ಅರ್ನಾಬ್‌ ವಿರುದ್ದ ಯುವ ಕಾಂಗ್ರೆಸ್‌ನಿಂದ ಪ್ರತಿಭಟನೆ; ಅರ್ನಾಬ್‌ ಬಂಧನಕ್ಕೆ ಆಗ್ರಹ

ದೇಶದ ಶತ್ರುಗಳ ಮೇಲೆ ಸರ್ಜಿಕಲ್‌ ಸ್ಟ್ರೈಕ್‌ ನಡೆಸಬಹುದು. ಆದರೆ, ದೇಶದಲ್ಲಿ ಕುಳಿತು ಶತ್ರುಗಳಿಗೆ ಸಹಾಯ ಮಾಡುವವರಿಗೆ ಏನು ಮಾಡಬಹುದು? ಎಂದು ಭಾರತೀಯ ಯುವ ಕಾಂಗ್ರೆಸ್‌ ಅಧ್ಯಕ್ಷ ಶ್ರೀನಿವಾಸ್‌ ಬಿ ವಿ ಪ್ರಶ್ನಿಸಿದ್ದಾರೆ.
ಅರ್ನಾಬ್‌ ವಿರುದ್ದ ಯುವ ಕಾಂಗ್ರೆಸ್‌ನಿಂದ ಪ್ರತಿಭಟನೆ; ಅರ್ನಾಬ್‌ ಬಂಧನಕ್ಕೆ ಆಗ್ರಹ

ಭಾರತೀಯ ಯುವ ಕಾಂಗ್ರೆಸ್‌ ವತಿಯಿಂದ ಅರ್ನಾಬ್‌ ಗೋಸ್ವಾಮಿ, ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ವಿರುದ್ದ ಪ್ರತಿಭಟನೆ ನಡೆಸಲಾಯಿತು. ಅರ್ನಾಬ್‌ ಗೋಸ್ವಾಮಿ ಅವರ ವಾಟ್ಸಾಪ್‌ ಮೆಸೇಜ್‌ಗಳು ಸೋರಿಕೆಯಾಗಿ, ಅದರಲ್ಲಿ ದೇಶದ ಆಂತರಿಕ ಭದ್ರತೆಗೆ ಸಂಬಂಧಿಸಿದ ಮಾಹಿತಿಗಳು ಬಹಿರಂಗಗೊಂಡ ಹಿನ್ನೆಲೆಯಲ್ಲಿ ಅರ್ನಾಬ್‌ ಅವರನ್ನು ಬಂಧಿಸುವಂತೆ ಯುವ ಕಾಂಗ್ರೆಸ್‌ ಆಗ್ರಹಿಸಿದೆ.

ಈ ವೇಳೆ ಮಾತನಾಡಿದ ರಾಷ್ಟ್ರೀಯ ಯುವ ಕಾಂಗ್ರೆಸ್‌ ಅಧ್ಯಕ್ಷ ಶ್ರೀನಿವಾಸ್‌ ಬಿ ವಿ ಅವರು, ರೈತರನ್ನು ಭಯೋತ್ಪಾದಕರು ಎಂದು ಕರೆದು ಪುಲ್ವಾಮಾ ದಾಳಿಯನ್ನು ಸಂಭ್ರಮಿಸಿರುವುದನ್ನು ರಾಷ್ಟ್ರೀಯತೆ ಎಂದು ಹೇಗೆ ಕರೆಯಲು ಸಾಧ್ಯ? ಬಾಲಾಕೋಟ್‌ ದಾಳಿ ಬಗ್ಗೆ ಮೂರು ದಿನಗಳ ಹಿಂದೆಯೇ ಅರ್ನಾಬ್‌ ಗೋಸ್ವಾಮಿಗೆ ಮಾಹಿತಿ ಹೇಗೆ ದೊರೆಯಿತು? ಅವರಿಗೆ ಮಾಹಿತಿಯನ್ನು ಸೋರಿಕೆ ಮಾಡಿದ್ದು ಯಾರು? ಇದೊಂದು ಗಂಭೀರವಾದ ಆಂತರಿಕ ಭದ್ರತೆಯ ವಿಚಾರ. ಈ ಕುರಿತಾಗಿ ಸಮಗ್ರ ತನಿಖೆ ನಡೆಯಬೇಕಾಗಿದೆ, ಎಂದು ಹೇಳಿದ್ದಾರೆ

“ದೇಶದ ಶತ್ರುಗಳ ಮೇಲೆ ಸರ್ಜಿಕಲ್‌ ಸ್ಟ್ರೈಕ್‌ ನಡೆಸಬಹುದು. ಆದರೆ, ದೇಶದಲ್ಲಿ ಕುಳಿತು ಶತ್ರುಗಳಿಗೆ ಸಹಾಯ ಮಾಡುವವರಿಗೆ ಏನು ಮಾಡಬಹುದು? ಪುಲ್ವಾಮ ಮತ್ತು ಬಾಲಾಕೋಟ್‌ ದಾಳಿಯ ಬಗ್ಗೆ ಪ್ರಧಾನಿಗಳೇ ಮಾಹಿತಿಯನ್ನು ಸೋರಿಕೆ ಮಾಡಿದ್ದರೇ?” ಎಂದು ಪ್ರಶ್ನಿಸಿದ್ದಾರೆ.

ಇದರೊಂದಿಗೆ ಅರ್ನಾಬ್‌ ಗೋಸ್ವಾಮಿ ಬಂಧನಕ್ಕೂ ಶ್ರೀನಿವಾಸ್‌ ಅವರು ಆಗ್ರಹಿಸಿದ್ದಾರೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com