ಕಾಡಿನಲ್ಲಿ ಸಿಕ್ಕ ಅಪರೂಪದ ಗೆಳೆಯನನ್ನ ಮನೆಗೆ ಕರೆತಂದ ನಾಲ್ಕರ ಪೋರ

ಜಿಂಕೆಮರಿಯೊಂದಿಗೆ ಡೊಮಿನಿಕ್ ಆನಂದದಿಂದ ನಿಂತಿರುವಂತೆ ತೋರುತ್ತಿದ್ದ. ಆತ ಹೊಸ ಗೆಳೆಯನೊಂದಿಗೆ ತುಂಬಾ ಕುಶಿಯಿಂದಿದ್ದ ಎಂದು ಆತನ ತಾಯಿ ತಿಳಿಸಿದ್ದಾರೆ
ಕಾಡಿನಲ್ಲಿ ಸಿಕ್ಕ ಅಪರೂಪದ ಗೆಳೆಯನನ್ನ 
ಮನೆಗೆ ಕರೆತಂದ ನಾಲ್ಕರ ಪೋರ

ಆಟವಾಡಲು ಹೊರಗೆ ಹೋದ ಪುಟಾಣಿ ಮಗುವೊಂದು ಮುದ್ದಾದ ಕಾಡುಪ್ರಾಣಿಯ ಜೊತೆಗೆ ಮನೆಗೆ ಮರಳಿ ತನ್ನ ತಾಯಿಯನ್ನು ಆಶ್ಚರ್ಯಚಕಿತಳನ್ನಾಗಿಸಿದೆ. ಈ ಅಪರೂಪದ ಘಟನೆ ನಡೆದಿರುವುದು ವರ್ಜೀನಿಯಾದಲ್ಲಿ.

ವರ್ಜೀನಿಯಾದಲ್ಲಿರುವ ಮ್ಯಾಷನುಟ್ಟೆನ್‌ ರೆಸಾರ್ಟಿಗೆ ಸ್ಟೆಫಾನಿ ಬ್ರೌನ್‌ ಕುಟುಂಬ ವಿಹಾರಕ್ಕೆಂದು ಹೋಗಿತ್ತು. ಸ್ಟೆಫಿನಿಯ 4 ವರ್ಷ ಪ್ರಾಯದ ಮಗ ಡೊಮಿನಿಕ್‌ ಆಟವಾಡಲು ಹೊರಗಡೆ ಹೋದವನು, ಬರುವಾಗ ಸಣ್ಣ ಜಿಂಕೆ ಮರಿಯೊಂದಿಗೆ ವಾಪಾಸ್ಸಾಗಿದ್ದಾನೆ.

ಡೊಮಿನಿಕ್‌ ತಾಯಿ ಸ್ಟೆಫಾನಿ ಪ್ರಕಾರ, ಫ್ರಿಜ್‌ನಲ್ಲಿ ಏನೋ ತಡಕಾಡುತ್ತಿರುವ ವೇಳೆ, ಆಕೆಗೆ ಬಾಗಿಲ ಹೆಜ್ಜೆ ಸಪ್ಪಳ ಕೇಳಿದೆ. ತಕ್ಷಣ ಹಿಂತುರುಗಿದ ಆಕೆ ಒಮ್ಮಲೆ ಗಾಬರಿಗೂ, ಆಶ್ಚರ್ಯಕ್ಕೂ ಒಳಗಾಗಿದ್ದಾಳೆ. ಕಾರಣ, ಆಟವಾಡಲೆಂದು ಹೊರಗಡೆ ಹೋದ ತನ್ನ 4 ವರ್ಷದ ಮಗ, ಕಾಡು ಪ್ರಾಣಿಯ ಮರಿಯೊಂದಿಗೆ ನಿಂತಿದ್ದಾನೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಜಿಂಕೆಮರಿಯೊಂದಿಗೆ ಡೊಮಿನಿಕ್ ಆನಂದದಿಂದ ನಿಂತಿರುವಂತೆ ತೋರುತ್ತಿದ್ದ. ಆತ ಹೊಸ ಗೆಳೆಯನೊಂದಿಗೆ ತುಂಬಾ ಕುಶಿಯಿಂದಿದ್ದ ಎಂದು ಸ್ಟೆಫಾನಿ WBTV ಗೆ ಹೇಳಿದ್ದಾರೆ.

ನಾನು ನೋಡುವಾಗ ಡೊಮಿನಿಕ್‌ ಹಾಗೂ ಜಿಂಕೆ ಪುಟ್ಟ ಮರಿ ಮನೆ ಪ್ರವೇಶ ದ್ವಾರದ ಬಳಿ ನಿಂತಿದ್ದರು, ನೋಡಿದಾಕ್ಷಣ ರೋಮಾಂಚನದಿಂದ ಏನು ಮಾಡಬೇಕೆಂದು ತೋಚದೆ ಸ್ತಂಬೀಭೂತಳಾಗಿ ನಿಂತಿದ್ದೆ, ತಕ್ಷಣ ಎಚ್ಚೆತ್ತು ಇವರ ಫೋಟೊ ಸೆರೆಹಿಡಿದೆ ಎಂದು WBTV ಗೆ ತಿಳಿಸಿದ್ದಾರೆ.

Dominic really went outside and brought a deer back...

Posted by Stephanie Brown on Tuesday, January 26, 2021

ತನ್ನ ಹೊಸ ಗೆಳೆಯನಿಗೆ ʼಫ್ಲಾಶ್‌ʼ ಎಂದು ಡೊಮಿನಿಕ್‌ ಹೆಸರಿಟ್ಟಿದ್ದಾನೆ. ಫ್ಲಾಶ್‌ನ ತಾಯಿಯೂ ಆತನನ್ನು ಹುಡುಕುತ್ತಿರಬಹುದು, ಅವನ ತಾಯಿಯ ಬಳಿ ಬಿಟ್ಟು ಬಾ ಎಂದು ಮಗನ ಮನವೊಲಿಸಿ ಕಳಿಸಿದ್ದಾಗಿ ಸ್ಟೆಫಾನಿ ತಿಳಿಸಿದ್ದಾರೆ.

ಬಳಿಕ ಈ ʼಅಪರೂಪದ ಗೆಳೆಯರʼ ಫೋಟೋವನ್ನು ಫೇಸ್‌ಬುಕ್‌ನಲ್ಲಿ ಸ್ಟೆಫಾನಿ ಹಂಚಿಕೊಂಡಿದ್ದು ಇದುವರೆಗೂ 30 ಸಾವಿರಕ್ಕೂ ಹೆಚ್ಚು ಮಂದಿ ಈ ಫೋಟೋವನ್ನು ಹಂಚಿಕೊಂಡಿದ್ದು ಸಾವಿರಾರು ಮಂದಿ ಮೆಚ್ಚಿ ಪ್ರತಿಕ್ರಿಯಿಸಿದ್ದಾರೆ.

https://fox40.com/news/national-and-world-news/a-deer-friend-4-year-old-boy-brings-home-an-unlikely-companion/

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com