ಎಚ್ಚೆತ್ತುಕೊಂಡ ಯುವಜನತೆಯಿಂದ ಅನ್ಯಾಯದ ವಿರುದ್ಧ ಹೋರಾಟ..!

” ಅನ್ಯಾಯದ ವಿರುದ್ಧ ಹೋರಾಡುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಒಳ್ಳೆ ಬಟ್ಟೆ ಹಾಕುವುದು, ಉನ್ನತ ಶಿಕ್ಷಣ ಮಾಡುವ ಹಕ್ಕು ರೈತನ ಮಗನಿಗಿದೆ. ರೈತನ ಮಕ್ಕಳು ಗಡಿಭಾಗದಲ್ಲಿ ದೇಶಸೇವೆಯಲ್ಲಿ ತೊಡಗಿದ್ದಾರೆ. ಆದರೆ ಸರ್ಕಾರದ ಯೋಜನೆಗಳ ವಿರುದ್ಧ ಪ್ರಶ್ನಿಸಿದ್ರೆ ದಬ್ಬಾಳಿಕೆ ನಡೆಸುತ್ತಾರೆ. ಭಯೋತ್ಪಾದಕರಂತೆ ಬಿಂಬಿಸುತ್ತಾರೆ. ಇದು ಪ್ರಜೆಗಳಿಗೆ ಮಾಡುವ ಅನ್ಯಾಯ,” ಎಂಬ ಕೂಗು ಕೇಳಿಬಂದಿತ್ತು.
ಎಚ್ಚೆತ್ತುಕೊಂಡ ಯುವಜನತೆಯಿಂದ ಅನ್ಯಾಯದ ವಿರುದ್ಧ ಹೋರಾಟ..!

ಜನವರಿ12 ಸ್ವಾಮಿ ವಿವೇಕಾನಂದರ ಜನ್ಮದಿನ. ದೇಶದಲ್ಲಿ ಆ ದಿನವನ್ನು ಪ್ರತಿವರ್ಷ ಯುವಕರ ದಿನವೆಂದು ಆಚರಿಸಲಾಗುತ್ತದೆ. ವಿಶ್ವದಲ್ಲಿಯೇ ಅತೀ ಹೆಚ್ಚು ಯುವಶಕ್ತಿಯನ್ನು ಹೊಂದಿದ ರಾಷ್ಟ್ರ ಭಾರತ. ವಿಶ್ವಕ್ಕೆ ದೇಶಕ್ಕೆ ಮತ್ತು ಯುವಕರಿಗೆ ಸ್ಪೂರ್ತಿಯಾಗುವ ಸ್ವಾಮಿ ವಿವೇಕಾನಂದರ “ಏಳಿ ಎದ್ದೇಳಿ ಗುರಿಮುಟ್ಟುವವರೆಗೆ ಹೋರಾಡಿ” ಎಂಬ ಸಂದೇಶ ಇವತ್ತಿನ ದೆಹಲಿಯ ಗಡಿಯಲ್ಲಿ ಹೋರಾಟ ಮಾಡುತ್ತಿರುವ ಯುವ ರೈತರಿಗೂ ಸ್ಫೂರ್ತಿಯಾಗಿದೆ.

ಕೇಂದ್ರ ಸರ್ಕಾರದ ರೈತ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ಮೋಡಿಯ ಮಾತುಗಳಿಗೆ ತಲೆಬಾಗದೆ, ಬಂಡವಾಳ ಶಾಹಿಗಳಿಗೆ ದೇಶವನ್ನು ಮಾರಲು ಹೊರಟ ರಾಜಕರಣಿಗಳಿಗೆ ನಡುಕ ಹುಟ್ಟಿಸುತ್ತಿದೆ. ಆಧುನಿಕ ಯುಗದ ರೈತರ ಹೋರಾಟ ದೇಶದ ಪ್ರಜ್ಞಾವಂತ ಯುವ ನಾಯಕರಿಗೆ ಸ್ಪೂರ್ತಿಯಾದಂತಿದೆ.

ನಿರಂತರ ಶೋಷಣೆಗೆ ಒಳಗಾಗುತ್ತಲೆ ಬಂದ ರೈತ ಸಮುದಾಯ ಇದೀಗ ಸಿಡಿದೆದ್ದಿದ್ದು, ದೇಶದ ಆಡಳಿತ ವ್ಯವಸ್ಥೆಯ ತಾಳಕ್ಕೆ ತಕ್ಕಂತೆ ತಲೆಬಾಗುತ್ತಿದ್ದ ರೈತ ಅನ್ಯಾಯದ ವಿರುದ್ಧ ಧ್ವನಿಯೆತ್ತುತ್ತಿರುವುದು ಜೊತೆಗೆ ಸ್ವಾತಂತ್ರ, ಸಮಾನತೆ ಹಾಗೂ ಭ್ರಾತೃತ್ವದ ತತ್ವಗಳನ್ನು ಮತ್ತೊಮ್ಮೆ ಮನವರಿಕೆ ಮಾಡಿಕೊಡಲಾಗುತ್ತಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಹೋರಾಟದ ಪ್ರಮುಖ ಅಸ್ತ್ರವಾಗಿದೆ ಸಾಮಾಜಿಕ ಜಾಲತಾಣ

ದೆಹಲಿಯಲ್ಲಿ ನಡೆದ ರೈತರ ಹೋರಾಟದ ವಿಡಿಯೋಗಳು ಸಾಮಾಜಿಕ ಜಾಲತಾಣದ ಮೂಲಕ ಕೆಲವೇ ನಿಮಿಷಗಳಲ್ಲಿ ದಿಲ್ಲಿಯಿಂದ ದೇಶದ ಪ್ರತಿ ಹಳ್ಳಿಗೂ ತಲುಪುವಂತಹ ಕಾಲವಿದು. ಇತ್ತೀಚೆಗೆ ಪಂಜಾಬ್‌ ಮತ್ತು ಹರಿಯಾಣ ಭಾಗದ ರೈತನ ಮಕ್ಕಳು ಮಾಧ್ಯಮದೊಂದಿಗೆ ಮಾತನಾಡಿದ ವಿಡಿಯೋ ಹೆಚ್ಚು ಸದ್ದು ಮಾಡಿತ್ತು.

” ಅನ್ಯಾಯದ ವಿರುದ್ಧ ಹೋರಾಡುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಒಳ್ಳೆ ಬಟ್ಟೆ ಹಾಕುವುದು, ಉನ್ನತ ಶಿಕ್ಷಣ ಮಾಡುವ ಹಕ್ಕು ರೈತನ ಮಗನಿಗಿದೆ. ರೈತನ ಮಕ್ಕಳು ಗಡಿಭಾಗದಲ್ಲಿ ದೇಶಸೇವೆಯಲ್ಲಿ ತೊಡಗಿದ್ದಾರೆ. ಆದರೆ ಸರ್ಕಾರದ ಯೋಜನೆಗಳ ವಿರುದ್ಧ ಪ್ರಶ್ನಿಸಿದ್ರೆ ದಬ್ಬಾಳಿಕೆ ನಡೆಸುತ್ತಾರೆ. ಭಯೋತ್ಪಾದಕರಂತೆ ಬಿಂಬಿಸುತ್ತಾರೆ. ಇದು ಪ್ರಜೆಗಳಿಗೆ ಮಾಡುವ ಅನ್ಯಾಯ,” ಎಂಬ ಕೂಗು ಕೇಳಿಬಂದಿತ್ತು.

ರಾಜಕೀಯ ಮತ್ತು ಯುವಜನತೆ

ರಾಜಕೀಯದಲ್ಲಿ ಇತ್ತೀಚೆಗೆ ಯುವಜನರು ಸಕ್ರೀಯವಾಗಿ ಪಾಲ್ಗೂಳ್ಳುತ್ತಿದ್ದಾರೆ. ಇತ್ತ ಸಾಂಪ್ರದಾಯಿಕ ರಾಜಕರಣದಿಂದ ಹೊಸ ಪ್ರತಿಭಾವಂತ ಯವಕರಿಗೆ ಉನ್ನತ ಸ್ಥಾನಕ್ಕೆ ಅವಕಾಶ ಸಿಗುವುದು ಕಡಿಮೆಯಾಗುತ್ತಿದೆ. ಮತ್ತೊಂದೆಡೆ ಜನಸಂಖ್ಯೆಯ ಸಮೀಕ್ಷೆಯ ಪ್ರಕಾರ ಗ್ರಾಮೀಣ ಭಾಗಗಳಲ್ಲಿ ಯುವಜನತೆ ಹೆಚ್ಚಿದ್ದಾರೆಂದು ವರದಿ ತಿಳಿಸಿದೆ.

ಈ ಬಾರಿಯ ಕರ್ನಾಟಕದ ಗ್ರಾಮಪಂಚಾಯಿತಿ ಚುನಾವಣೆಯಲ್ಲಿ ಉನ್ನತ ಶಿಕ್ಷಣ ಪಡೆದ ವಿದ್ಯಾವಂತ ಯುವಕರು ಸ್ಪರ್ಧಿಸಿರುವುದು ಸಂತಸದ ವಿಚಾರವಾಗಿದೆ. ಇತ್ತೀಚೆಗೆ ಹೆಚ್ಚು ಸದ್ದು ಮಾಡಿದ್ದ ಸುದ್ದಿ ಕೇರಳ ತಿರುವನಂತಪುರದ ಆರ್ಯಾ ರಾಜೇಂದ್ರನ್‌ ಎಂಬ 21 ವರ್ಷದ ಯುವತಿ ಪಾಲಿಕೆಯ ಮೇಯರ್‌ ಆಗಿ ಅಧಿಕಾರದ ಗದ್ದುಗೆ ಏರಿದ್ದು ಇವುಗಳನ್ನು ಗಮನಿಸಿದಾಗ ಯುವಶಕ್ತಿ ರಾಜಕೀಯದಲ್ಲಿ ಸಕ್ರೀಯರಾಗುತ್ತಿರುವುದು ಕಾಣುತ್ತಿದೆ.

ಯುವಕರಿಗೆ ವಿವೇಕಾನಂದರ ಸಂದೇಶ

ಯುವಜನತೆಗೆ ಹೆಚ್ಚು ಸ್ಪೂರ್ತಿಯಾಗಿ ಬದುಕಿದವರು ಸ್ವಾಮಿ ವಿವೇಕಾನಂದರು ಯುವಕರು ಯೌವನದಲ್ಲಿ ಉತ್ಸುಕರಾಗಿ ಕೆಲಸ ಮಾಡಬೇಕು ಆತ್ಮಶ್ರದ್ಧೆ ಮತ್ತು ಆತ್ಮಸಾಕ್ಷಿಗೆ ಅನುಗುಣವಾಗಿ ನಮ್ಮ ಬದುಕನ್ನು ರೂಪಿಸಿಕೊಂಡು ಜೀವನ ಸಾಗಿಸ ಬೇಕು. ಸತ್ಯವನ್ನು ತಿಳಿದು, ಸ್ವಭಾವಕ್ಕೆ ಅನುಗುಣವಾಗಿ ಸ್ವತಂತ್ರ ಆಲೋಚನೆಯಿಂದ ಬದುಕು ಕಟ್ಟಿಕೊಳ್ಳ ಬೇಕು. ಯುವಜನತೆಯಲ್ಲಿ ಅಗಾಧ ಶಕ್ತಿಯಿದೆ. ಅದನ್ನು ದೇಶ ಸದುಪಯೋಗಪಡಿಸಿಕೊಳ್ಳಬೇಕು. ಅವರಿಗೆ ಸರಿಯಾದ ತರಭೇತಿ, ಮಾರ್ಗದರ್ಶನ, ಮತ್ತು ಶಿಕ್ಷಣದಲ್ಲಿ ಸ್ವಂತ ಆಲೋಚನೆಗೆ ಹೆಚ್ಚು ಪ್ರೋತ್ಸಾಹಿಸ ಬೇಕೆಂಬ ಸಂದೇಶ ನೀಡಿದ್ದಾರೆ.

ಸೆಪ್ಟೆಂಬರ್‌ 11, 1893 ರ ವಿವೇಕಾನಂದರ ಚಿಕಾಗೋ ಭಾಷಣ ಸರ್ವಧರ್ಮಿಯರನ್ನು ಹಾಗು ಇಡೀ ವಿಶ್ವವನ್ನೆ ಸೆಳೆದಂತಹ ಭಾಷಣ ಜೊತೆಗೆ ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಹಿಂದೂ ಧರ್ಮದ ಶ್ರೇಷ್ಠ ತತ್ವಗಳನ್ನು ಜಗತ್ತಿಗೆ ಪರಿಚಯಿಸಿಕೊಟ್ಟ ಮಹಾನ್‌ ಚಿಂತಕ, ದಾರ್ಶನಿಕರಾದ ಯುವಕರಿಗೆ ಸ್ಪೂರ್ತಿದಾಯಕ ವ್ಯಕ್ತಿಯಾಗಿ ಕಂಡವರು ಸ್ವಾಮಿ ವಿವೇಕಾನಂದರು.

ಇದೀಗ ದೇಶದ 125 ಕೋಟಿಗಿಂತಲೂ ಹೆಚ್ಚು ಜನಸಂಖ್ಯೆಯಲ್ಲಿ ಯುವಜನತೆಯ ಪಾಲುಹೆಚ್ಚಿದೆ. ದೇಶದ ಪ್ರಗತಿಗೆ ಪ್ರತಿಭಾವಂತ ಯುವಕರ ಅವಶ್ಯಕತೆಯಿದ್ದು, ದೇಶದ ಆಡಳಿತ ವ್ಯೆವಸ್ಥೆ ಸೌಲಭ್ಯದಿಂದ ವಂಚಿತರಾದ ಯುವಕರಿಗೆ ಆಸಕ್ತಿ ಹೊಂದಿದ ಕ್ಷೇತ್ರಗಳಲ್ಲಿ ಹೆಚ್ಚು-ಹೆಚ್ಚು ಅವಕಾಶಗಳನ್ನು ತೆರೆದಿಡುವುದು, ಇತ್ತ ಗ್ರಾಮೀಣ ಭಾಗದ ಯುವಶಕ್ತಿಯನ್ನು ದೇಶದ ಅಭಿವೃದ್ದಿ ಚುಟುವಟಿಕೆಗಳತ್ತ ಪ್ರೇರೆಪಿಸಲು ಸರ್ಕಾರ ಗಮನಹರಿಸುವ ಅಗತ್ಯವಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com