ಗಂಗೂಲಿ ಹೃದಯಾಘಾತಕ್ಕೆ ಮರುಗುವ ಪ್ರಧಾನಿ ಮೃತ ರೈತರಿಗೆ ಮರುಗುತ್ತಿಲ್ಲ -ಯೋಗೇಂದ್ರ ಯಾದವ್

"ಸ್ವತಃ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಜೊತೆ ಗುರುತಿಸಿಕೊಂಡಿರುವ ರೈತ ಸಂಘಟನೆಗಳು ಕೂಡಾ ಈ ಕುರಿತು ತಮ್ಮನ್ನು ಸಂಪರ್ಕಿಸಿಲ್ಲ ಎಂದು ಹೇಳುತ್ತಿವೆ. ಈಗ ಮೋದಿ ಮಾತ್ರ ನಾನು ರೈತರಿಗೆ ಉಡುಗೊರೆ ನೀಡಿದ್ದೇನೆ ಎಂದು ಹೇಳುತ್ತಿದ್ದಾರೆ" ಎಂದು ಯಾದವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಂಗೂಲಿ ಹೃದಯಾಘಾತಕ್ಕೆ ಮರುಗುವ ಪ್ರಧಾನಿ ಮೃತ ರೈತರಿಗೆ ಮರುಗುತ್ತಿಲ್ಲ -ಯೋಗೇಂದ್ರ ಯಾದವ್

ರೈತ ಪ್ರತಿಭಟನೆಯಲ್ಲಿ 60 ಕ್ಕೂ ಹೆಚ್ಚು ರೈತರು ಸಾವನ್ನಪ್ಪಿದ್ದಾರೆ. ಈ ಘಟನೆಗೆ ಕಲ್ಲು ಕೂಡ ಕರಗಬಹುದು, ಆದರೆ ಪ್ರಧಾನಿ ನರೇಂದ್ರ ಮೋದಿಯ ಹೃದಯ ಕರಗಲಿಲ್ಲ. ಸೌರವ್ ಗಂಗೂಲಿಯ ಹೃದಯಾಘಾತಕ್ಕಾಗಿ ಮರುಗಿ ಟ್ವೀಟ್ ಮಾಡಿರುವ ಅವರು ಮಡಿದ ರೈತರಿಗಾಗಿ ಮರುಗದೆ ಇರುವುದು ವಿಪರ್ಯಾಸ ಎಂದು ರೈತ ಹೋರಾಟದ ಮುಖಂಡ, ಸ್ವರಾಜ್ ಇಂಡಿಯಾ ಪಕ್ಷದ ನಾಯಕ ಯೋಗೇಂದ್ರ ಯಾದವ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೈತ-ಕಾರ್ಮಿಕ-ದಲಿತ-ಜನಪರ ಸಂಘಟನೆಗಳ "ಐಕ್ಯ ಹೋರಾಟ’’ವು ಶನಿವಾರ ಬೆಂಗಳೂರಿನಲ್ಲಿ ಆಯೋಜಿಸಿದ್ದ, "ರಾಷ್ಟ್ರೀಯ ನಾಯಕರೊಡನೆ ಮುಕ್ತ ಸಂವಾದ” ಕಾರ್ಯಕ್ರಮದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು "ರೈತ ಮುಖಂಡರಾದ ಗೋಪಾಲ ಗೌಡ, ನಂಜುಂಡಸ್ವಾಮಿ, ಪುಟ್ಟಣ್ಣಯ್ಯ ಅವರು ರೈತರು ಯಾವಾಗ ಎದ್ದೇಳುತ್ತಾರೆ ಎಂದು ಮಾತನಾಡುತ್ತಿದ್ದರು. ಆ ದಿನ ಇಂದು ಬಂದಿದೆ. ಅವರುಗಳ ಆತ್ಮಗಳು ಈ ಎಲ್ಲವನ್ನು ಮೇಲಿನಿಂದ ನೋಡುತ್ತಿವೆ ಮತ್ತು ನಮಗೆ ಆಶೀರ್ವಾದ ಮಾಡುತ್ತಿವೆ" ಎಂದು ಹೇಳಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಕೃಷಿ ಕಾನೂನಿನ ಬಗ್ಗೆ ಚರ್ಚಿಸಲು ನೀವು ಯಾವುದಾದರೂ ರೈತ ಸಂಘಟನೆಗಳನ್ನು ಸಂಪರ್ಕಿಸಿದ್ದೀರಾ? ಎಂದು ಪ್ರಶ್ನಿಸಿದ ಯೋಗೇಂದ್ರ ಯಾದವ್‌, 'ಈ ಕಾನೂನುಗಳನ್ನು ಹೇರುವ ಮೂಲಕ ರೈತರಿಗೆ ಐತಿಹಾಸಿಕ ಉಡುಗೊರೆಯನ್ನು ನೀಡಲು ಬಯಸುತ್ತೇನೆ ಎಂದು ಮೋದಿ ಹೇಳುತ್ತಾರೆ. ಆದರೆ ರೈತರೇ ಈ ಕಾನೂನಿನ ಅಗತ್ಯವಿಲ್ಲ ಎಂದು ಹೇಳುತ್ತಿದ್ದಾರೆ' ಎಂದು ಹೇಳಿದ್ದಾರೆ.

"ಸ್ವತಃ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಜೊತೆ ಗುರುತಿಸಿಕೊಂಡಿರುವ ರೈತ ಸಂಘಟನೆಗಳು ಕೂಡಾ ಈ ಕುರಿತು ತಮ್ಮನ್ನು ಸಂಪರ್ಕಿಸಿಲ್ಲ ಎಂದು ಹೇಳುತ್ತಿವೆ. ಈಗ ಮೋದಿ ಮಾತ್ರ ನಾನು ರೈತರಿಗೆ ಉಡುಗೊರೆ ನೀಡಿದ್ದೇನೆ ಎಂದು ಹೇಳುತ್ತಿದ್ದಾರೆ" ಎಂದು ಯಾದವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com