ವಾಟ್ಸಾಪ್‌ ಚಾಟ್‌ ಲೀಕ್: ಪುಲ್ವಾಮ ದಾಳಿಯನ್ನು ಸಂಭ್ರಮಿಸಿದ್ದ ಅರ್ನಾಬ್ ಗೋಸ್ವಾಮಿ!

40 ಮಂದಿ ಭಾರತೀಯ ಸೈನಿಕರನ್ನು ಬಲಿ ತೆಗೆದುಕೊಂಡ ಪುಲ್ವಾಮ ದಾಳಿಯನ್ನು ಅರ್ನಾಬ್‌ ಸಂಭ್ರಮಿಸಿದ್ದ ಎನ್ನುವುದು ಬಹಿರಂಗಗೊಂಡ ಮೆಸೇಜುಗಳಿಂದ ತಿಳಿದು ಬಂದಿದೆ.
ವಾಟ್ಸಾಪ್‌ ಚಾಟ್‌ ಲೀಕ್: ಪುಲ್ವಾಮ ದಾಳಿಯನ್ನು ಸಂಭ್ರಮಿಸಿದ್ದ ಅರ್ನಾಬ್ ಗೋಸ್ವಾಮಿ!

ವಾಟ್ಸಾಪ್‌ ಗೌಪ್ಯತೆ ಹಾಗೂ ಖಾಸಗೀತನದ ಭದ್ರತೆಯ ಕುರಿತು ಅನುಮಾನಗಳು ಎದ್ದಿರುವಂತೆಯೇ, ಪತ್ರಕರ್ತ ಅರ್ನಾಬ್‌ ಗೋಸ್ವಾಮಿ ವಾಟ್ಸಾಪ್‌ ಚಾಟ್‌ ಹಿಸ್ಟರಿಯನ್ನು ಮುಂಬೈ ಪೊಲೀಸರು ಬಹಿರಂಗಪಡಿಸಿದ್ದಾರೆ.

ಟಿಆರ್‌ಪಿ ಹಗರಣದ ಕುರಿತಂತೆ ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸರು ರಿಪಬ್ಲಿಕ್ ಟಿವಿ ಮುಖ್ಯಸ್ಥ ಅರ್ನಾಬ್ ಗೋಸ್ವಾಮಿ ಹಾಗೂ BARC ಮಾಜಿ ಸಿಇಒ ಪಾರ್ಥೊ ದಾಸ್‌ ಗುಪ್ತ ಅವರ ನಡುವೆ ನಡೆದಿದೆ ಎನ್ನಲಾದ ಸುಮಾರು 500 ಕ್ಕೂ ಹೆಚ್ಚು ಪುಟಗಳ ವಾಟ್ಸಾಪ್‌ ಸಂದೇಶವನ್ನು ಬಹಿರಂಗಗೊಳಿಸಿದ್ದಾರೆ.

ಮುಂಬೈ ಪೊಲೀಸರು ಬಹಿರಂಗಗೊಳಿಸಿರುವ ಚಾಟ್‌ ಹಿಸ್ಟರಿಯಲ್ಲಿ ಪುಲ್ವಾಮಾ ದಾಳಿಗೆ ಪ್ರತಿಕ್ರಿಯೆಯಾಗಿ ನಡೆದ ಬಾಲಾಕೋಟ್‌ ವಾಯುದಾಳಿ ಕುರಿತಂತೆ ಮಹತ್ತರ ಸುಳಿವುಗಳು ಅರ್ನಾಬ್‌ಗೆ ಮೊದಲೇ ತಿಳಿದಿದ್ದವು ಎನ್ನುವ ಅಂಶ ಬೆಳಕಿಗೆ ಬಂದಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಆಘಾತಕಾರಿ ಸುದ್ದಿಯೇನೆಂದರೆ, 40 ಮಂದಿ ಭಾರತೀಯ ಸೈನಿಕರನ್ನು ಬಲಿ ತೆಗೆದುಕೊಂಡ ಪುಲ್ವಾಮ ದಾಳಿಯನ್ನು ಅರ್ನಾಬ್‌ ಸಂಭ್ರಮಿಸಿದ್ದ ಎನ್ನುವುದು ಬಹಿರಂಗಗೊಂಡ ಮೆಸೇಜುಗಳಿಂದ ತಿಳಿದು ಬಂದಿದೆ. ʼ This Attack We Won Like Crazyʼ ಎಂದು ಅರ್ನಾಬ್‌ ಪುಲ್ವಾಮ ದಾಳಿ ನಡೆದಂದು ಹೇಳಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ದೇಶಭಕ್ತನಂತೆ ಪೋಸ್‌ ನೀಡುವ ಅರ್ನಾಬ್‌ ವಾಸ್ತವದಲ್ಲಿ ಒಬ್ಬ ದೇಶದ್ರೋಹಿ ಪತ್ರಕರ್ತನೆಂದು ಸಾಮಾಜಿಕ ಜಾಲತಾಣ ಬಳಕೆದಾರರು ಟೀಕಿಸುತ್ತಿದ್ದಾರೆ.

ಅಲ್ಲದೆ, ಬಾಲಾಕೋಟ್‌ ದಾಳಿಯ ಬಗ್ಗೆ ಅರ್ನಾಬ್‌ಗೆ ಮೊದಲೇ ಮಾಹಿತಿ ಇತ್ತು ಎನ್ನುವ ಅಂಶವೂ ಬೆಳಕಿಗೆ ಬಂದಿದ್ದು, ಮಿಲಿಟರಿ ಕಾರ್ಯಾಚರಣೆಗಳಿಗೆ ಸಂಬಂಧಿಸಿದ ರಹಸ್ಯ ಮಾಹಿತಿಗಳು ಅರ್ನಾಬ್‌ಗೆ ಹೇಗೆ ತಿಳಿಯುತ್ತಿತ್ತು ಎನ್ನುವುದು ಸಾಕಷ್ಟು ಪ್ರಶ್ನೆಗಳಿಗೆ ಕಾರಣವಾಗಿದೆ.

ಬಾಲಾಕೋಟ್‌ ವಾಯುದಾಳಿ ಮಾತ್ರವಲ್ಲದೆ, ಅರ್ನಾಬ್‌ ಗೆ ಆರ್ಟಿಕಲ್‌ 370 ರದ್ದತಿ ಕುರಿತೂ ಮೊದಲೇ ಗೊತ್ತಿತ್ತು. ಹಾಗಾಗಿ ತನ್ನ ಸಂಸ್ಥೆಯ ಹೆಚ್ಚುವರಿ 50 ಸಿಬ್ಬಂದಿಗಳನ್ನು ಕಾಶ್ಮೀರದಲ್ಲಿ ನಿಯೋಜಿಸಿದ್ದನು ಎನ್ನು ಮಾಹಿತಿಯೂ ಆತನ ಚಾಟ್‌ ಹಿಸ್ಟರಿಯಿಂದಲೇ ತಿಳಿದುಬಂದಿದೆ.

“ವಾಟ್ಸಾಪ್ ಚಾಟ್ ಪ್ರಕಾರ ಅರ್ನಾಬ್ ಗೋಸ್ವಾಮಿಗೆ ಬಾಲಾಕೋಟ್ ದಾಳಿಯ ಬಗ್ಗೆ ಮೂರು ದಿನಗಳ ಮೊದಲೇ ಗೊತ್ತಿತ್ತು. ಈ ಬಾರಿ ದೊಡ್ಡದೇನೋ ನಡೆಯುತ್ತದೆ ಎಂದು ಅರ್ನಾಬ್ ಹೇಳಿದರೆ, ಇದರಿಂದಾಗಿ ದೊಡ್ಡ ಮನುಷ್ಯನಿಗೆ( big man) ತುಂಬಾ ಒಳ್ಳೆಯದಾಗುತ್ತದೆ ಎನ್ನುತ್ತಾನೆ ದಾಸ್ ಗುಪ್ತ. ಅಷ್ಟೇ ಅಲ್ಲ, ಇದರಿಂದಾಗಿಯೇ ದೊಡ್ಡ ಮನುಷ್ಯ ಈ ಚುನಾವಣೆಯನ್ನು ಗುಡಿಸಿಕೊಂಡು (ದೊಡ್ಡ ಗೆಲುವು) ಬರುತ್ತಾನೆ ಎನ್ನುತ್ತಾನೆ. ಇದು ಮಾಮೂಲಿ ಸರ್ಜಿಕಲ್ ಸ್ಟ್ರೈಕ್ ಥರ ಅಲ್ಲ, ಅದಕ್ಕಿಂತ ದೊಡ್ಡದು. ಅಷ್ಟೇ ಅಲ್ಲ, ಕಾಶ್ಮೀರದಲ್ಲೂ ಸದ್ಯದಲ್ಲೇ ದೊಡ್ಡದೇನೋ ನಡೆಸಲಾಗುವುದು. ಜನ‌ರು ನಿಜಕ್ಕೂ ಖುಷಿಯಾಗುತ್ತಾರೆ ಎನ್ನುತ್ತಾನೆ ಅರ್ನಾಬ್. ದೇಶದ ರಕ್ಷಣೆ, ಮಿಲಿಟರಿ ಕಾರ್ಯಾಚರಣೆಗಳಿಗೆ ಸಂಬಂಧಿಸಿದ ಅತ್ಯಂತ ರಹಸ್ಯ‌ ಮಾಹಿತಿಗಳೆಲ್ಲ ಅರ್ನಾಬ್ ಗೋಸ್ವಾಮಿಗೆ ಹೇಗೆ ಗೊತ್ತಾಗುತ್ತಿತ್ತು? ಇದು Official secrets Act ಪ್ರಕಾರ ಕ್ರಿಮಿನಲ್ ಅಪರಾಧವಲ್ಲವೇ? “ ಎಂದು ಕನ್ನಡ ರಕ್ಷಣಾ ವೇದಿಕೆ ಸಾಮಾಜಿಕ ಜಾಲತಾಣ ಘಟಕದ ಪ್ರಧಾನ ಸಂಚಾಲಕ ದಿನೇಶ್ ಕುಮಾರ್ ಎಸ್.ಸಿ ಪ್ರಶ್ನಿಸಿದ್ದಾರೆ.

ವಾಟ್ಸಾಪ್ ಚಾಟ್ ಪ್ರಕಾರ ಅರ್ನಾಬ್ ಗೋಸ್ವಾಮಿಗೆ ಬಾಲಾಕೋಟ್ ದಾಳಿಯ ಬಗ್ಗೆ ಮೂರು ದಿನಗಳ ಮೊದಲೇ ಗೊತ್ತಿತ್ತು. ಈ ಬಾರಿ ದೊಡ್ಡದೇನೋ ನಡೆಯುತ್ತದೆ...

Posted by Dinesh Kumar Dinoo on Friday, January 15, 2021

ಅಷ್ಟೇ ಅಲ್ಲದೆ, ಕಂಗಣಾ ರಾಣಾವತ್‌ ಅವರನ್ನು ತನ್ನ ಟಿವಿ ಕಾರ್ಯಕ್ರಮಗಳಲ್ಲಿ ಬಹಿರಂಗವಾಗಿ ಹೊಗಳುವ ಅರ್ನಾಬ್‌ ವಾಟ್ಸಾಪ್‌ಗಳಲ್ಲಿ ಅಪಮಾನಕಾರಿಯಾಗಿ ಬಣ್ಣಿಸುತ್ತಾನೆ. ಹೃತಿಕ್‌ ಹಾಗೂ ಕಂಗನಾ ವಿಚಾರವನ್ನು ಪ್ರಸ್ತಾಪಿಸುವಾಗ ಕಂಗನಾರನ್ನು ಓರ್ವ ಒಬ್ಬ 'ಕಾಮೋದ್ರಿಕ್ತ' ಹೆಣ್ಣು ಎಂದು ಹೇಳಿರುವುದು ಕೂಡಾ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೀಡಾಗಿವೆ.

ವಾಟ್ಸಾಪ್‌ ಚಾಟ್‌ ಲೀಕ್: ಪುಲ್ವಾಮ ದಾಳಿಯನ್ನು ಸಂಭ್ರಮಿಸಿದ್ದ ಅರ್ನಾಬ್ ಗೋಸ್ವಾಮಿ!
ವಾಟ್ಸಪ್ ಉದ್ಧಟತನಕ್ಕೆ ತಿರುಗೇಟು: ಸಿಗ್ನಲ್ ಆ್ಯಪ್ ನತ್ತ ಬಳಕೆದಾರರ ವಲಸೆ!
ವಾಟ್ಸಾಪ್‌ ಚಾಟ್‌ ಲೀಕ್: ಪುಲ್ವಾಮ ದಾಳಿಯನ್ನು ಸಂಭ್ರಮಿಸಿದ್ದ ಅರ್ನಾಬ್ ಗೋಸ್ವಾಮಿ!
ವಾಟ್ಸಪ್ ಗೂಢಚರ್ಯೆಗೆ ಇಸ್ರೇಲನ್ನು ಬಳಸುತ್ತಿದೆಯೇ ಸರಕಾರ

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com