ಕೆಂಪುಕೋಟೆ ಧ್ವಜ ಪ್ರಕರಣ: ಬಿಜೆಪಿ ಸಂಸದ ಪರ ಪ್ರಚಾರ ನಡೆಸಿದ್ದ ರುವಾರಿ ದೀಪ್ ಸಿಧು

ಕೆಂಪುಕೋಟೆಯಲ್ಲಿ ಸಿಖ್‌ ಧ್ವಜ ಹಾರಾಟದ ರುವಾರಿ ದೀಪ್‌ ಸಿಧು 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸಂಸದ ಸನ್ನಿಡಿಯೋಲ್‌ ಪರ ಪ್ರಚಾರ ನಡೆಸಿದ್ದ. ಆಘಾತಕಾರಿ ಅಂಶವೇನೆಂದರೆ, ಘಟನೆ ವೇಳೆ ಮಾಜಿ ಗ್ಯಾಂಗ್‌ಸ್ಟರ್‌ ಲಖಾ ಸಿಧಾನ ಕೂಡಾ ಹಾಜರಿದ್ದ!
ಕೆಂಪುಕೋಟೆ ಧ್ವಜ ಪ್ರಕರಣ: ಬಿಜೆಪಿ ಸಂಸದ ಪರ ಪ್ರಚಾರ ನಡೆಸಿದ್ದ ರುವಾರಿ ದೀಪ್ ಸಿಧು

ರೈತರ ಬೃಹತ್‌ ಹೋರಾಟಕ್ಕೆ ಮಸಿ ಬಳಿಯುವಂತಹ ಕಾರ್ಯಗಳು ಸತತವಾಗಿ ನಡೆಯುತ್ತಿದ್ದು, ಇದರ ಹಿಂದೆ ಬಿಜೆಪಿ ಷಡ್ಯಂತ್ರವಿದೆಯೆಂದು ರೈತರ ಪ್ರತಿಭಟನೆಯ ಬೆಂಬಲಿಗರು ಆರೋಪಿಸಿದ್ದಾರೆ. ಇದಕ್ಕೆ ಪೂರಕವಾಗಿ, ಕೆಂಪುಕೋಟೆಯಲ್ಲಿ ಸಿಖ್‌ ಧ್ವಜ ಹಾರಿಸಿದ ತಂಡದ ನಾಯಕ ಹಾಗೂ ಬಿಜೆಪಿಯೊಂದಿಗಿನ ಸಂಬಂಧ ಬಯಲಾಗುತ್ತಿದೆ.

ಪಂಜಾಬಿ ನಟ ಹಾಗೂ ಹಾಡುಗಾರನಾಗಿರುವ ದೀಪ್‌ ಸಿಧು, ಕೆಂಪುಕೋಟೆಯಲ್ಲಿ ಧ್ವಜ ಹಾರಿಸಿದ ಗುಂಪಿಗೆ ಪ್ರಚೋದಕ ಹಾಗೂ ರುವಾರಿಯೆಂದು ಬಹಿರಂಗಗೊಂಡಿದ್ದು, ರೈತ ನಾಯಕರು ಈತನನ್ನು ಬಹಿಷ್ಕರಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಘಟನೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ರೈತ ಸಂಘಟನೆಗಳ ಒಕ್ಕೂಟ ಕಿಸಾನ್‌ ಏಕ್ತಾ ಮೋರ್ಚಾದ ನಾಯಕರೊಬ್ಬರು, ʼಕೆಂಪುಕೋಟೆಯಲ್ಲಿ ನಡೆದ ಕೃತ್ಯ ನಮ್ಮ ಹೋರಾಟದ ಯೋಜನೆಯಲ್ಲಿಯೇ ಇರಲಿಲ್ಲ. ಅಲ್ಲಿ ಸಿಖ್‌ ಧ್ವಜ ಹಾರಿಸಿದ ಯುವಕರ ಗುಂಪನ್ನು ಪ್ರಚೋದಿಸಿರುವುದು ದೀಪ್‌ ಸಿದು ಎಂದು ತಿಳಿದು ಬಂದಿದೆ. ಆತ ಅವರನ್ನು ಪ್ರಚೋದಿಸಿದ್ದಾನೆ. ಆತ ನಮ್ಮ ಹೋರಾಟಕ್ಕೆ ಹಾನಿಯೆಸಗಿದ್ದಾನೆ. ಆತ ಯಾರಿಗಾಗಿ ಕೆಲಸ ಮಾಡುತ್ತಿದ್ದಾನೆ ಎಂಬುದು ಸ್ಪಷ್ಟವಿಲ್ಲʼ ಎಂದಿದ್ದರು.

ಅಮಿತ್‌ ಶಾ ಜೊತೆಗೆ ದೀಪ್‌ ಸಿದು
ಅಮಿತ್‌ ಶಾ ಜೊತೆಗೆ ದೀಪ್‌ ಸಿದು
ಸನ್ನಿ ಡಿಯೋಲ್ ತಂದೆ ಧರ್ಮೇಂದ್ರ ಜೊತೆ ದೀಪ್‌ ಸಿದು
ಸನ್ನಿ ಡಿಯೋಲ್ ತಂದೆ ಧರ್ಮೇಂದ್ರ ಜೊತೆ ದೀಪ್‌ ಸಿದು

ಈ ಹೇಳಿಕೆಯ ಬೆನ್ನಿಗೆ ದೀಪ್‌ ಸಿಧುವಿಗೆ ಬಿಜೆಪಿಯೊಂದಿಗಿನ ಸಂಪರ್ಕವಿರುವುದು ಬೆಳಕಿಗೆ ಬಂದಿದೆ. ಆತ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯೊಂದಿಗೆ ನಿಂತುಕೊಂಡಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ದಿ ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿರುವಂತೆ ಕೆಂಪುಕೋಟೆಯಲ್ಲಿ ಸಿಖ್‌ ಧ್ವಜ ಹಾರಾಟದ ರುವಾರಿ ದೀಪ್‌ ಸಿಧು 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸಂಸದ ಸನ್ನಿಡಿಯೋಲ್‌ ಪರ ಪ್ರಚಾರ ನಡೆಸಿದ್ದ. ಅಲ್ಲದೆ, ಆತ ಸನ್ನಿ ಡಿಯೋಲ್‌ನ ಸೋದರ ಸಂಬಂಧಿಯೂ ಆಗಿದ್ದಾನೆ ಎಂದು ವೈರಲ್‌ ಆಗುತ್ತಿದೆ. ಆಘಾತಕಾರಿ ಅಂಶವೇನೆಂದರೆ, ಘಟನೆ ವೇಳೆ ಮಾಜಿ ಗ್ಯಾಂಗ್‌ಸ್ಟರ್‌ ಲಖಾ ಸಿಧಾನ ಕೂಡಾ ಹಾಜರಿದ್ದ!

ದಿ ಟ್ರಿಬ್ಯೂನ್‌ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ದೀಪ್‌ ಸಿಧು, ಸನ್ನಿ ಡಿಯೋಲ್‌ ಜೊತೆ ಇರುವುದು ಕಾಣಬಹುದು. ಇದು 2019 ರ ಚುನಾವಣೆಗೂ ಮುನ್ನ ಚಿತ್ರೀಕರಿಸಿದ ವಿಡಿಯೋ.

ಆದರೆ, ದೀಪ್‌ ಸಿಧು ಜೊತೆಗೆ ತನಗಾಗಲೀ ತನ್ನ ಕುಟುಂಬಕ್ಕಾಗಲೀ ಯಾವುದೇ ಒಡನಾಟವಿಲ್ಲವೆಂದು ಬಿಜೆಪಿ ಸಂಸದ ಸನ್ನಿ ಡಿಯೋಲ್‌ ಹೇಳಿದ್ದಾರೆ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಚಿತ್ರಗಳು ಬಿಜೆಪಿ ಸಂಸದ ಹೇಳುತ್ತಿರುವುದು ಸುಳ್ಳು ಎಂದು ಸಾಬೀತು ಪಡಿಸುತ್ತದೆ.

ಸನ್ನಿ ಡಿಯೋಲ್ ಮತ್ತು ದೀಪ್‌ ಸಿಧು
ಸನ್ನಿ ಡಿಯೋಲ್ ಮತ್ತು ದೀಪ್‌ ಸಿಧು

ಸದ್ಯ, ಆತನ ಒಂದೊಂದೇ ಕೃತ್ಯಗಳು ಬಹಿರಂಗಗೊಂಡಿದ್ದು, ಆತ ಕೆಲವು ದಿನಗಳ ಹಿಂದೆಯಷ್ಟೇ ರೈತರ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾನೆ. ಪರೇಡಿನ ವೇಳೆ ಕಿಸಾನ್‌ ಸಂಯುಕ್ತ ಮೋರ್ಚಾ ನಿಗದಿಪಡಿಸಿದ ಮಾರ್ಗದಿಂದ ಬದಲಿ ಮಾರ್ಗದಲ್ಲಿ ಹೊರಟ ತಂಡದ ರುವಾರಿಯೂ ಈತನೇ ಎಂದು ಹೇಳಲಾಗುತ್ತಿದೆ.

ಈ ಕುರಿತು ಸ್ಪಷ್ಟನೆ ನೀಡಿರುವ ದೀಪ್‌ ಸಿದು, ಗುಂಪಿನಲ್ಲಿ ಹಾಗೆ ಸಂಭವಿಸಿತು. ನಾನೊಬ್ಬನೇ ಅದಕ್ಕೆ ಕಾರಣಕರ್ತನಲ್ಲ. ಹಾಗೂ ಅದು ಸಿಖ್‌ ಪವಿತ್ರ ಧ್ವಜ, ಖಾಲಿಸ್ತಾನಿ ಧ್ವಜವಲ್ಲ ಎಂದು ಹೇಳಿದ್ದಾನೆ.

ಘಟನೆ ಸಂಬಂಧ ಸಂಯುಕ್ತ ಕಿಸಾನ್‌ ಮೋರ್ಚಾ ನಾಯಕರಾದ ಯೋಗೇಂದ್ರ ಯಾದವ್‌ ಪ್ರತಿಕ್ರಿಯಿಸಿದ್ದು, ಧ್ವಜ ಹಾರಿಸಿದ ದೀಪ್‌ ಸಿಧು ವನ್ನು ಯಾಕೆ ಇನ್ನೂ ಪೊಲೀಸರು ಬಂಧಿಸಿಲ್ಲ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಕೆಂಪುಕೋಟೆಗೆ ಆತ ಧ್ವನಿವರ್ಧಕದೊಂದಗೆ ತಲುಪಿರುವುದು ಹೇಗೆ ಎಂದು ತನಿಖೆಯಾಗಬೇಕೆಂದು ಆಗ್ರಹಿಸಿದ್ದಾರೆ.

ಸನ್ನಿ ಡಿಯೋಲ್ ತಂದೆ ಧರ್ಮೇಂದ್ರ ಜೊತೆ ದೀಪ್‌ ಸಿದು
ಸನ್ನಿ ಡಿಯೋಲ್ ತಂದೆ ಧರ್ಮೇಂದ್ರ ಜೊತೆ ದೀಪ್‌ ಸಿದು
ನರೇಂದ್ರ ಮೋದಿ ಜೊತೆ ಸನ್ನಿ ಡಿಯೋಲ್ ಮತ್ತು ದೀಪ್‌ ಸಿಧು
ನರೇಂದ್ರ ಮೋದಿ ಜೊತೆ ಸನ್ನಿ ಡಿಯೋಲ್ ಮತ್ತು ದೀಪ್‌ ಸಿಧು

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com