ಟೈರ್‌ಗೆ ಬೆಂಕಿ ಹಚ್ಚಿ ಆನೆ ಮೇಲೆ ಎಸೆದ ದುಷ್ಕರ್ಮಿಗಳು - ಗಂಭೀರ ಗಾಯಗೊಂಡ ಆನೆ ಸಾವು

ದುಷ್ಕರ್ಮಿಗಳ ಹೇಯ ಕೃತ್ಯಕ್ಕೆ ಬಲಿಯಾಗಿ ಬೆಂಕಿ ತಗುಲಿ ನೋವಿನಿಂದ ಓಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ಲಾಗಿದೆ. ದುಷ್ಕರ್ಮಿಗಳ ವಿದ್ರಾವಕ ಕೃತ್ಯಕ್ಕೆ ಸ್ಥಳೀಯರಿಂದ ಹಾಗು ಸಾಮಾಜಿಕ ಜಾಲತಾಣ ಬಳಕೆದಾರರಿಂದ ತೀವ್ರ ಖಂಡನೆ ವ್ಯಕ್ತವಾಗಿದೆ.
ಟೈರ್‌ಗೆ ಬೆಂಕಿ ಹಚ್ಚಿ ಆನೆ ಮೇಲೆ ಎಸೆದ ದುಷ್ಕರ್ಮಿಗಳು - ಗಂಭೀರ ಗಾಯಗೊಂಡ ಆನೆ ಸಾವು

ರೆಸಾರ್ಟ್‌ ಸಿಬ್ಬಂದಿ ಟೈರ್‌ಗೆ ಬೆಂಕಿ ಹಚ್ಚಿ ರೆಸಾರ್ಟ್‌ಗೆ ಬಂದ ಆನೆಯ ಮೇಲೆ ಎಸೆದಿರುವ ಪರಿಣಾಮ ಆನೆಯೊಂದು ಮೃತಪಟ್ಟಿದೆ. ತಮಿಳುನಾಡಿನ ನೀಲಗಿರಿ ಜಿಲ್ಲೆಯ ಮಸಿನಗುಡಿಯ ಖಾಸಗಿ ರೆಸಾರ್ಟ್‌ನಲ್ಲಿ ನಡೆದಿದೆ. ಬೆಂಕಿ ತಗುಲಿದ ಆನೆ ನೋವಿನಿಂದ ಕೂಗುತ್ತ ಓಡಲಾರಂಭಿಸಿದೆ, ಗಂಭೀರಗೊಂಡ ಆನೆ ದುಷ್ಕರ್ಮಿಗಳ ಹೇಯ ಕೃತ್ಯಕ್ಕೆ ಪ್ರಾಣ ಕಳೆದುಕೊಂಡಿದೆ.

ಕಾಡಾನೆಯೊಂದು ಹಾದಿ ತಪ್ಪಿ ರೆಸಾರ್ಟ್‌ ಕಡೆಗೆ ಬಂದಿದೆ. ಈ ವೇಳೆ ದುಷ್ಕರ್ಮಿಗಳು ಟೈರ್‌ಗೆ ಬೆಂಕಿ ಹಚ್ಚಿ ಆನೆ ಮೇಲೆ ಎಸೆದಿದ್ದಾರೆ. ಬೆಂಕಿ ಹಚ್ಚಿದ ಟೈರ್ ಆನೆಯ ಕಿವಿಭಾಗಕ್ಕೆ ತಗುಲಿ ತೀವ್ರ ಗಾಯಗೊಂಡಿದ್ದಲ್ಲದೆ, ಅಧಿಕ ರಕ್ತ ಸ್ರಾವಗೊಂಡು ನೋವಿನಿಂದ ಓಡುತ್ತಿರುವ ಆನೆಯನ್ನು ಫಾರೆಸ್ಟ್‌ ನೋಡಿದ್ದಾನೆ. ಗಾಯಗೊಂಡ ಆನೆಗೆ ಅಧಿಕಾರಿಗಳು ತಕ್ಷಣ ಚಿಕಿತ್ಸೆ ನೀಡಿದರು ಗಂಭೀರ ಗಾಯ ಹಾಗು ಅಧಿಕ ರಕ್ತ ಸಾವ್ರದಿಂದ ಆನೆ ಕೊನೆಯುಸಿರೆಳೆದಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ದುಷ್ಕರ್ಮಿಗಳ ಹೇಯ ಕೃತ್ಯಕ್ಕೆ ಬಲಿಯಾಗಿ ಬೆಂಕಿ ತಗುಲಿ ನೋವಿನಿಂದ ಓಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ಲಾಗಿದೆ. ದುಷ್ಕರ್ಮಿಗಳ ವಿದ್ರಾವಕ ಕೃತ್ಯಕ್ಕೆ ಸ್ಥಳೀಯರಿಂದ ಹಾಗು ಸಾಮಾಜಿಕ ಜಾಲತಾಣ ಬಳಕೆದಾರರಿಂದ ತೀವ್ರ ಖಂಡನೆ ವ್ಯಕ್ತವಾಗಿದೆ.

ಈ ಕೃತ್ಯ ಎಸಗಿದ ರೆಸಾರ್ಟ್‌ ಸಿಬ್ಬಂದಿಗಳನ್ನು ಬಂಧಿಸಲಾಗಿದೆ. ರೈಮಾಂಡ್ ಮತ್ತು ಪ್ರಶಾಂತ್‌ ಎಂಬುವವರು ಬಂಧಿತ ಆರೋಪಿಗಳಾಗಿದ್ದು, ಆನೆಯನ್ನು ಓಡಿಸುವ ಸಲುವಾಗಿ ಟೈರ್‌ಗೆ ಬೆಂಕಿ ಹಚ್ಚಿ ಈ ಕೃತ್ಯ ನಡೆಸಲಾಗಿದೆ ಎಂದು ಸಂಬಂಧಪಟ್ಟ ಅರಣ್ಯಾಧಿಕಾರಿಗಳಿಂದ ತಿಳಿದು ಬಂದಿದೆ. ಆರೋಪಿಗಳು ಆನೆಗೆ ಬೆಂಕಿ ಹಚ್ಚಿದ ವಿಡಿಯೋ ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಮನುಷ್ಯನ ಹಿನಾಯ ಕೃತ್ಯಕ್ಕೆ ಕೇರಳದಲ್ಲಿ ಗರ್ಭಿಣಿ ಆನೆಯೊಂದು ಸ್ಫೋಟಕ ತಿಂದು ಸಾವನ್ನಪ್ಪಿತ್ತು. ಇಂತಹದ್ದೆ ಘಟನೆ ತಮಿಳುನಾಡಿನಲ್ಲಿ ನಡೆದಿರುವುದು ಮನುಷ್ಯ ಸಮಾಜಕ್ಕೆ ಮುಜುಗರ ತರುವಂತಹ ಸುದ್ದಿ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com