ಕ್ಯಾರವಾನ್, ಕಿಸಾನ್‌ ಏಕ್ತಾ ಮೋರ್ಚಾ ಸೇರಿ ಹಲವು ಟ್ವಿಟರ್‌ ಖಾತೆ ತಾತ್ಕಾಲಿಕ ಅಮಾನತು!

ದೆಹಲಿ ರೈತ ಹೋರಾಟಕ್ಕೆ ಸಂಬಂಧಿಸಿದ ಅಧಿಕೃತ ಟ್ವಿಟರ್‌ ಹ್ಯಾಂಡಲ್‌ @kisanEktaMorcha ವನ್ನು ತಾತ್ಕಾಲಿಕವಾಗಿ ಅಮಾನತನಲ್ಲಿಟ್ಟಿದೆ.
ಕ್ಯಾರವಾನ್, ಕಿಸಾನ್‌ ಏಕ್ತಾ ಮೋರ್ಚಾ ಸೇರಿ ಹಲವು ಟ್ವಿಟರ್‌ ಖಾತೆ ತಾತ್ಕಾಲಿಕ ಅಮಾನತು!

ನಿರ್ದಿಷ್ಟ ಕಾರಣ ನೀಡದೆಯೇ ಹಲವು ಪ್ರಮುಖ ಸಂಸ್ಥೆ, ಸಂಘಟನೆ ಹಾಗೂ ಸಾರ್ವಜನಿಕ ವ್ಯಕ್ತಿಗಳ ಟ್ವಿಟರ್‌ ಖಾತೆಯನ್ನು ಟ್ವಿಟರ್ ಇಂಡಿಯಾ ತಾತ್ಕಾಲಿಕವಾಗಿ ಅಮಾನತಿನಲ್ಲಿಟ್ಟಿದೆ.

ದೆಹಲಿ ರೈತ ಹೋರಾಟಕ್ಕೆ ಸಂಬಂಧಿಸಿದ ಅಧಿಕೃತ ಟ್ವಿಟರ್‌ ಹ್ಯಾಂಡಲ್‌ @kisanEktaMorcha ವನ್ನು ತಾತ್ಕಾಲಿಕವಾಗಿ ಅಮಾನತನಲ್ಲಿಟ್ಟಿದೆ.

ಜೊತೆಗೆ ಕಾರವಾನ್‌ ಪತ್ರಿಕೆಯ ಟ್ವಿಟರ್‌ ಖಾತೆಯನ್ನು ಅಮಾನತಿನಲ್ಲಿಟ್ಟಿದ್ದು, ಕಾನೂನಾತ್ಮಕ ಬೇಡಿಕೆಯ ಹಿನ್ನೆಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿದೆ ಎನ್ನಲಾಗಿದೆ.

ಇವುಗಳ ಜೊತೆಗೆ ಹನ್ಸಾರ್‌ ಮೀನಾ, ಟ್ರ್ಯಾಕ್ಟರ್‌2ಟ್ವಿಟರ್‌, ಕಿರುತೆರೆ ನಟ ಸುಶಾಂತ್‌ ಸಿಂಗ್‌ ಅವರ ಖಾತೆಗಳನ್ನು ಖಾತೆಗಳನ್ನು ನಿಷ್ಕ್ರಿಯಗೊಳಿಸಿದೆ.

ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಯುವ ನಾಯಕ ಕನ್ಹಯ್ಯ ಕುಮಾರ್‌ ಅವರ ಖಾತೆಯನ್ನು ಕೆಲ ಕಾಲ ಅಮಾನತಿನಲ್ಲಿಡಲಾಗಿತ್ತು, ಆದರೆ ಈಗ ಸಕ್ರಿಯವಾಗಿದೆ ಎಂದು ಸ್ವತಃ ಕನ್ಹಯ್ಯ ಕುಮಾರ್‌ ತಿಳಿಸಿದ್ದಾರೆ.

ಟ್ವಿಟರ್‌ನ ಈ ಕ್ರಮವನ್ನು ವಿರೋಧಿಸಿ ಹಲವರು ಕಿಸಾನ್‌ ಏಕ್ತಾ ಮೋರ್ಚಾ ಟ್ವಿಟರ್‌ ಖಾತೆಯ ಅಮಾನತನ್ನು ಹಿಂಪಡೆಯಲು ಆಗ್ರಹಿಸಿ ಟ್ವೀಟ್‌ ಮಾಡುತ್ತಿದ್ದಾರೆ.

ಸರ್ಕಾರದ ವಿರುದ್ಧ ತೀವ್ರ ವಿಮರ್ಶಾತ್ಮಕವಾಗಿರುವ ಪತ್ರಿಕೆ, ಪತ್ರಕರ್ತ, ಸಂಸ್ಥೆ, ಸಾರ್ವಜನಿಕ ವ್ಯಕ್ತಿಗಳನ್ನು ಹಲವು ರೀತಿಯಲ್ಲಿ ಗುರಿಯಾಗಿಸಿ, ಬಾಯಿ ಮುಚ್ಚಿಸುವ ಪ್ರಯತ್ನವನ್ನು ಆಡಳಿತಾರೂಢ ಸರ್ಕಾರ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ ಎಂದು ಅನೇಕರು ಸಾಮಾಜಿಕ ಜಾಲತಾಣದಲ್ಲಿ ಟ್ವಿಟರ್‌ ಇಂಡಿಯಾ ವಿರುದ್ಧ ತೀವ್ರ ಟೀಕೆ ವ್ಯಕ್ತ ಪಡಿಸುತ್ತಿದ್ದಾರೆ.

ಈ ವರದಿ ‘ಮಾಸ್ ಮೀಡಿಯಾ ಫೌಂಡೇಷನ್’ ನಿಯೋಜಿಸಿರುವ ವಿಶೇಷ ದೆಹಲಿ ತಂಡದಿಂದ ಪಡೆದ ಮಾಹಿತಿ ಆಧರಿಸಿ, ಸಿದ್ಧಪಡಿಸಿದೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com