ಕೋವಿಡ್ ಸಾಂಕ್ರಮಿಕ ಕಾರಣದಿಂದ ಗಗನಕ್ಕೇರಿದ ಹಳೆ ಕಾರುಗಳ ಮಾರಾಟ

ಕೋವಿಡ್‌ ಹಿನ್ನೆಲೆಯಲ್ಲಿ ಎಲ್ಲ ರಂಗಗಳೂ ನಷ್ಟವನ್ನೆ ಅನುಭವಿಸುತಿದ್ದರೂ ಸೆಕೆಂಡ್ ಹ್ಯಾಂಡ್ ಕಾರು ಮಾರುಕಟ್ಟೆಯು ಏರಿಕೆಯ ಹಾದಿ ಹಿಡಿದಿದೆ
ಕೋವಿಡ್ ಸಾಂಕ್ರಮಿಕ ಕಾರಣದಿಂದ ಗಗನಕ್ಕೇರಿದ ಹಳೆ ಕಾರುಗಳ ಮಾರಾಟ

ಇಡೀ ಜಗತ್ತನ್ನೇ ತಲ್ಲಣಗೊಳಿಸಿರುವ ಕೋವಿಡ್ 19 ಸಾಂಕ್ರಮಿಕವು ಲಕ್ಷಾಂತರ ಜನರ ಉದ್ಯೋಗವನ್ನೆ ಕಸಿದುಕೊಂಡಿದೆ. ಸಾವಿರಾರು ಕಾರ್ಖಾನೆಗಳು ಮುಚ್ಚಲ್ಪಟ್ಟಿವೆ. ಇಂದಿಗೂ ಸೂಕ್ತ ಉದ್ಯೋಗ ದೊರೆಯದೆ , ಅಥವಾ ಅರೆಕಾಲಿಕ ಉದ್ಯೋಗ ಮಾಡಿಕೊಂಡು ಬದುಕುತ್ತಿರುವ ಮಧ್ಯಮ ವರ್ಗದ ಉದ್ಯೋಗಿಗಳ ಸ್ಥಿತಿ ನಿಜಕ್ಕೂ ಶೋಚನೀಯವಾಗಿದೆ. ಆರ್ಥಿಕತೆಯಂತೂ ಸಂಪೂರ್ಣ ಹದಗೆಟ್ಟಿದ್ದು ಇನ್ನಷ್ಟೇ ಚೇತರಿಸಿಕೊಳ್ಳಬೇಕಾಗಿದೆ.

ಈ ಸಮಯದಲ್ಲಿ ಎಲ್ಲ ರಂಗಗಳೂ ನಷ್ಟವನ್ನೆ ಅನುಭವಿಸುತಿದ್ದರೂ ಸೆಕೆಂಡ್ ಹ್ಯಾಂಡ್ ಕಾರು ಮಾರುಕಟ್ಟೆಯು ಏರಿಕೆಯ ಹಾದಿ ಹಿಡಿದಿದೆ. ಈ ಕೋವಿಡ್ ಸಾಂಕ್ರಮಿಕ ಸಮಯದಲ್ಲಿ ಪ್ರಯಾಣಿಕರು ಸಾರ್ವಜನಿಕ ಸಾರಿಗೆಯನ್ನು ಬಳಸುವುದಕ್ಕೆ ಹಿಂಜರಿಯುತಿದ್ದು ಉಪಯೋಗಿಸಿದ ಕಾರುಗಳ ಮಾರಾಟವು ಗಗನಕ್ಕೇರುತ್ತಿದೆ. ಜನರ ಈ ಪ್ರವೃತ್ತಿಯು ಸೆಕೆಂಡ್ ಹ್ಯಾಂಡ್ ಕಾರು ವ್ಯಾಪಾರಿಗಳನ್ನು ಸುಸ್ಥಿತಿಗೆ ಕರೆದೊಯ್ಯುತ್ತಿದೆ. ಈ ಖಾಸಗಿ ಸ್ಟಾರ್ಟ್ ಅಪ್ ಗಳ ಮೌಲ್ಯ ಒಂದು ಬಿಲಿಯನ್ ಡಾಲರ್ ಗಳಿಗಿಂತ ಹೆಚ್ಚಾಗಿದೆ. ಭಾರತದಲ್ಲಿ, ಕೋವಿಡ್ 19 ಸೋಂಕುಗಳು ಪ್ರಕರಣಗಳು ಈಗ ಒಂಬತ್ತು ದಶಲಕ್ಷವನ್ನು ಮೀರಿವೆ, ಉಪಯೋಗಿಸಿದ-ವಾಹನಗಳ ಆನ್ ಲೈನ್ ಮಾರಾಟ ತಾಣ ಆಗಿರುವ ಕಾರ್ಸ್ 24,200 ಮಿಲಿಯನ್ ಡಾಲರ್ ಹಣ ಸಂಗ್ರಹಿಸಿದ ನಂತರ ದೇಶದ ಬೇಡಿಕೆಯ ತಾಣ ಆಗಿ ಮಾರ್ಪಟ್ಟಿದೆ.

ಮೆಕ್ಸಿಕೊದಲ್ಲಿ, ಸೆಕೆಂಡ್ ಹ್ಯಾಂಡ್ ಕಾರ್ ಬ್ರೋಕರ್ ಕವಾಕ್ ಹಲವಾರು ಹೂಡಿಕೆದಾರರಿಂದ ಹೊಸ ಬಂಡವಾಳವನ್ನು ಸಂಗ್ರಹಿಸಿದ ನಂತರ 1.2 ಬಿಲಿಯನ್ ಮೌಲ್ಯಮಾಪನದೊಂದಿಗೆ ದೇಶದ ಮೊದಲ ಟೆಕ್ ದೈತ್ಯ ಆಗಿ ಮಾರ್ಪಟ್ಟಿದೆ. ಬ್ರಿಟನ್ನಲ್ಲಿ, 18 ತಿಂಗಳ ಹಿಂದೆ ಸ್ಥಾಪಿಸಲಾದ ಆನ್ಲೈನ್ ಕಾರು ಚಿಲ್ಲರೆ ವ್ಯಾಪಾರಿ ತಾಣ ಕ್ಯಾಜೂ ಜೂನ್ನಲ್ಲಿ 25 ಮಿಲಿಯನ್ ಡಾಲರ್ ಹಣದ ಸುತ್ತಿನ ನಂತರ ಯುನಿಕಾರ್ನ್ ಆಗಿದೆ.

ಸರ್ಕಾರಗಳು ಸಾರ್ವಜನಿಕ ಸಾರಿಗೆಯನ್ನೆ ಹೆಚ್ಚಾಗಿ ಬಳಸಿ ಪರಿಸರ ಸಂರಕ್ಷಣೆಗೆ ನೆರವಾಗಿ ಎಂದು ಹೇಳುತ್ತಲೇ ಬಂದಿದೆ. ಆದರೆ ಸಾರ್ವಜನಿಕರು ಕಾರು ಕೊಳುವ ಮೂಲಕ ಇಂಗಾಲದ ಡೈ ಆಕ್ಸೈಡ್ ಹೆಚ್ಚು ಹೊರಸೂಸುವ ಕ್ರಮಕ್ಕೆ ಮುಂದಾಗಿದ್ದು ಇದನ್ನು ಕಡಿತಗೊಳಿಸುವ ಜಾಗತಿಕ ಪ್ರಯತ್ನಗಳಿಗೆ ಹಿನ್ನಡೆ ಅಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಬ್ರಿಟಿಷ್ ಮೋಟಾರಿಂಗ್ ಸೇವೆಗಳ ಕಂಪನಿ ಆರ್ಎಸಿ ತನ್ನ 2020 ರ ಮೋಟಾರಿಂಗ್ ವರದಿಯಲ್ಲಿ ಸಾರಿಗೆ ಬಗ್ಗೆ ಜನರ ವರ್ತನೆಗಳಲ್ಲಿ ಅಮೂಲಾಗ್ರ ಬದಲಾವಣೆಗಳನ್ನು ಗುರುತಿಸಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಜನರು ಎರಡು ದಶಕಗಳಲ್ಲೇ ಗರಿಷ್ಟ ಮಟ್ಟದಲ್ಲಿ ಸಾರ್ವಜನಿಕ ಸಾರಿಗೆಯನ್ನು ಬಳಸುವುದಕ್ಕೆ ಹಿಂಜರಿಯುತಿದ್ದಾರೆ ಎಂದೂ ವರದಿ ಹೇಳಿದೆ. ಕಡಿಮೆ ಅವಧಿಯ ಸಂಚಾರ ಇದ್ದರೂ ಸಹ, ಸಾಂಕ್ರಾಮಿಕವು ಚಾಲಕರು ಮತ್ತು ಅವರ ಕಾರುಗಳ ನಡುವಿನ ಬಾಂಧವ್ಯವನ್ನು ಬಲಪಡಿಸಿದೆ ಎಂದು ತೋರುತ್ತದೆ - ಸಾರ್ವಜನಿಕ ಸಾರಿಗೆ ಹಿಂದೆಂದಿಗಿಂತಲೂ ಕಡಿಮೆ ಆಕರ್ಷಕವಾಗಿದೆ" ಎಂದು ಆರ್ಏಸಿ ವಕ್ತಾರ ರಾಡ್ ಡೆನ್ನಿಸ್ ಹೇಳಿದರು.

ಜರ್ಮನ್ ರೈಡ್-ಪೂಲಿಂಗ್ ಸೇವೆಗಳ ಕಂಪನಿ, ಡೋರ್ 2 ಡೋರ್, ಸಾರ್ವಜನಿಕ ಸಾರಿಗೆಯನ್ನು ಹೆಚ್ಚು ಆಕರ್ಷಕ ಆಯ್ಕೆಯನ್ನಾಗಿ ಮಾಡಲು ಮುಂದಾಗಿದೆ. ಇದು ಬೇಡಿಕೆಯ ಬಸ್ ಸೇವೆಗಳಿಗೆ ಬಳಕೆದಾರರನ್ನು ಸಂಪರ್ಕಿಸುವ ಸ್ಮಾರ್ಟ್ಫೋನ್ ಅಪ್ಲಿಕೇಶನ್ ಅನ್ನು ವಿನ್ಯಾಸಗೊಳಿಸಿದೆ. ಸಾರ್ವಜನಿಕ ಸಾರಿಗೆ ಜಾಲದಲ್ಲಿನ ಅಂತರವನ್ನು ತುಂಬುವುದು ಮತ್ತು ರಸ್ತೆಗಳಲ್ಲಿ ಖಾಸಗಿ ಕಾರುಗಳ ಸಂಖ್ಯೆಯನ್ನು ಕಡಿಮೆ ಮಾಡುವುದು ಇದರ ಉದ್ದೇಶವಾಗಿದೆ. ಕೋವಿಡ್ ಸಮಯದಲ್ಲಿ, ಕಡಿಮೆ ವಾಃನ ದಟ್ಟಣೆಯ ನೋಟವನ್ನು ನಾಔಉ ನೋಡಿದ್ದೇವೆ ಎಂದು ಕಳೆದ ತಿಂಗಳು ನಡೆದ ವರ್ಲ್ಡ್ ಎಕನಾಮಿಕ್ ಫೋರಂನ ಉದ್ಘಾಟನಾ ಪಯೋನಿಯರ್ಸ್ ಆಫ್ ಚೇಂಜ್ ಶೃಂಗಸಭೆಯಲ್ಲಿ ಸಹ-ಸಿಇಒ ಮತ್ತು ಡೋರ್ 2 ಡೋರ್ ಸಂಸ್ಥಾಪಕ ಟಾಮ್ ಕಿರ್ಷ್ಬಾಮ್ ಹೇಳಿದರು.

ನಾವು ಅಂತರರಾಷ್ಟ್ರೀಯ ಮಟ್ಟದಲ್ಲಿ ಅನೇಕ ನಗರಗಳನ್ನು ನೋಡುತ್ತೇವೆ, ಅಲ್ಲಿನ ನಗರಗಳಲ್ಲಿ ಈಗ ಕಾರುಗಳ ಓಡಾಟ ಹೆಚ್ಚಾಗುತ್ತಲೇ ಇದೆ. ನೀವು ಸಾಂಪ್ರದಾಯಿಕ ಸಾರ್ವಜನಿಕ ಸಾರಿಗೆಯಲ್ಲಿ ಹೂಡಿಕೆ ಮಾಡಬೇಕಾಗುತ್ತದೆ, ಆದರೆ ಕಾರುಗಳು ಹೆಚ್ಚು ವರ್ಧಿತ ಸಾರಿಗೆಯಾಗಿದೆ ಎಂದು ಅವರು ಹೇಳುತ್ತಾರೆ.

ಬಳಸಿದ ಕಾರುಗಳ ಮಾರಾಟವು ಕೋವಿಡ್ ಸಾಂಕ್ರಾಮಿಕವು ಗ್ರಾಹಕರ ನಡವಳಿಕೆಯನ್ನು ಹೇಗೆ ಬದಲಾಯಿಸುತ್ತಿದೆ ಎಂಬುದನ್ನು ಪ್ರತಿಬಿಂಬಿಸುತ್ತದೆ. ಮ್ಯಾನೇಜ್ಮೆಂಟ್ ಕನ್ಸಲ್ಟೆನ್ಸಿ ಮೆಕಿನ್ಸೆ ಮತ್ತು ಕಂಪನಿ 45 ದೇಶಗಳಲ್ಲಿ ಗ್ರಾಹಕರ ಭಾವನೆಯನ್ನು ಸಮೀಕ್ಷೆ ನಡೆಸುತ್ತಿದೆ. ಇದರಲ್ಲಿ ಕೋವಿಡ್ 19 ತಮ್ಮ ನಿತ್ಯದ ಖರ್ಚಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬ ಅದರ ಸಮೀಕ್ಷೆಯ ಪ್ರತಿಕ್ರಿಯಿಸಿದವರಲ್ಲಿ ಮೂರನೇ ಎರಡರಷ್ಟು ಜನರು ತಮ್ಮ ಶಾಪಿಂಗ್ ಅಭ್ಯಾಸವನ್ನು ಬದಲಾಯಿಸುತ್ತಿದ್ದಾರೆಂದು ವರದಿ ಮಾಡಿದ್ದಾರೆ.

ಪ್ರಪಂಚದಾದ್ಯಂತದ ಗ್ರಾಹಕರು ವಿಭಿನ್ನ ಶಾಪಿಂಗ್ ನಡವಳಿಕೆಗಳನ್ನು ಪ್ರಯತ್ನಿಸುವ ಮೂಲಕ ಮತ್ತು ಸಾಮಾನ್ಯ ನಡವಳಿಕೆಗಳಿಗೆ ಸಂಬಂಧಿಸಿದ ಅಡ್ಡಿಪಡಿಸುವಿಕೆಗೆ ಪ್ರತಿಕ್ರಿಯಿಸಿದ್ದಾರೆ ಮತ್ತು ಈ ನಡವಳಿಕೆಗಳನ್ನು ಮುಂದುವರಿಸಲು ಹೆಚ್ಚಿನ ಆಸಕ್ತಿಯನ್ನು ಶೇಕಡಾ 65 ಕ್ಕಿಂತ ಹೆಚ್ಚು ಜನರು ವ್ಯಕ್ತಪಡಿಸಿದ್ದಾರೆ ಎಂದು ಮೆಕಿನ್ಸೆ ಹೇಳುತ್ತಾರೆ. ವಿಶ್ವದ ಹೆಚ್ಚಿನ ಆರ್ಥಿಕತೆಗಳು ಕೆಲವು ರೀತಿಯ

ಲಾಕ್ಡೌನ್ನಲ್ಲಿರುವುದರಿಂದ, ಡಿಜಿಟಲ್ಗೆ ಬದಲಾವಣೆಯು ದೇಶಗಳು ಮತ್ತು ವರ್ಗಗಳಲ್ಲಿ ಮುಂದುವರಿಯುತ್ತಿದೆ. ಆಹಾರ ಮತ್ತು ಗೃಹ ಬಳಕೆಯ ವಿಭಾಗಗಳು ದೇಶಾದ್ಯಂತ ಆನ್ಲೈನ್ ಗ್ರಾಹಕರ ಸಂಖ್ಯೆಯಲ್ಲಿ ಸರಾಸರಿ 30% ಕ್ಕಿಂತ ಹೆಚ್ಚಿನ ಬೆಳವಣಿಗೆಯನ್ನು ಕಂಡಿದೆ ಎಂದು ಮೆಕಿನ್ಸೆ ಹೇಳುತ್ತಾರೆ. ಒಟ್ಟಿನಲ್ಲಿ ಸೆಕೆಂಡ್ ಹ್ಯಾಂಡ್ ಕಾರು ಮಾರಾಟಗಾರರಿಗೆ ಶುಕ್ರದೆಸೆ ಆರಂಭವಾದಂತಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com