ನಾರ್ವೆ: ಫೈಝರ್‌ ಲಸಿಕೆ ಹಾಕಿಸಿಕೊಂಡ 23 ಮಂದಿ ಮೃತ್ಯು

ದುರ್ಬಲವಾಗಿರುವ, ಕಡಿಮೆ ಇಮ್ಯುನಿಟಿ ಇರುವ ವ್ಯಕ್ತಿಗಳಲ್ಲಿ ಲಸಿಕೆ ತೆಗೆದುಕೊಂಡ ನಂತರ ಕಂಡು ಬರುವ ಸಾಮಾನ್ಯ ಅಡ್ಡಪರಿಣಾಮಗಳು ತುಂಬಾ ಗಂಭೀರ ಸ್ವರೂಪ ಪಡೆದುಕೊಂಡಿದೆ
ನಾರ್ವೆ: ಫೈಝರ್‌ ಲಸಿಕೆ ಹಾಕಿಸಿಕೊಂಡ 23 ಮಂದಿ ಮೃತ್ಯು

ನಾರ್ವೆಯಲ್ಲಿ ಫೈಝರ್‌ ಲಸಿಕೆ ಹಾಕಿಸಿಕೊಂಡವರಲ್ಲಿ 23 ಮಂದಿ ಮೃತಪಟ್ಟಿದ್ದಾರೆ. ಇದಾದ ಬೆನ್ನಿಗೆ ನಾರ್ವೆ ಸರ್ಕಾರ ವಯೋವೃದ್ದರು, ಹಾಗೂ ದೀರ್ಘಕಾಲೀನ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಲಸಿಕೆ ನೀಡದಂತೆ ಸೂಚಿಸಿದೆ.

ಕೋವಿಡ್ ಲಸಿಕೆಯ ಮೊದಲ ಡೋಸ್ ಪಡೆದುಕೊಂಡಿದ್ದ 23 ವೃದ್ಧರು ಸಾವನ್ನಪ್ಪಿದ್ದಾರೆ. ಈ ಪೈಕಿ 13 ಮಂದಿಯ ಮೃತ ದೇಹಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ವ್ಯಾಕ್ಸಿನೇಷನ್ ನಂತರ ಉಂಟಾದ ಅಡ್ಡ ಪರಿಣಾಮಗಳ ತೀವ್ರತೆಯಿಂದ ಅವರು ಸಾವನ್ನಪ್ಪಿದ್ದಾರೆ ಎಂದು ನಾರ್ವೇಜಿಯನ್ ಮೆಡಿಸಿನ್ಸ್ ಏಜೆನ್ಸಿ ವರದಿ ಮಾಡಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ದುರ್ಬಲವಾಗಿರುವ, ಕಡಿಮೆ ಇಮ್ಯುನಿಟಿ ಇರುವ ವ್ಯಕ್ತಿಗಳಲ್ಲಿ ಲಸಿಕೆ ತೆಗೆದುಕೊಂಡ ನಂತರ ಕಂಡು ಬರುವ ಸಾಮಾನ್ಯ ಅಡ್ಡಪರಿಣಾಮಗಳು ತುಂಬಾ ಗಂಭೀರ ಸ್ವರೂಪ ಪಡೆದುಕೊಂಡಿದೆ ಎಂದು ವರದಿಗಳು ಹೇಳಿವೆ.

ವಯೋವೃದ್ಧರು ಹಾಗೂ ದೀರ್ಘಕಾಲೀನ ಆರೋಗ್ಯ ಸಮಸ್ಯೆ ಹೊಂದಿರುವ ವ್ಯಕ್ತಿಗಳಿಗೆ ಲಸಿಕೆ ನೀಡಬಾರದು ಎಂದು ನಾರ್ವೇಜಿಯನ್ ಅಧಿಕಾರಿಗಳು ಸೂಚಿಸಿದ್ದಾರೆ. ಈ ವರ್ಗದವರು ಲಸಿಕೆ ಪಡೆಯುವುದರಿಂದ ಹೆಚ್ಚಿನ ಪ್ರಯೋಜನ ಲಭಿಸುವುದಿಲ್ಲ ಎಂದು ನಾರ್ವೇಜಿಯನ್ ಆರೋಗ್ಯ ಸಚಿವಾಲಯ ಹೇಳಿದೆ. ಆರೋಗ್ಯವಂತರು, ಯುವಜನರು ಲಸಿಕೆ ತೆಗೆದುಕೊಳ್ಳಲು ಯಾವುದೇ ತೊಂದರೆಯಿಲ್ಲ ಎಂದು ನಾರ್ವೇಜಿಯನ್ ಸರ್ಕಾರ ಹೇಳಿದೆ.

ನಾರ್ವೆ: ಫೈಝರ್‌ ಲಸಿಕೆ ಹಾಕಿಸಿಕೊಂಡ 23 ಮಂದಿ ಮೃತ್ಯು
ಆತಂಕ ಮತ್ತು ಅನುಮಾನಗಳ ನಡುವೆ ಬೃಹತ್ ಲಸಿಕಾ ಅಭಿಯಾನಕ್ಕೆ ಚಾಲನೆ

ಲಸಿಕೆ ಹಾಕಿದ ನಂತರ 23 ಜನರು ಸಾವನ್ನಪ್ಪಿರುವ ಘಟನೆಯ ಬಗ್ಗೆ ಫೈಝರ್ ಆಂತರಿಕ ತನಿಖೆ ನಡೆಸುತ್ತಿದೆ. ಲಸಿಕೆ ಪಡೆದುಕೊಂಡ ನಂತರ ಸಮಸ್ಯೆ ಎದುಸುತ್ತಿರುವವರ ಸಂಖ್ಯೆ ಅತ್ಯಂತ ಕಡಿಮೆ ಪ್ರಮಾಣದಲ್ಲಿದೆ ಎಂದು ಫೈಝರ್‌ ಸಂಸ್ಥೆ ಹೇಳಿದೆ.

ಈವರೆಗೆ ನಾರ್ವೆಯಲ್ಲಿ, ಸೋಂಕು ತಗುಲುವ ಅಪಾಯದಲ್ಲಿರುವ ಸುಮಾರು 33,000 ಜನರಿಗೆ ಲಸಿಕೆ ನೀಡಲಾಗಿದ್ದು, ಕೇವಲ 29 ಪ್ರಕರಣಗಳಲ್ಲಿ ಮಾತ್ರ ಅಡ್ಡಪರಿಣಾಮಗಳು ಕಂಡುಬಂದಿವೆ.

ಇಂಡಿಯನ್‌ ಎಕ್ಸ್‌ಪ್ರೆಸ್

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com