ದೆಹಲಿ ಟ್ರ್ಯಾಕ್ಟರ್‌ ಮೆರವಣಿಗೆ: ತರೂರ್‌ ಸೇರಿ 6 ಪತ್ರಕರ್ತರ ಮೇಲೆ ದೇಶದ್ರೋಹ ಪ್ರಕರಣ

ತರೂರ್‌ ಹಾಗು ಪತ್ರಕರ್ತರು ರೈತನೊಬ್ಬನನ್ನು ಪೊಲೀಸರು ಗುಂಡಿಟ್ಟು ಕೊಂದಿದ್ದಾರೆಂಬ ಸುಳ್ಳು ಸುದ್ದಿ ಹಂಚಿರುವುದು ಹಿಂಸೆಗೆ ಕಾರಣವಾಗಿದೆ ಎಂದು ದೆಹಲಿ ನಗರ ನಿವಾಸಿಯೊಬ್ಬರು ದೂರನ್ನು ನೀಡಿದ್ದರು
ದೆಹಲಿ ಟ್ರ್ಯಾಕ್ಟರ್‌ ಮೆರವಣಿಗೆ: ತರೂರ್‌ ಸೇರಿ 6 ಪತ್ರಕರ್ತರ ಮೇಲೆ ದೇಶದ್ರೋಹ ಪ್ರಕರಣ

ಜನವರಿ 26 ರಂದು ದೆಹಲಿಯಲ್ಲಿ ಟ್ರ್ಯಾಕ್ಟರ್‌ ಮೆರವಣಿಗೆ ನಡೆದ ಸಂದರ್ಭದಲ್ಲಿ ಹಿಂಸಾಚಾರಕ್ಕೆ ಪ್ರಚೋದನೆಗೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಪೊಲೀಸರು ಕಾಂಗ್ರೆಸ್‌ ನಾಯಕ ಶಶಿ ತರೂರ್‌ ಮತ್ತು ಆರು ಪತ್ರಕರ್ತರ ಮೇಲೆ ದೇಶದ್ರೋಹದ ಆರೋಪದ ಮೇಲೆ ಕೇಸ್‌ ದಾಖಲಿಸಲಾಗಿದೆ ಎಂದು ದಾಖಲಿಸಲ್ಲಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ರೈತರು ಮೋದಿ ಸರ್ಕಾರ ಜಾರಿಗೆ ತಂದಿರುವಂತಹ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕಳೆದ ನವೆಂಬರ್‌ ರಿಂದ ದೆಹಲಿಯ ಗಡಿಭಾಗಗಳಲ್ಲಿ ರೈತರು ನಿರಂತರವಾಗಿ ಹೋರಾಟ ನಡೆಸುತ್ತಿದ್ದಾರೆ.

ಜ 26 ರ ಗಣರಾಜೋತ್ಸವ ದಿನದ ರೈತರ ಟ್ರ್ಯಾಕ್ಟರ್‌ ಮೆರವಣಿಗೆಯಂದು ಹಿಂಸಾಚಾರಕ್ಕೆ ಪ್ರಚೋದನೆ ನೀಡುವಂತಹ ಸಂದೇಶಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಸಿದ್ದಾರೆ ಹಾಗೂ ಸುಳ್ಳು ಸುದ್ದಿ ಹಬ್ಬಿಸಿದ್ದಾರೆಂದು ನೋಯ್ಡಾ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ

ತರೂರ್‌ ಹಾಗು ಪತ್ರಕರ್ತರು ರೈತನೊಬ್ಬನನ್ನು ಪೊಲೀಸರು ಗುಂಡಿಟ್ಟು ಕೊಂದಿದ್ದಾರೆಂಬ ಸುಳ್ಳು ಸುದ್ದಿ ಹಂಚಿರುವುದು ಹಿಂಸೆಗೆ ಕಾರಣವಾಗಿದೆ ಎಂದು ದೆಹಲಿ ನಗರ ನಿವಾಸಿಯೊಬ್ಬರು ದೂರನ್ನು ನೀಡಿದ್ದರು. ಈ ದೂರಿನನ್ವಯ ಐಪಿಸಿ ಸೆಕ್ಷನ್‌ 124ಎ ಕಾಲಂ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪತ್ರಕರ್ತರಾದ ಮೃಣಾಲ್‌ ಪಾಂಡೆ, ರಾಜ್‌ದೀಪ್‌ ಸರ್ದೇಸಾಯಿ, ವಿನೋದ್‌ ಜೋಸ್‌, ಝಫರ್‌ ಆಘಾ, ಪರೇಶ್‌ ನಾಥ್‌ ಮತ್ತು ಅನಂತ್‌ ಹಾಗು ಕಾಂಗ್ರೆಸ್‌ ನಾಯಕ ಶಶಿ ತರೂರ್‌ ಮೇಲೆ ಎಫ್‌ಐಆರ್‌ ದಾಖಲು ಮಾಡಲಾಗಿದೆ.

ಪ್ರತಿಭಟನೆಯ ದಿನದಂದು ಪ್ರತ್ಯಕ್ಷ ದರ್ಶಿಗಳಿಂದ ಮತ್ತು ಪೊಲೀಸರಿಂದ ಸಾಕಷ್ಟು ವರದಿಗಳು ಬಂದಿದ್ದವು,ಅವುಗಳಲ್ಲಿ ಸರಿತಪ್ಪುಗಳನ್ನು ಅಳೆದು ತೂಗಿ ಎಲ್ಲಾ ವರದಿಗಳನ್ನು ಸಮಾಜದ ಮುಂದಿಡಬೇಕಾಗುತ್ತದೆ. ಇದು ಪತ್ರಿಕೋದ್ಯಮದ ಮಾನದಂಡಗಳಿಗೆ ಅನುಗುಣವಾಗಿದೆ. ಪತ್ರಕರ್ತರನ್ನು ಸ್ವತಂತ್ರವಾಗಿ ನಿರ್ಭೀತವಾಗಿ ಕೆಲಸ ಮಾಡಲು ಅವಕಾಶ ಕೊಡಬೇಕು. ಹಾಗೂ ಟ್ರ್ಯಾಕ್ಟರ್‌ ಮೆರವಣಿಗೆಯ ವೇಳೆ ಪತ್ರಕರ್ತರ ಮೇಲೆ ಹಾಕಿದ ಎಫ್‌ಐಆರ್‌ ಅನ್ನು ರದ್ದುಗೊಳಿಸಬೇಕೆಂದು ಎಡಿಟರ್ಸ್‌ ಗಿಲ್ಡ್‌ (EDITORS GUILD OF INDIA) ಹೇಳಿದೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com