ಹೊಸ ಪ್ರೈವೆಸಿ ಪಾಲಿಸಿಯನ್ನು ಮೂರು ತಿಂಗಳುಗಳ ಕಾಲ ತಡೆಹಿಡಿದ ವಾಟ್ಸಪ್

ಮೂರು ತಿಂಗಳ ವಿಳಂಬವನ್ನು ಕಂಪೆನಿಯು ಬದಲಾವಣೆಯ ಕುರಿತು ಜನತೆಗೆ ಮನವರಿಕೆ ಮಾಡಿಕೊಡಲು ಬಳಸುತ್ತೇವೆ ಮತ್ತು ವೈಯಕ್ತಿಕ ಚಾಟ್, ಲೋಕೇಶನ್ ಶೇರಿಂಗ್ ಹಾಗೂ ಇತರ ಸೂಕ್ಷ್ಮ ಮಾಹಿತಿಗಳನ್ನು ಹೇಗೆ ಸಂರಕ್ಷಿಸಲಾಗುತ್ತದೆ ಎಂಬುವುದರ ಬಗ್ಗೆ ಮಾಹಿತಿ ನೀಡಲು ಬಳಸುತ್ತೇವೆ ಎಂದು ಕಂಪೆನಿ ಹೇಳಿಕೊಂಡಿದೆ.
ಹೊಸ ಪ್ರೈವೆಸಿ ಪಾಲಿಸಿಯನ್ನು ಮೂರು ತಿಂಗಳುಗಳ ಕಾಲ ತಡೆಹಿಡಿದ ವಾಟ್ಸಪ್

ತನ್ನ ಹೊಸ ಪ್ರೈವೆಸಿ ಪಾಲಿಸಿಯ‌ ಅನುಷ್ಠಾನವನ್ನು ಮೂರು ತಿಂಗಳುಗಳ ಕಾಲ ತಡೆ ಹಿಡಿಯಲಾಗುತ್ತದೆ ಎಂದು ವಾಟ್ಸಪ್ ಘೋಷಿಸಿದೆ. ಹೊಸ ಪಾಲಿಸಿಗೆ ವ್ಯಾಪಕ ಟೀಕೆ ಎದುರಾಗಿ ಬಳಕೆದಾರರು ಟೆಲಿಗ್ರಾಂ ಮತ್ತು ಸಿಗ್ನಲ್ ಆ್ಯಪ್ ಕಡೆಗೆ ವಲಸೆ ಹೋಗಲು‌ ಪ್ರಾರಂಭಿಸಿದ್ದರು.

ಆರಂಭದಲ್ಲಿ ಫೆಬ್ರವರಿ8ರ ನಂತರ ಹೊಸ ಒಡಬಂಡಿಕೆಗಳಿಗೆ ಒಪ್ಪದ ಬಳಕೆದಾರರ ಅಕೌಂಟನ್ನು ಸಸ್ಪೆಂಡ್ ಮಾಡಲಾಗುವುದು ಎಂದು ವಾಟ್ಸಪ್ ಘೋಷಿಸಿತ್ತು. ಈಗ ಆ ಅವಧಿಯನ್ನು ಮೇ 15ರವರೆಗೆ ವಿಸ್ತರಿಸಲಾಗಿದೆ. ವೈಯಕ್ತಿಕ ಸಂವಹನಗಳನ್ನು, ಪ್ರೊಫೈಲ್ ಮಾಹಿತಿಗಳನ್ನು ವಾಟ್ಸಾಪ್ ಓದುವುದಿಲ್ಲ ಅಥವಾ ಫೇಸ್‌ಬುಕ್‌‌ನೊಂದಿಗೆ ಹಂಚಿಕೊಳ್ಳುವುದಿಲ್ಲ ಎಂದು ಕಂಪೆನಿ ಸ್ಪಷ್ಟಪಡಿಸಿದೆ.

"ನೀವು ನಿಮ್ಮ ಗೆಳೆಯರೊಂದಿಗೆ ಮತ್ತು ಕುಟುಂಬದೊಂದಿಗೆ ಹಂಚಿಕೊಂಡ ಮಾಹಿತಿಗಳು ನಿಮ್ಮ ಮಧ್ಯೆಯೇ ಇರುತ್ತವೆ. ಎಂಡ್ ಟು ಎಂಡ್ ಎನ್ಕ್ರಿಪ್ಷನ್ ಮೂಲಕ ನಾವು ನಿಮ್ಮ ವೈಯುಕ್ತಿಕ ಮಾಹಿತಿಗಳನ್ನು ಸಂರಕ್ಷಿಸುತ್ತೇವೆ. ವಾಟ್ಸಪ್ ಅಥವಾ ಫೇಸ್‌ಬುಕ್‌ ನಿಮ್ಮ ಸಂದೇಶಗಳನ್ನು, ಕರೆಗಳನ್ನು ಓದುವುದಿಲ್ಲ. ನಾವು ನಿಮ್ಮ ಲೊಕೇಶನ್ ಮತ್ತು ಕಾಂಟಟಕ್ಟ್ ಲಿಸ್ಟನ್ನು ಫೇಸ್‌ಬುಕ್‌‌ನೊಂದಿಗೆ ಶೇರ್ ಮಾಡಿಕೊಳ್ಳುವುದಿಲ್ಲ" ಎಂದಿದೆ. "ಫೆಬ್ರವರಿ ಎಂಟರಿಂದ ಯಾರ ಅಕೌಂಟೂ ಡಿಲೀಟ್ ಅಥವಾ ಸಸ್ಪೆಂಡ್ ಆಗುವುದಿಲ್ಲ. ನಾವು ಜನತೆಯ ನಡುವೆ ಹರಿದಾಡುತ್ತಿರುವ ತಪ್ಪು ಮಾಹಿತಿಗಳನ್ನು ಹೋಗಲಾಡಿಸುತ್ತೇವೆ" ಎಂದಿದೆ.

ಶುಕ್ರವಾರ ಕಂಪೆನಿಯು ಹೊಸ ಬ್ಲಾಗ್ ಪೋಸ್ಟ್ ಒಂದನ್ನು ಬಿಡುಗಡೆ ಮಾಡಿದ್ದು ಅದರಲ್ಲಿ ಒಬ್ಬ ವ್ಯಕ್ತಿ ವಾಟ್ಸಪ್ ಬಳಸುವಾಗ ಯಾವೆಲ್ಲಾ ಮಾಹಿತಿಗಳು ಗೌಪ್ಯವಾಗಿರುತ್ತವೆ ಎನ್ನುವ ಪಟ್ಟಿಯೊಂದನ್ನು ತಯಾರಿಸಲಾಗಿದೆ.

"ವಾಟ್ಸಪ್‌ನ ಬ್ಯುಸಿನೆಸ್ ಅಕೌಂಟಿನ ಮಾಹಿತಿಗಳನ್ನು ಮಾತ್ರ ಸಂಗ್ರಹಿಸಲಿದ್ದು, ವ್ಯವಹಾರದಲ್ಲಿ ಪಾರದರ್ಶಕತೆ ತರಲು ಈ ಕ್ರಮ ಕೈಗೊಳ್ಳಲಾಗಿದೆ. ಸದ್ಯಕ್ಕೆ ಹೆಚ್ಚಿನ ಬಳಕೆದಾರರು ಬ್ಯುಸಿನೆಸ್ ಆ್ಯಪನ್ನು ಬಳಸದಿಲ್ಲ ಆದರೆ ಮುಂದಕ್ಕೆ ಬಳಸುವಂತಾದ ಈ ಸೇವೆಗಳ ಬಗ್ಗೆ ಮಾಹಿತಿ ಇರಲಿ ಎನ್ನುವ ಕಾರಣಕ್ಕಾಗಿ ಹೊಸ ಪಾಲಿಸಿಯನ್ನು ಕಾರ್ಯಗತಗೊಳಿಸಲು ಉದ್ದೇಶಿಸಲಾಗಿತ್ತು" ಎಂದು ಹೇಳಿಕೆ ಬಿಡುಗಡೆ ಮಾಡಿದೆ. 

ಮೂರು ತಿಂಗಳ ವಿಳಂಬವನ್ನು ಕಂಪೆನಿಯು ಬದಲಾವಣೆಯ ಕುರಿತು ಜನತೆಗೆ ಮನವರಿಕೆ ಮಾಡಿಕೊಡಲು ಬಳಸುತ್ತೇವೆ ಮತ್ತು ವೈಯಕ್ತಿಕ ಚಾಟ್, ಲೋಕೇಶನ್ ಶೇರಿಂಗ್ ಹಾಗೂ ಇತರ ಸೂಕ್ಷ್ಮ ಮಾಹಿತಿಗಳನ್ನು ಹೇಗೆ ಸಂರಕ್ಷಿಸಲಾಗುತ್ತದೆ ಎಂಬುವುದರ ಬಗ್ಗೆ ಮಾಹಿತಿ ನೀಡಲು ಬಳಸುತ್ತೇವೆ ಎಂದು ಹೇಳಿಕೊಂಡಿದೆ.

With regards,

ಫಾತಿಮಾ ರಲಿಯಾ

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com