ಕೃಷಿ ಕಾಯ್ದೆಯನ್ನು ನೀವೇ ತಡೆಯಿರಿ, ಅಥವಾ ನಾವು ತಡೆಯುತ್ತೇವೆ: ಕೇಂದ್ರಕ್ಕೆ ಸುಪ್ರೀಂ ತರಾಟೆ

ನಿಮಗೆ ಜವಾಬ್ದಾರಿಯಿದ್ದರೆ, ಕಾನೂನಿನ ಅನುಷ್ಠಾನವನ್ನು ತಡೆ ಹಿಡಿಯಿರಿ. ಕಾಯ್ದೆಗೆ ನೀವಾಗಿಯೇ ತಡೆ ನೀಡುತ್ತೀರಾ ಅಥವಾ ಆ ಕೆಲಸವನ್ನು ನಾವು ಮಾಡಬೇಕೇ?
ಕೃಷಿ ಕಾಯ್ದೆಯನ್ನು ನೀವೇ ತಡೆಯಿರಿ, ಅಥವಾ ನಾವು ತಡೆಯುತ್ತೇವೆ: ಕೇಂದ್ರಕ್ಕೆ ಸುಪ್ರೀಂ ತರಾಟೆ

ಕೃಷಿ ಕಾಯ್ದೆಯನ್ನು ನೀವಾಗಿಯೇ ತಡೆಹಿಡಿಯುತ್ತೀರೋ... ಅಥವಾ ನಾವದನ್ನು ತಡೆಹಿಡಿಯಬೇಕೇ? ಎಂದು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ಕೇಂದ್ರದ ಕೃಷಿ ಸುಧಾರಣಾ ಕಾಯಿದೆ, ರೈತರ ಪ್ರತಿಭಟನೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಅರ್ಜಿಯನ್ನು ವಿಚಾರಣೆ ನಡೆಸಿರುವ ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೋಬ್ಡೆ ನೇತೃತ್ವದ ತ್ರಿಸದಸ್ಯ ಪೀಠ, ವಿವಾದಿತ ಕಾಯ್ದೆ ಕುರಿತು ದೇಶದಲ್ಲಿನ ಬೆಳವಣಿಗೆ ಕುರಿತು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ನಿರಂತರ ಪ್ರತಿಭಟನೆ ನಡೆಸುತ್ತಿರುವ ರೈತರಲ್ಲಿ ಹಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಹಿಳೆಯರು, ವೃದ್ಧರು ಆಂದೋಲನದ ಭಾಗವಾಗಿದ್ದಾರೆ. ಕಳೆದ ಬಾರಿ ಸರ್ಕಾರವನ್ನು ಇದೇ ವಿಷಯದ ಕುರಿತು ಪ್ರಶ್ನಿಸಿದರೂ ಉತ್ತರ ಬಂದಿಲ್ಲ. ಈಗ ಪರಿಸ್ಥಿತಿ ಬಿಗಡಾಯಿಸುತ್ತಿದೆ, ಚಳಿಯಿಂದ ತೊಂದರೆ ಅನುಭವಿಸುತ್ತಿದ್ದಾರೆ. ಕಾನೂನು ಜಾರಿಗೊಳಿಸದೇ ಇದ್ದರೆ ಏನಾಗಲಿದೆ ಎಂದು ನ್ಯಾಯಾಲಯಕ್ಕೂ ಅರ್ಥವಾಗಿಲ್ಲ. ಏನಾಗುತ್ತಿದೆ ಇಲ್ಲಿ? ಎಂದು ಸರ್ಕಾರವನ್ನು ಮುಖ್ಯ ನ್ಯಾಯಮೂರ್ತಿ ಬೋಬ್ಡೆ ಪ್ರಶ್ನಿಸಿದ್ದಾರೆ.

ರೈತರಿಂದ 3 ಕಾಯ್ದೆಗಳ ವಜಾ ಬಗ್ಗೆ ಕೇಂದ್ರ ಯಾಕೆ ಪ್ರತಿಕ್ರಿಯೆಗಳನ್ನು ನೀಡುತ್ತಿಲ್ಲ. ರೈತರ ಸಮಸ್ಯೆಗಳಿಗೆ ಇನ್ನು ಪರಿಹಾರ ಯಾಕೆ ಸಿಕ್ಕಿಲ್ಲ. ನೀವು ಎಂತಹ ಸಂಧಾನವನ್ನು ನಡೆಸುತ್ತಿದ್ದೀರಿ. ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ಏಕೆ ಪ್ರತಿಷ್ಠೆಯ ವಿಷಯವಾಗಿಸಿಕೊಂಡಿದೆ ಎಂದು ಅರ್ಥವಾಗುತ್ತಿಲ್ಲ ಎಂದು ನ್ಯಾಯಪೀಠ ಕೇಳಿದೆ.

ರೈತರು ಮತ್ತು ಸರ್ಕಾರದ ನಡುವಿನ ಮಾತುಕತೆ ಪದೇ ಪದೇ ವಿಫಲವಾಗುತ್ತಿದೆ ಎಂಬುದನ್ನು ನಾವು ವರದಿಗಳಿಂದ ಅರ್ಥ ಮಾಡಿಕೊಂಡಿದ್ದೇವೆ. ಸರ್ಕಾರ ಅನುಚ್ಛೇದಗಳ ಬಗ್ಗೆ ಚರ್ಚೆ ನಡೆಸಲು ಬಯಸುತ್ತದೆ. ಆದರೆ ರೈತರು ಇಡೀ ಕಾನೂನನ್ನು ಹಿಂಪಡೆಯಲು ಒತ್ತಾಯಿಸುತ್ತಿದ್ದಾರೆ. ಆದ್ದರಿಂದ ನಾವು ಕೇಂದ್ರದಿಂದ ನೇಮಕಗೊಂಡ ಸಮಿತಿಯು ಯಾವುದೇ ನಿರ್ಧಾರ ಕೈಗೊಳ್ಳುವವರಗೆ ಹಾಲಿ ಕಾನೂನು ಅನುಷ್ಠಾನಕ್ಕೆ ತಡೆ ನೀಡುತ್ತೇವೆ ಎಂದು ಹೇಳಿದೆ.

ಧರಣಿ ಸ್ಥಳ ಬದಲಾಯಿಸಿ ಎಂದು ಹೇಳಬಹುದು. ಆದರೆ, ಧರಣಿ ಮಾಡಬೇಡಿ ಎಂದು ನಾವು ಹೇಳಲು ಸಾಧ್ಯವಿಲ್ಲ. ಧರಣಿ ಸ್ಥಳದಲ್ಲಿ ಹಲವು ರೈತರು ಆತ್ಮಹತ್ಯೆ, ಸಾವು ಸಂಭವಿಸುತ್ತಿದೆ. ದುರಂತ ಸಂಭವಿಸಿದರೆ ಎಲ್ಲರೂ ಹೊಣೆಯಾಗುತ್ತಾರೆ. ನಮ್ಮ ಕೈಗಳು ರಕ್ತಸಿಕ್ತವಾಗಲು ನಾವು ಬಯಸುವುದಿಲ್ಲ. ನಿಮಗೆ ಜವಾಬ್ದಾರಿಯಿದ್ದರೆ, ಕಾನೂನಿನ ಅನುಷ್ಠಾನವನ್ನು ತಡೆ ಹಿಡಿಯಿರಿ. ಕಾಯ್ದೆಗೆ ನೀವಾಗಿಯೇ ತಡೆ ನೀಡುತ್ತೀರಾ ಅಥವಾ ಆ ಕೆಲಸವನ್ನು ನಾವು ಮಾಡಬೇಕೇ? ಎಂದು ಪ್ರಶ್ನಿಸಿದ ನ್ಯಾಯಾಲಯ, ಕಾಯ್ದೆ ತಡೆಹಿಡಿದಿದ್ದೇ ಆದರೆ, ಈ ಬಗ್ಗೆ ನಿರ್ಧರಿಸಲು ತಜ್ಞರ ಸಮಿತಿ ರೂಪಿಸುತ್ತೇವೆಂದು ಹೇಳಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com