ಹಠ ಬಿಡದ ಕೇಂದ್ರ –ಧೃಡ ನಿಲುವಿನಲ್ಲಿ ರೈತ: 11ನೇ ಸುತ್ತಿನ ಮಾತುಕತೆಯೂ ವಿಫಲ

ಕೊನೆಯ ಸುತ್ತಿನ ಮಾತುಕತೆಯಲ್ಲಿ, ಎರಡೂ ಕಡೆಯ ಪ್ರತಿನಿಧಿಗಳನ್ನು ಒಳಗೊಂಡ ಜಂಟಿ ಸಮಿತಿಯನ್ನು ನೇಮಕ ಮಾಡಿ, ಕೃಷಿ ಕಾನೂನುಗಳನ್ನು 18 ತಿಂಗಳು ಅಮಾನತುಗೊಳಿಸುವುದಾಗಿ ಸರ್ಕಾರ ಪ್ರಸ್ತಾಪಿಸಿದೆ.
ಹಠ ಬಿಡದ ಕೇಂದ್ರ –ಧೃಡ ನಿಲುವಿನಲ್ಲಿ ರೈತ: 11ನೇ ಸುತ್ತಿನ ಮಾತುಕತೆಯೂ ವಿಫಲ

ತಮ್ಮ ಬೇಡಿಕೆಗಳಲ್ಲಿ ದೃಢವಾಗಿ ನಿಂತಿರುವ ರೈತರು ಕೇಂದ್ರ ಸರ್ಕಾರದ ಹಠಮಾರಿ ಧೋರಣೆಗೆ ತಲಬಾಗಲು ಒಪ್ಪಿಲ್ಲ. ಪರಿಣಾಮ ಕೇಂದ್ರ ಹಾಗೂ ರೈತರ ನಡುವಿನ ಹನ್ನೊಂದನೇ ಸುತ್ತಿನ ಮಾತುಕತೆಯೂ ವಿಫಲಗೊಂಡಿದೆ. ಪದೇ ಪದೇ ಮಾತುಕತೆ ವಿಫಲಗೊಳ್ಳುತ್ತಿರುವುದರಿಂದ ರೈತರ ಹೋರಾಟಕ್ಕೆ ಒಂದು ತಾರ್ಕಿಕ ಅಂತ್ಯ ದೊರೆಯುತ್ತಿಲ್ಲ.

ರೈತರ ನಿರಂತರ ಹೋರಾಟದಿಂದ ವಿಚಲಿತಗೊಂಡಿರುವ ಕೇಂದ್ರ ಸರ್ಕಾರ, ಕೃಷಿ ಕಾಯ್ದೆಯನ್ನು ಒಂದರಿಂದ ಒಂದುವರೆ ವರ್ಷಗಳ ಕಾಲ ತಡೆ ಹಿಡಿಯುವುದಾಗಿ ಹೇಳಿಕೊಂಡಿದೆ. ಆದರೆ, ಈಗಾಗಲೇ ಹೋರಾಟ ನಿರೀಕ್ಷಿತ ಮಟ್ಟಕ್ಕಿಂತಲೂ ಯಶಸ್ವಿಯಾಗಿ ಮುನ್ನಡೆಯುತ್ತಿರುವುದರಿಂದ ರೈತರು ಪ್ರತಿಭಟನೆಯಿಂದ ಹಿಂದೆ ಜರಿಯಲು ಒಪ್ಪಿಕೊಂಡಿಲ್ಲ. ಕೃಷಿ ಕಾಯ್ದೆಗಳನ್ನು ಸಂಪೂರ್ಣವಾಗಿ ಹಿಂಪಡೆಯುವವರೆಗೂ ಪ್ರತಿಭಟನಾ ಸ್ಥಳದಿಂದ ಜಾಗ ಖಾಲಿ ಮಾಡುವುದಿಲ್ಲ ಎಂದು ರೈತರು ಅಚಲವಾದ ಸಂದೇಶ ರವಾನಿಸಿದ್ದಾರೆ.ಇದರಿಂದ 11 ನೇ ಸುತ್ತಿನ ಮಾತುಕತೆಯೂ ಅನಿರ್ದಿಷ್ಟತೆಯಿಂದ ಮುಕ್ತಾಯಗೊಂಡಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ವಿಜ್ಞಾನ ಭವನದಲ್ಲಿ 41 ರೈತ ಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ ಕೇಂದ್ರ ಕೃಷಿ ಮಂತ್ರಿ ನರೇಂದ್ರ ಸಿಂಗ್‌ ತೋಮರ್‌, ರೈಲ್ವೇ, ವಾಣಿಜ್ಯ ಹಾಗೂ ಆಹಾರ ಸಚಿವ ಪಿಯೂಷ್‌ ಗೋಯೆಲ್‌, ವಾಣಿಜ್ಯ ಖಾತೆ ರಾಜ್ಯ ಸಚಿವ ಸೋಮ್‌ ಪ್ರಕಾಶ್‌ ಪಾಲ್ಗೊಂಡಿದ್ದರು. ಆದರೆ, ಮುಂದಿನ ಮಾತುಕತೆಗೆ ಸರ್ಕಾರ ಇನ್ನೂ ಯಾವುದೇ ದಿನಾಂಕವನ್ನೂ ನಿಗದಿ ಪಡಿಸಿಲ್ಲ.

ಕೊನೆಯ ಸುತ್ತಿನ ಮಾತುಕತೆಯಲ್ಲಿ, ಎರಡೂ ಕಡೆಯ ಪ್ರತಿನಿಧಿಗಳನ್ನು ಒಳಗೊಂಡ ಜಂಟಿ ಸಮಿತಿಯನ್ನು ನೇಮಕ ಮಾಡಿ, ಕೃಷಿ ಕಾನೂನುಗಳನ್ನು 18 ತಿಂಗಳು ಅಮಾನತುಗೊಳಿಸುವುದಾಗಿ ಸರ್ಕಾರ ಪ್ರಸ್ತಾಪಿಸಿದೆ. ಆದರೆ ರೈತರು, ಕೃಷಿ ಕಾನೂನುಗಳನ್ನು ರದ್ದು ಪಡಿಸುವುದರ ಹೊರತಾಗಿ ಬೇರೇನೂ ಬೇಡವೆಂದು ಪಟ್ಟು ಹಿಡಿದಿದೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com