್ದಾರೆ
ʼರಿಹಾನ ಮುಸ್ಲಿಮಳೇ?ʼ ರೈತ ಪರ ನಿಂತ ಗಾಯಕಿಯ ಧರ್ಮ ಜಾಲಾಡಿದ ನೆಟ್ಟಿಗರು!
ʼರಿಹಾನ ಮುಸ್ಲಿಮಳೇ?ʼ ರೈತ ಪರ ನಿಂತ ಗಾಯಕಿಯ ಧರ್ಮ ಜಾಲಾಡಿದ ನೆಟ್ಟಿಗರು!
ಇಂಟರ್ನೆಟ್ ಸ್ಥಗಿತಗೊಳಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಛೀಮಾರಿ ಹಾಕಿಸಿಕೊಂಡ ಮೋದಿ ಸರ್ಕಾರ

ಕಳೆದ ಎರಡುವರೆ ತಿಂಗಳಿಗಿಂತಲೂ ಹೆಚ್ಚು ಕಾಲ ಪ್ರತಿಭಟನೆ ನಡೆಸುತ್ತಿರುವ ರೈತರ ಸುದ್ದಿಗಳಿಗೆ ಅಂತರಾಷ್ಟ್ರೀಯ ಖ್ಯಾತಿಯ ಪಾಪ್ ಗಾಯಕಿ ರಿಹಾನಳ ಒಂದು ಟ್ವೀಟ್ ಊಹಿಸದಂತಹ ಮೈಲೇಜ್ ಕೊಟ್ಟಿದೆ. ರಿಹಾನಳ ಟ್ವೀಟ್ ನೊಂದಿಗೆ ಅಂತರಾಷ್ಟ್ರೀಯ ಮಟ್ಟದ ಹಲವು ಸೆಲೆಬ್ರಿಟಿಗಳು ಪ್ರತಿಭಟನಾನಿರತ ರೈತರಿಗೆ ಬೆಂಬಲ ಘೋಷಿಸಿದ್ದಾರೆ.

ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ರೈತ ಹೋರಾಟ ಪರವಾಗಿ ರಿಹಾನ ಟ್ವೀಟ್ ಮಾಡಿದ ಬೆನ್ನಿಗೆ, ರಿಹಾನಳ ಹೆಸರು ನೋಡಿಯೋ ಏನೋ ಹಲವಾರು ಮಂದಿ ಆಕೆಯ ಧರ್ಮಕ್ಕಾಗಿ ಗೂಗಲಿನಲ್ಲಿ ಜಾಲಾಡಿದ್ದಾರೆ. 'Rihanna Religion' ಮತ್ತು 'Is Rihanna Muslim' ಎಂಬ ಟಾಪಿಕ್‌ಗಳು ಭಾರತದ ಗೂಗಲ್ ಸರ್ಚ್ ನಲ್ಲಿ ಟ್ರೆಂಡ್ ಆಗುತ್ತಿದೆ. ಈ ಕುರಿತು ಅನೇಕ ವಿನೋದಮಯ ಮೀಮ್ ಗಳು ಕೂಡಾ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಆದರೆ, 2019 ರಲ್ಲಿ ಅಮೆರಿಕಾದ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ರಿಹಾನ ಕ್ರಿಶ್ಚಿಯನ್‌ ಧರ್ಮವನ್ನು ಪಾಲಿಸುವುದಾಗಿ ಹೇಳಿಕೊಂಡಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.

ಇಂಗೆಂಡ್‌ ಸಂಸದೆ ಕ್ಲಾಡಿಯಾ ವೆಬ್ಬೆ, ಪರಿಸರ ಹೋರಾಟಗಾರ್ತಿಯರಾದ ಗ್ರೇಟಾ ಥನ್‌ಬರ್ಗ್, ಜಾಮಿ ಮಾರ್ಗಲಿನ್, ಅಮೇರಿಕದ ವ್ಲಾಗರ್‌ ಅಮಾಂಡ ಸೆರ್ನಿ, ಖ್ಯಾತ ಮಾಜಿ ನೀಲಿತಾರೆ ಮಿಯಾ ಕಲೀಫಾ ಮೊದಲಾದ ಅಂತರಾಷ್ಟ್ರೀಯ ಖ್ಯಾತಿಯ ಸೆಲೆಬ್ರಿಟಿಯರು ಭಾರತೀಯ ರೈತ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.

ʼರಿಹಾನ ಮುಸ್ಲಿಮಳೇ?ʼ ರೈತ ಪರ ನಿಂತ ಗಾಯಕಿಯ ಧರ್ಮ ಜಾಲಾಡಿದ ನೆಟ್ಟಿಗರು!
ಇಂಟರ್ನೆಟ್ ಸ್ಥಗಿತಗೊಳಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಛೀಮಾರಿ ಹಾಕಿಸಿಕೊಂಡ ಮೋದಿ ಸರ್ಕಾರ

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com