ಮಹಾರಾಷ್ಟ್ರ: ಒಂದು ಗ್ರಾ.ಪಂ. ಸೀಟು ಪಡೆಯಲು 2 ಕೋಟಿ..! ಚುನಾವಣೆ ತಡೆ ಹಿಡಿದ ಆಯೋಗ

ಹರಾಜಿನ ಮೂಲಕ ಗ್ರಾಮ ಪಂಚಾಯಿತಿ ಸೀಟುಗಳನ್ನು ಕೊಂಡುಕೊಳ್ಳುವ ಘಟನೆಯನ್ನು ಪ್ರಜಾಪ್ರಭುತ್ವದ ಹಿತಕ್ಕೆ ದಕ್ಕೆ ತರುವ ಘಟನೆಗಳು ಎಂದು ಚುನಾವಣಾ ಆಯೋಗ ತಿಳಿಸಿದೆ.
ಮಹಾರಾಷ್ಟ್ರ: ಒಂದು ಗ್ರಾ.ಪಂ. ಸೀಟು ಪಡೆಯಲು 2 ಕೋಟಿ..! ಚುನಾವಣೆ ತಡೆ ಹಿಡಿದ ಆಯೋಗ

ಜನವರಿ 15ರಂದು ನಡೆಯಬೇಕಾಗಿರುವ ಮಹಾರಾಷ್ಟ್ರ ಗ್ರಾಮ ಪಂಚಾಯತ್‌ ಚುನಾವಣೆಯಲ್ಲಿ ಅಕ್ರಮ ನಡೆದಿರುವ ಹಿನ್ನೆಲೆಯಲ್ಲಿ 2 ಹಳ್ಳಿಗಳಲ್ಲಿ ಚುನಾವಣೆಯನ್ನು ತಡೆಹಿಡಿಯಲಾಗಿದೆ. ಹರಾಜಿನ ಮೂಲಕ ಪ್ರಜಾಪ್ರಭುತ್ವವನ್ನೇ ಮಾರಲು ಹೊರಟಿದ್ದ ಮಹಾರಾಷ್ಟ್ರದ ಎರಡು ಹಳ್ಳಿಗಳ ಚುನಾವಣೆಯನ್ನು ಚುನಾವಣಾ ಆಯೋಗ ಸದ್ಯಕ್ಕೆ ತಡೆಹಿಡಿದಿದೆ.

ನಾಸಿಕ್‌ನ ಉಮ್ರಾನೆ ಹಾಗೂ ನಂದರ್ಬಾರ್‌ನ ಕೊಂಡಮಲಿ ಎಂಬ ಹಳ್ಳಿಗಳಲ್ಲಿ ಈ ಬಾರಿ ಗ್ರಾಮ ಪಂಚಾಯತ್‌ ಚುನಾವಣೆ ನಡೆಯುವುದಿಲ್ಲ. ಕಾರಣವೇನೆಂದರೆ, ಗ್ರಾಮ ಪಂಚಾಯತ್‌ ಸೀಟುಗಳನ್ನು ಹರಾಜು ಕರೆಯುವ ಮೂಲಕ ನೀಡಲಾಗುತ್ತಿತ್ತು. ಉಮ್ರಾನೆ ಹಳ್ಳಿಯಲ್ಲಿ ಒಂದು ಸೀಟು ರೂ. 2 ಕೋಟಿ ಮೊತ್ತಕ್ಕೆ ಹರಾಜಾದರೆ, ಕೊಂಡಮಲಿಯಲ್ಲಿ ರೂ. 42 ಲಕ್ಷಕ್ಕೆ ಸೀಟು ದಕ್ಕಿತ್ತು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ


ಈ ಹರಾಜು ಪ್ರಕ್ರಿಯೆಯ ವೀಡಿಯೋ ಹಾಗೂ ಆಡಿಯೋ ಬಹಿರಂಗವಾದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಈ ಕ್ರಮ ಕೈಗೊಂಡಿದೆ. ಈ ಘಟನೆಗಳನ್ನು ಪ್ರಜಾಪ್ರಭುತ್ವದ ಹಿತಕ್ಕೆ ದಕ್ಕೆ ತರುವ ಘಟನೆಗಳು ಎಂದು ಚುನಾವಣಾ ಆಯೋಗ ತಿಳಿಸಿದೆ.

“ಪಂಚಾಯಿತಿ ಸೀಟುಗಳನ್ನು ಹರಾಜು ಹಾಕುವ ಎಲ್ಲಾ ವರದಿ ಹಾಗೂ ವೀಡಿಯೋಗಳನ್ನು ಪರಿಶೀಲಿಸಲಾಗಿದೆ. ಸಮಗ್ರ ಪರಿಶೀಲನೆಯ ನಂತರ ಎರಡು ಹಳ್ಳಿಗಳಲ್ಲಿ ಚುನಾವಣೆಯನ್ನು ತಡೆಹಿಡಿಯುವ ನಿರ್ಧಾರವನ್ನು ತಾಳಲಾಗಿದೆ. ಈ ಘಟನೆಗಳಿಗೆ ಕಾರಣಕರ್ತರಾದವರ ಮೇಲೆ ಕ್ರಮ ಕೈಗೊಳ್ಳಲು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ,” ಎಂದು ಚುನಾವಣಾ ಆಯೋಗ ತಿಳಿಸಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com