ಮಯನ್ಮಾರ್‌ನಲ್ಲಿ ಆಡಳಿತವನ್ನು ವಶಪಡಿಸಿಕೊಂಡ ಮಿಲಿಟರಿ: ಕಳವಳ ವ್ಯಕ್ತಪಡಿಸಿದ ಭಾರತ

ರೋಹಿಂಗ್ಯಾಗಳು ಬಾಂಗ್ಲಾದೇಶಕ್ಕೆ ಸಾಮೂಹಿಕ ವಲಸೆ ಕೈಗೊಂಡಾಗ ಮಯನ್ಮಾರ್ ಅಂತರರಾಷ್ಟ್ರೀಯ ಟೀಕೆಗಳನ್ನು ಎದುರಿಸಿತ್ತು. ಆಗಲೂ ಬಹುಪಕ್ಷೀಯ ವೇದಿಕೆಗಳಲ್ಲಿ ಸರ್ಕಾರದ ಪರವಾಗಿ ಹೆಚ್ಚು ಬೆಂಬಲ ಹೇಳಿಕೆಗಳನ್ನು ನೀಡಿದ ಕೆಲವೇ ಕೆಲವು ದೇಶಗಳಲ್ಲಿ ಭಾರತವೂ ಒಂದು.
ಮಯನ್ಮಾರ್‌ನಲ್ಲಿ ಆಡಳಿತವನ್ನು ವಶಪಡಿಸಿಕೊಂಡ ಮಿಲಿಟರಿ: ಕಳವಳ ವ್ಯಕ್ತಪಡಿಸಿದ ಭಾರತ

ಮಯನ್ಮಾರಿನಲ್ಲಿ ನಡೆದ ನಾಟಕೀಯ ಬೆಳವಣಿಗೆಗೆ ಭಾರತ ಕಳವಳ ವ್ಯಕ್ತಪಡಿಸಿದೆ. ಚುನಾಯಿತ ಪ್ರತಿನಿಧಿಗಳನ್ನು ರಾತ್ರೋರಾತ್ರಿ ಬಂಧಿಸಿ ಮಿಲಿಟರಿಯು ದೇಶದ ಆಡಳಿತವನ್ನು ಕೈಗೆ ತೆಗೆದುಕೊಂಡಿರುವ ಬಗ್ಗೆ ಭಾರತದ ವಿದೇಶ ಸಚಿವಾಲಯವು ಪ್ರತಿಕ್ರಿಯಿಸುತ್ತಾ " ಮಯನ್ಮಾರಿನಲ್ಲಿ ನಡೆಯುತ್ತಿರುವ ಘಟನೆಗಳನ್ನು ಭಾರತವು ಗಮನಿಸುತ್ತಿದೆ" ಎಂದು ಹೇಳಿಕೆ ನೀಡಿದೆ.

"ಭಾರತವು ಸದಾ ಮಯನ್ಮಾರಿನ ಪ್ರಜಾಸತ್ತಾತ್ಮಕ ಪರಿವರ್ತನೆಯನ್ನು ಅಚಲವಾಗಿ ಬೆಂಬಲಿಸುತ್ತಾ ಬಂದಿದೆ. ಪ್ರಜಾ ಪ್ರಭುತ್ವದ ಮತ್ತು ಕಾನೂನಾತ್ಮಕ ಮೌಲ್ಯಗಳನ್ನು ಎತ್ತಿ ಹಿಡಿಯಲಾಗುತ್ತದೆ ಎಂದು ನಾವು ನಂಬುತ್ತೇವೆ" ಎಂಬ ಹೇಳಿಕೆ ಬಿಡುಗಡೆ ಮಾಡಿದೆ.

ಮಯನ್ಮಾರ್ ಭಾರತದ ನೆರೆಯ ರಾಷ್ಟವಾಗಿದ್ದು ಭಾರತ ಈಶಾನ್ಯವನ್ನು ಆಗ್ನೇಯ ಏಷ್ಯಾದೊಂದಿಗೆ ಬೆಸೆಯುವ ಕೊಂಡಿಯಾಗಿದೆ. ಭಾರತವು ಹಲವು ಅಭಿವೃದ್ಧಿ ನೆರವು ಯೋಜನೆಗಳಲ್ಲಿ ಹೂಡಿಕೆ ಮಾಡಿದ್ದು ಭಾರತದ ಮಿಜೋರಾಂ ರಾಜ್ಯದಿಂದ ಮಯನ್ಮಾರಿನ ಸಿಟ್ವೆ ಬಂದರಿಗೆ ಸಂಪರ್ಕ‌ ಕಲ್ಪಿಸುವ ಕಲಾಡನ್ (kaladan) ಯೋಜನೆಯನ್ನೂ ಕೈಗೆತ್ತಿಕೊಂಡಿದೆ. ಭಾರತವು ಮಯನ್ಮಾರಿನೊಂದಿಗೆ ಅತಿ ಉದ್ದದ ಪರ್ವತ ಗಡಿಯನ್ನು ಹೊಂದಿದ್ದು ಭದ್ರತಾ ಕ್ಷೇತ್ರದಲ್ಲೂ ಪರಸ್ಪರ ಸಹಕಾರ ಬೆಸೆದಿದೆ.

ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ರೋಹಿಂಗ್ಯಾಗಳು ಬಾಂಗ್ಲಾದೇಶಕ್ಕೆ ಸಾಮೂಹಿಕ ವಲಸೆ ಕೈಗೊಂಡಾಗ ಮಯನ್ಮಾರ್ ಅಂತರರಾಷ್ಟ್ರೀಯ ಟೀಕೆಗಳನ್ನು ಎದುರಿಸಿತ್ತು. ಆಗಲೂ ಬಹುಪಕ್ಷೀಯ ವೇದಿಕೆಗಳಲ್ಲಿ ಸರ್ಕಾರದ ಪರವಾಗಿ ಹೆಚ್ಚು ಬೆಂಬಲ ಹೇಳಿಕೆಗಳನ್ನು ನೀಡಿದ ಕೆಲವೇ ಕೆಲವು ದೇಶಗಳಲ್ಲಿ ಭಾರತವೂ ಒಂದು.

ಮಿಲಿಟರಿ ಒಡೆತನದ ಟೆಲಿವಿಷನ್ "ಮಯನ್ಮಾರಿನ ಮಿಲಿಟರಿ ಒಂದು ವರ್ಷದ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ ಮತ್ತು ಮಿಲಿಟರಿ ಮುಖ್ಯಸ್ಥ ಮಿನ್ ಆಂಗ್ ಹ್ಲೇಂಗ್‌ಗೆ ಅಧಿಕಾರವನ್ನು ಹಸ್ತಾಂತರಿಸಿಲಾಗಿದೆ. ಕಳೆದ ನವೆಂಬರ್‌ನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಆಂಗ್ ಸಾನ್ ಸೂಕಿ ಅವರ ನ್ಯಾಷನಲ್ ಲೀಗ್ ಆಫ್ ಡೆಮಾಕ್ರಸಿಯು ಸಾಧಿಸಿದ್ದ ವಿಜಯವನ್ನು ಮಿಲಿಟರಿಯು ಅಸಮ್ಮತಿ ಸೂಚಿಸಿದೆ" ಎಂದು ಪ್ರಕಟಿಸಿದೆ.

ಕಳೆದ ವರ್ಷ ಚುನಾವಣಾ ಫಲಿತಾಂಶ ಪ್ರಕಟವಾದ ನಂತರ, ಭಾರತದ ಪ್ರಧಾನಿ ನರೇಂದ್ರ ಮೋದಿ ಸೂಕಿ ಅವರ ಗೆಲುವಿಗೆ ಅಭಿನಂದನೆ ಸಲ್ಲಿಸಿದ್ದರು. ಅವರು "ಮತದಾನದ ಯಶಸ್ವಿ ನಿರ್ವಹಣೆಯು ಮಯನ್ಮಾರಿನ ಪ್ರಜಾಪ್ರಭುತ್ವದ ಪರಿವರ್ತನೆಯ ಕಡೆಗಿನ ದಿಟ್ಟ ಹೆಜ್ಜೆ" ಎಂದು ಬಣ್ಣಿಸಿದ್ದರು.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com