“ವಿಶ್ವದ ಅತಿ ದೊಡ್ಡ ಕರೋನಾ ಲಸಿಕೆ” ಅಭಿಯಾನಕ್ಕೆ 2 ದಿನ ಮಾತ್ರ ಬಾಕಿ

ಅಭಿಯಾನದ ಮೊದಲ ದಿನವೇ ಮೂರು ಲಕ್ಷ ಜನರಿಗೆ ಲಸಿಕೆ ನೀಡಲಾಗುತ್ತಿದ್ದು, ಪ್ರತಿ ಆರೋಗ್ಯ ಕೇಂದ್ರದಲ್ಲಿ 100 ಜನರಿಗೆ ಲಸಿಕೆ ನೀಡಲಾಗುತ್ತದೆ. ಮುಂದಿನ ಕೆಲವೇ ತಿಂಗಳಲ್ಲಿ 300 ಮಿಲಿಯನ್‌ ಜನಕ್ಕೆ ಲಸಿಕೆ ನೀಡುವುದರ ಬಗ್ಗೆ ಸರ್ಕಾರ ಈಗಾಗಲೆ ಚಿಂತಿಸಿದೆ ಎಂದಿದ್ದಾರೆ.
“ವಿಶ್ವದ ಅತಿ ದೊಡ್ಡ ಕರೋನಾ ಲಸಿಕೆ” ಅಭಿಯಾನಕ್ಕೆ 2 ದಿನ ಮಾತ್ರ ಬಾಕಿ

ಭಾರತದಲ್ಲಿ ಭಾರತ್ ಬಯೋಟೆಕ್‌ ಮತ್ತು ಸೀರಂ ಇನ್‌ಸ್ಟಿಟ್ಯೂಟ್ ಅಭಿವೃದ್ಧಿ ಪಡಿಸಿದ ಕೋವಿಶೀಲ್ಡ್‌ ಮತ್ತು ಕೋವ್ಯಾಕ್ಸಿನ್‌ಗಳು ಸಾರ್ವಜನಿಕ ಬಳಕೆಗೆ ತಜ್ಞರ ಮತ್ತು ಸರ್ಕಾರದ ಅನುಮತಿ ಪಡೆದಿದ್ದು, ಭಾರತದಲ್ಲಿ ಜನವರಿ16 ರಂದು ವಿಶ್ವದ ಅತಿ ದೊಡ್ಡ ಕರೋನಾ ಲಸಿಕೆ ಅಭಿಯಾನ ನಡೆಸಲಾಗುತ್ತಿದೆ.

ಕರೋನಾ ಮಾಹಾಮಾರಿ ಜಗತ್ತಿಗೆ ಕಾಲಿಟ್ಟು ಒಂದು ವರ್ಷ ಕಳೆಯುತ್ತಾ ಬಂದರೂ ವಿಶ್ವದ ಎಲ್ಲಾ ರಾಷ್ಟ್ರಗಳು ಲಸಿಕೆ ಸಂಶೋಧನೆಯಲ್ಲಿ ತೊಡಗಿದ್ದವು. ಇತ್ತ ಕೆಲವು ರಾಷ್ಟ್ರಗಳು ಸಂಶೋಧಿಸಿದ ಲಸಿಕೆಗಳು ಯಶಸ್ವಿಯಾಗದ ಕಾರಣ ಅವು ಸಾರ್ವಜನಿಕ ಬಳಕೆಗೆ ಮಾನ್ಯತೆ ಪಡೆದಿರಲಿಲ್ಲ. ಆದರೆ ಭಾರತದ ಎರಡು ಸಂಸ್ಥೆಗಳು ಅಭಿವೃದ್ಧಿ ಪಡಿಸಿದ ಲಸಿಕೆ ತುರ್ತು ಜನ ಬಳಕೆಗೆಗೆ ಮಾನ್ಯತೆ ಪಡೆದಿವೆ.

ಈ ಸಂಬಂಧ ಪ್ರಧಾನಿ ಮೋದಿಯವರು ಜನವರಿ 11 ರಂದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿ ಕರೋನಾ ಲಸಿಕೆ ವಿತರಣೆ ಕುರಿತು ಚರ್ಚಿಸಿದ್ದಾರೆ. ಜೊತೆಗೆ ವಿಶ್ವದ ಅತಿದೊಡ್ಡ ಕರೋನಾ ಲಸಿಕೆ ಅಭಿಯಾನ ಜನವರಿ 16 ರಂದು ನಡೆಸಲಾಗುತ್ತೆ ಎಂದಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಇತ್ತ ಲಸಿಕೆ ಅಭಿಯಾನಕ್ಕೆ ಎರಡೇ ದಿನಗಳು ಬಾಕಿಯಿದ್ದು, ಶನಿವಾರ ನಡೆಯುವ ಅಭಿಯಾನದಲ್ಲಿ ಮೂರು ಲಕ್ಷ ಜನರಿಗೆ ಲಸಿಕೆ ನೀಡಲಾಗುತ್ತದೆ. ಇದು ವಿಶ್ವದಲ್ಲಿಯೇ ಅತಿ ದೊಡ್ಡ ಕರೋನಾ ಲಸಿಕೆಯ ಅಭಿಯಾನ, ಎಂದು ನೀತಿ ಆಯೋಗದ ಸದಸ್ಯರಾದ ವಿ.ಕೆ. ಪೌಲ್‌ NDTV ಯೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಅಭಿಯಾನದ ಮೊದಲ ದಿನವೇ ಮೂರು ಲಕ್ಷ ಜನರಿಗೆ ಲಸಿಕೆ ನೀಡಲಾಗುತ್ತಿದ್ದು, ಪ್ರತಿ ಆರೋಗ್ಯ ಕೇಂದ್ರದಲ್ಲಿ 100 ಜನರಿಗೆ ಲಸಿಕೆ ನೀಡಲಾಗುತ್ತದೆ. ಮುಂದಿನ ಕೆಲವೇ ತಿಂಗಳಲ್ಲಿ 300 ಮಿಲಿಯನ್‌ ಜನಕ್ಕೆ ಲಸಿಕೆ ನೀಡುವುದರ ಬಗ್ಗೆ ಸರ್ಕಾರ ಈಗಾಗಲೆ ಚಿಂತಿಸಿದೆ ಎಂದಿದ್ದಾರೆ.

ಮೊದಲಿಗೆ 30 ಮಿಲಿಯನ್‌ ಆರೋಗ್ಯ ಕಾರ್ಯಕರ್ತರಿಗೆ, ಕಾರ್ಮಿಕ ವಲಯಗಳಿಗೆ ಮತ್ತು 270 ಮಿಲಿಯನ್‌ ಇತರೆ ವಲಯದ ಕರೋನಾ ವಾರಿಯರ್ಸ್‌ಗೆ ನೀಡಲಾಗುವುದು. ಈ ಸಂಬಂಧ ಆರೋಗ್ಯ ಕಾರ್ಯಕರ್ತರ, ಕಾರ್ಮಿಕರ ಮಾಹಿತಿ ಕಲೆಹಾಕಲಾಗಿದ್ದು, ಯಾವುದೇ ಭಯವಿಲ್ಲದೆ ಲಸಿಕೆ ತಗೆದುಕೊಳ್ಳಬಹುದು. ಈ ಕುರಿತು ನಾನು ಭರವಸೆ ಕೊಡಬಲ್ಲೆ ಎಂದು ಪೌಲ್‌ ತಿಳಿಸಿದ್ದಾರೆ.

ಡೋಸ್‌ ನೀಡಿದ ನಂತರ ಮೋದಿಯವರು ಕೆಲವು ನಗರಗಳ ಆರೋಗ್ಯ ಕಾರ್ಯಕರ್ತರೊಂದಿಗೆ ವರ್ಚುವಲ್‌ ಸಂವಾದ ನಡೆಸಲಿದ್ದಾರೆ ಎಂದು ಪೌಲ್‌ ತಿಳಿಸಿದ್ದಾರೆ.

ಭಾರತ್‌ ಬಯೋಟೆಕ್, ಸೀರಂ ಇನ್‌ಸ್ಟಿಟ್ಯೂಟ್ ಮತ್ತು ಆಕ್ಸ್‌ಫರ್ಡ್‌ ಯೂನಿವರ್ಸಿಟಿ ಅಭಿವೃದ್ಧಿ ಪಡಿಸಿದ ಕೋವಿಶೀಲ್ಡ್‌ ಮತ್ತು ಕೋವ್ಯಾಕ್ಸಿನ್‌ಗಳನ್ನು ಮೊದಲಿಗೆ ದೇಶದ 12 ನಗರಗಳಲ್ಲಿ ಬಳಕೆ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರವು 110 ಕೋವಿಶೀಲ್ಡ್‌ ಲಸಿಕೆ ಸಂಗ್ರಹಿಸಲಾಗಿದ್ದು, ಪ್ರತಿ ಡೋಸ್‌ಗೆ 200 ರೂ ನಿಗದಿ ಮಾಡಲಾಗಿದೆ. ಇತ್ತ 50 ಲಕ್ಷ ಕೋವ್ಯಾಕ್ಸಿನ್‌ ಲಸಿಕೆಯನ್ನು ಸಂಗ್ರಹಿಸಲಾಗಿದೆ ಎಂದಿದ್ದಾರೆ.

ಸದ್ಯಕ್ಕೆ ಭಾರತದಲ್ಲಿ ಕರೋನಾ ಸೋಂಕಿತರ ಸಂಖ್ಯೆ ಒಟ್ಟು 1,05,12,093 ಇದ್ದು, ಆರಂಭದಿಂದ ಇಲ್ಲಿಯವರೆಗೂ 1,51,727 ಜನ ಕರೋನಾ ಮಹಾಮಾರಿಗೆ ಬಲಿಯಾಗಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com