ಧ್ವೇಷ ಭಾಷಣಕ್ಕೆ ಕುಖ್ಯಾತಿಯಾಗಿರುವ ಕಪಿಲ್‌ ಮಿಶ್ರಾರಿಂದ ಆನ್‌ಲೈನ್‌ ಪತ್ರಿಕೋದ್ಯಮ ಕೋರ್ಸ್!

ದ್ವೇಷದ ಭಾಷಣಗಳನ್ನು ಮಾಡಿದ ಆರೋಪ ಹೊತ್ತಿರುವ ಬಿಜೆಪಿ ನಾಯಕ ಕಪಿಲ್ ಮಿಶ್ರಾ ಅವರು ಮಾಜಿ ಐಎಎಸ್ ಅಧಿಕಾರಿಯೊಂದಿಗೆ ಸೇರಿಕೊಂಡು ಮೊಬೈಲ್ ಪತ್ರಿಕೋದ್ಯಮ ಕೋರ್ಸ್ ಆರಂಬಿಸಿದ್ದಾರೆ.
ಧ್ವೇಷ ಭಾಷಣಕ್ಕೆ ಕುಖ್ಯಾತಿಯಾಗಿರುವ ಕಪಿಲ್‌ ಮಿಶ್ರಾರಿಂದ ಆನ್‌ಲೈನ್‌ ಪತ್ರಿಕೋದ್ಯಮ ಕೋರ್ಸ್!

ನಮ್ಮ ದೇಶದಲ್ಲಿ ರಾಜಕಾರಣಿಗಳಿಗೂ ಪತ್ರಿಕೋದ್ಯಮಿಗಳಿಗೂ ಅಷ್ಟಾಗಿ ಆಗಿ ಬರುವುದಿಲ್ಲ. ರಾಜಕಾರಣಿಗಳ ತಾಳಕ್ಕೆ ತಕ್ಕಂತೆ ಕುಣಿಯು ಪತ್ರಕರ್ತರಾದರೆ ಮಾತ್ರ ರಾಜಕಾರಣಿಗಳು ಅವರನ್ನು ಒಪ್ಪುತ್ತಾರೆ ಅವರಿಗೆ ಆದಾಯವನ್ನು ಮಾಡಿಕೊಡುತ್ತಾರೆ. ಆದರೆ ಪತ್ರಕರ್ತನೊಬ್ಬ ನಿಷ್ಪಕ್ಷಪಾತವಾಗಿ ಬರೆಯುತ್ತೇನೆ ಎಂದರೆ ರಾಜಕಾರಣಿಗಳು ಸದಾ ಆತನ ವಿರುದ್ದ ಕೆಂಡ ಕಾರುತ್ತಾರೆ. ಏಕೆಂದರೆ ನಮ್ಮ ದೇಶದ ರಾಜಕೀಯ ವ್ಯವಸ್ಥೆಯಲ್ಲಿ ಪಕ್ಷಾತೀತವಾಗಿ ಶೇಕಡಾ 90 ರಷ್ಟು ಭ್ರಷ್ಟರೇ ಇದ್ದಾರೆ. ಇದು ಈ ದೇಶದ ದುರಂತವೂ ಹೌದು.


ಇದೀಗ ಈ ಹಿಂದೆ ದ್ವೇಷದ ಭಾಷಣಗಳನ್ನು ಮಾಡಿದ ಆರೋಪ ಹೊತ್ತಿರುವ ಬಿಜೆಪಿ ನಾಯಕ ಕಪಿಲ್ ಮಿಶ್ರಾ ಅವರು ಮಾಜಿ ಐಎಎಸ್ ಅಧಿಕಾರಿಯೊಂದಿಗೆ ಸೇರಿಕೊಂಡು ಮೊಬೈಲ್ ಪತ್ರಿಕೋದ್ಯಮ ಕೋರ್ಸ್ ಆರಂಬಿಸಿದ್ದಾರೆ. ಇದು ಆನ್ಲೈನ್ ಕೋರ್ಸ್ ಆಗಿದ್ದು ಉತ್ತರ ಪ್ರದೇಶದ ನೋಯ್ಡಾದಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಫೋಟೋಗ್ರಫಿ ಅಕಾಡೆಮಿಯ ಸಹಯೋಗದೊಂದಿಗೆ ಜನವರಿ 16 ರಿಂದ ಈ ಕೋರ್ಸ್ ಆರಂಭಗೊಂಡಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಈ ಕೋರ್ಸ್ ಪ್ರಚಾರ-ನಿರ್ವಹಣಾ ಪತ್ರಿಕೋದ್ಯಮ ವಿಷಯವನ್ನು ಕಲಿಸುತ್ತದೆ. ಇದರಲ್ಲಿ ಪ್ರಚಾರ ಶಬ್ದಕೋಶ, ಹಳದಿ ಪತ್ರಿಕೋದ್ಯಮ ಬಯಲು ಮಾಡುವುದು , ಮಾಧ್ಯಮ -ಕಾರ್ಪೊರೇಟ್ ಸಂಬಂಧಗಳು ಮತ್ತು ಲುಟ್ಯೆನ್ ಮಾಧ್ಯಮ ಮತ್ತು ಅದರ ಪ್ರಭಾವ ದ ಪಠ್ಯವನ್ನು ಒಳಗೊಂಡಿರುತ್ತದೆ. ಈ ಕುರಿತು ಫೇಸ್ಬುಕ್ನಲ್ಲಿ ಮಿಶ್ರಾ ಅವರು ಮಾಹಿತಿ ನೀಡಿದ್ದು ಈ ಕೋರ್ಸ್ ಮೂಲಕ, ನೀವು ಸ್ವಂತ ನಿರೂಪಣೆಯನ್ನು ಮಾಡಲು ಕಲಿಯಿರಿ ಎಂದು ಹೇಳಲಾಗಿದೆ. ಮೂರು ತಿಂಗಳ ಅವಧಿಯ ಈ ಕೋರ್ಸ್ಗೆ ಮಿಶ್ರಾ ಮತ್ತು ಮಾಜಿ ಐಎಎಸ್ ಅಧಿಕಾರಿ ಸಂಜಯ್ ದೀಕ್ಷಿತ್ ಮಾರ್ಗದರ್ಶನ ನೀಡಲಿದ್ದಾರೆ. ಪ್ರಚಾರ-ನಿರ್ವಹಣಾ ಪತ್ರಿಕೋದ್ಯಮ ವನ್ನು ಕಲಿಸುವ ಹೊರತಾಗಿ, ಇದು ಹಣವನ್ನು ಹೇಗೆ ಸಂಪಾದಿಸುವುದು, ಯೂಟ್ಯೂಬ್ ಗೆ ವೀಡಿಯೊಗಳನ್ನು ಹೇಗೆ ತಯಾರಿಸುವುದು, ಹೊಸ ಆಲೋಚನೆಗಳೊಂದಿಗೆ ಹೆಚ್ಚಿನ ಪ್ರೇಕ್ಷಕರನ್ನು ಆಕರ್ಷಿಸುವುದು ಮತ್ತು ಸಾಮಾಜಿಕ ಮಾಧ್ಯಮ ತಂತ್ರಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಕುರಿತು ಸೆಷನ್ಗಳನ್ನು ನಡೆಸುತ್ತದೆ. ಕೋರ್ಸ್ನ ಕೊನೆಯಲ್ಲಿ, ವಿದ್ಯಾರ್ಥಿಗಳು ಪ್ರಾಯೋಗಿಕ ಅನುಭವಕ್ಕಾಗಿ ಒಂದು ತಿಂಗಳ
ಇಂಟರ್ನ್ಶಿಪ್ ಕೂಡ ಇರುತ್ತದೆ.

ಧ್ವೇಷ ಭಾಷಣಕ್ಕೆ ಕುಖ್ಯಾತಿಯಾಗಿರುವ ಕಪಿಲ್‌ ಮಿಶ್ರಾರಿಂದ ಆನ್‌ಲೈನ್‌ ಪತ್ರಿಕೋದ್ಯಮ ಕೋರ್ಸ್!
ದೆಹಲಿ ಬಿಜೆಪಿ ನಾಯಕ ಕಪಿಲ್ ಮಿಶ್ರಾ ವಿರುದ್ದ ದೂರು ದಾಖಲುಬಿಜೆಪಿಯ ನಾಯಕ ಈ ಎಲ್ಲಾ ಮಾಹಿತಿಯನ್ನು ತಮ್ಮ ಪೇಸ್ ಬುಕ್ ಖಾತೆಯಲ್ಲಿ ಪ್ರಕಟಿಸಿದ್ದು ಇದಕ್ಕೆ ವಿದ್ಯಾರ್ಥಿಗಳು ಯಾವ ರೀತಿ ಸ್ಪಂದನೆ ನೀಡಿದ್ದಾರೆ ಎಂಬ
ವಿಷಯ ತಿಳಿದು ಬಂದಿಲ್ಲ. ಬರೇ ದ್ವೇಷ ಭಾಷಣಗಳನ್ನು ನೀಡುವುದನ್ನೆ ಕಾಯಕ ಮಾಡಿಕೊಂಡಿರುವ ಬಿಜೆಪಿಯ ಈ ನಾಯಕ ಆರಂಬಿಸಿರುವ ಕೋರ್ಸ್ ಇವರಂತೆಯೇ ಮನೋಭಾವನೆ ಹೊಂದುವ ವರನ್ನು ತಯಾರು ಮಾಡುತ್ತದೆಯೋ ಅಥವಾ ಯಾರನ್ನು ತಯಾರು ಮಾಡುತ್ತದೆಯೋ ಕಾದು ನೋಡಬೇಕಷ್ಟೆ. ಈ ವಿವಾದಗಳಿಗೆ ಹೆಸರಾದ ಬಿಜೆಪಿ ನಾಯಕ ಕಳೆದ ಫೆಬ್ರುವರಿಯಲ್ಲಿ ಸಿಏಏ ಮತ್ತು ಎನ್ಆರ್ಸಿ ವಿರೋಧಿಸಿ ನಡೆಯುತಿದ್ದ ಪ್ರತಿಭಟನೆಯ ವೇಳೆ ದೆಹಲಿಯ ಜಾಫರಾಬಾದ್ ನಲ್ಲಿ ಜನರು ಸೇರಬೇಕೆಂದು ಟ್ವಿಟರ್ ನಲ್ಲಿ ಕರೆ ನೀಡಿದ್ದರು.

ಧ್ವೇಷ ಭಾಷಣಕ್ಕೆ ಕುಖ್ಯಾತಿಯಾಗಿರುವ ಕಪಿಲ್‌ ಮಿಶ್ರಾರಿಂದ ಆನ್‌ಲೈನ್‌ ಪತ್ರಿಕೋದ್ಯಮ ಕೋರ್ಸ್!
ಮಾನನಷ್ಟ ಪ್ರಕರಣ: ಬೇಷರತ್ ಕ್ಷಮೆ ಯಾಚಿಸಿದ ಬಿಜೆಪಿಯ ಕಪಿಲ್ ಮಿಶ್ರಾ

ಜಾಫರಾಬಾದ್ ಮತ್ತೊಂದು ಶಹೀನ್ ಭಾಗ್ ಆಗುವದನ್ನು ತಡೆಯಲು ಅವರು ತಮ್ಮ ಬೆಂಬಲಿಗರಿಗೆ ಕರೆ ನೀಡಿದ್ದರು. ಇವರ ಕರೆಯಂತೆ ನೂರಾರು ಜನರು ಜಾಫರಾಬಾದ್ ಮೆಟ್ರೋ ನಿಲ್ದಾಣದ ಬಳಿ ಸೇರಿದರು. ಆಗ ಸಿಏಏ ಪರ ಮತ್ತು ವಿರೋಧಿಗಳ ನಡುವೆ ಹಿಂಸೆ ಭುಗಿಲೆದ್ದು ನಂತರ ಅದು ಕೋಮು ರೂಪಕ್ಕೆ ತಿರುಗಿತು. ಈ ಕೋಮು ಗಲಭೆಯಲ್ಲಿ ಸುಮಾರು 50 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ಇದಕ್ಕೂ ಮೊದಲು ಇವರು ಸಿಏಏ ಮತ್ತು ಎನ್ಆರ್ಸಿ ವಿರೋಧಿ ಹೋರಾಟಗಾರರನ್ನು ಮೂರು ದಿನಗಳೊಳಗೆ ರಸ್ತೆಗಳಿಂದ ತೆರವು ಮಾಡುವಂತೆ ಪೋಲೀಸರಿಗೇ ಬೆದರಿಕೆ ಒಡ್ಡಿದ್ದರು. ಇವರು ಕೋಮು ದ್ವೇಷದ ಟ್ವೀಟ್ ಗಳನ್ನೂ ಭಾಷಣಗಳನ್ನೂ ಮಾಡುವುದು ಹೊಸತೇನಲ್ಲ. ವಿವಾದಗಳನ್ನು ಮೈ ಮೇಲೆ ಎಳೆದುಕೊಳ್ಳುವುದೂ ಈ ನಾಯಕನಿಗೆ ಸಲೀಸು. ಇವರ ವಿರುದ್ದ ಕೋಮು ಪ್ರಚೋದನೆಯ ಅನೇಕ ಪ್ರಕರಣಗಳು ದೇಶದ ವಿವಿಧ ಪೋಲೀಸ್ ಠಾಣೆಗಳಲ್ಲಿ ದಾಖಲಾಗಿವೆ. ಇಂತಹ ನಾಯಕನೊಬ್ಬ ಅದೂ ಪತ್ರಿಕೋದ್ಯಮದ ಪಾಠ ಹೇಳೀಕೊಡುತ್ತೇನೆಂದು ಮುಂದೆ ಬಂದಿರುವುದು ನಿಜಕ್ಕೂ ಅಚ್ಚರಿಯ ಜತೆಗೇ ಜನರು ಅನುಮಾನದಿಂದ ನೋಡುವಂತೆ ಆಗಿದೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com