ಇಂದು (ಜ.19) ನಡೆಯಬೇಕಾಗಿದ್ದ ರೈತ ಮುಖಂಡರು ಮತ್ತು ಕೇಂದ್ರದ ಮಂತ್ರಿಗಳ ನಡುವಿನ 10ನೇ ಸುತ್ತಿನ ಮಾತುಕತೆ ಜ. 20ರ ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಗಿದೆ.
ಕೃಷಿ ಸಚಿವ ನರೇಂದ್ರ ಸಿಂಗ್ ತಡರಾತ್ರಿ ರೈತ ಮುಖಂಡರಿಗೆ ಬರೆದಿರುವ ಪತ್ರದಲ್ಲಿ, ತಳ್ಳಿ ಹಾಕಲಾದ ಕಾರಣಗಳಿಂದಾಗಿ ಇಂದು ಸಭೆ ನಡೆಸಲಾಗುತ್ತಿಲ್ಲ ಎಂದು,' ಜ. 20ರಂದು ಮಧ್ಯಾಹ್ನ 2 ಗಂಟೆಗೆ ವಿಜ್ಞಾನ್ ಭವನದಲ್ಲಿ ಸಭೆ ನಡೆಸಲಾಗುವುದು'' ಎಂದು ತಿಳಿಸಲಾಗಿದೆ.
ಮಧ್ಯಪ್ರದೇಶದ ತಮ್ಮ ಕ್ಷೇತ್ರದ ವೀಕ್ಷಣೆಗೆ ತೆರಳಿದ್ದ ಕೃಷಿ ಸಚಿವ ನರೇಂದ್ರ ಸಿಮಗ್ ತೋಮರ್ ಸೋಮವಾರ ತಡರಾತ್ರಿ ದೆಹಲಿಗೆ ಮರಳಿದರು. ಗ್ವಾಲಿಯರ್ನಲ್ಲಿ ಪತ್ರಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ರೈತ ಸಂಘಟನೆಗಳು ಕಾಯ್ದೆಗಳಲ್ಲಿರುವ ನಿರ್ದಿಷ್ಟ ರಿಯಾಯಿತಿಗಳ ಕುರಿತು ಚರ್ಚಿಸುವುದಕ್ಕೆ ಮನಸ್ಸು ಮಾಡುತ್ತಿಲ್ಲ. ಪಟ್ಟು ಸಡಿಸಲು ಸಿದ್ಧರೇ ಇಲ್ಲ. ನಾಳೆ ಸಭೆ ಇದೆ. ಅಲ್ಲಿ ರೈತ ಸಂಘಟನೆಗಳು ಪರ್ಯಾಯ ಸಾಧ್ಯತೆಗಳ ಕುರಿತು ಚರ್ಚಿಸುವ ನಂಬಿಕೆ ಇದೆ. ಹಾಗಾದರೆ ನಾವು ಪರಿಹಾರ ಕಂಡುಕೊಳ್ಳಲು ಸಾಧ್ಯ'' ಎಂದಿದ್ದರು.
ಈ ವರದಿ ‘ಮಾಸ್ ಮೀಡಿಯಾ ಫೌಂಡೇಷನ್’ ನಿಯೋಜಿಸಿರುವ ವಿಶೇಷ ದೆಹಲಿ ತಂಡದಿಂದ ಪಡೆದ ಮಾಹಿತಿ ಆಧರಿಸಿ, ಸಿದ್ಧಪಡಿಸಿದೆ