ತಂದೆಯನ್ನು ಕುಳ್ಳಿರಿಸಿ 1200 ಕಿಮೀ ದೂರ ಸೈಕಲ್‌ ತುಳಿದ ಜ್ಯೋತಿಗೆ ʼಬಾಲ ಪುರಸ್ಕಾರʼ

ಬಿಹಾರಕ್ಕೆ ಶುಭಾಶಯ, ದರ್ಭಾಂಗ್‌ನ ಜ್ಯೋತಿ ಕುಮಾರಿ ಬಾಲ ಪುರಸ್ಕಾರ ಪ್ರಶಸ್ತಿ ಪಡೆಯುತ್ತಿದ್ದಾರೆ, ಅವರ ಭವಿಷ್ಯಕ್ಕೆ ಶುಭ ಹಾರೈಕೆಗಳು -ನರೇಂದ್ರ ಮೋದಿ
ತಂದೆಯನ್ನು ಕುಳ್ಳಿರಿಸಿ 1200 ಕಿಮೀ ದೂರ ಸೈಕಲ್‌ ತುಳಿದ ಜ್ಯೋತಿಗೆ ʼಬಾಲ ಪುರಸ್ಕಾರʼ

ಲಾಕ್‌ ಡೌನ್ ಕಾಲದಲ್ಲಿ ತನ್ನ ಅನಾರೋಗ್ಯ ಪೀಡಿತ ತಂದೆಯನ್ನು ಹರ್ಯಾಣದಿಂದ ಬಿಹಾರದ ದರ್ಭಂಗಾದ ವರೆಗೆ 1200 ಕಿಮೀ ಸೈಕಲ್‌ನಲ್ಲಿ ಕುಳ್ಳಿರಿಸಿ ಬಂದ 16 ವರ್ಷದ ಜ್ಯೋತಿ ಕುಮಾರಿಗೆ ' ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ' ನೀಡಲಾಗಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ "ಬಿಹಾರಕ್ಕೆ ಶುಭಾಶಯ, ದರ್ಭಾಂಗ್‌ನ ಜ್ಯೋತಿ ಕುಮಾರಿ ಬಾಲ ಪುರಸ್ಕಾರ ಪ್ರಶಸ್ತಿ ಪಡೆಯುತ್ತಿದ್ದಾರೆ, ಅವರ ಭವಿಷ್ಯಕ್ಕೆ ಶುಭ ಹಾರೈಕೆಗಳು" ಎಂದು ಶುಭ ಹಾರೈಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

"ಅವರ ವಯಸ್ಸಿನ ಇತರ ಮಕ್ಕಳಂತೆಯೇ ಅವರು ತೋರಬಹುದು. ಆದರೆ 1200 ಕಿಮೀ ಅನ್ನು ಸೈಕಲ್‌ನಲ್ಲಿ ಪ್ರಯಾಣಿಸುವ, ಅದರಲ್ಲೂ ಅನಾರೋಗ್ಯ ಪೀಡಿತ ತಂದೆಯನ್ನು ಕುಳ್ಳಿರಿಸಿ ಮಾಡುವ ಪ್ರಯಾಣ ಸಾಮಾನ್ಯದ್ದಲ್ಲ" ಎಂದೂ ಅವರು ಟ್ವೀಟ್ ಹೇಳಿದ್ದಾರೆ.

ಜ್ಯೋತಿ ಕುಮಾರಿ ಅವರು ತನ್ನ ಈ ಕಾರ್ಯಕ್ಕಾಗಿ ಜಗತ್ತಿನಾದ್ಯಂತ ಮೆಚ್ಚುಗೆ ಪಡೆದುಕೊಂಡಿದ್ದರು. ಅವರ ಕಥೆ ವೈರಲ್ ಆದ ನಂತರ ಭಾರತೀಯ ಸೈಕ್ಲಿಂಗ್ ಫೆಡರೇಶನ್ ಸೈಕ್ಲಿಂಗ್‌ನಲ್ಲಿ ಭಾಗವಹಿಸುವಂತೆ ಕೇಳಿಕೊಂಡಿತ್ತು. ಆದರೆ ತಾನು ವಿದ್ಯಾವಂತೆ ಆಗಬೇಕೆಂದು ಅವರ ಆಹ್ವಾನವನ್ನು ತಿರಸ್ಕರಿದ್ದರು.

10 ವರ್ಷದ ಚೆಸ್ ಆಟಗಾರ್ತಿ ಅರ್ಷಿಯಾ ದಾಸ್ ಅವರಿಗೆ ಕೂಡಾ ಕ್ರೀಡಾ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಬಾಲ ಪುರಸ್ಕಾರ ಪ್ರಶಸ್ತಿ ನೀಡಲಾಗಿದೆ.

ತಂದೆಯನ್ನು ಕುಳ್ಳಿರಿಸಿ 1200 ಕಿಮೀ ದೂರ ಸೈಕಲ್‌ ತುಳಿದ ಜ್ಯೋತಿಗೆ ʼಬಾಲ ಪುರಸ್ಕಾರʼ
ಜ್ಯೋತಿ ಬಾಳಿಗೆ ಬೆಳಕು ತರುತ್ತಾ ಸೆಕೆಂಡ್ ಹ್ಯಾಂಡ್ ಬೈಸಿಕಲ್..!?

ಇದಲ್ಲದೆ, ಕಲೆ ಮತ್ತು ಸಂಸ್ಕೃತಿ ಕ್ಷೇತ್ರದಲ್ಲಿ ಏಳು ಪ್ರಶಸ್ತಿಗಳನ್ನು ನೀಡಲಾಗಿದೆ, ಹೊಸ ಆವಿಷ್ಕಾರಕ್ಕಾಗಿ ಒಂಬತ್ತು ಪ್ರಶಸ್ತಿಗಳನ್ನು ಮತ್ತು ಪಾಂಡಿತ್ಯಪೂರ್ಣ ಸಾಧನೆಗಳಿಗಾಗಿ ಐದು ಪ್ರಶಸ್ತಿಗಳನ್ನು ನೀಡಲಾಗಿದೆ. ಕ್ರೀಡಾ ವಿಭಾಗದಲ್ಲಿ ಏಳು ಮಕ್ಕಳು ಪ್ರಶಸ್ತಿ ಗೆದ್ದರೆ, ಮೂವರು ಮಕ್ಕಳನ್ನು ಧೈರ್ಯಕ್ಕಾಗಿ ಸನ್ಮಾನಿಸಲಾಗಿದೆ. ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಮಾಡಿದ ಪ್ರಯತ್ನಗಳಿಗಾಗಿ ಒಂದು ಮಗುವನ್ನು ಗೌರವಿಸಲಾಗಿದೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com