ರೈತರ ಬೆಂಬಲಕ್ಕೆ ನಿಂತ ಅಣ್ಣಾ ಹಜಾರೆ; ಜನವರಿ 30ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ

ಜನವರಿ 30ರಿಂದ ಉಪವಾಸ ಸತ್ಯಾಗ್ರಹವನ್ನು ಅಣ್ಣಾ ಹಜಾರೆಯವರು ಆರಂಭಿಸಲಿದ್ದು, ರೈತ ಹೋರಾಟಕ್ಕೆ ಇನ್ನಷ್ಟು ಬೆಂಬಲ ದೊರೆತಂತಾಗಿದೆ.
ರೈತರ ಬೆಂಬಲಕ್ಕೆ ನಿಂತ ಅಣ್ಣಾ ಹಜಾರೆ; ಜನವರಿ 30ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ

ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರು ರೈತರ ಪರವಾಗಿ ಕೃಷಿ ಕಾಯ್ದೆಗಳ ವಾಪಾಸಾತಿಯನ್ನು ಆಗ್ರಹಿಸಿ ಶನಿವಾರದಿಂದ (ಜನವರಿ 30) ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಕೈಗೊಳ್ಳಲಿದ್ದಾರೆ. ತಮ್ಮ ಸ್ವಗ್ರಾಮವಾದ ಮಹಾರಾಷ್ಟ್ರದ ರಾಲೆಗಾಂವ್‌ ಸಿದ್ದಿಯಲ್ಲಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಿರುವ ಅಣ್ಣಾ ಹಜಾರೆ ಅವರು, ತಮ್ಮ ಬೆಂಬಲಿಗರಿಗೂ ಉಪವಾಸ ಸತ್ಯಾಗ್ರಹವನ್ನು ಆರಂಭಿಸಲು ಮನವಿ ಮಾಡಿಕೊಂಡಿದ್ದಾರೆ.

ಕಳೆದ ನಾಲ್ಕು ವರ್ಷಗಳಿಂದ ಕೇಂದ್ರ ಸರ್ಕಾರವು ರೈತರಿಗೆ ಕನಿಷ್ಟ ಬೆಂಬಲ ನೀಡಲು ವಿಫಲವಾಗಿದೆ. ಈ ವಿಚಾರವನ್ನು ನಾನು ಕಳೆದ ನಾಲ್ಕು ವರ್ಷಗಳಿಂದ ಕೇಂದ್ರ ಸರ್ಕಾರದ ಬಳಿ ಪ್ರಸ್ತಾಪಿಸುತ್ತಾ ಬಂದಿದ್ದೇನೆ. ಆದರೆ, ಸರ್ಕಾರ ಈ ಕುರಿತಾಗಿ ಯಾವುದೇ ಕ್ರಮಗಳನ್ನು ಕೈಗೊಳ್ಳಲಿಲ್ಲ. ಈ ಸರ್ಕಾರವು ರೈತರ ವಿಚಾರದಲ್ಲಿ ಸಂವೇದನಾರಹಿತ ನಿರ್ಧಾರಗಳನ್ನು ತಾಳುತ್ತಿದೆ, ಎಂದವರು ಹೇಳಿದ್ದಾರೆ.

ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಕಳೆದ ತಿಂಗಳು ಈ ಕುರಿತಾಗಿ ಮಾತನಾಡಿದ್ದ ಅಣ್ಣಾ ಹಜಾರೆ ಅವರು, ಒಂದು ವೇಳೆ ಸರ್ಕಾರ ರೈತರ ಬೇಡಿಕೆಗಳನ್ನು ಪೂರೈಸದಿದ್ದರೆ, ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಹೇಳಿದ್ದರು. ಈ ಉಪವಾಸ ಸತ್ಯಾಗ್ರಹವೇ ಅವರ ಕೊನೆಯ ಸತ್ಯಾಗ್ರಹವಾಗಿರುತ್ತದೆ ಎಂದಿದ್ದರು.

ತಮ್ಮ ನುಡಿಯಂತೆ ಜನವರಿ 30ರಿಂದ ಉಪವಾಸ ಸತ್ಯಾಗ್ರಹವನ್ನು ಅಣ್ಣಾ ಹಜಾರೆಯವರು ಆರಂಭಿಸಲಿದ್ದು, ರೈತ ಹೋರಾಟಕ್ಕೆ ಇನ್ನಷ್ಟು ಬೆಂಬಲ ದೊರೆತಂತಾಗಿದೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com