ರೈತ ಪ್ರತಿಭಟನೆಗೆ ಬೆಂಬಲ: ಜಂಟಿ ಸದನದಲ್ಲಿ ರಾಷ್ಟ್ರಪತಿಗಳ ಭಾಷಣವನ್ನು ಬಹಿಷ್ಕರಿಸಲಿರುವ 16 ವಿಪಕ್ಷಗಳು

ಕಾಂಗ್ರೆಸ್‌, ಎನ್‌ಸಿಪಿ, ಡಿಎಂಕೆ, ಎಸ್‌ಪಿ, ಶಿವಸೇನೆ, ಆರ್‌ಜೆಡಿ, ಸಿಪಿಐ, ಸಿಪಿಐಎಂ, ಪಿಡಿಪಿ ಸೇರಿದಂತೆ ಇತರ 16 ಪಕ್ಷಗಳು ರಾಷ್ಟ್ರಪತಿಗಳ ಭಾಷಣವನ್ನು ಬಹಿಷ್ಕರಿಸಲಿವೆ.
ರೈತ ಪ್ರತಿಭಟನೆಗೆ ಬೆಂಬಲ: ಜಂಟಿ ಸದನದಲ್ಲಿ ರಾಷ್ಟ್ರಪತಿಗಳ ಭಾಷಣವನ್ನು ಬಹಿಷ್ಕರಿಸಲಿರುವ 16 ವಿಪಕ್ಷಗಳು

ಕೃಷಿ ಕಾಯ್ದೆಗಳ ವಿರುದ್ದ ಕಳೆದ 64 ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಗೆ ಕಿವಿಗೊಡದ ಸರ್ಕಾರವನ್ನು ವಿಪಕ್ಷಗಲು ತರಾಟೆಗೆ ತೆಗೆದುಕೊಂಡಿವೆ. ಕೇಂದ್ರ ಸರ್ಕಾರದ ಈ ಸಂವೇದನಾರಹಿತ ನಡವಳಿಕೆಯನ್ನು ಖಂಡಿಸಿ ಪ್ರಮುಖ ವಿಪಕ್ಷಗಳು ರಾಷ್ಟ್ರಪತಿಗಳ ಭಾಷಣವನ್ನು ಬಹಿಷ್ಕರಿಸಲಿವೆ.

ಈ ಕುರಿತಾಗಿ ಜಂಟಿ ಪತ್ರಿಕಾ ಹೇಳಿಕೆ ನೀಡಿರುವ ವಿಪಕ್ಷ ನಾಯಕರು, ರಾಜ್ಯೋತ್ಸವ ದಿನದಂದು ನಡೆದ ಅಹಿತಕರ ಘಟನೆಗಳ ಕುರಿತಾಗಿ ಸರ್ಕಾರವು ಸಮಗ್ರವಾದ ತನಿಖೆಯನ್ನು ಕೈಗೊಳ್ಳಬೇಕು. ಈ ಘಟನೆಗೆ ಕಾರಣವಾದವರ ವಿರುದ್ದ ಕ್ರಮ ಕೈಗೊಳ್ಳಬೇಕು. ತನಿಖೆಯು ನಿಷ್ಪಕ್ಷಪಾತವಾಗಿ ನಡೆದಲ್ಲಿ, ಈ ಘಟನೆಗಳ ಹಿಂದೆ ಸರ್ಕಾರದ ಕೈವಾಡವಿರುವುದು ಖಂಡಿತ ಬಯಲಿಗೆ ಬರುತ್ತದೆ ಎಂದಿದ್ದಾರೆ.

ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ


“ಮೂರು ಕೃಷಿ ಕಾಯ್ದೆಗಳು ರಾಜ್ಯ ಸರ್ಕಾರಗಳ ಹಕ್ಕುಗಲನ್ನು ಕಸಿದುಕೊಳ್ಳುತ್ತವೆ. ಇದು ಒಕ್ಕೂಟ ವ್ಯವಸ್ಥೆಗೆ ವಿರುದ್ದವಾಗಿದೆ. ಇವುಗಳನ್ನು ವಾಪಾಸ್‌ ಪಡೆಯದಿದ್ದಲ್ಲಿ, ದೇಶದ ಆಹಾರ ಭದ್ರತೆಯು ನೆಲಕಚ್ಚಲಿದೆ,” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಈ ಕಾಯ್ದೆಗಳ ವಾಪಾಸಾತಿಗೆ ರೈತ ಒಕ್ಕೂಟವು ಕಳೆದ 61 ದಿನಗಳಿಂದ ಪ್ರತಿಭಟನೆ ನಡೆಸುತ್ತಿದೆ. ಆದರೆ, ಸರ್ಕಾರವು ಹಠಮಾರಿ ಧೋರಣೆಯನ್ನು ತಾಳಿದೆ. ಇದು ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುವಂತಹ ವಿಚಾರ. ಈ ಬೆಳವಣಿಗೆಗಳಿಂದ ಮನನೊಂದು, ಈ ಕೆಳಕಂಡ ಪಕ್ಷಗಳ ಮುಖಂಡರು ಕೃಷಿ ಕಾಯ್ದೆಗಳನ್ನು ವಾಪಾಸ್‌ ಪಡೆಯಬೇಕೆಂದು ಆಗ್ರಹಿಸುತ್ತೇವೆ ಎಂದು ಜಂಟಿ ಪತ್ರಿಕಾ ಹೇಳಿಕೆಯನ್ನು ತಿಳಿಸಲಾಗಿದೆ.

ಇನ್ನು, ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲವಾಗಿ ಶುಕ್ರವಾರ ನಡೆಯಲಿರುವ ಜಂಟಿ ಸದನ ಸಭೆಯನ್ನು ಬಹಿಷ್ಕರಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ಜಂಟಿ ಪತ್ರಿಕಾ ಹೇಳಿಕೆಗೆ ಕಾಂಗ್ರೆಸ್‌, ಎನ್‌ಸಿಪಿ, ಡಿಎಂಕೆ, ಎಸ್‌ಪಿ, ಶಿವಸೇನೆ, ಆರ್‌ಜೆಡಿ, ಸಿಪಿಐ, ಸಿಪಿಐಎಂ, ಪಿಡಿಪಿ ಸೇರಿದಂತೆ ಇತರ ವಿಪಕ್ಷಗಳ ಮುಖಂಡರು ಸಹಿ ಹಾಕಿದ್ದಾರೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com