ಹರಿಯಾಣದಿಂದ ಹರಿದು ಬರುತ್ತಿದೆ ರೈತ ಜನ ಸಾಗರ

ನೊಂದ ನೆರೆಯ ರಾಜ್ಯದ ರೈತರು ಇಂದು ದೆಹಲಿಯತ್ತ ಸಾಗರೋಪಾದಿಯಲ್ಲಿ ಸಾಗಿ ಬರುತ್ತಿದ್ದಾರೆ. ಸರ್ಕಾರ ರೈತ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ. ಅದಕ್ಕಾಗಿ ಸುಳ್ಳು ಸುದ್ದಿಗಳನ್ನು ಹರಡುತ್ತಿದೆ. ಇದಕ್ಕೆ ಪ್ರತ್ಯುತ್ತರವಾಗಿ ರೈತರು ದೆಹಲಿಗೆ ತಂಡ ತಂಡವಾಗಿ ಆಗಮಿಸುತ್ತಿದ್ದು, ಗಡಿಯಲ್ಲಿರುವ ರೈತರು ಪುಷ್ಪವೃಷ್ಟಿ ಮಾಡಿ ಸ್ವಾಗತಿಸುತ್ತಿದ್ದಾರೆ.
ಹರಿಯಾಣದಿಂದ ಹರಿದು ಬರುತ್ತಿದೆ ರೈತ ಜನ ಸಾಗರ

ಗಣರಾಜ್ಯೋತ್ಸವದ ಘಟನೆಯ ಬಳಿಕ ರಾತ್ರೋರಾತ್ರಿ ದೆಹಲಿ ಪೊಲೀಸರು ಟಿಕ್ರಿ ಮತ್ತು ಗಾಝಿಪುರ ಗಡಿಯಲ್ಲಿರುವ ರೈತರನ್ನು ಒಕ್ಕಲೆಬ್ಬಿಸುವ ಯತ್ನ ಮಾಡಿದರು. ಮಾಧ್ಯಮಗಳು ರೈತರು ಮನೆಗೆ ಮರಳುತ್ತಿದ್ದಾರೆ ಎಂದು ಸುದ್ದಿ ಬಿತ್ತರಿಸಿದವು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಈ ಬೆಳವಣಿಗೆಗಳಿಂದ ನೊಂದ ನೆರೆಯ ರಾಜ್ಯದ ರೈತರು ಇಂದು ದೆಹಲಿಯತ್ತ ಸಾಗರೋಪಾದಿಯಲ್ಲಿ ಸಾಗಿ ಬರುತ್ತಿದ್ದಾರೆ. ಸರ್ಕಾರ ರೈತ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ. ಅದಕ್ಕಾಗಿ ಸುಳ್ಳು ಸುದ್ದಿಗಳನ್ನು ಹರಡುತ್ತಿದೆ. ಇದಕ್ಕೆ ಪ್ರತ್ಯುತ್ತರವಾಗಿ ರೈತರು ದೆಹಲಿಗೆ ತಂಡ ತಂಡವಾಗಿ ಆಗಮಿಸುತ್ತಿದ್ದು, ಗಡಿಯಲ್ಲಿರುವ ರೈತರು ಪುಷ್ಪವೃಷ್ಟಿ ಮಾಡಿ ಸ್ವಾಗತಿಸುತ್ತಿದ್ದಾರೆ.

ರಾಷ್ಟ್ರಧ್ವಜ, ಏಕ್ತಾ ಮೋರ್ಚಾದ ಧ್ವಜ ಹಾಗೂ ಹಸಿರು ಧ್ವಜವನ್ನು ಹಿಡಿದ ಅಸಂಖ್ಯ ರೈತರು ವಿವಿಧ ವಾಹನಗಳಲ್ಲಿ ಗಡಿಗಳತ್ತ ಆಗಮಿಸುತ್ತಿದ್ದು, ನಿನ್ನೆಯ ಘಟನೆಯ ಬಳಿಕ ಹೋರಾಟವನ್ನು ಮತ್ತಷ್ಟು ತೀವ್ರವಾಗಿ ರೂಪಿಸುವುದಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜಮೆಯಾಗುತ್ತಿದ್ದಾರೆ

ಈ ವರದಿ ‘ಮಾಸ್ ಮೀಡಿಯಾ ಫೌಂಡೇಷನ್’ ನಿಯೋಜಿಸಿರುವ ವಿಶೇಷ ದೆಹಲಿ ತಂಡದಿಂದ ಪಡೆದ ಮಾಹಿತಿ ಆಧರಿಸಿ, ಸಿದ್ಧಪಡಿಸಿದೆ

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com