ಇದೇ ಮೊದಲಲ್ಲ! ಗಣರಾಜ್ಯೋತ್ಸವದಲ್ಲಿ ಈ ಹಿಂದೆಯೂ ನಡೆದಿತ್ತು ಟ್ರ್ಯಾಕ್ಟರ್‌ ಪರೇಡ್!

1952ರಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಟ್ಯಾಕ್ಟರ್‌ಗಳ ಸಾಲು ಸಾಲು ಮೆರವಣಿಗೆ ನಡೆದಿತ್ತು ಎಂಬುದು ಈಗ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ
ಇದೇ ಮೊದಲಲ್ಲ! ಗಣರಾಜ್ಯೋತ್ಸವದಲ್ಲಿ  ಈ ಹಿಂದೆಯೂ ನಡೆದಿತ್ತು ಟ್ರ್ಯಾಕ್ಟರ್‌ ಪರೇಡ್!

ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಹೋರಾಟ ನಡೆಸುತ್ತಿರುವ ರೈತರು ಜ. 26ರಂದು ಟ್ರ್ಯಾಕ್ಟರ್‌ ಪರೇಡ್‌ ನಡೆಸುತ್ತಿರುವುದು ತಿಳಿದೇ ಇದೆ. ಆದರೆ 69 ವರ್ಷಗಳ ಹಿಂದೆ ನಡೆದ ಗಣರಾಜ್ಯೋತ್ಸವಂದು ನಡೆದ ಪರೇಡ್‌ನಲ್ಲಿ ಟ್ಯಾಕ್ಟರ್‌ಗಳು ಸಂಚರಿಸಿದ್ದವು!

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಜ. 26 ರಂದು ಗಣರಾಜ್ಯೋತ್ಸವಂದು ಪರೇಡ್‌ ನಡೆಸುವುದು ರೂಢಿ. ಆ ದಿನ ವಿದೇಶಿ ಗಣ್ಯರೊಬ್ಬರು ಅತಿಥಿಯಾಗಿ ಪಾಲ್ಗೊಳ್ಳುತ್ತಾರೆ ಮತ್ತು ಪರೇಡ್‌ಗೆ ಸಾಕ್ಷಿಯಾಗುತ್ತಾರೆ. ಆದರೆ ಈ ಬಾರಿ ಪರೇಡ್‌ ಸಂದರ್ಭದಲ್ಲಿ ರೈತರು ತಮ್ಮ ಹೋರಾಟದ ಭಾಗವಾಗಿ ಟ್ರ್ಯಾಕ್ಟರ್‌ ಪರೇಡ್‌ ನಡೆಸುವುದನ್ನು ದೇಶಕ್ಕೆ ಮಾಡುವ ಅವಮಾನ ಎಂಬಂತೆ ಬಿಂಬಿಸುವ ಪ್ರಯತ್ನ ಮಾಡಲಾಗುತ್ತಿದೆ.

ಆದರೆ 1952ರಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಟ್ಯಾಕ್ಟರ್‌ಗಳ ಸಾಲು ಸಾಲು ಮೆರವಣಿಗೆ ನಡೆದಿತ್ತು ಎಂಬುದು ಈಗ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.

ಟ್ರ್ಯಾಕ್ಟರ್‌ ಪರೇಡ್‌ ಹೊಸದಲ್ಲ. ಸರ್ಕಾರ ಇದನ್ನು ಅವಮಾನದ ಸಂಗತಿಯಾಗಿ, ಮುಜುಗರದ ವಿಷಯವಾಗಿ ನೋಡುವ ಅಗತ್ಯವಿಲ್ಲ. ಗಣತಂತ್ರ ಪ್ರತಿಯೊಬ್ಬನ ಹಕ್ಕನ್ನು ಎತ್ತಿಹಿಡಯುವ ದಿನ. ಹಾಗಾಗಿ ಅಂದು ಟ್ರ್ಯಾಕ್ಟರ್‌ ಪರೇಡ್‌ ನಡೆಸುವುದೂ ರೈತರ ಹಕ್ಕು ಎಂಬ ಪ್ರತಿಪಾದಿಸಲಾಗುತ್ತಿದೆ.

ಆಗ ಪರೇಡ್‌ನಲ್ಲಿ ಪಾಲ್ಗೊಂಡಿದ್ದ ಟ್ರ್ಯಾಕ್ಟರ್‌ನ ಕಪ್ಪುಬಿಳುಪಿನ ಚಿತ್ರಗಳು ಹರಿದಾಡುತ್ತಿವೆ.

ದೆಹಲಿ ಗಡಿಗಳಲ್ಲಿ ಜ. 26ರ ಪರೇಡ್‌ಗೆ ತಮ್ಮ ಟ್ರ್ಯಾಕ್ಟರ್‌ಗಳಿಗೆ ಅಲಂಕಾರ ಮಾಡುವ ಮೂಲಕ ಸಿದ್ಧತೆ ನಡೆಸುತ್ತಿರುವಾಗ ಐತಿಹಾಸಿಕ ಚಿತ್ರಗಳು ಹರಿದಾಡುತ್ತಿರುವುದು ರೈತರ ಹೋರಾಟಕ್ಕೆ ಹೊಸ ಹುರುಪು ತುಂಬಿದೆ.

ಈ ವರದಿ ‘ಮಾಸ್ ಮೀಡಿಯಾ ಫೌಂಡೇಷನ್’ ನಿಯೋಜಿಸಿರುವ ವಿಶೇಷ ದೆಹಲಿ ತಂಡದಿಂದ ಪಡೆದ ಮಾಹಿತಿ ಆಧರಿಸಿ, ಸಿದ್ಧಪಡಿಸಿದೆ

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com