ಕೇಂದ್ರದ ಜತೆ ರೈತರ ಮಾತುಕತೆ ಪದೇ ಪದೇ ವಿಫಲಗೊಳ್ಳಲು ಕಾರಣವೇನು?

ರೈತರ ಒಗ್ಗಟ್ಟನ್ನು ಮುರಿಯಲು ಜಯಾನಿ ಮತ್ತು ಗ್ರೆವಾಲ್ ಅವರನ್ನು ಕೇಂದ್ರವು ನಿಯೋಜಿಸಿದೆ ಎಂದು ಕೆಲವು ರೈತ ಮುಖಂಡರು ಅಭಿಪ್ರಾಯಿಸಿದ್ದಾರೆ. ಈ ಆಂದೋಲನವನ್ನು ಬಗ್ಗು ಬಡಿಯಲು ಸರ್ಕಾರ ಬಹುಮುಖಿ ತಂತ್ರವನ್ನು ಬಳಸುತ್ತಿದೆ.
ಕೇಂದ್ರದ ಜತೆ ರೈತರ ಮಾತುಕತೆ ಪದೇ ಪದೇ ವಿಫಲಗೊಳ್ಳಲು ಕಾರಣವೇನು?

ದೆಹಲಿಯ ಸಿಂಗು ಗಡಿಯಲ್ಲಿ ಕಳೆದ ಎರಡು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿರುವ ರೈತರು ಮತ್ತು ಕೇಂದ್ರ ಸರ್ಕಾರದ ನಡುವೆ 8 ನೇ ಸುತ್ತಿನ ಮಾತುಕತೆ ಕೇವಲ ಒಂದೂವರೆ ಗಂಟೆ ಕಾಲ ನಡೆಯಿತು. ಜಾರಿಗೆ ತಂದಿರುವ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದಿಲ್ಲ ಎಂದು ಕೇಂದ್ರ ಸ್ಪಷ್ಟಪಡಿಸಿದ ನಂತರ ಸಭೆ ಹಠಾತ್ತನೆ ಕೊನೆಗೊಂಡಿತು. ಈ ರೀತಿ ಮಾತುಕತೆ ಹಠಾತ್ತಾನೆ ಕೊನೆಗೊಳ್ಳಲು ಕಾರಣ ಪಂಜಾಬ್ನ ಇಬ್ಬರು ಬಿಜೆಪಿ ನಾಯಕರಾದ ಸುರ್ಜಿತ್ ಜಯಾನಿ ಮತ್ತು ಹರ್ಜಿತ್ ಸಿಂಗ್ ಗ್ರೆವಾಲ್ ಎಂಬ ಬಗ್ಗೆ ಊಹಾಪೋಹಗಳು ಹರಡಿವೆ. ಮಾಜಿ ಸಂಪುಟ ಮಂತ್ರಿ ಜಯಾನಿ ಮತ್ತು ಪಂಜಾಬ್ ಖಾದಿ ಮಂಡಳಿಯ ಮಾಜಿ ಅಧ್ಯಕ್ಷ ಗ್ರೆವಾಲ್ ಅವರು ಮಾತುಕತೆಗೂ ಮುಂಚಿತವಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದರು. ಈ ಇಬ್ಬರೂ ಬಿಜೆಪಿ ನಾಯಕರು ಮತ್ತು ರೈತ ಸಂಘಗಳ ನಡುವಿನ ಎಂಟು ಸದಸ್ಯರ ಸಮನ್ವಯ ಸಮಿತಿಯ ಮುಖ್ಯಸ್ಥ ಜಯಾನಿ ಆಗಿದ್ದು ಗ್ರೆವಾಲ್ ಸಮಿತಿಯ ಸದಸ್ಯರಾಗಿದ್ದಾರೆ. ಈ ಇಬ್ಬರೂ ನಾಯಕರು ರೈತರ
ಪ್ರತಿಭಟನೆಯನ್ನು ತೀವ್ರವಾಗಿ ಟೀಕಿಸಿದ್ದಾರೆ. ಮಾಜಿ ಸಂಪುಟ ಸಚಿವರು ರೈತ ಸಂಘಗಳ ನಾಯಕತ್ವವನ್ನೇ ಟೀಕಿಸಿದರು. ಮೋದಿ ಸರ್ಕಾರದೊಂದಿಗೆ ಮಾತುಕತೆ ನಡೆಸಲು ಒಬ್ಬನೇ ಒಬ್ಬ ಸಮರ್ಥ ರೈತ ನಾಯಕ ಇಲ್ಲ ಎಂದು ಹೇಳಿದರು. ಇವರಲ್ಲಿ ಯಾರೂ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಅವರು ಇತರ ವ್ಯಕ್ತಿಯನ್ನು ಕೇಳುತ್ತಲೇ ಇರುತ್ತಾರೆ ಎಂದರು. ಯಾವುದೇ ಬಟ್ಟೆ ಗಿರಣಿ ಅಥವಾ ಕಾರ್ಖಾನೆಯಲ್ಲಿ ನೀವು ಕೆಂಪು ಧ್ವಜವನ್ನು ನೋಡಿದರೂ ಆ ಕಾರ್ಖಾನೆ ಮತ್ತೆ ಎಂದೂ ಕಾರ್ಯನಿರ್ವಹಿಸುವುದಿಲ್ಲ ಎಂದು ನನ್ನ ಅಜ್ಜ ನನಗೆ ಹೇಳುತ್ತಿದ್ದರು ಎಂದು ಜಯಾನಿ ಪತ್ರಕರ್ತರೊಂದಿಗೆ ಪ್ರತಿಕ್ರಿಯಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿಜಿಯಾನಿ ಪ್ರಕಾರ ರೈತ ಸಂಘದ ನಾಯಕರು ತಮ್ಮ ಭೂಮಿಯನ್ನು ಅವರಿಂದ ಕಿತ್ತುಕೊಳ್ಳಲಾಗುವುದು ಎಂದು ಸುಳ್ಳು ಹೇಳುವ ಮೂಲಕ ರೈತರನ್ನು ಪ್ರತಿಭಟನೆಗೆ ನೂಕಿದ್ದಾರೆ. ಇದು ಸತ್ಯವಲ್ಲ ಎಂದು ಅವರಿಗೆ ತಿಳಿದಿದ್ದು ಅವರು ಪ್ರತಿಭಟನಾಕಾರರನ್ನು ಮೋಸಗೊಳಿಸುತ್ತಿದ್ದಾರೆ ಎಂದು ಅರೋಪಿಸಿದ್ದಾರೆ. ಗ್ರವಾಲ್ ಅವರೂ ಕೂಡ ರೈತರ ಪ್ರತಿಭಟನೆಯಲ್ಲಿ ಮಾವೋವಾದಿಗಳು ಸೇರ್ಪಡೆಗೊಂಡಿದ್ದಾರೆ ಎಂದು ಆರೋಪಿಸಿದ್ದಾರೆ, ಆದರೆ ರೈತ ನಅಯಕರು ಈ ಇಬ್ಬರ ವಿರುದ್ದ ತಿರುಗಿ ಬಿದ್ದಿದ್ದಾರೆ. ಈ ಇಬ್ಬರು ನಾಯಕರು ಎಲ್ಲಿಗೆ ಹೋದರೂ ಕಪ್ಪು ಧ್ವಜಗಳನ್ನು ತೋರಿಸಬೇಕು. ಅವರ ಮನೆಗಳ ಹೊರಗೆ ರೈತರು ಧರಣಿ ಮಾಡಿ ಅವರನ್ನು ಸಾಮಾಜಿಕವಾಗಿ ಬಹಿಷ್ಕರಿಸಬೇಕು ಎಂದು ಅಖಿಲ ಭಾರತ ಕಿಸಾನ್ ಸಂಘರ್ಷ ಸಮಿತಿಯ ಸಂಚಾಲಕ ಡಾ. ದರ್ಶನ್ ಪಾಲ್ ಕರೆ ನೀಡಿದ್ದಾರೆ.
ರೈತರ ಒಗ್ಗಟ್ಟನ್ನು ಮುರಿಯಲು ಜಯಾನಿ ಮತ್ತು ಗ್ರೆವಾಲ್ ಅವರನ್ನು ಕೇಂದ್ರವು ನಿಯೋಜಿಸಿದೆ ಎಂದು ಕೆಲವು ರೈತ ಮುಖಂಡರು ಅಭಿಪ್ರಾಯಿಸಿದ್ದಾರೆ. ಈ ಆಂದೋಲನವನ್ನು ಬಗ್ಗು ಬಡಿಯಲು ಸರ್ಕಾರ ಬಹುಮುಖಿ ತಂತ್ರವನ್ನು ಬಳಸುತ್ತಿದೆ. ಶುಕ್ರವಾರ ಮಾತುಕತೆ ನಡೆಸಿದ ರೀತಿಯ ಉದ್ದೇಶ ರೈತ ಸಂಘಗಳು ಮತ್ತು ಪ್ರತಿಭಟನಾಕಾರರಿಗೆ ಹತಾಶ ಸಂದೇಶವನ್ನು ರವಾನಿಸುವುದು. ಇದು ಭ್ರಮನಿರಸನದ ಸಾಮಾನ್ಯ ವಾತಾವರಣವನ್ನು ಸೃಷ್ಟಿಸುವ ಪ್ರಯತ್ನವಾಗಿದ್ದು, ಇದು ರೈತರ ಸಂಕಲ್ಪದ ದುರ್ಬಲತೆಗೆ ಕಾರಣವಾಗುತ್ತದೆ ಎಂದು ಭಾರತೀಯ ಕಿಸಾನ್ ಯೂನಿಯನ್ ನ ಪ್ರಧಾನ ಕಾರ್ಯದರ್ಶಿ ಜಗಮೋಹನ್ ಸಿಂಗ್ ಪಟಿಯಾಲ ಅವರು ನನ್ನ ಅಭಿಪ್ರಾಯದಲ್ಲಿ ಜಯಾನಿ ಮತ್ತು ಗ್ರೆವಾಲ್ ಅವರು ರೈತ ನಾಯಕತ್ವವನ್ನು ವಿಭಜಿಸುವ ಕಾರ್ಯವನ್ನು ಮಾಡುತಿದ್ದಾರೆ ಎಂದರು. ಅದರೆ ಬಹುತೇಕ ರೈತ ನಾಯಕರು ಹೀಗೆ ಭಾವಿಸಿಲ್ಲ. ಚಳವಳಿಯನ್ನು ಅಪಖ್ಯಾತಿಗೊಳಿಸುವಂತಹ ಪರಿಸ್ಥಿತಿಯನ್ನು ಸೃಷ್ಟಿಸಲು ಸರ್ಕಾರ ತನ್ನ ಅತ್ಯುತ್ತಮ ಪ್ರಯತ್ನವನ್ನು ಮಾಡುತ್ತಿರುವುದರಲ್ಲಿ ಸಂದೇಹವಿಲ್ಲ. ಅವರು ಎಲ್ಲಿ ಸಾಧ್ಯವೋ ಅಲ್ಲಿ ಭಿನ್ನಾಭಿಪ್ರಾಯವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಜಯಾನಿ ಮತ್ತು ಗ್ರೆವಾಲ್ ಅವರು ಪಂಜಾಬ್ನಲ್ಲಿ ಯಾವುದೇ ಬೆಂಬಲ ಹೊಂದಿರದ ವಿಫಲ ನಾಯಕರು ಎಂದು ಬಿಕೆಯು (ರಾಜೇವಾಲ್) ಅಧ್ಯಕ್ಷ ಬಲ್ಬೀರ್ ಸಿಂಗ್ ರಾಜೇವಾಲ್ ಹೇಳುತ್ತಾರೆ.ಜಯಾನಿ ಅವರ ಪ್ರಕಾರ ನಾವು ರೈತರ ಆಂದೋಲನವನ್ನು ವಿಫಲಗೊಳಿಸಲು ಪ್ರಯತ್ನಿಸುತ್ತಿಲ್ಲ. ನಾವು ಸತ್ಯವನ್ನು ಮಾತ್ರ ಮಾತನಾಡುತ್ತಿದ್ದೇವೆ. ಇದು ಸುಳ್ಳನ್ನು ಆಧರಿಸಿದ ರೈತರ ಆಂದೋಲನವಾಗಿದೆ. ನಾವು ಪ್ರತಿಭಟನೆಗೆ ಹೆದರುವುದಿಲ್ಲ. ಆದರೆ ಇವು ಪ್ರತಿಭಟಿಸುವ ಪ್ರಜಾಪ್ರಭುತ್ವದ ಮಾರ್ಗಗಳಲ್ಲ ಎಂದು ಹೇಳಿದರು. ಸುರ್ಜಿತ್ ಜಯಾನಿ ಅವರು ಬಿಜೆಪಿಯೊಂದಿಗೆ ದೀರ್ಘಕಾಲದ ಒಡನಾಟವನ್ನು ಹೊಂದಿದ್ದಾರೆ. ಎರಡು ಬಾರಿ ಸಂಪುಟ ಸಚಿವರಾಗಿದ್ದ ಅವರು ತಮ್ಮ ಮೂರು ಬಾರಿ ರಾಜ್ಯ ವಿಧಾನಸಭೆಯ ಸದಸ್ಯರಾಗಿದ್ದರು. ಅವರು 2007-2012ರವರೆಗೆ ರಾಜ್ಯದ ಅರಣ್ಯ ಸಚಿವರಾಗಿದ್ದರು ಮತ್ತು ನಂತರ 2012-2017ರವರೆಗೆ ಆರೋಗ್ಯ ಸಚಿವರಾಗಿದ್ದರು. ಜಯಾನಿ ಅವರು ಆರೋಗ್ಯ ಮಂತ್ರಿಯಾಗಿದ್ದಾಗ 2015 ರಲ್ಲಿ ಆಲ್ಕೊಹಾಲ್ ಹಾನಿಕಾರಕ ಮಾದಕವಸ್ತು ಅಲ್ಲ ಎಂಬ ವಿಲಕ್ಷಣ ಕಾಮೆಂಟ್ ಮಾಡಿದ್ದು ಅವರ ಹೇಳಿಕೆ ಅಂದಿನ ಶಿರೋಮಣಿ ಅಕಾಲಿ ದಳ-ಬಿಜೆಪಿ ನಾಯಕರಿಗೆ ಮುಜುಗರವನ್ನುಂಟು ಮಾಡಿತ್ತು. ಇನ್ನು ಗ್ರೆವಾಲ್ ಅವರು ವಿದ್ಯಾರ್ಥಿ ನಾಯಕರಾಗಿದ್ದರು ಮತ್ತು 1990 ರಲ್ಲಿ ಸಂಘ ಪರಿವಾರದ ಜತೆ ಸೇರಿದ ಅವರು ಹಲವಾರು ವರ್ಷಗಳಿಂದ ಪಂಜಾಬ್‌ ನಲ್ಲಿ ಆರ್ಎಸ್ಎಸ್‌ ಸಿಖ್ ನಾಯಕರಾಗಿದ್ದಾರೆ. ಪ್ರಸ್ತುತ ಬಿಜೆಪಿ ಪಂಜಾಬ್‌ ನ ಉಪಾಧ್ಯಕ್ಷರಾಗಿದ್ದ ಅವರು 2017 ರಲ್ಲಿ ರಾಜಪುರದಿಂದ ಚುನಾವಣೆಗೂ ಸ್ಪರ್ದಿಸಿ ಸೋತಿದ್ದರು. ಕಳೆದ ನವೆಂಬರ್ನಲ್ಲಿ, ಅವರು ಅಕಾಲ್ ತಖ್ತ್ ಜತೇದಾರ್ ಗಿಯಾನಿ ಹರ್ಪ್ರೀತ್ ಸಿಂಗ್ ಬಗ್ಗೆ ಅನಪೇಕ್ಷಿತ ಹೇಳಿಕೆಗಳನ್ನು ನೀಡಿದ ನಂತರ ವಿವಾದಕ್ಕೀಡಾಗಿ . ನಂತರ ಅವರು ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದರು. ರೈತರು ಮತ್ತು ಸರ್ಕಾರದ ನಡುವಿನ ಸಮಸ್ಯೆಗಳನ್ನು ಬಗೆಹರಿಸಲು ನಾನು ಪ್ರಾಮಾಣಿಕವಾಗಿ ನನ್ನ ಅತ್ಯುತ್ತಮ ಪ್ರಯತ್ನ ಮಾಡಿದ್ದೇನೆ ಆದರೆ ರೈತ ಮುಖಂಡರು ಇನ್ನು ಮುಂದೆ ಕೇಳಲು ಸಿದ್ಧರಿಲ್ಲ. ಕಳೆದ 10 ವರ್ಷಗಳಿಂದ ನಾನು ರೈತರ ಹಿತದೃಷ್ಟಿಯಿಂದ ಕೆಲಸ ಮಾಡುತ್ತಿದ್ದೇನೆ ಎಂದು ಅವರು ಹೇಳುತ್ತಾರೆ. ನಾನು ಕೃಷಿಕ ವಿರೋಧಿ ಅಲ್ಲ ಆದರೆ ನನ್ನನ್ನು ಖಳನಾಯಕನಂತೆ ಚಿತ್ರಿಸಲಾಗಿದೆ. ನಾನು ನನ್ನ ಪಕ್ಷಕ್ಕೆ ಬದ್ಧನಾಗಿರುತ್ತೇನೆ ಮತ್ತು ಪಕ್ಷದ ಅಭಿಪ್ರಾಯವನ್ನು ರೈತರಿಗೆ ಸ್ಪಷ್ಟವಾಗಿ ತಿಳಿಸುವುದು ನನ್ನ ಕರ್ತವ್ಯವಾಗಿದೆ ಎಂದು ಗ್ರೆವಾಲ್ ಹೇಳುತ್ತಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com